logo
ಕನ್ನಡ ಸುದ್ದಿ  /  ಜೀವನಶೈಲಿ  /  Used Car Loan: ಸೆಕೆಂಡ್‌ ಹ್ಯಾಂಡ್‌ ಕಾರ್‌ ಖರೀದಿಗೆ ಬ್ಯಾಂಕ್‌ ಸಾಲ ಪಡೆಯಲು ಬಯಸುವಿರಾ, ಈ 4 ಸಲಹೆ ಗಮನದಲ್ಲಿಟ್ಟುಕೊಳ್ಳಿ

Used Car Loan: ಸೆಕೆಂಡ್‌ ಹ್ಯಾಂಡ್‌ ಕಾರ್‌ ಖರೀದಿಗೆ ಬ್ಯಾಂಕ್‌ ಸಾಲ ಪಡೆಯಲು ಬಯಸುವಿರಾ, ಈ 4 ಸಲಹೆ ಗಮನದಲ್ಲಿಟ್ಟುಕೊಳ್ಳಿ

HT Kannada Desk HT Kannada

Sep 09, 2023 07:10 PM IST

google News

ಸೆಕೆಂಡ್‌ ಕಾರ್‌ ಖರೀದಿಗೆ ಬ್ಯಾಂಕ್‌ ಸಾಲ

  • Tips to Get a Good Used Car Loan: ಹೊಸ ಕಾರು ಖರೀದಿಸಲು ಉದ್ದೇಶಿಸಿದರೆ ಬ್ಯಾಂಕ್‌ಗಳು ಸುಲಭವಾಗಿ ವಾಹನ ಸಾಲ ನೀಡುತ್ತವೆ. ಆದರೆ, ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಸಾಲ ಪಡೆಯಲು ಬಯಸಿದಾಗ ಈ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಸೆಕೆಂಡ್‌ ಕಾರ್‌ ಖರೀದಿಗೆ ಬ್ಯಾಂಕ್‌ ಸಾಲ
ಸೆಕೆಂಡ್‌ ಕಾರ್‌ ಖರೀದಿಗೆ ಬ್ಯಾಂಕ್‌ ಸಾಲ

ಮೊದಲ ಬಾರಿಗೆ ಕಾರು ಖರೀದಿಸುವವರು ಅಥವಾ ಈಗ ತಮ್ಮಲ್ಲಿರುವ ಕಾರಿನಿಂದ ದೊಡ್ಡ ಕಾರಿಗೆ ಬಡ್ತಿ ಹೊಂದಲು ಬಯಸುವವರು ಸೆಕೆಂಡ್‌ ಹ್ಯಾಂಡ್‌ ಖರೀದಿಸಲು ಬಯಸಬಹುದು. ಸೆಕಂಡ್‌ ಹ್ಯಾಂಡ್‌ ವಾಹನ ಖರೀದಿಯು ಆರ್ಥಿಕವಾಗಿಯೂ ಉತ್ತಮ ಆಯ್ಕೆಯಾಗಿದೆ. ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸುವಾಗ ವೆಚ್ಚ ಕಡಿಮೆ ಇರುತ್ತದೆ. ಹೊಸ ಕಾರಿಗೆ ಹೋಲಿಸಿದರೆ ಹಳೆ ಕಾರಿಗೆ ಹೆಚ್ಚಿನ ತೆರಿಗೆ ಹೊರೆಯೂ ಇರುವುದಿಲ್ಲ. ಮೊದಲ ಬಾರಿಗೆ ವಾಹನ ಖರೀದಿಸುವವರಿಗಂತೂ ಸೆಕೆಂಡ್‌ ಹ್ಯಾಂಡ್‌ ಕಾರೇ ಸೂಕ್ತ ಎನ್ನುವವರಿದ್ದಾರೆ. ಸೆಕೆಂಡ್‌ ಹ್ಯಾಂಡ್‌ ಕಾರಲ್ಲಿ ಚಾಲನೆ ಪರ್ಫೆಕ್ಟ್‌ ಆದ ಬಳಿಕ, ಮುಂದೆ ಹೊಸ ಕಾರು ಖರೀದಿಸಬಹುದು.

ಈ ರೀತಿ ಸೆಕೆಂಡ್‌ ಹ್ಯಾಂಡ್‌ ವಾಹನ ಖರೀದಿಸುವಾಗ ಸಾಕಷ್ಟು ಜನರಿಗೆ ಸಾಕಷ್ಟು ಹಣ ಉಳಿತಾಯವಾಗಬಹುದು. ಆದರೆ, ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಹಣ ಹೊಂದಿಸುವುದು ಕೆಲವರಿಗೆ ಸವಾಲಾಗಿ ಪರಿಣಮಿಸಬಹುದು. ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ವಾಹನ ಸಾಲ ದೊರಕಿದರೆ ಸುಲಭವಾಗಿ ಇಎಂಐ ಪಾವತಿಸುತ್ತ ಸಾಲ ತೀರಿಸಬಹುದು.

ಸೆಕೆಂಡ್‌ ಹ್ಯಾಂಡ್‌ ವಾಹನ ಸಾಲ ಪಡೆಯಲು ಈ ವಿಧಾನ ಅನುಸರಿಸಿ

ನಿಮ್ಮ ಕ್ರೆಡಿಟ್‌ ಇತಿಹಾಸ ಪರಿಶೀಲಿಸಿ

ನಿಮ್ಮ ಸಿಬಿಲ್‌ ಸ್ಕೋರ್‌ ಪರಿಶೀಲನೆ ಮಾಡಿ. ನಿಮ್ಮ ಕ್ರೆಡಿಟ್‌ ಸ್ಕೋರ್‌ ದುರ್ಬಲವಾಗಿದ್ದರೆ ಬ್ಯಾಂಕ್‌ ಸಾಲ ದೊರಕುವುದು ಕಷ್ಟವಾಗಬಹುದು. ನಿಮ್ಮ ಸಿಬಿಲ್‌ ಸ್ಕೋರ್‌ 720 ಕ್ಕಿಂತ ಹೆಚ್ಚಿದ್ದರೆ ಸುಲಭವಾಗಿ ವಾಹನ ಸಾಲ ದೊರಕುತ್ತದೆ.

ವಿವಿಧ ಬ್ಯಾಂಕ್‌ಗಳಲ್ಲಿ ವಿಚಾರಿಸಿ

ವಿವಿಧ ಬ್ಯಾಂಕ್‌ಗಳು ವಿವಿಧ ಬಡ್ಡಿದರದಲ್ಲಿ ವಾಹನ ಸಾಲ ನೀಡಬಹುದು. ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ದೊರಕುತ್ತದೆಯೋ ಆ ಬ್ಯಾಂಕ್‌ನಿಂದ ಸಾಲ ಪಡೆಯುವುದು ಉತ್ತಮ. ವಿವಿಧ ಬ್ಯಾಂಕ್‌ಗಳ ಬಡ್ಡಿದರ, ಹೆಚ್ಚುವರಿ ಷರತ್ತುಗಳು ಇತ್ಯಾದಿಗಳನ್ನು ಹೋಲಿಸಿ ನೋಡಿ.

ಪ್ರಿ ಅಪ್ರೂವ್ಡ್‌ ಸಾಲ ಪಡೆಯಲು ಯತ್ನಿಸಿ

ನಿಮ್ಮ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯ ಕಡೆಯಿಂದ ಪ್ರಿ ಅಪ್ರೂವ್ಡ್‌ ಸಾಲ ದೊರಕುವುದಿದ್ದರೆ ಅದನ್ನು ಪಡೆಯಲು ಯತ್ನಿಸಿ. ಹಳೆ ಗ್ರಾಹಕರಿಗೆ ಕೆಲವು ಬ್ಯಾಂಕ್‌ಗಳು ಈ ರೀತಿಯ ಸಾಲದ ಆಫರ್‌ ನೀಡುತ್ತವೆ. ಪ್ರಿ ಅಪ್ರೂವ್ಡ್‌ ಸಾಲಕ್ಕೆ ಕಡಿಮೆ ದಾಖಲೆಗಳ ಅಗತ್ಯವಿರುತ್ತದೆ. ಇದರಿಂದ ನಿಮ್ಮ ಸಮಯದ ಉಳಿತಾಯವಾಗುತ್ತದೆ.

ಅಲ್ಪಾವಧಿಯ ಸಾಲ ಖರೀದಿಸಿ

ಸೆಕೆಂಡ್‌ ಹ್ಯಾಂಡ್‌ ವಾಹನಕ್ಕೆ ದೀರ್ಘಾವಧಿ ಸಾಲಕ್ಕಿಂತ ಅಲ್ಪಾವಧಿ ಸಾಲವೇ ಉತ್ತಮವಾಗಿದೆ. ಅಲ್ಪಾವಧಿಯಾದರೆ ನಿಮಗೆ ಬಡ್ಡಿದರ ಹೊರೆ ಕಡಿಮೆಯಾಗುತ್ತದೆ. ದೀರ್ಘಾವಧಿ ಸಾಲ ಪಡೆದರೆ ಕಡಿಮೆ ಇಎಂಐ ಹೆಚ್ಚು ಬಡ್ಡಿದರ ಇರುತ್ತದೆ. ಇದರಿಂದ ನಿಮ್ಮ ಸೆಕೆಂಡ್‌ ಹ್ಯಾಂಡ್‌ ವಾಹನ ದುಬಾರಿಯಾಗಿ ಪರಿಣಮಿಸಬಹುದು.

ಹೊಸ ಕಾರು ಖರೀದಿಗೆ ಬ್ಯಾಂಕ್‌ಗಳು ಸುಲಭವಾಗಿ ಸಾಲ ನೀಡುತ್ತವೆ. ಆದರೆ, ಹೊಸ ಕಾರಿಗೆ ವಿಮೆ, ತೆರಿಗೆ ಇತ್ಯಾದಿಗಳು ಅತ್ಯಧಿಕವಾಗಿರುತ್ತವೆ. ಇದರಿಂದ ಆನ್‌ರೋಡ್‌ ದರ ದುಬಾರಿಯಾಗಿ ಪರಿಣಮಿಸುತ್ತದೆ. ಇದರ ಬದಲು ಸೆಕೆಂಡ್‌ ಹ್ಯಾಂಡ್‌ ಖರೀದಿಸುವುದು ಉತ್ತಮವೆಂದು ಸಾಕಷ್ಟು ಜನರು ಭಾವಿಸುತ್ತಾರೆ. ಈ ರೀತಿ ಖರೀದಿಸುವಾಗ ಉತ್ತಮ ಡೀಲ್‌ ನಿಮ್ಮದಾಗಿಸಿಕೊಳ್ಳಬೇಕು. ಪರಿಚಿತರ ವಾಹನ ಖರೀದಿಸಲು ಸಿಕ್ಕರೆ ಉತ್ತಮ. ಇಲ್ಲವಾದರೆ ದೋಷಪೂರಿತ ವಾಹನವನ್ನು ನಿಮಗೆ ಮಾರಾಟ ಮಾಡಲು ಸೆಕೆಂಡ್‌ ಹ್ಯಾಂಡ್‌ ಡೀಲರ್‌ಗಳು ಪ್ರಯತ್ನಿಸಬಹುದು. ವಾಹನ ಖರೀದಿಸುವ ಮೊದಲು ಅದರ ತಾಂತ್ರಿಕತೆ ಹೇಗಿದೆ, ದೋಷ ಪೂರಿತವಾಗಿದೆಯೇ ಎಂದು ನುರಿತ ಮೆಕ್ಯಾನಿಕ್‌ ಬಳಿ ಟೆಸ್ಟ್‌ ಮಾಡಿಸುವುದು ಉತ್ತಮವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ