ಭಾರತದಲ್ಲಿ ತಯಾರಾದ ಮಾರುತಿ ಸುಜುಕಿಯ ಈ ಕಾರಿಗೆ ಜಪಾನ್‌ನಲ್ಲಿ ಭರ್ಜರಿ ಬೇಡಿಕೆ: ಪ್ರತಿ ತಿಂಗಳೂ ರಫ್ತಾಗುತ್ತಿದೆ ಸಾವಿರಾರು ವಾಹನ
Aug 17, 2024 09:29 AM IST
ಜಪಾನಿಗರು ಮೇಡ್ ಇನ್ ಇಂಡಿಯಾ ಫ್ರಾಂಕ್ಸ್‌ನಲ್ಲಿ ಸವಾರಿ ಮಾಡಲು ತಯಾರಾಗಿದ್ದಾರೆ.
ಮಾರುತಿ ಸುಜುಕಿಯ ವಿಶೇಷವಾದ ಕಾರು ಫ್ರಾಂಕ್ಸ್ ಅನ್ನು ತನ್ನ ಗುಜರಾತ್ ಸ್ಥಾವರದಿಂದ ಪ್ರತ್ಯೇಕವಾಗಿ ಉತ್ಪಾದಿಸುತ್ತದೆ. ಜಪಾನ್‌ಗೆ ರಫ್ತು ಮಾಡಲಾಗುತ್ತಿರುವ ಮಾರುತಿ ಸುಜುಕಿಯ ಎರಡನೇ ಕಾರು ಇದಾಗಿದ್ದು, ಈ ಹಿಂದೆ 2016ರಲ್ಲಿ ಬಲೆನೊವನ್ನು ಅಲ್ಲಿಗೆ ಕಳುಹಿಸಿತ್ತು. (ಬರಹ: ವಿನಯ್ ಭಟ್)
ಇಂಡೋ-ಜಪಾನಿ ಕಂಪನಿ ಮಾರುತಿ ಸುಜುಕಿ ಭಾರತದ ಪ್ರಮುಖ ಉತ್ಪಾದನಾ ಕೇಂದ್ರವಾಗಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಪ್ರತಿ ತಿಂಗಳು ವಿದೇಶಕ್ಕೆ ಸಾವಿರಾರು ವಾಹನಗಳನ್ನು ರಫ್ತು ಮಾಡುತ್ತದೆ. ಇದೀಗ ಮಾರುತಿ ಸುಜುಕಿ ಇಂಡಿಯಾ ತನ್ನ ಆಕರ್ಷಕವಾದ ಕ್ರಾಸ್ಒವರ್ ಫ್ರಾಂಕ್ಸ್ ಅನ್ನು ಜಪಾನ್‌ಗೆ ರಫ್ತು ಮಾಡಲು ಪ್ರಾರಂಭಿಸಿದೆ. ಅಂದರೆ ಜಪಾನ್‌ನ ಜನರು ಮೇಡ್ ಇನ್ ಇಂಡಿಯಾ ಫ್ರಾಂಕ್ಸ್‌ನಲ್ಲಿ ಸವಾರಿ ಮಾಡಲು ತಯಾರಾಗಿದ್ದಾರೆ. ಗುಜರಾತ್‌ನ ಪಿಪಾವಾವ್ ಬಂದರಿನಿಂದ 1,600 ಕ್ಕೂ ಹೆಚ್ಚು ವಾಹನಗಳ ಮೊದಲ ರವಾನೆ ಜಪಾನ್‌ಗೆ ಹೊರಟಿದೆ ಎಂದು ಭಾರತದ ಅತಿದೊಡ್ಡ ಕಾರು ತಯಾರಕರು ತಿಳಿಸಿದ್ದಾರೆ. ಫ್ರಾಂಕ್ಸ್ ಜಪಾನ್‌ನಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿಯ ಮೊದಲ ಎಸ್ಯುವಿ ಆಗಿರುತ್ತದೆ.
ಏಪ್ರಿಲ್ 2023ರಲ್ಲಿ ಬಿಡುಗಡೆಯಾದ ಫ್ರಾಂಕ್ಸ್
ಮಾರುತಿ ಸುಜುಕಿಯ ವಿಶೇಷವಾದ ಕಾರು ಫ್ರಾಂಕ್ಸ್ ಅನ್ನು ತನ್ನ ಗುಜರಾತ್ ಸ್ಥಾವರದಿಂದ ಪ್ರತ್ಯೇಕವಾಗಿ ಉತ್ಪಾದಿಸುತ್ತದೆ. ಜಪಾನ್‌ಗೆ ರಫ್ತು ಮಾಡಲಾಗುತ್ತಿರುವ ಮಾರುತಿ ಸುಜುಕಿಯ ಎರಡನೇ ಕಾರು ಇದಾಗಿದ್ದು, ಈ ಹಿಂದೆ 2016ರಲ್ಲಿ ಬಲೆನೊವನ್ನು ಅಲ್ಲಿಗೆ ಕಳುಹಿಸಿತ್ತು. ಆಟೋ ಎಕ್ಸ್‌ಪೋ 2023 ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ನಂತರ ಫ್ರಾಂಕ್ಸ್ ಅನ್ನು 24 ಏಪ್ರಿಲ್ 2023 ರಂದು ಭಾರತದಲ್ಲಿ ಪರಿಚಯಿಸಲಾಯಿತು. ಇದರ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ ರೂ. 7.51 ಲಕ್ಷದಿಂದ ರೂ. 13.04 ಲಕ್ಷದವರೆಗೆ ಇದೆ.
ವೈಶಿಷ್ಟ್ಯಗಳು ಮತ್ತು ಮೈಲೇಜ್
ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಡೆಲ್ಟಾ ಪ್ಲಸ್ ಆಪ್ಷನ್, ಝೀಟಾ ಮತ್ತು ಆಲ್ಫಾದಂತಹ 6 ಆಯ್ಕೆಗಳಲ್ಲಿ ನೀಡಲಾಗುತ್ತದೆ. ಈ 5 ಆಸನಗಳ ಕ್ರಾಸ್ಒವರ್ SUV 7 ಮೊನೊಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಬ್ರಾಂಕ್ಸ್‌ನ CNG ರೂಪಾಂತರಗಳೂ ಇವೆ. ಈ ಕ್ರಾಸ್ಒವರ್ 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹಾಗೂ 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಮೈಲೇಜ್ ಬಗ್ಗೆ ಮಾತನಾಡುತ್ತಾ, ಪೆಟ್ರೋಲ್ ರೂಪಾಂತರಗಳ ಮೈಲೇಜ್ 22.89 kmpl ವರೆಗೆ ಮತ್ತು CNG ರೂಪಾಂತರಗಳ ಮೈಲೇಜ್ 28.51 km/kg ವರೆಗೆ ಇರುತ್ತದೆ.
ಜುಲೈ 2023 ರಲ್ಲಿ, ಕಂಪನಿಯು ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಂತಹ ಸ್ಥಳಗಳಿಗೆ ಫ್ರಾಂಕ್ಸ್ ಅನ್ನು ರಫ್ತು ಮಾಡಲು ಪ್ರಾರಂಭಿಸಿತು. ಇದುವರೆಗೆ ಫ್ರಾಂಕ್ಸ್ ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ಒಟ್ಟು 2 ಲಕ್ಷ ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ. ಕಳೆದ ಹಣಕಾಸು ವರ್ಷದಲ್ಲಿ, ಮಾರುತಿ ಸುಜುಕಿಯು 100 ಕ್ಕೂ ಹೆಚ್ಚು ದೇಶಗಳಲ್ಲಿ 2.8 ಲಕ್ಷ ಯುನಿಟ್‌ಗಳ ಸಾಗಣೆ ಮಾಡಿದೆ. ಕಂಪನಿಯು ಪ್ರಸ್ತುತ ದೇಶದಿಂದ ವಾಹನ ರಫ್ತಿನಲ್ಲಿ ಶೇಕಡಾ 42 ರಷ್ಟು ಪಾಲನ್ನು ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಈಗಾಗಲೇ 70,560 ಯುನಿಟ್‌ಗಳನ್ನು ರಫ್ತು ಮಾಡಿದೆ, ಇದು ಯಾವುದೇ ಕಂಪನಿಯ ಮೊದಲ ತ್ರೈಮಾಸಿಕದಲ್ಲಿ ಅತ್ಯಧಿಕ ರಫ್ತು ಆಗಿದೆ.
ವಿಭಾಗ