logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಬೆಂಗಳೂರು ಸುತ್ತಮುತ್ತ ಮಂಜು, ಮೋಡ ಕವಿದ ವಾತಾವರಣ; ಕರ್ನಾಟಕದ ಹಲವೆಡೆ ಚಳಿ, ಒಣಹವೆ

Karnataka Weather: ಬೆಂಗಳೂರು ಸುತ್ತಮುತ್ತ ಮಂಜು, ಮೋಡ ಕವಿದ ವಾತಾವರಣ; ಕರ್ನಾಟಕದ ಹಲವೆಡೆ ಚಳಿ, ಒಣಹವೆ

Umesh Kumar S HT Kannada

Jan 23, 2024 07:41 AM IST

google News

ಕರ್ನಾಟಕದ ಹವಾಮಾನ ಇಂದು 23.01.2024 (ಸಾಂಕೇತಿಕ ಚಿತ್ರ)

  • Karnataka Weather Report Jan 23: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸುತ್ತಮುತ್ತ ಇಂದು (ಜ.23) ಮುಂಜಾನೆ ಮತ್ತು ರಾತ್ರಿ ಮಂಜು ಮುಸುಕಿದ, ಮೋಡ ಕವಿದ ವಾತಾವರಣ ಇರಲಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಕಡೆ ಮುಂಜಾನೆ ವೇಳೆ ಮಂಜು, ರಾತ್ರಿ ಚಳಿ ಮತ್ತು ಹಗಲಲ್ಲಿ ಒಣ ಹವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಹವಾಮಾನ ಇಂದು 23.01.2024 (ಸಾಂಕೇತಿಕ ಚಿತ್ರ)
ಕರ್ನಾಟಕದ ಹವಾಮಾನ ಇಂದು 23.01.2024 (ಸಾಂಕೇತಿಕ ಚಿತ್ರ) (Pixels)

ಬೆಂಗಳೂರು: ವಾತಾವರಣ ಗಮನಿಸಿದರೆ, ರಾತ್ರಿ ಅವಧಿ ಹೆಚ್ಚು, ಹಗಲಿನ ಅವಧಿ ಕಡಿಮೆ ಇರುವಂತಹ ಸಮಯ ಇದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿತ್ರದುರ್ಗ ಜಿಲ್ಲೆ ಸುತ್ತಮುತ್ತ ಹಲವೆಡೆ ಮೋಡ ಕವಿದ ಆಕಾಶ ಕಾಣಲಿದೆ. ಮುಂಜಾನೆ ಮಂಜು ಮುಸುಕಿದ ವಾತಾವರಣದ ಕಾರಣ ತೀವ್ರ ಚಳಿ ಕಾಡಬಹುದು. ಹಗಲು ಒಣ ಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಹೇಳಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ರಾತ್ರಿ ಮತ್ತು ಮುಂಜಾನೆ ಮೈ ನಡುಕದ ಚಳಿ ಅನುಭವವಾಗಬಹುದು. ಹಗಲು ಒಣ ಹವೆ ಮುಂದುವರಿಯಲಿದೆ. ಬಹುತೇಕ ಕಡೆ ಹಗಲು ಹೊತ್ತಿನಲ್ಲಿ ನಿರ್ಮಲ ಆಕಾಶ ಇರಲಿದ್ದು, ಒಣಹವೆಯನ್ನು ಹಗಲಲ್ಲಿ ನಿರೀಕ್ಷಿಸಬಹುದು.

ಕರಾವಳಿಯಲ್ಲಿ ಸಹಜ ವಾತಾವರಣ ಇದ್ದರೂ, ಬಹುತೇಕ ಕಡೆ ಮುಂಜಾನೆ ಮಂಜು ಮತ್ತು ರಾತ್ರಿ ಸಾಧಾರಣ ಚಳಿ ಇರಲಿದೆ. ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕೆಲವು ಕಡೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಉಷ್ಣಾಂಶ 3 ಡಿಗ್ರಿ ಸೆಲ್ಶಿಯಸ್‌ ತನಕ ಏರಿಕೆ ಕಾಣಬಹುದು ಎಂದು ಹವಾಮಾನ ಮುನ್ಸೂಚನಾ ವರದಿ ಹೇಳಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕಲಬುರಗಿ ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಚಳಿಯ ವಾತಾವರಣ ಇರಲಿದ್ದು, ಹಗಲು ಹೊತ್ತಿನಲ್ಲಿ ಒಣಹವೆ ಮುಂದುವರಿಯಲಿದೆ ಆಕಾಶವೂ ನಿರ್ಮಲವಾಗಿರಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗದಲ್ಲಿ ಕೆಲವು ಕಡೆ ಮೋಡ ಕವಿದ ಆಕಾಶ ಕಾಣಬಹುದು. ಈ ಭಾಗದಲ್ಲಿ ಚಳಿಯೂ ಸ್ವಲ್ಪ ಹೆಚ್ಚು ಇದ್ದೀತು. ಇನ್ನು, ಚಾಮರಾಜನಗರ, ಕೋಲಾರ, ರಾಮನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ವಿಜಯನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರುಗಳಲ್ಲಿ ಚಳಿಯ ವಾತಾವರಣ ಇರಲಿದೆ. ಹಗಲಲ್ಲಿ ಒಣಹವೆ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ಹವಾಮಾನ ಇಂದು

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತ ಜಿಲ್ಲೆಗಳಲ್ಲಿ ಮಂಗಳವಾರ (ಜ.23) ಕೆಲವೆಡೆ ಮುಂಜಾನೆ ಮಂಜು, ಹಗಲು ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಹೀಗಾಗಿ ಚಳಿ ನಿರೀಕ್ಷಿತ. ಸಂಜೆ ವೇಳೆ ಚಳಿ ಹೆಚ್ಚಾಗಲಿದ್ದು, ಹಗಲು ಹೊತ್ತಿನಲ್ಲಿ ಒಣಹವೆ ಇರಲಿದೆ ಎಂದು ವರದಿ ಹೇಳಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಅನುಭವಕ್ಕೆ ಬರಲಿದೆ. ನಿನ್ನೆ (ಜ.22) 30.5 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 18.5 ಡಿಗ್ರಿ ಸೆಲ್ಶಿಯಸ್ ಇತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಇರಲಿದೆ. ನಿನ್ನೆ (ಜ.22) ತಾಪಮಾನ 32 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17.8 ಸೆಲ್ಶಿಯಸ್ ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಮುಖ ನಗರಗಳಲ್ಲಿ ಈಗಿನ (ಜನವರಿ 23 ರ ಬೆಳಗ್ಗೆ 6 ಗಂಟೆಗೆ) ತಾಪಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಜ.23) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.

ಬೆಂಗಳೂರು - 21.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 77)

ಮಂಗಳೂರು - 26.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 75)

ಚಿತ್ರದುರ್ಗ - 23.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 90)

ಗದಗ - 23.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 61)

ಹೊನ್ನಾವರ - 22.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 90)

ಕಲಬುರಗಿ - 25 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 61)

ಬೆಳಗಾವಿ - 29 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 31)

ಕಾರವಾರ - 31 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 48)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ