ಜೂನ್ 29ಕ್ಕೆ ಬೆಂಗಳೂರಿನಿಂದ ಕಟೀಲು, ಧರ್ಮಸ್ಥಳ, ಕುಕ್ಕೆಗೆ ವಿಸ್ಟಾಡೋಮ್ ರೈಲು ಪ್ರವಾಸ; ಟಿಕೆಟ್, ಪ್ರೇಕ್ಷಣಿಯ ತಾಣಗಳ ಮಾಹಿತಿ ಇಲ್ಲಿದೆ
Jun 24, 2024 08:00 AM IST
ಜೂನ್ 29ಕ್ಕೆ ಬೆಂಗಳೂರಿನಿಂದ ಕಟೀಲು, ಧರ್ಮಸ್ಥಳ, ಕುಕ್ಕೆಗೆ ವಿಸ್ಟಾಡೋಮ್ ರೈಲು ಪ್ರವಾಸ; ಟಿಕೆಟ್, ಪ್ರೇಕ್ಷಣಿಯ ತಾಣಗಳ ಮಾಹಿತಿ ಇಲ್ಲಿದೆ
- ಐಆರ್‌ಸಿಟಿಸಿಯಿಂದ ಜೂನ್ 29ಕ್ಕೆ ಬೆಂಗಳೂರಿನಿಂದ ಕಟೀಲು, ಧರ್ಮಸ್ಥಳ, ಕುಕ್ಕೆಗೆ ವಿಸ್ಟಾಡೋಮ್ ಪ್ರವಾಸ ಆಯೋಜಿಸಿದೆ. ಈ ಟೂರ್ ಪ್ಯಾಕೇಜ್‌ನ ದರ, ಪ್ರೇಕ್ಷಣಿಯ ತಾಣಗಳ ವಿವರ ಇಲ್ಲಿದೆ.
ಬೆಂಗಳೂರು: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸ ಕಾರ್ಪೊರೇಷನ್ - (IRCTC) ಜೂನ್ 29ರ ಶನಿವಾರ ಕಟೀಲ್-ಧರ್ಮಸ್ಥಳ-ಕುಕ್ಕೆ ವಿಸ್ಟೋಡೋಮ್ ರೈಲು ಪ್ರವಾಸ (Bangalore Kateel Dharmasthala Kukke Vistadome Train Tour Package) ಆಯೋಜಿಸಿದೆ. 2 ರಾತ್ರಿಗಳನ್ನು ಒಳಗೊಂಡ 3 ದಿನಗಳ ವಿಸ್ಟಾಡೋಮ್ ರೈಲು ಟೂರ್ ಪ್ಯಾಕೇಜ್‌ನಲ್ಲಿ ಎಷ್ಟು ಧಾರ್ಮಿಕ ಕ್ಷೇತ್ರಗಳವನ್ನು ವೀಕ್ಷಿಸಬಹುದು?, ಊಟ, ಹೋಟೆಲ್, ಪ್ಯಾಕೇಜ್ ದರಗಳ ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿದೆ.
ಸಾಮಾನ್ಯ ರೈಲುಗಳಿಗಿಂತ ವಿಸ್ಟಾಡೋಮ್ ಕೋಚ್ ಹೊಸ ಅನುಭವವನ್ನು ನೀಡುತ್ತದೆ. ಅತ್ಯಾಧುನಿಕ ಬೋಗಿಯಲ್ಲಿನ ಸೀಟುಗಳು 360 ಡಿಗ್ರಿ ತಿರುಗುತ್ತವೆ. ರೈಲಿನಲ್ಲೇ ಕುಳಿತು ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ರಮಣೀಯವಾದ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಈ ಮಾರ್ಗದ ಪ್ರಮುಖ ಆಕರ್ಷಣೆಯಾಗಿದ್ದು, ಪರ್ವತಗಳು, ಬೆಟ್ಟ ಗುಡ್ಡಗಳನ್ನು ಈ ರೈಲಿನಿಂದಲೇ ಕಣ್ತುಂಬಿಕೊಳ್ಳಬಹುದು. ಕಟೀಲ್-ಧರ್ಮಸ್ಥಳ-ಕುಕ್ಕೆ ವಿಸ್ಟೋಡೋಮ್ ರೈಲು ಪ್ರವಾಸದಲ್ಲಿ ಏನೆಲ್ಲಾ ವೀಕ್ಷಿಸಬಹುದು, ಪ್ಯಾಕೇಜ್‌ಗೆ ಎಷ್ಟು ದರಗಳಿವೆ ಸೇರಿದಂತೆ ಪ್ರಮುಖ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಜೂನ್ 29ರ ಶನಿವಾರ ಪ್ರವಾಸದ ಮೊದಲ ದಿನವಾಗಿರಲಿದೆ. ಅಂದು ಬೆಳಗ್ಗೆ 7 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಿಂದ 16539 ಸಂಖ್ಯೆಯ ರೈಲಿನ ವಿಸ್ಟೋಡೋಮ್ ಕೋಚ್ ಹತ್ತಿಬೇಕು. ಮಧ್ಯಾಹ್ನದವರೆಗೆ ವಿಸ್ಟಾಡೋಮ್ ಮೂಲಕ ಪ್ರಕೃತಿಯ ಸೌಂದರ್ಯವನ್ನು ಆನಂದಿಸಿ. ಮಧ್ಯಾಹ್ನ 3.40ಕ್ಕೆ ಬಂಟವಾಳ ರೈಲು ನಿಲ್ದಾಣದಲ್ಲಿ ಇಳಿದುಕೊಳ್ಳಿ. ಗೊತ್ತುಪಡಿಸಿದ ಕ್ಯಾಬ್ ಚಾಲಕನನ್ನು ಭೇಟಿ ಮಾಡಿ. ಇಲ್ಲಿಂದ ಸೋಮೇಶ್ವರ ಬೀಚ್‌ಗೆ ಕರೆದೊಯ್ಯಲಾಗುತ್ತದೆ. ರಾತ್ರಿ ತಂಗಲು ಹೋಟೆಲ್ ವ್ಯವಸ್ಥೆ ಮಾಡಲಾಗಿರುತ್ತದೆ.
ಜೂನ್ 30ರ ಭಾನುವಾರ ಎರಡನೇ ದಿನದ ಪ್ರವಾಸದಲ್ಲಿ ಹೋಟೆಲ್‌ನಿಂದ ಚೆಕ್ ಔಟ್ ಮಾಡಿದ ಕೂಡ ಕಟೀಲ್ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ. ನಂತರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನದ ಬಳಿಕ ಕುಕ್ಕೆಗೆ ತೆರಳುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ದೇವರ ದರ್ಶನ ಪಡೆಯಬೇಕು. ಸಂಜೆ 7.30ಕ್ಕೆ ಸುಬ್ರಹ್ಮಣ್ಯದಿಂದ ರಸ್ತೆ ಮೂಲಕ ರೈಲು ನಿಲ್ದಾಣಕ್ಕೆ ರಾತ್ರಿ ಡ್ರಾಪ್ ಮಾಡುತ್ತಾರೆ. ರೈಲು ಸಂಖ್ಯೆ 16586 ರಾತ್ರಿ 8.40ಕ್ಕೆ ಬೆಂಗಳೂರಿಗೆ ಹೊರಡುತ್ತದೆ. ರಾತ್ರಿಯ ಪ್ರಯಾಣದ ನಂತರ ಜುಲೈ 1ರ ಬೆಳಗ್ಗೆ 6.15ಕ್ಕೆ ಬೆಂಗಳೂರಿಗೆ ತಲುಪಿಸಲಾಗುತ್ತದೆ.
ಕಟೀಲ್-ಧರ್ಮಸ್ಥಳ-ಕುಕ್ಕೆ ವಿಸ್ಟೋಡೋಮ್ ಟೂರ್ ಪ್ಯಾಕೇಜ್
ಈ ಪ್ಯಾಕೇಜ್‌ನಲ್ಲಿ ಒಬ್ಬರಿಗೆ 17,910 ರೂಪಾಯಿ ಆಗಲಿದೆ. ಇಬ್ಬರು ಆದರೆ 11,010 ರೂಪಾಯಿ, ಮೂರು ಜನಕ್ಕೆ 9000 ಸಾವಿರ, ಹಾಸಿಗೆ ಇರುವ ಮಗು (5-11 ವರ್ಷ) 7,170 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 6,620 ರೂಪಾಯಿ ನಿಗದಿ ಮಾಡಲಾಗಿದೆ. ಒಂದು ವೇಳೆ ನೀವೇನಾದರೂ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದರೆ ಟಿಕೆಟ್ ಬುಕ್ ಮಾಡಿ. ಐಆರ್‌ಸಿಟಿಸಿ ವಿಸ್ಟಾಡೋಮ್ ಟೂರ್ ಪ್ಯಾಕೇಜ್‌ನಲ್ಲಿ ವೀಕ್ಷಿಸಬಹುದಾದ ಪ್ರವಾಸಿ ತಾಣಗಳ ಮಾಹಿತಿಯನ್ನು ಐಆರ್‌ಸಿಟಿಸಿಯ ಅಧಿಕೃತ ಜಾಲತಾಣ irctc.com ಭೇಟಿ ನೀಡಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)