Hero Xtreme 125R vs TVS Raider 125: ಈ 2 ಬೈಕ್‌ಗಳಲ್ಲಿ ಯಾವುದು ಉತ್ತಮ; ಬೆಲೆ ಸೇರಿ ಇಲ್ಲಿದೆ ಪ್ರಮುಖ ಮಾಹಿತಿ
Jan 29, 2024 09:56 PM IST
ಹೀರೋ ಎಕ್ಸ್‌ಟ್ರಿಮ್ 125R ಮತ್ತು ಟಿವಿಎಸ್ ರೈಡರ್ 125 ಯಾವುದು ಉತ್ತಮ ಅನ್ನೋದನ್ನರ ವಿವರ ಇಲ್ಲಿದೆ
ಹೀರೋ ಎಕ್ಸ್‌ಟ್ರಿಮ್ ಮತ್ತು ಟಿವಿಎಸ್ ರೈಡರ್ 125 ಈ 2 ಬೈಕ್‌ಗಳಲ್ಲಿ ಯಾವುದು ಉತ್ತಮ, 1 ಲಕ್ಷ ರೂಪಾಯಿಯೊಳಗೆ ಬೆಲೆ ಸೇರಿ ಇತರೆ ಮಾಹಿತಿ ಇಲ್ಲಿದೆ.
ಬೆಂಗಳೂರು: ಭಾರತದ ಪ್ರಮುಖ ದ್ವಿಚಕ್ರ ವಾಹನಗಳ ತಯಾರಿಕಾ ಸಂಸ್ಥೆ ಹೀರೋ ಮೋಟೋಕಾರ್ಪ್ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಹೊಸ ಬೈಕ್ ಪರಿಚಯಿಸಿದೆ. ಇದರ ಹೆಸರು ಹೀರೋ ಎಕ್ಸ್‌ಟ್ರಿಮ್ 125r. ಈ ಬೈಕ್ ಟಿವಿಎಸ್ ರೈಡರ್ 125ಗೆ (Hero Xtreme 125R vs TVS Raider 125) ಕಠಿಣ ಸ್ಪರ್ಧೆ ನೀಡಲಿದೆ ಎಂಬ ನಿರೀಕ್ಷೆಗಳು ಮಾರುಕಟ್ಟೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಎರಡನ್ನೂ ಹೋಲಿಕೆ ಮಾಡಿ ನೋಡಿದಾಗ ಯಾವುದು ಬೆಸ್ಟ್, ಯಾವ ಬೇಕ್ ಅನ್ನು ಖರೀದಿಸಿದರೆ ಉತ್ತಮ ಅನ್ನೋದರ ವಿವರ ಇಲ್ಲಿದೆ.
ಹೀರೋ ಎಕ್ಸ್‌ಟ್ರಿಮ್ 125r vs ಟಿವಿಎಸ್ 125 ವೈಶಿಷ್ಟ್ಯ
ಹೀರೋ ಎಕ್ಸ್‌ಟ್ರಿಮ್ 125r ಎರಡು ವೇರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದೆ. ಐಪಿಎಸ್ (ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಇದೆ. ಈ ಹೊಸ ಬೈಕ್ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಇಂಜಿನ್ ಹೊಂದಿದೆ. ಈ ಇಂಜಿನ್ 11.5bhp ಗರಿಷ್ಠ ಪವರ್, 10.5nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ ಹೊಂದಿದ್ದು 5 ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ. ವಿಶಿಷ್ಟವಾದ ಎಲ್‌ಇಡಿ ಹೆಡ್‌ಲ್ಯಾಂಪ್, ಹೊಸ ವಿನ್ಯಾಸದ ಇಂಧನ ಟ್ಯಾಂಕ್, ಸ್ಲೀಕ್ ಎಲ್‌ಇಡಿ ಟೈಲ್ಯಾಂಪ್ ಹಾಗೂ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ.
ಟಿವಿಎಸ್ ರೈಡರ್ 125 ಕೆತ್ತಿದ ಆಕಾರದ ಪೆಟ್ರೋಲ್ ಟ್ಯಾಂಕ್, ಹೊಸ ಎಲ್‌ಇಡಿ ಲೈಟಿಂಗ್ ಸೆಟಪ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಡಿಸೈನರ್ ಅಲಾಯ್ ಚಕ್ರಗಳಿವೆ. ಡಬಲ್ ಸೀಟ್ ಹೊಂದಿದೆ.
ಸುರಕ್ಷತೆಯ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಈ ಎರಡು ಬೈಕ್‌ಗಳಲ್ಲೂ ಮುಂಭಾಗದಲ್ಲಿ ಡಿಕ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳಿವೆ. ಸಂಯೋಜಿತ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತಿವೆ. ಸಸ್ಪೆನ್ಷನ್ ವಿಷಯಕ್ಕೆ ಬಂದರೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಯೂನಿಟ್‌ಗಳಿವೆ.
ಹೀರೋ ಎಕ್ಸ್‌ಟ್ರಿಮ್ 125r vs ಟಿವಿಎಸ್ 125 ಇಂಜಿನ್
ಹೀರೋ ಎಕ್ಸ್‌ಟ್ರಿಮ್ 125r ಹೊಸ ಬೈಕ್ 125ಸಿಸಿ, ಸಿಂಗಲ್ ಸಿಲಿಂಡರ್, ಏರ್‌ಕೂಲ್ಡ್ ಇಂಜಿನ ಹೊಂದಿದೆ. ಇಂಜಿನ್ 11.5bhp ಗರಿಷ್ಠ ಪವರ್, 10.5nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಟಿವಿಎಸ್ ರೈಡರ್ 125 14.8 ಸಿಸಿ, ಏರ್ ಮತ್ತು ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಇಂಜಿನ್ ಇದ್ದು, 15.3hp ಪವರ್, 11.2nm ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಬೈಕ್‌ಗಳಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಲಭ್ಯವಿದೆ.
ಹೀರೋ ಎಕ್ಸ್‌ಟ್ರಿಮ್ 125r vs ಟಿವಿಎಸ್ 125 ಬೆಲೆ
ಭಾರತದಲ್ಲಿ ಹೀರೋ ಎಕ್ಸ್‌ಟ್ರಿಮ್ 125r ಎಕ್ಸ್ ಶೋರೂಂ ಬೆಲೆ 95 ಸಾವಿರ ರೂಪಾಯಿಯಿಂದ 99,500 ರೂಪಾಯಿವರೆಗೆ ಇದೆ. ಟಿವಿಎಸ್ 125 ಎಕ್ಸ್ ಶೋ ರೂಂ ಬೆಲೆ 95,200 ರೂಪಾಯಿಯಿಂದ 1.03 ಲಕ್ಷ ರೂಪಾಯಿ ಇದೆ. ಒಂದು ವೇಳೆ ನೀವೇನಾದರೂ ಹೊಸ ಬೈಕ್ ಖರೀದಿಸುವ ಪ್ಲಾನ್ ಮಾಡಿದ್ದರೆ ಈ ಎರಡೂ ಬೈಕ್‌ಗಳ ವೈಶಿಷ್ಟ್ಯಗಳ ಆಧಾರದ ಮೇಲೆ ನಿಮಗೆ ಯಾವುದು ಬೇಕೋ ಅದನ್ನು ಖರೀದಿಸಿ. (This copy first appeared in Hindustan Times Kannada website. To read more like this please logon to kannada.hindustantime.com).