logo
ಕನ್ನಡ ಸುದ್ದಿ  /  ಜೀವನಶೈಲಿ  /  Electric Cycles: ಟಾಟಾದಿಂದ ಇನ್ನೆರಡು ಎಲೆಕ್ಟ್ರಿಕ್‌ ಸೈಕಲ್‌ಗಳು ಬಿಡುಗಡೆ, ಫುಲ್‌ ಚಾರ್ಜ್‌ಗೆ ರೇಂಜ್‌ ಎಷ್ಟು? ದರ, ಫೀಚರ್‌ ವಿವರ

Electric Cycles: ಟಾಟಾದಿಂದ ಇನ್ನೆರಡು ಎಲೆಕ್ಟ್ರಿಕ್‌ ಸೈಕಲ್‌ಗಳು ಬಿಡುಗಡೆ, ಫುಲ್‌ ಚಾರ್ಜ್‌ಗೆ ರೇಂಜ್‌ ಎಷ್ಟು? ದರ, ಫೀಚರ್‌ ವಿವರ

Praveen Chandra B HT Kannada

Sep 20, 2024 03:04 PM IST

google News

ವೋಲ್ಟಿಕ್ ಎಕ್ಸ್ - ಟಾಟಾ ಎಲೆಕ್ಟ್ರಿಕ್‌ ಸೈಕಲ್‌

    • Electric Cycles: ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್‌ ಸ್ಕೂಟರ್‌, ಕಾರು ಮಾತ್ರವಲ್ಲದೆ ಎಲೆಕ್ಟ್ರಿಕ್‌ ಸೈಕಲ್‌ಗಳನ್ನು ಖರೀದಿಸುವವರು ಹೆಚ್ಚಾಗುತ್ತಿದ್ದಾರೆ. ಟಾಟಾ ಕಂಪನಿಯು ಇತ್ತೀಚೆಗೆ ಮತ್ತೆರಡು ಎಲೆಕ್ಟ್ರಿಕ್ ಬೈಸಿಕಲ್‌ಗಳನ್ನು ಬಿಡುಗಡೆ ಮಾಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ವೋಲ್ಟಿಕ್ ಎಕ್ಸ್ - ಟಾಟಾ ಎಲೆಕ್ಟ್ರಿಕ್‌ ಸೈಕಲ್‌
ವೋಲ್ಟಿಕ್ ಎಕ್ಸ್ - ಟಾಟಾ ಎಲೆಕ್ಟ್ರಿಕ್‌ ಸೈಕಲ್‌

Electric Cycles: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸೈಕಲ್‌ಗಳ ಬೇಡಿಕೆ ಹೆಚ್ಚಿದೆ. ಇದರೊಂದಿಗೆ ಕಂಪನಿಗಳೂ ಎಲೆಕ್ಟ್ರಿಕ್ ಸೈಕಲ್‌ಗಳನ್ನು ತಯಾರಿಸುತ್ತಿವೆ. ಟಾಟಾ ಸ್ಟ್ರೈಡರ್ ಈಗಾಗಲೇ ಹಲವು ಬೈಸಿಕಲ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇದೀಗ ಮತ್ತೆ ಎರಡು ಸೈಕಲ್‌ಗಳು ಬಿಡುಗಡೆಯಾಗಿವೆ. ಕಂಪನಿಯು 'ವೋಲ್ಟಿಕ್ ಎಕ್ಸ್' ಮತ್ತು 'ವೋಲ್ಟಿಕ್ ಗೋ' ಹೆಸರಿನ ಎರಡು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಬೈಸಿಕಲ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯ ಸಮಯದಲ್ಲಿ ಗ್ರಾಹಕರನ್ನು ಪರಿಸರ ಸ್ನೇಹಿ ವಾಹನದತ್ತ ಆಕರ್ಷಿಸಲು ಈ ಬೈಸಿಕಲ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಟಾಟಾ ಸ್ಟ್ರೈಡರ್ ತಿಳಿಸಿದೆ.

ದರವೆಷ್ಟು?

ವೋಲ್ಟಿಕ್ ಎಕ್ಸ್ ಆರಂಭಿಕ ದರ 32,495. ರೂಪಾಯಿ ಮತ್ತು ವೋಲ್ಟಿಕ್ ಗೋ ದರ 31,495 ರೂಪಾಯಿ ಇದೆ. ಮೂಲ ಬೆಲೆಯ ಮೇಲೆ ಶೇಕಡಾ 16 ರಷ್ಟು ರಿಯಾಯಿತಿಯನ್ನು ನೀಡುತ್ತಿರುವುದಾಗಿ ಕಂಪನಿ ತಿಳಿಸಿದೆ. ವೋಲ್ಟಿಕ್ ಎಕ್ಸ್, ವೋಲ್ಟಿಕ್ ಗೋ ಎಲೆಕ್ಟ್ರಿಕ್ ಬೈಸಿಕಲ್‌ಗಳು 48V ಹೆಚ್ಚಿನ ಸಾಮರ್ಥ್ಯ, ಸ್ಪ್ಲಾಶ್ ಪ್ರೂಫ್ ಬ್ಯಾಟರಿಯನ್ನು ಹೊಂದಿವೆ. ಈ ಬ್ಯಾಟರಿಗಳು ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿವೆ. ಈ ಎರಡು ಬೈಸಿಕಲ್‌ಗಳ ಬ್ಯಾಟರಿಯನ್ನು ಕೇವಲ ಮೂರು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದರೆ 40 ಕಿ.ಮೀ. ವರೆಗೆ ಸವಾರಿ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ವೋಲ್ಟಿಕ್ ಗೋವನ್ನು ಆರಾಮ ಮತ್ತು ಸೌಕರ್ಯವನ್ನು ಬಯಸುವ ಸವಾರರಿಗಾಗಿ ತಯಾರಿಸಲಾಗಿದೆ. ಇದರ ಸ್ಟೆಪ್-ಡೌನ್ ಫ್ರೇಮ್ ವಿನ್ಯಾಸವು ವಿಶೇಷವಾಗಿ ಮಹಿಳಾ ಸವಾರರನ್ನು ಆಕರ್ಷಿಸುತ್ತದೆ. ಈಗ ವೋಲ್ಟಿಕ್ ಎಕ್ಸ್ ಎಲೆಕ್ಟ್ರಿಕ್ ಬೈಸಿಕಲ್‌ಗಳು ನಗರ ಪ್ರಯಾಣಿಕರಿಗೆ ಸೂಕ್ತವಾಗಿದೆ. ಏರು ರಸ್ತೆಯನ್ನು ಏರಲು ನೆರವಾಗುವಂತೆ ಸಸ್ಪೆನ್ಷನ್ ಫೋರ್ಕ್‌ ವಿನ್ಯಾಸಗೊಳಿಸಲಾಗಿದೆ. ಎರಡೂ ಮಾದರಿಗಳು ಬ್ಯಾಟರಿಯ ಮೇಲೆ ಎರಡು ವರ್ಷಗಳ ವಾರಂಟಿ ನೀಡಲಾಗಿದೆ. ವಿದ್ಯುತ್‌ ರಹಿತವಾಗಿಯೂ ಇದನ್ನು ಬಳಸಬಹುದು. ಡ್ಯೂಯೆಲ್‌ ಡಿಸ್ಕ್‌ ಬ್ರೇಕ್‌ಗಳಿವೆ.

ಸ್ಟ್ರೈಡರ್ ಸೈಕಲ್ ಕಂಪನಿಯು ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್ (ಟಿಐಎಲ್) ಒಡೆತನದ ಅಂಗಸಂಸ್ಥೆಯಾಗಿದೆ. 2012ರಲ್ಲಿ ಪ್ರಾರಂಭವಾದಾಗಿನಿಂದ ಸ್ಟ್ರೈಡರ್ ಭಾರತದಾದ್ಯಂತ 4,000 ಮಳಿಗೆಗಳನ್ನು ತೆರೆದಿದೆ. ಇದು ಇತರ ದೇಶಗಳಿಗೂ ಬೈಸಿಕಲ್‌ಗಳನ್ನು ರಫ್ತು ಮಾಡುತ್ತಿದೆ. ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಎಂದು ಗುರುತಿಸಲ್ಪಟ್ಟಿದೆ. ಟಾಟಾ ಗ್ರೂಪ್ ಉತ್ತಮ ಗುಣಮಟ್ಟದ ನಾವೀನ್ಯತೆಯೊಂದಿಗೆ ಸ್ಟ್ರೈಡರ್ ಬೈಸಿಕಲ್‌ಗಳನ್ನು ನೀಡುತ್ತದೆ. ಇದು ಎಲೆಕ್ಟ್ರಿಕ್ ಬೈಸಿಕಲ್‌ಗಳು, ಎಂಟಿಬಿ, ಜೂನಿಯರ್, ಲೇಡೀಸ್, ರೋಡ್‌ಸ್ಟರ್ ಬೈಸಿಕಲ್‌ಗಳು ಸೇರಿದಂತೆ ವಿವಿಧ ಬಗೆಯ ಬೈಸಿಕಲ್‌ಗಳನ್ನು ಮಾರಾಟ ಮಾಡುತ್ತಿದೆ.

"ಭಾರತದಲ್ಲಿ ಇ-ಬೈಸಿಕಲ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ದೇಶದಲ್ಲಿ ಉತ್ತಮ ಪರಿಸರ ವ್ಯವಸ್ಥೆ ರೂಪಿಸುವಲ್ಲಿ ನಾವು ಮುಂದಾಳತ್ವ ವಹಿಸುತ್ತೇವೆ. ಎಲೆಕ್ಟ್ರಿಕ್‌ ಸೈಕಲ್‌ಗಳ ಜನಪ್ರಿಯತೆ ಹೆಚ್ಚುತ್ತಿದೆ. ಸಾಂಪ್ರದಾಯಿಕ ಸೈಕ್ಲಿಂಗ್ ಅನುಭವಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್‌ ಬೈಸಿಕಲ್‌ಗಳು ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಸಾರಿಗೆ ಪರ್ಯಾಯಗಳಾಗಿವೆ. ನಮ್ಮ ಹೊಸ ಮಾದರಿಗಳಾದ ವೋಲ್ಟಿಕ್ ಎಕ್ಸ್, ವೋಲ್ಟಿಕ್ ಗೋ ಬೈಸಿಕಲ್‌ಗಳು ನಗರ ಪ್ರಯಾಣದ ಅಗತ್ಯಗಳಿಗೆ ಸರಿಹೊಂದುತ್ತದೆ" ಎಂದು ಸ್ಟ್ರೈಡರ್‌ನ ವ್ಯವಹಾರ ವಿಭಾಗದ ಮುಖ್ಯಸ್ಥ ರಾಹುಲ್ ಗುಪ್ತಾ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ