logo
ಕನ್ನಡ ಸುದ್ದಿ  /  ಜೀವನಶೈಲಿ  /  Bad Cholesterol Control: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಈ ತರಕಾರಿ ಸೇವಿಸಿ

Bad cholesterol control: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಈ ತರಕಾರಿ ಸೇವಿಸಿ

HT Kannada Desk HT Kannada

Feb 20, 2023 04:08 PM IST

google News

ತರಕಾರಿಗಳು

    • ಅನಾರೋಗ್ಯಕರ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ತಗ್ಗಿಸಲು ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಂದು ಉತ್ತಮ ವಿಧಾನ. ಇನ್‌ಸ್ಟಂಟ್‌ ಆಹಾರ ಸೇವನೆಗಿಂತ ಆಯಾ ಆಯಾ ಕಾಲಕ್ಕೆ ಸಿಗುವ ತರಕಾರಿ ಸೇವಿಸುವುದು ಒಳ್ಳೆಯದು. 
ತರಕಾರಿಗಳು
ತರಕಾರಿಗಳು

ಕಾಲ ಬದಲಾದಂತೆ ನಮ್ಮ ಆಹಾರಕ್ರಮವೂ ಬದಲಾಗುತ್ತಾ ಹೋಗುತ್ತಿದೆ. ಓಡುತ್ತಿರುವ ಜೀವನದ ಹಿಂದೆ ಬ್ರೇಕ್‌ ಇಲ್ಲದಂತೆ ಓಡುತ್ತಿರುವ ನಾವು ಅಡುಗೆ ಮಾಡಿ ತಿನ್ನುವುದು ಕಷ್ಟಸಾಧ್ಯವಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಸಂಸ್ಕರಿಸಿದ, ಪ್ಯಾಕೆಟ್‌ ಆಹಾರ ಸೇವಿಸುವುದು ನಮಗೆ ಅಭ್ಯಾಸವಾಗಿದೆ. ಬಿಸ್ಕತ್ತುಗಳು, ಮಯೊನೀಸ್‌, ಬ್ರೆಡ್‌ ಇವುಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್‌ ಅಂಶ ದೇಹದಲ್ಲಿ ಹೆಚ್ಚುತ್ತಿದೆ. ಇದರಿಂದ ಹೃದಯ ಸಮಸ್ಯೆ, ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳು ಹೆಚ್ಚುತ್ತಿವೆ. ದೈಹಿಕ ಚಟುವಟಿಕೆಗಳು ಕಡಿಮೆಯಾಗುವ ಜೊತೆಗೆ ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ಕೆಟ್ಟ ಕೊಲೆಸ್ಟ್ರಾಲ್‌ ಜೊತೆಗೆ ಹಲವು ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.

ಅಧ್ಯಯನಗಳ ಪ್ರಕಾರ ಕರಗುವ ನಾರಿನಂಶ ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್‌ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಸ್ಯ ಆಧಾರಿತ ಆಹಾರಗಳು ಹಾಗೂ ತರಕಾರಿಗಳಲ್ಲಿ ಸ್ಯಾಚುರೇಟೆಡ್‌ ಕೊಬ್ಬಿನಂಶ ಕಡಿಮೆ ಇರುತ್ತದೆ ಹಾಗೂ ಅವುಗಳಲ್ಲಿ ಕೊಲೆಸ್ಟ್ರಾಲ್‌ ಇರುವುದಿಲ್ಲ. ಇವುಗಳಲ್ಲಿ ಕರಗುವ ನಾರಿನಂಶ ಅಂಶ ಸಮೃದ್ಧವಾಗಿವೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಗುವ ನಾರಿನಂಶ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ ಮತ್ತು ಯಕೃತ್ತು ಉತ್ಪಾದಿಸುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಹೊಂದಿರುವ ತರಕಾರಿಗಳು ಯಾವುವು?

ಪಾಲಕ್‌ ಸೊಪ್ಪು

ನಮ್ಮ ಆಹಾರಕ್ರಮದೊಂದಿಗೆ ಹಸಿರು ಸೊಪ್ಪಗಳನ್ನು ಸೇರಿಸಿಕೊಳ್ಳುವುದು ಬಹಳ ಅವಶ್ಯ. ಪಾಲಕ್‌ ಒಂದು ಪರಿಪೂರ್ಣ ಸೀಸನಲ್‌ ಸೊಪ್ಪು. ಇದರಲ್ಲಿ ವಿಟಮಿನ್‌ ಹಾಗೂ ಖನಿಜಾಂಶ ಅಧಿಕವಾಗಿದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅಂಶವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸಲು ಹಸಿ ಪಾಲಕ್‌ ಚಿಗುರಿನ ಸಲಾಡ್‌ ಮಾಡಿ ತಿನ್ನುವುದು ಉತ್ತಮ.

ಬ್ರೊಕೊಲಿ

ಬ್ರೊಕೊಲಿಯಲ್ಲಿ ನಾರಿನಂಶ ಅಂಶ ಅಧಿಕವಾಗಿದೆ. ಇದು ವಿಟಮಿನ್‌ ಸಿ ಹಾಗೂ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಹೃದಯದ ಆರೋಗ್ಯವನ್ನು ಸಮತೋಲನದಲ್ಲಿರಿಸಿಕೊಳ್ಳಲು ಇದರ ಸೇವನೆ ಅಗತ್ಯ. ಇದರಲ್ಲಿರುವ ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

ಕ್ಯಾರೆಟ್‌

ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೊಟಿನ್‌ ಅಂಶ ಅಧಿಕವಾಗಿದೆ. ಇದು ದೇಹದಲ್ಲಿ ಆಕ್ಸಿಡಿಟೇಷನ್‌ ಉಂಟಾಗುವುದನ್ನು ತಡೆಯುತ್ತದೆ. ಇದು ರಕ್ತ ಸಂಚಾರವನ್ನು ಸುಗಮಗೊಳಿಸುವ ಜೊತೆಗೆ ಹೃದಯ ಆರೋಗ್ಯಕ್ಕೂ ಸಹಕಾರಿ.

ಬಿಟ್ರೂಟ್‌

ಬಿಟ್ರೂಟ್‌ನಲ್ಲೂ ನಾರಿನಂಶ ಅಂಶ ಅಧಿಕವಾಗಿದೆ. ಇದು ರಕ್ತನಾಳಗಳನ್ನು ವಿಸ್ತರಿಸುವ ನೈಟ್ರೆಟ್‌ ಅಂಶಗಳನ್ನು ಹೊಂದಿದೆ. ಇದು ದೇಹದ ರಕ್ತದೊತ್ತಡವನ್ನು ನಿವಾರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೂ ಇದು ಸಹಕಾರಿ.

ಶತಾವರಿ

ಶತಾವರಿಯಲ್ಲೂ ವಿಟಮಿನ್‌ ಹಾಗೂ ಖನಿಜಾಂಶ ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ದೇಹದಿಂದ ಹೊರ ಹಾಕಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಅಲ್ಲದೇ ಹೃದಯ ಆರೋಗ್ಯಕ್ಕೂ ಇದರ ಸೇವನೆ ಉತ್ತಮ.

ಕೋಸು

ಕ್ಯಾಬೇಜ್‌ ಅಥವಾ ಕೋಸುವಿನಲ್ಲಿ ನಾರಿನಂಶ ಅಧಿಕವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಹಾಗೂ ಉತ್ಕರ್ಷಣ ವಿರೋಧಗುಣವೂ ಹೆಚ್ಚಿದೆ. ಇದರ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ವಿಟಮಿನ್‌ ಸಿ ಅಂಶ ಅಧಿಕವಾಗಿದ್ದು ಇದು ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಹೊರ ಹಾಕುವ ಜೊತೆಗೆ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.

ಹಾಗಲಕಾಯಿ

ಹಾಗಲಕಾಯಿ ಸೇವನೆಯಿಂದ ರಕ್ತಶುದ್ಧಿಯಾಗುವ ಜೊತೆಗೆ ಹೃದಯದ ಕಾರ್ಯಚಟುವಟಿಕೆಗಳೂ ಸುಧಾರಿಸುತ್ತವೆ. ಇದು ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡಿ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಂದು ಚಮಚ ಹಾಗಲಕಾಯಿ ರಸ ಕುಡಿಯುವುದರಿಂದ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ