logo
ಕನ್ನಡ ಸುದ್ದಿ  /  latest news  /  Ips Transfer: ಹಾಲಿ ಸಚಿವರ ಅಳಿಯ ಐಪಿಎಸ್‌ ಅಧಿಕಾರಿಗೆ ಸಿಕ್ತು ಪೋಸ್ಟಿಂಗ್‌, ಮಾಜಿ ಸಚಿವರ ಅಳಿಯನಿಗೆ ಇಲ್ಲ !

IPS Transfer: ಹಾಲಿ ಸಚಿವರ ಅಳಿಯ ಐಪಿಎಸ್‌ ಅಧಿಕಾರಿಗೆ ಸಿಕ್ತು ಪೋಸ್ಟಿಂಗ್‌, ಮಾಜಿ ಸಚಿವರ ಅಳಿಯನಿಗೆ ಇಲ್ಲ !

HT Kannada Desk HT Kannada

Jun 01, 2023 07:19 PM IST

google News

ವರ್ಗಗೊಂಡ ಐಪಿಎಸ್‌ ಅಧಿಕಾರಿ ಗಿರೀಶ್‌, ಹುದ್ದೆಗಾಗಿ ಕಾದಿರುವ ರಿಷ್ಯಂತ್‌

    • ಚುನಾವಣೆಗೆ ಸ್ಪರ್ಧೆ ಮಾಡಿದವರ ಸಂಬಂಧಿಕರು ಉನ್ನತ ಅಧಿಕಾರಿಗಳಾಗಿದ್ದರೆ ಅಲ್ಲಿಂದ ಚುನಾವಣೆ ಆಯೋಗ ಬದಲಾಯಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಚುನಾವಣೆ ನಂತರ ಪೋಸ್ಟಿಂಗ್‌ ನೀಡುವಾಗ ರಾಜಕೀಯ ಅಂಶಗಳೂ ಪ್ರಮುಖವಾಗುತ್ತವೆ. ಇದು ಎಲ್ಲಾ ಪಕ್ಷಗಳ ಮುಖಂಡರಲ್ಲೂ ಇದ್ದಿದ್ದೆ. ರಿಷ್ಯಂತ್‌ ಅವರಿಗೂ ಹುದ್ದೆ ಸಿಗಬಹುದು ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ವಿವರಣೆ.
ವರ್ಗಗೊಂಡ ಐಪಿಎಸ್‌ ಅಧಿಕಾರಿ ಗಿರೀಶ್‌, ಹುದ್ದೆಗಾಗಿ ಕಾದಿರುವ ರಿಷ್ಯಂತ್‌
ವರ್ಗಗೊಂಡ ಐಪಿಎಸ್‌ ಅಧಿಕಾರಿ ಗಿರೀಶ್‌, ಹುದ್ದೆಗಾಗಿ ಕಾದಿರುವ ರಿಷ್ಯಂತ್‌

ಬೆಂಗಳೂರು: ಹಾಲಿ ಸಚಿವರ ಅಳಿಯ ಐಪಿಎಸ್‌ ಅಧಿಕಾರಿಗೆ ಸಿಕ್ಕಿತು ಬೆಂಗಳೂರು ಪೋಸ್ಟಿಂಗ್‌. ಬಿಜೆಪಿಯ ಮಾಜಿ ಸಚಿವರೊಬ್ಬರ ಅಳಿಯ ಐಪಿಎಸ್‌ ಅಧಿಕಾರಿಗೆ ಹುದ್ದೆಯಿಲ್ಲ !

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಐಎಎಸ್‌, ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ. ಈ ಬಾರಿ ಹುದ್ದೆಗೆ ಕಾಯುತ್ತಿದ್ದ ಐಪಿಎಸ್‌ ಅಧಿಕಾರಿ ಎಸ್‌.ಗಿರೀಶ್‌ ಅವರನ್ನು ಬೆಂಗಳೂರಿನ ವೈಟ್‌ಫೀಲ್ಡ್‌ ಉಪ ಪೊಲೀಸ್‌ ಆಯುಕ್ತರನ್ನಾಗಿ( ಡಿಸಿಪಿ)ಯನ್ನಾಗಿ ನೇಮಿಸಲಾಗಿದೆ. ಹಾಲಿ ಸಹಕಾರ ಸಚಿವರಾಗಿರುವ ಕೆ.ಎನ್‌.ರಾಜಣ್ಣ ಅವರ ಅಳಿಯ ಗಿರೀಶ್‌ ತಿಂಗಳ ಹಿಂದೆ ಇದೇ ಹುದ್ದೆಯಲ್ಲಿದ್ದರು. ಸಂಬಂಧಿ ಚುನಾವಣಾ ಕಣದಲ್ಲಿದ್ದರೆ ಪ್ರಭಾವ ಬೀರಬಹುದು ಎಂಬುವ ಕಾರಣದಿಂದ ಚುನಾವಣೆ ಆಯೋಗ ಇವರನ್ನು ವರ್ಗ ಮಾಡಿತ್ತು. ಅವರ ಸ್ಥಳಕ್ಕೆ ಮತ್ತೊಬ್ಬ ಐಪಿಎಸ್‌ ಅಧಿಕಾರಿ ಧರ್ಮೇಂದ್ರಕುಮಾರ್‌ ಮೀನಾ ಅವರನ್ನು ನೇಮಿಸಲಾಗಿತ್ತು. ಈಗ ಮೀನಾ ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.

ಇದೇ ಸಮಯದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಎಸ್‌.ರಿಷ್ಯಂತ್‌ ಅವರನ್ನು ಸ್ಥಳ ತೋರಿಸದೇ ವರ್ಗ ಮಾಡಲಾಗಿತ್ತು. ರಿಷ್ಯಂತ್‌ ಮಾಜಿ ಸಚಿವ ಮುನಿರತ್ನ ಅವರ ಅಳಿಯ. ಇವರನ್ನೂ ಚುನಾವಣೆ ಕಾರಣಕ್ಕೆ ವರ್ಗ ಮಾಡಲಾಗಿತ್ತು. ಈಗ ಅವರಿಗೆ ಇನ್ನೂ ಹುದ್ದೆ ತೋರಿಸಿಲ್ಲ. ಐದು ವರ್ಷದ ಹಿಂದೆ ಬಾಗಲಕೋಟೆ ಎಸ್ಪಿಯಾಗಿದ್ದ ರಿಷ್ಯಂತ್‌ ಅವರನ್ನು ಚುನಾವಣೆ ವೇಳೆ ವರ್ಗ ಮಾಡಿದರೂ ಆನಂತರ ಮೈಸೂರು ಎಸ್ಪಿಯಾಗಿ ನೇಮಿಸಲಾಗಿತ್ತು. ಆಗ ಮುನಿರತ್ನ ಕಾಂಗ್ರೆಸ್‌ನಲ್ಲಿದ್ದರು. ಈಗ ಬಿಜೆಪಿಯಲ್ಲಿರುವುದರಿಂದ ಅವರಿಗೆ ಪೋಸ್ಟಿಂಗ್‌ ನೀಡಿಲ್ಲವೇ ಎನ್ನುವ ಚರ್ಚೆ ಪೊಲೀಸ್‌ ವಲಯದಲ್ಲಿ ನಡೆದಿದೆ.

ಚುನಾವಣೆಗೆ ಸ್ಪರ್ಧೆ ಮಾಡಿದ ಮುಖಂಡರ ಸಂಬಂಧಿಕರು ಉನ್ನತ ಅಧಿಕಾರಿಗಳಾಗಿದ್ದರೆ ಅಲ್ಲಿಂದ ಬದಲಾಯಿಸುವುದು ಚುನಾವಣೆ ಆಯೋಗದ ಹಕ್ಕು. ಅದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಚುನಾವಣೆ ನಂತರ ಪೋಸ್ಟಿಂಗ್‌ ನೀಡುವಾಗ ರಾಜಕೀಯ ಅಂಶಗಳೂ ಪ್ರಮುಖವಾಗುತ್ತವೆ. ಇದು ಎಲ್ಲಾ ಪಕ್ಷಗಳ ಮುಖಂಡರಲ್ಲೂ ಇದ್ದಿದ್ದೆ. ರಿಷ್ಯಂತ್‌ ಅವರಿಗೂ ಹುದ್ದೆ ಸಿಗಬಹುದು ಎನ್ನುವುದು ಹಿರಿಯ ಅಧಿಕಾರಿಯೊಬ್ಬರ ವಿವರಣೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ