logo
ಕನ್ನಡ ಸುದ್ದಿ  /  ಜೀವನಶೈಲಿ  /  2.72 ಕೋಟಿ ರೂನ ಮಝರಾಟಿ ಗ್ರಾನ್‌ ಟೂರಿಸ್ಮೊ ಐಷಾರಾಮಿ ಸ್ಪೋರ್ಟ್ಸ್‌ ಕಾರು ಬಿಡುಗಡೆ; ಬೆಂಟ್ಲಿ, ಫೆರಾರಿ, ಆಸ್ಟನ್‌ ಮಾರ್ಟಿನ್‌, ಔಡಿಗೆ ನಡುಕ

2.72 ಕೋಟಿ ರೂನ ಮಝರಾಟಿ ಗ್ರಾನ್‌ ಟೂರಿಸ್ಮೊ ಐಷಾರಾಮಿ ಸ್ಪೋರ್ಟ್ಸ್‌ ಕಾರು ಬಿಡುಗಡೆ; ಬೆಂಟ್ಲಿ, ಫೆರಾರಿ, ಆಸ್ಟನ್‌ ಮಾರ್ಟಿನ್‌, ಔಡಿಗೆ ನಡುಕ

Praveen Chandra B HT Kannada

Aug 31, 2024 12:36 PM IST

google News

ಮಝರಾಟಿ ಗ್ರಾನ್‌ಟೂರಿಸ್ಮೊ

    • Maserati GranTurismo: ಮಝರಾಟಿ ಕಂಪನಿಯು ಭಾರತದ ರಸ್ತೆಗೆ ಗ್ರಾನ್‌ಟೂರಿಸ್ಮೊ ಹೆಸರಿನ ಅದ್ಧೂರಿ ಭರ್ಜರಿ ವಿಲಾಸಿ ಸ್ಪೋರ್ಟ್ಸ್‌ ಕಾರನ್ನು ಪರಿಚಯಿಸಿದೆ. ಇದು ಬೆಂಟ್ಲಿ ಕಾಂಟಿನೆಂಟಲ್‌ ಜಿಟಿ, ಫೆರಾರಿ ರೊಮಾ, ಆಸ್ಟನ್‌ ಮಾರ್ಟಿನ್‌ ವಾಂಟಾಜ್‌, ಪೋರ್ಷ್‌ 911, ಔಡಿ ಆರ್‌ಎಸ್‌ ಇ ಟ್ರೋನ್‌ ಜಿಟಿ, ಪೋರ್ಷೆ ಟೈಕಾನ್‌ ಕಾರುಗಳಿಗೆ ಸ್ಪರ್ಧೆ ನೀಡಲಿದೆ.
ಮಝರಾಟಿ ಗ್ರಾನ್‌ಟೂರಿಸ್ಮೊ
ಮಝರಾಟಿ ಗ್ರಾನ್‌ಟೂರಿಸ್ಮೊ

ಬೆಂಗಳೂರು: ಮಝರಾಟಿ ಕಂಪನಿಯು ಗ್ರಾನ್‌ಟೂರಿಸ್ಮೊ ಎಂಬ ಐಷಾರಾಮಿ ಸ್ಪೋರ್ಟ್ಸ್‌ ಕಾರನ್ನು ಭಾರತಕ್ಕೆ ಪರಿಚಯಿಸಿದೆ. ಇದೀಗ ಬಿಡುಗಡೆಗೊಂಡ ಈ ಕಾರುಗಳು ಮೊಡೆನಾ ಮತ್ತು ಟ್ರೋಫಿಯೊ ಎಂಬ ಎರಡು ಆಯ್ಕೆಗಳಲ್ಲಿ ಲಭ್ಯವಿದೆ. ಇವೆರಡರ ದರ ಕ್ರಮವಾಗಿ 2.72 ಕೋಟಿ ಮತ್ತು 2.90 ಕೋಟಿ ರೂ. ಇದೆ. ಇದು ಎಕ್ಸ್‌ ಶೋರೂಂ ದರ. ಆನ್‌ರೋಡ್‌ ದರ ಮೂರು ಕೋಟಿ ರೂ.ಗಿಂತಲೂ ಹೆಚ್ಚಿರಲಿದೆ. ಮುಂದಿನ ವರ್ಷ ಕಂಪನಿಯು all-electric Folgore ಪರಿಚಯಿಸಲು ಉದ್ದೇಶಿಸಿದೆ. ಇದಾದ ಬಳಿಕ ಗ್ರಾನ್‌ ಕ್ಯಾಬ್ರಿಯೊ ಮತ್ತು ಜಿಟಿ ಸ್ಟರ್ಡಲ್‌ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಮಝರಾಟಿ ಗ್ರಾನ್‌ಟೂರಿಸ್ಮೊ: ಹೇಗಿದ್ದಾಳೆ ಮೊಡೆನಾ?

ಮೊಡೆನಾ ಆವೃತ್ತಿಯು 476 ಬಿಎಚ್‌ಪಿ ಪವರ್‌ ಮತ್ತು 600 ಎನ್‌ಎಂ ಟಾರ್ಕ್‌ ನೀಡುತ್ತದೆ. ಕೇವಲ 3.9 ಸೆಕೆಂಡಿನಲ್ಲಿ ಶೂನ್ಯದಿಂದ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಗಂಟೆಗೆ ಗರಿಷ್ಠ 302 ಕಿ.ಮೀ. ವೇಗದಲ್ಲಿ ಸಾಗಬಹುದು. ಒಟ್ಟಾರೆ, ಅತ್ಯುತ್ತಮ ಪವರ್‌ನೊಂದಿಗೆ ವೇಗದ ಆವೇಗಕ್ಕೆ ಸೆಡ್ಡು ಹೊಡೆಯುವಂತೆ ಮಝರಾಟಿ ಕಾರಿನಲ್ಲಿ ಸಾಗಬಹುದು.

ಹೇಗಿದ್ದಾಳೆ ಟ್ರೋಫಿಯೊ?

ಗ್ರಾನ್‌ಟೂರಿಸ್ಮೊದ ಇನ್ನೊಂದು ಆವೃತ್ತಿ ಟ್ರೋಫಿಯೊ ಕೂಡ ಭರ್ಜರಿ ಕಾರು. ಇದು 542 ಬಿಎಚ್‌ಪಿ ಮತ್ತು 650 ಎನ್‌ಎಂ ಟಾರ್ಕ್‌ ಒದಗಿಸಲಿದೆ. ಇದು ಕೂಡ ಅವಳಿ ಟರ್ಬೊಚಾರ್ಜ್ಡ್‌ ಎಂಜಿನ್‌ ಆಗಿದೆ. ಹೆಚ್ಚು ಪರ್ಫಾಮೆನ್ಸ್‌ ದೊರಕುವಂತೆ ಎಂಜಿನ್‌ ಅನ್ನು ಟ್ಯೂನ್‌ ಮಾಡಲಾಗಿದೆ. ಈ ಕಾರಿನ ಆಕ್ಸಿಲರೇಷನ್‌ ಇನ್ನೂ ಉತ್ತಮವಾಗಿದೆ. ಕೇವಲ 3.5 ಸೆಕೆಂಡ್‌ನಲ್ಲಿ 0ಯಿಂದ 100 ಕಿ.ಮೀ. ವೇಗ ಪಡೆಯುತ್ತದೆ. ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ಸಾಗಬಹುದು.

ಇಂಟೀರಿಯರ್‌ ಮತ್ತು ಫೀಚರ್‌ಗಳು

ಹೊಸ ತಂತ್ರಜ್ಞಾನಗಳ ಸಂಯೋಜನೆಯೊಂದಿಗೆ ಗ್ರಾನ್‌ಟೂರಿಸ್ಮೊದ ಒಳಾಂಗಣವನ್ನು ವಿನ್ಯಾಸ ಮಾಡಲಾಗಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಮನ ಸೆಳೆಯುತ್ತದೆ. ಸಾಂಪ್ರದಾಯಿಕ ಅನಲಾಗ್ ಟೈಮ್‌ಪೀಸ್ ಬದಲು ಡಿಜಿಟಲ್‌ ಡಿಸ್‌ಪ್ಲೇ, ಕ್ಲೈಮೇಟ್‌ ಕಂಟ್ರೋಲ್‌, 8.8-ಇಂಚಿನ ಟಚ್‌ಸ್ಕ್ರೀನ್ ಇತ್ಯಾದಿ ಫೀಚರ್‌ಗಳು ಇವೆ.

ಮಝರಾಟಿ ಗ್ರಾನ್‌ಟೂರಿಸ್ಮೊ ವಿನ್ಯಾಸ ಹೇಗಿದೆ?

ಗ್ರಾನ್‌ಟೂರಿಸ್ಮೊ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಎಲ್‌ ಆಕಾರದ ಎಲ್‌ಇಡಿ ಡೇಟೈಮ್‌ ರನ್ನಿಂಗ್‌ ಲ್ಯಾಂಪ್‌ ಒಳಗೊಂಡ ಲಂಬ ಆಕಾರದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ. ಮುಂಭಾಗದಲ್ಲಿ ಮಝರಾಟಿಯ ಸಿಗ್ನೇಚರ್‌ ಗ್ರಿಲ್‌ ಎದ್ದು ಕಾಣಿಸುತ್ತದೆ. ಈ ಕಾರು ಕೂಪೆ ಮಾದರಿಯಲ್ಲಿ ಎರಡು ಬಾಗಿಲು ಹೊಂದಿದೆ. ಹಿಂಬದಿಯಲ್ಲಿ ಕ್ವಾಡ್ ಎಕ್ಸಾಸ್ಟ್ ಔಟ್‌ಲೆಟ್‌ಗಳು ಮತ್ತು ತೆಳ್ಳಗಿನ ಎಲ್ಇಡಿ ಟೈಲ್ ಲೈಟ್‌ ಗಮನ ಸೆಳೆಯುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ