logo
ಕನ್ನಡ ಸುದ್ದಿ  /  ಜೀವನಶೈಲಿ  /  Upcoming Cars 2025: ಹೊಸ ವರ್ಷ ಭಾರತದ ರಸ್ತೆಗಿಳಿಯಲಿರುವ 10 ಕಾರುಗಳು; ಮಾರುತಿ, ರೆನೊ, ಕಿಯಾ, ಟೊಯೊಟಾ ಕಾರುಗಳಿಗೆ ಸ್ವಾಗತ

Upcoming Cars 2025: ಹೊಸ ವರ್ಷ ಭಾರತದ ರಸ್ತೆಗಿಳಿಯಲಿರುವ 10 ಕಾರುಗಳು; ಮಾರುತಿ, ರೆನೊ, ಕಿಯಾ, ಟೊಯೊಟಾ ಕಾರುಗಳಿಗೆ ಸ್ವಾಗತ

Praveen Chandra B HT Kannada

Dec 13, 2024 09:54 AM IST

google News

ಕಿಯಾ ಕ್ಯಾರೆನ್ಸ್ ಮತ್ತು ಮಾರುತಿ ಫ್ರಾಂಕ್ಸ್‌ (ಸಾಂದರ್ಭಿಕ ಚಿತ್ರ)

    • Upcoming Cars 2025 in India: 2025ರಲ್ಲಿ ಭಾರತದ ರಸ್ತೆಗೆ ಮಾರುತಿ ಫ್ರಂಟಕಸ್‌, ರೆನೊ ಬಿಗ್‌ಸ್ಟಾರ್‌, ನ್ಯೂ ರೆನೊ ಡಸ್ಟರ್‌, ಕಿಯಾ ಕಾರೆನ್ಸ್‌ ಫೇಸ್‌ಲಿಫ್ಟ್‌, ಟೊಯೊಟಾ ಲ್ಯಾಂಡ್‌ ಕ್ರೂಸರ್‌ ಪ್ರಡೋ ಸೇರಿದಂತೆ ಹಲವು ಹೊಸ ಕಾರುಗಳು ಬಿಡುಗಡೆಯಾಗಲಿವೆ.
ಕಿಯಾ ಕ್ಯಾರೆನ್ಸ್  ಮತ್ತು ಮಾರುತಿ ಫ್ರಾಂಕ್ಸ್‌ (ಸಾಂದರ್ಭಿಕ ಚಿತ್ರ)
ಕಿಯಾ ಕ್ಯಾರೆನ್ಸ್ ಮತ್ತು ಮಾರುತಿ ಫ್ರಾಂಕ್ಸ್‌ (ಸಾಂದರ್ಭಿಕ ಚಿತ್ರ)

Upcoming Cars 2025 in India: 2024 ಡಿಸೆಂಬರ್‌ ಅಂತ್ಯದಲ್ಲಿರುವ ಸಮಯದಲ್ಲಿ ಸಾಕಷ್ಟು ವಾಹನ ಪ್ರೇಮಿಗಳು ಮುಂದಿನ ವರ್ಷ ಯಾವ ಕಾರುಗಳು ಬಿಡುಗಡೆಯಾಗಲಿದೆ ಎಂದು ಕಾಯುತ್ತಿರಬಹುದು. 2025ರಲ್ಲಿ ಸಾಕಷ್ಟು ಹೊಸ ಕಾರುಗಳು ಭಾರತದ ರಸ್ತೆಗೆ ಆಗಮಿಸಲಿವೆ. ಪೆಟ್ರೋಲ್‌, ಡೀಸೆಲ್‌ ಕಾರುಗಳು ಮಾತ್ರವಲ್ಲದೆ ಎಲೆಕ್ಟ್ರಿಕ್‌ ಕಾರುಗಳು ಆಗಮಿಸಲಿವೆ. ಹೊಸ ವಿನ್ಯಾಸ, ಸುಧಾರಿತ ಫೀಚರ್‌ಗಳು, ಅತ್ಯುತ್ತಮ ಪರ್ಫಾಮೆನ್ಸ್‌ ಇತ್ಯಾದಿಗಳೊಂದಿಗೆ ಹೊಸ ಕಾರುಗಳು ಆಗಮಿಸಲಿವೆ. 2025ರಲ್ಲಿ ಭಾರತದ ರಸ್ತೆಗೆ ಮಾರುತಿ ಫ್ರಂಟಕಸ್‌, ರೆನೊ ಬಿಗ್‌ಸ್ಟಾರ್‌, ನ್ಯೂ ರೆನೊ ಡಸ್ಟರ್‌, ಕಿಯಾ ಕಾರೆನ್ಸ್‌ ಫೇಸ್‌ಲಿಫ್ಟ್‌, ಟೊಯೊಟಾ ಲ್ಯಾಂಡ್‌ ಕ್ರೂಸರ್‌ ಪ್ರಡೋ ಸೇರಿದಂತೆ ಹಲವು ಹೊಸ ಕಾರುಗಳು ಬಿಡುಗಡೆಯಾಗಲಿವೆ.

1. ಮಾರುತಿ ಫ್ರಾಂಕ್ಸ್  ಫೇಸ್‌ಲಿಫ್ಟ್‌

ಮುಂದಿನ ವರ್ಷ ಮಾರುತಿ ಸುಜುಕಿ ಕಂಪನಿಯು ಮಾರುತಿ ಫ್ರಾಂಕ್ಸ್ ಫೇಸ್‌ಲಿಫ್ಟ್‌ ಆವೃತ್ತಿಯನ್ನು ಸಾಕಷ್ಟು ವಿನೂತನ ಅಪ್‌ಡೇಟ್‌ಗಳೊಂದಿಗೆ ಪರಿಚಯಿಸಲಿದೆ. ಇದು ಹೊಸ 1.2 ಲೀಟರ್‌ 3 ಸಿಲಿಂಡರ್‌ ಹೈಬ್ರಿಡ್‌ ಎಂಜಿನ್‌ ಹೊಂದಿರಲಿದೆ. ಇದರ ಇಂಧನ ದಕ್ಷತೆ ಉತ್ತಮವಾಗಿರಲಿದೆ. ಲೆವೆಲ್‌ 1 ಎಡಿಎಎಸ್‌ ಹೊಂದಿರಲಿದೆ. ಈ ಹೈಬ್ರಿಡ್‌ ಎಂಜಿನ್‌ ಎಸ್‌ಯುವಿಯು ಪ್ರತಿಲೀಟರ್‌ಗೆ 35 ಕಿಮೀ ಇಂಧನ ದಕ್ಷತೆ ನೀಡುವುದಾಗಿ ಹೇಳಲಾಗುತ್ತಿದೆ.

2. ರೆನೊ ಬಿಗ್‌ಸ್ಟರ್‌

2025ರಲ್ಲಿ ರೆನೊ ಬಿಗ್‌ಸ್ಟರ್‌ ಎಂಬ 7 ಸೀಟಿನ ಎಸ್‌ಯುವಿ ಆಗಮಿಸಲಿದೆ. ಇದರ ಉದ್ದ 4.57 ಮೀಟರ್‌ಗಿಂತ ಹೆಚ್ಚಿರಲಿದೆ. ಇದು ಪೆಟ್ರೋಲ್‌ ಮತ್ತು ಹೈಬ್ರಿಡ್‌ ಎಂಜಿನ್‌ ಆವೃತ್ತಿಗಳಲ್ಲಿ ಆಗಮಿಸಲಿದೆ. 1.2 ಲೀಟರ್‌ ಮಿಲ್ಡ್‌ ಹೈಬ್ರಿಡ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಆವೃತ್ತಿಯನ್ನೂ ಹೊಂದಿರಲಿದೆ.

3. ಟೊಯೊಟಾ ಲ್ಯಾಂಡ್‌ ಕ್ರೂಸರ್‌ ಪ್ರಡೋ

ಟೊಯೊಟಾ ಕಂಪನಿಯು 2025ರ ಅಂತ್ಯದ ವೇಳೆಗೆ ಭಾರತದಲ್ಲಿ ಲ್ಯಾಂಡ್‌ ಕ್ರೂಸರ್‌ ಪ್ರಡೋ ಎಂಬ ಕಾರನ್ನು ಪರಿಚಯಿಸಲಿದೆ. ಇದು 2.3 ಲೀಟರ್‌ನ ಟರ್ಬೊ ಡೀಸೆಲ್‌ಎಂಜಿನ್‌ ಹೊಂದಿರಲಿದೆ. ಇದು 201 ಬಿಎಚ್‌ಪಿ ಮತ್ತು 500 ಎನ್‌ಎಂ ಟಾರ್ಕ್‌ ನೀಡಲಿದೆ. 2.4 ಲೀಟರ್‌ನ ಪೆಟ್ರೋಲ್‌ ಹೈಬ್ರಿಡ್‌ ಎಂಜಿನ್‌ ಆವೃತ್ತಿಯೂ ಆಗಮಿಸಲಿದೆ.

4. ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್

ಮುಂದಿನ ವರ್ಷ ಕಿಯಾ ಕಂಪನಿಯು ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ ಕಾರನ್ನು ಪರಿಚಯಿಸಲಿದೆ. ಹಳೆಯ ಕಿಯಾ ಕ್ಯಾರೆನ್ಸ್‌ಗೆ ಹೋಲಿಸಿದರೆ ಹೊಸ ಕಾರಿನಲ್ಲಿ ಸಾಕಷ್ಟು ಬದಲಾವಣೆ ನಿರೀಕ್ಷಿಸಬಹುದು. ಹೊಸ ಕ್ಯಾರೆನ್ಸ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಮುಂತಾದ ಎಂಜಿನ್‌ ಆಯ್ಕೆಗಳಲ್ಲಿ ಆಗಮಿಸಲಿದೆ. ಇದು ಆರು ಏರ್‌ಬ್ಯಾಗ್‌ಗಳು, ಟೈರ್ ಒತ್ತಡದ ಮಾನಿಟರಿಂಗ್ ಮತ್ತು ಲೇನ್ ಅಸಿಸ್ಟ್‌ನಂತಹ ಎಡಿಎಎಸ್‌ ಫೀಚರ್‌ಗಳನ್ನು ಹೊಂದಿರಲಿದೆ.

5. ಗ್ರ್ಯಾಂಡ್‌ ವಿಟಾರ 7 ಸೀಟಿನ ಕಾರು

2025ರಲ್ಲಿ ಗ್ರ್ಯಾಂಡ್‌ ವಿಟಾರ 7 ಸೀಟಿನ ಕಾರು ಆಗಮಿಸಲಿದೆ. ದೊಡ್ಡ ಕುಟುಂಬಗಳಿಗೆ ಇದು ಸೂಕ್ತವಾಗಲಿದೆ. ಮೂರನೇ ಸಾಲಿನಲ್ಲೂ ಸೀಟುಗಳನ್ನು ಹೊಂದಿರಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಐದು ಸೀಟಿನ ವಿಟಾರಕ್ಕಿಂತ ತುಸು ಉದ್ದವಾಗಿರಲಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಹೈಬ್ರಿಡ್ ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿರಲಿದೆ.೭

6. ಟೊಯೊಟಾ ಹೈರೈಡರ್‌ 7 ಸೀಟರ್‌

ಗ್ರ್ಯಾಂಡ್‌ ವಿಟಾರ ಪ್ಲಾಟ್‌ಫಾರ್ಮ್‌ ಆಧರಿತ ಹೊಸ ಹೈರೈಡರ್‌ 7 ಸೀಟರ್‌ ಕಾರು ಕೂಡ ಮುಂದಿನ ವರ್ಷ ಆಗಮಿಸಲಿದೆ.

7. ಕಿಯಾ ಸಿರೋಸ್

ಕಿಯಾ ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಹೊಸ ವರ್ಷ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಬಿಡುಗಡೆ ಮಾಡಲಿದೆ. 1.2-ಲೀಟರ್ ಪೆಟ್ರೋಲ್, 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆಗಳಲ್ಲಿ ದೊರಕಲಿದೆ.

8. ಹೊಸ ಹ್ಯುಂಡೈ ವೆನ್ಯೂ

ನೆಕ್ಸ್ಟ್-ಜೆನ್ ಹ್ಯುಂಡೈ ವೆನ್ಯೂ ಮುಂದಿನ ವರ್ಷದ ಅಂತ್ಯದೊಳಗೆ ಆಗಮಿಸಲಿದೆ. 1.2-ಲೀಟರ್ ಪೆಟ್ರೋಲ್, 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಆಗಮಿಸುವ ಸೂಚನೆಯಿದೆ.

9. ಹೊಸ ನಿಸಾನ್‌ ಎಸ್‌ಯುವಿ

ರೆನೊ ಡಸ್ಟರ್‌ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ನಿಸಾನ್‌ ಎಸ್‌ಯುವಿಯೊಂದು 2025ರಲ್ಲಿ ಆಗಮಿಸಲಿದೆ. 1.3-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿರಲಿದೆ.

10. ಹೊಸ ರೆನೊ ಡಸ್ಟರ್‌

ಮೂರನೇ ತಲೆಮಾರಿನ ಹೊಸ ರೆನೊ ಡಸ್ಟರ್‌ ಮುಂದಿನ ವರ್ಷ ಆಗಮಿಸಲಿದೆ. 1.5-ಲೀಟರ್ ಪೆಟ್ರೋಲ್‌, 1.3 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಆಯ್ಕೆಗಳಲ್ಲಿ ದೊರಕಲಿದೆ.

2025ರಲ್ಲಿ ಹೊಸ ಕಾರು ಖರೀದಿಸಲು ಬಯಸುವ ವಾಹನಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಮಾರುತಿ ಸುಜುಕಿ, ಟೊಯೊಟಾ, ರೆನೊ, ನಿಸ್ಸಾನ್‌ ಸೇರಿದಂತೆ ವಿವಿಧ ಕಂಪನಿಗಳು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ