logo
ಕನ್ನಡ ಸುದ್ದಿ  /  ಕರ್ನಾಟಕ  /  Women Safety: ರಾತ್ರಿ ವೇಳೆ ಮಹಿಳೆಯರ ಸುರಕ್ಷೆಗಾಗಿ ಹೊಸ ಯೋಜನೆ ತಂದ ತಮಿಳುನಾಡು; ಅಪಾಯ ಎನಿಸಿದರೆ ಪೊಲೀಸರಿಂದಲೇ ಡ್ರಾಪ್

Women safety: ರಾತ್ರಿ ವೇಳೆ ಮಹಿಳೆಯರ ಸುರಕ್ಷೆಗಾಗಿ ಹೊಸ ಯೋಜನೆ ತಂದ ತಮಿಳುನಾಡು; ಅಪಾಯ ಎನಿಸಿದರೆ ಪೊಲೀಸರಿಂದಲೇ ಡ್ರಾಪ್

HT Kannada Desk HT Kannada

Jun 22, 2023 01:30 PM IST

google News

ರಾತ್ರಿ ವೇಳೆ ಮಹಿಳೆಯರ ಸುರಕ್ಷೆಗಾಾಗಿ ತಮಿಳುನಾಡಿನಾಡು ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಒಂಟಿಯಾಗಿ ಓಡಾಡುವ ಮಹಿಳೆಗೆ ಅಪಾಯ ಎನಿಸಿದರೆ ಪೊಲೀಸರ್ ಮನೆಗೆ ಡ್ರಾಪ್ ಮಾಡ್ತಾರೆ. ಇದಕ್ಕಾಗಿ ಟೋಲ್ ಫ್ರಿ ನಂಬರ್ ಕೂಡ ಬಿಡುಗಡೆ ಮಾಡಿದ್ದಾರೆ. (PTI)

  • ರಾತ್ರಿ ವೇಳೆ ಮಹಿಳೆಯರ ಸುರಕ್ಷೆಗಾಗಿ ತಮಿಳುನಾಡಿನಾಡು ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದ್ದು, ಒಂಟಿಯಾಗಿ ಓಡಾಡುವ ಮಹಿಳೆಗೆ ಅಪಾಯ ಎನಿಸಿದರೆ ಪೊಲೀಸರೇ ಮನೆಗೆ ಡ್ರಾಪ್ ಮಾಡ್ತಾರೆ. ಇದಕ್ಕಾಗಿ ಸಹಾಯವಾಣಿ ಕೂಡ ಬಿಡುಗಡೆ ಮಾಡಿದ್ದಾರೆ.

ರಾತ್ರಿ ವೇಳೆ ಮಹಿಳೆಯರ ಸುರಕ್ಷೆಗಾಾಗಿ ತಮಿಳುನಾಡಿನಾಡು ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಒಂಟಿಯಾಗಿ ಓಡಾಡುವ ಮಹಿಳೆಗೆ ಅಪಾಯ ಎನಿಸಿದರೆ ಪೊಲೀಸರ್ ಮನೆಗೆ ಡ್ರಾಪ್ ಮಾಡ್ತಾರೆ. ಇದಕ್ಕಾಗಿ ಟೋಲ್ ಫ್ರಿ ನಂಬರ್ ಕೂಡ ಬಿಡುಗಡೆ ಮಾಡಿದ್ದಾರೆ. (PTI)
ರಾತ್ರಿ ವೇಳೆ ಮಹಿಳೆಯರ ಸುರಕ್ಷೆಗಾಾಗಿ ತಮಿಳುನಾಡಿನಾಡು ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಒಂಟಿಯಾಗಿ ಓಡಾಡುವ ಮಹಿಳೆಗೆ ಅಪಾಯ ಎನಿಸಿದರೆ ಪೊಲೀಸರ್ ಮನೆಗೆ ಡ್ರಾಪ್ ಮಾಡ್ತಾರೆ. ಇದಕ್ಕಾಗಿ ಟೋಲ್ ಫ್ರಿ ನಂಬರ್ ಕೂಡ ಬಿಡುಗಡೆ ಮಾಡಿದ್ದಾರೆ. (PTI)

ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ (Tamilnadu) ಮಹಿಳೆಯರ ಸುರಕ್ಷೆಗಾಗಿ (Women Safety) ಅಲ್ಲಿ ಸರ್ಕಾರ ಹೊಸ ಯೋಜನೆಯೊಂದನ್ನ ಪ್ರಾರಂಭಿಸಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 7 ಗಂಟೆಯ ಅವಧಿಯಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ತಾವು ಓಡಾಡುವ ಸ್ಥಳ ಅಪಾಯ ಎನಿಸಿದರೆ ಪೊಲೀಸರ ಗಸ್ತು ವಾಹನದಲ್ಲಿ ಉಚಿತವಾಗಿ ಡ್ರಾಪ್ ಪಡೆಯಬಹುದು.

ಪೊಲೀಸ್ ಮಹಾನಿರ್ದೇಶಕ ಸಿ ಸೈಲೇಂದ್ರ ಬಾಬು ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಪೆಂಗಲ್ ಪಾತುಕಾಪ್ತು ತಿಟ್ಟಂ (ಮಹಿಳಾ ಸುರಕ್ಷತಾ ಯೋಜನೆ) ವಾರದ ಎಲ್ಲಾ ಏಳು ದಿನಗಳಲ್ಲೂ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ರಾತ್ರಿಯಲ್ಲಿ ಅಸುರಕ್ಷಿತ ಮತ್ತು ಸಾರಿಗೆ ಅಗತ್ಯವಿರುವ ಮಹಿಳೆಯರು ಸಹಾಯವಾಣಿ ಸಂಖ್ಯೆ 1091, 112, 044-23452365 ಹಾಗೂ 044-28447701ಗೆ ಡಯಲ್ ಮಾಡಹುದು. ಪೊಲೀಸ್ ಗಸ್ತು ವಾಹನವನ್ನು ಲಭ್ಯಗೊಳಿಸಲಾಗುತ್ತದೆ ಎಂದಿದ್ದಾರೆ.

ವಿದ್ಯಾರ್ಥಿನಿಯರ ಮೇಲಿನ ಅಪರಾಧಗಳನ್ನು ತಡೆಯುವ ಗುರಿಯೊಂದಿಗೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊಯಮತ್ತೂರು ಪೊಲೀಸರು ‘ಪೊಲೀಸ್ ಅಕ್ಕಾ’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆರಂಭಿಸಲಾಗಿತ್ತು. ನಿಯೋಜಿತ ಪೊಲೀಸ್ ಸಿಬ್ಬಂದಿ ನಗರದ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರೊಂದಿಗೆ ಬಲವಾದ ಬಾಂಧವ್ಯವನ್ನು ಬೆಳೆಸಲಿದ್ದಾರೆ ಎಂದು ಡಿಜಿಪಿ ಸೈಲೇಂದ್ರ ಬಾಬು ತಿಳಿಸಿದ್ದಾರೆ.

ಮಹಿಳೆಯರು ಬೀದಿಯಿಂದ ಕೆಲಸದ ಸ್ಥಳದವರೆಗೂ ಸುರಕ್ಷವಾಗಿರಬೇಕು ಜೊತೆಗೆ ಗೌರವಿಸಲ್ಪಡಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಆಡಳಿತ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯೊಂದಿಗೆ ಪ್ರತಿಯೊಬ್ಬ ಪ್ರಜೆಯೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಪ್ರಧಾನಿ ಮೋದಿ ಈ ಹಿಂದೆ ಹೇಳಿದ್ದರು.

ದೇಶದ ಪ್ರತಿ ಹೆಣ್ಣಮಕ್ಕಳು ತಮ್ಮ ಸ್ಥಾನವನ್ನು ಪಡೆಯಲು ಉತ್ಸಕರಾಗಿದ್ದಾರೆ. ವೃತ್ತಿ ಮತ್ತು ಕೆಲಸ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನತೆ ಇರುವಂತೆ ನೋಡಿಕೊಳ್ಳಬೇಕು ಅಂತಲೂ ಪ್ರಧಾನಿ ಕರೆ ನೀಡಿದ್ದರು.

ಮಹಿಳಾ ದಿನಾಚರಣೆಯ ದಿನದಂದು ಮಹಿಳೆಯರಿಗೆ ವಿಶೇಷ ಗೌರವ ನೀಡುವ ಸಮಾಜ ಉಳಿದ ದಿನಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತೆ ಅಂತ ಬೆಂಗಳೂರಿನಲ್ಲಿ ಕೆಲ ಮಹಿಳಾ ನಾಯಕರು ದೂರಿದ್ದರು.

ಹೆಣ್ಣು ಮಕ್ಕಳೇ ತಮ್ಮ ಧೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ನಗರಗಳಲ್ಲಿ ಮಹಿಳೆಯರಿಗೆ ಇನ್ನೂ ಸುರಕ್ಷತೆ ಭಾವನೆ ಇಲ್ಲ. ಸರ್ಕಾರ ಈ ಬಗ್ಗೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಒತ್ತಾಯಿಸಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ