logo
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ಕೂದಲು ಉದುರಲು ಬಾಚಣಿಗೆಯೂ ಕಾರಣವಾಗಬಹುದು, ಕೂದಲಿನ ಸಮಸ್ಯೆ ನಿವಾರಣೆಗೆ ನಾವು ಬಳಸುವ ಬಾಚಣಿಗೆ ಹೇಗಿರಬೇಕು ನೋಡಿ

Hair Care: ಕೂದಲು ಉದುರಲು ಬಾಚಣಿಗೆಯೂ ಕಾರಣವಾಗಬಹುದು, ಕೂದಲಿನ ಸಮಸ್ಯೆ ನಿವಾರಣೆಗೆ ನಾವು ಬಳಸುವ ಬಾಚಣಿಗೆ ಹೇಗಿರಬೇಕು ನೋಡಿ

Reshma HT Kannada

Nov 01, 2023 10:28 AM IST

google News

ಕೂದಲು ಉದುರುವುದು ಕಡಿಮೆಯಾಗಲು ನಾವು ಬಳಸುವ ಬಾಚಣಿಗೆ ಹೇಗಿರಬೇಕು?

    • ಇತ್ತೀಚೆಗೆ ಯಾರಲ್ಲಿ ಕೇಳಿದರೂ ಕೂದಲು ಉದುರುವ ಸಮಸ್ಯೆಯೇ ಕೇಳಿಬರುತ್ತಿದೆ. ಕೂದಲು ಉದುರಲು ನಾವು ಬಳಸುವ ಬಾಚಣಿಗೆ ಕೂಡ ಕಾರಣವಿರಬಹುದು. ಸರಿಯಾದ ಬಾಚಣಿಗೆ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುವುದು ಮಾತ್ರವಲ್ಲ, ಒಟ್ಟಾರೆ ಕೂದಲಿನ ಆರೈಕೆಗೂ ಬಹಳ ಮುಖ್ಯ. ಹಾಗಾದರೆ ಬಾಚಣಿಗೆ ಹೇಗಿರಬೇಕು?
ಕೂದಲು ಉದುರುವುದು ಕಡಿಮೆಯಾಗಲು ನಾವು ಬಳಸುವ ಬಾಚಣಿಗೆ ಹೇಗಿರಬೇಕು?
ಕೂದಲು ಉದುರುವುದು ಕಡಿಮೆಯಾಗಲು ನಾವು ಬಳಸುವ ಬಾಚಣಿಗೆ ಹೇಗಿರಬೇಕು?

ತಲೆ ಕೂದಲು ಉದುರುವ ಸಮಸ್ಯೆ ಈಗ ಹೆಣ್ಣುಮಕ್ಕಳು ಮಾತ್ರವಲ್ಲ, ಗಂಡುಮಕ್ಕಳನ್ನೂ ಕಾಡುತ್ತಿದೆ. ಇದಕ್ಕೆ ನೂರಾರು ಪರಿಹಾರ ಮಾರ್ಗಗಳನ್ನು ಕಂಡುಕೊಂಡರು ಪ್ರಯೋಜನವಾಗಿರುವುದಿಲ್ಲ. ಕೂದಲು ಉದುರಲು ಕಾರಣಗಳು ಹಲವಿರಬಹುದು. ಅದರಲ್ಲಿ ಕೆಲವು ಅತಿಸೂಕ್ಷ್ಮ ಸಂಗತಿಗಳಿರುತ್ತವೆ. ಮಾತ್ರವಲ್ಲ ಅವು ನಮಗೆ ತಿಳಿಯುವುದೂ ಇಲ್ಲ. ಕೂದಲು ಉದುರುವ ಸಮಸ್ಯೆಗೆ ನಾವು ಬಳಸುವ ಬಾಚಣಿಗೆ ಕೂಡ ಕಾರಣವಿರಬಹುದು. ನಮ್ಮ ಕೂದಲು ಹಾಗೂ ಚರ್ಮದ ಗುಣಕ್ಕೆ ಅನುಗುಣವಾದ ಬಾಚಣಿಗೆ ಬಳಸುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು ಮಾತ್ರವಲ್ಲ, ಇದು ಒಟ್ಟಾರೆ ಕೂದಲಿನ ಆರೋಗ್ಯವನ್ನೂ ಸುಧಾರಿಸುತ್ತದೆ. ನಿಮ್ಮ ಕೂದಲಿನ ಪ್ರಕಾರ ಮತ್ತು ಅಗತ್ಯಗಳಿಗೆ ಅನುಗುಣವಾದ ವಿವಿಧ ರೀತಿಯ ಬಾಚಣಿಗೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಅಗಲ ಹಲ್ಲಿನ ಬಾಚಣಿಗೆ

ಒದ್ದೆ ಕೂದಲಿನ ಸಿಕ್ಕು ಬಿಡಿಸಲು ಅಗಲ ಹಲ್ಲಿನ ಬಾಚಣಿಗೆ ಬಹಳ ಅವಶ್ಯ. ಇದು ಸಿಕ್ಕು ಬಿಡಿಸಲು ಕೂದಲು ತುಂಡಾಗದಂತೆ ನೋಡಿಕೊಳ್ಳುತ್ತದೆ. ಸುರುಳಿಯಾಕಾರ ಅಥವಾ ಕರ್ಲಿ ಹೇರ್‌ ಇರುವವರಿಗೆ ಬೆಸ್ಟ್‌ ಎನ್ನಬಹುದು. ಒರಟಾದ ಕೂದಲು ಇರುವವರು ಈ ಬಾಚಣಿಗೆ ಬಳಸುವುದು ಉತ್ತಮ. ಇದು ಕೂದಲಿಗೆ ಹಾನಿಯಾಗದಂತೆ ಬಿಡಿಸಲು ಸಹಾಯ ಮಾಡುತ್ತದೆ.

ಸೂಕ್ಷ್ಮ ಹಲ್ಲಿನ ಬಾಚಣಿಗೆ

ಹತ್ತಿರ ಹತ್ತಿರ ಅಥವಾ ಸೂಕ್ಷ್ಮ ಹಲ್ಲಿರುವ ಬಾಚಣಿಗೆಗಳು ನೀಳವಾದ ಹಾಗೂ ನಯವಾದ ಕೂದಲು ಇರುವವರಿಗೆ ಹೊಂದುತ್ತದೆ. ಇದು ಕೂದಲು ನೀಳವಾಗಿ ಕಾಣಲು ಸಹಕಾರಿ. ನಿಮ್ಮದು ನಯವಾದ ಕೂದಲಾಗಿದ್ದರೂ ಸೂಕ್ಷ್ಮ ಹಲ್ಲಿನ ಬಾಚಣಿಕೆ ಬಳಸುವ ಮುನ್ನ ಎಚ್ಚರ ಅಗತ್ಯ. ಯಾಕೆಂದರೆ ಇದರ ತೀವ್ರ ಬಳಕೆಯಿಂದ ಕೂದಲಿಗೆ ಹಾನಿಯಾಗಬಹುದು.

ಅಗಲ ಹಲ್ಲಿನ ಮರದ ಬಾಚಣಿಗೆ

ಮರದ ಬಾಚಣಿಗೆಗಳು ಸಾಮಾನ್ಯವಾಗಿ ಅಗಲ ಹಲ್ಲನ್ನು ಹೊಂದಿರುತ್ತವೆ. ಇವು ಸೌಮ್ಯವಾಗಿ ಕೂದಲು ಬಾಚಲು ಸಹಕರಿಸುತ್ತವೆ. ಈ ಬಾಚಣಿಗೆಯಿಂದ ಕೂದಲು ಬಾಚುವುದರಿಂದ ಕೂದಲಿನ ಬುಡದಲ್ಲಿರುವ ನೈಸರ್ಗಿಕ ಎಣ್ಣೆಯಂತ ಎಲ್ಲಾ ಕಡೆಗೂ ಹರಡಲು ಸಹಾಯ ಮಾಡುತ್ತದೆ. ಇದು ಕೂದಲಿನ ಬುಡ ಒಣಗದಂತೆ ಹಾಗೂ ಒಟ್ಟಾರೆ ಕೂದಲ ಆರೋಗ್ಯ ಸುಧಾರಣೆಗೆ ನೆರವಾಗುತ್ತದೆ. ನೆತ್ತಿ ಭಾಗ ಸೂಕ್ಷ್ಮವಾಗಿರುವವರಿಗೆ ಈ ಮರದ ಬಾಚಣಿಗೆ ಬಳಕೆ ಬೆಸ್ಟ್‌.

ಡಿಟ್ಯಾಂಗ್ಲಿಂಗ್ ಬ್ರಷ್

ಇದನ್ನು ಸಿಕ್ಕು ಬಿಡಿಸುವ ಬ್ರಷ್‌ ಅಥವಾ ಬಾಚಣಿಗೆ ಅಂತಲೂ ಕರೆಯಬಹುದು. ಇದು ಸಾಂಪ್ರದಾಯಿಕ ಬಾಚಣಿಗೆ ಅಲ್ಲದೇ ಹೋದರೂ ಒಟ್ಟಾರೆ ಕೂದಲು ಉದುರುವುದನ್ನು ಕಡಿಮೆ ಮಾಡಲು ಇದರ ಬಳಕೆ ಬೆಸ್ಟ್‌. ಇದು ಸುಲಭವಾಗಿ ಸಿಕ್ಕನ್ನು ಬಿಡಸುತ್ತದೆ. ಆ ಕಾರಣಕ್ಕೆ ಮಕ್ಕಳು, ತುಂಬಾ ಸೂಕ್ಷ್ಮವಾದ ಕೂದಲು ಹೊಂದಿರುವವರು ಹಾಗೂ ಬೇಗನೆ ಗಂಟಾಗುವ ಕೂದಲಿರುವವರು ಬಳಸುವುದು ಉತ್ತಮ.

ನ್ಯಾಚುರಲ್‌ ಬ್ರಿಸ್ಟಲ್‌ ಬ್ರಷ್‌

ನ್ಯಾಚುರಲ್‌ ಬ್ರಿಸ್ಟಲ್‌ ಬ್ರಷ್‌ ಕೂದಲಿನ ಒಟ್ಟಾರೆ ಆರೈಕೆಗೆ ಬಹಳ ಅವಶ್ಯ. ಇದನ್ನು ಹಂದಿ ಕೂದಲಿನಿಂದ ತಯಾರಿಸುತ್ತಾರೆ ಎನ್ನಲಾಗುತ್ತದೆ. ಇದು ಒಣಗಿದಂತಿರು ಸುಕ್ಕುಗಟ್ಟಿದ ಕೂದಲು ಇರುವವರಿಗೆ ಬೆಸ್ಟ್‌.

ಬಾಚಣಿಗೆ ಆರಿಸಿಕೊಳ್ಳುವ ಮುನ್ನ

ಮರದ ಹಾಗೂ ಅಗಲ ಹಲ್ಲಿನ ಬಾಚಣಿಗೆ ಬಳಕೆ ಯಾವಾಗಲೂ ಬೆಸ್ಟ್‌. ಉತ್ತಮ ಗುಣಮಟ್ಟದ ಬಾಚಣಿಗೆಗೆ ಆದ್ಯತೆ ನೀಡಿ. ಅತಿ ಚೂಪಾದ ಹಲ್ಲಿನ ಬಾಚಣಿಗೆ ನಿರಂತರ ಬಳಕೆಗೆ ಒಳ್ಳೆಯದಲ್ಲ. ಇದರಿಂದ ಕೂದಲು ಹಾಗೂ ನೆತ್ತಿಯ ಬುಡಕ್ಕೆ ಹಾನಿಯಾಗಬಹುದು.

ಮೆಟಲ್‌ ಬಾಚಣಿಗೆಗಳು ಬೇಡ

ಮೆಟಲ್‌ ಬಾಚಣಿಗೆಗಳು ಕೂದಲಿನ ಬುಡಕ್ಕೆ ತುಂಬಾ ಹಾನಿ ಮಾಡಬಹುದು. ಇದರಿಂದ ಕೂದಲು ಉದುರುವುದು, ತುಂಡಾಗುವುದು ಆಗಬಹುದು. ಅದರಲ್ಲೂ ದೈನಂದಿನ ಬಳಕೆಗೆ ಲೋಹದ ಬಾಚಣಿಗೆ ಸಲ್ಲ.

ಆಗಾಗ ಬಾಚಣಿಗೆ ಸ್ವಚ್ಛ ಮಾಡುವುದು ಅವಶ್ಯ

ಬಾಚಣಿಗೆ ಸ್ವಚ್ಛ ಮಾಡುವ ಅಭ್ಯಾಸ ಹಲವರಿಗೆ ಇರುವುದಿಲ್ಲ. ಇದರಿಂದ ಕೂಡ ಕೂದಲು ಉದುರುವ ಸಾಧ್ಯತೆ ಹೆಚ್ಚಾಗುತ್ತದೆ. ನಾವು ಪ್ರತಿನಿತ್ಯ ಬಳಸುವ ಬಾಚಣಿಗೆಯನ್ನು ಆಗಾಗ ಸ್ವಚ್ಛ ಮಾಡುತ್ತಿರಬೇಕು. ಇದರಿಂದ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಇದನ್ನೂ ಓದಿ

Hair Care: ಬಾಲನೆರೆ, ತಲೆಹೊಟ್ಟು ನಿವಾರಣೆ ಮಾತ್ರವಲ್ಲ ಕೂದಲಿನ ಹಲವು ಸಮಸ್ಯೆಗಳಿಗೆ ಮದ್ದು ಈರುಳ್ಳಿ ರಸ; ಇದನ್ನು ಹೀಗೆ ಬಳಸಿ

ಈರುಳ್ಳಿಯ ಘಾಟು ಹಲವರಿಗೆ ಇಷ್ಟವಾಗುವುದಿಲ್ಲ. ಇನ್ನು ಇದನ್ನು ಕತ್ತರಿಸುವ ಪರಿಯಂತೂ ಕೇಳುವುದೇ ಬೇಡ. ತನ್ನನ್ನು ಕತ್ತರಿಸಿದವರಿಗೆ ಕಣ್ಣೀರು ಹಾಕಿಸದೇ ಬಿಡುವುದಿಲ್ಲ ಈರುಳ್ಳಿ. ಅದೇನೇ ಇದ್ದರೂ ಈ ಈರುಳ್ಳಿ ಕೂದಲಿನ ಅಂದ, ಆರೋಗ್ಯಕ್ಕೆ ದಿ ಬೆಸ್ಟ್‌ ಎನ್ನಬಹುದು. ಕೂದಲು ಉದುರುವುದು, ತಲೆಹೊಟ್ಟು ನಿವಾರಣೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಈರುಳ್ಳಿ ರಸ. ಆದರೆ ಇದನ್ನ ಬಳಸಲು ಕ್ರಮವಿದೆ. ಆ ಕ್ರಮದಂತೆ ಬಳಸಿದರೆ ಕೂದಲಿನ ಉತ್ತಮ ಫಲಿತಾಂಶ ಖಚಿತ. ಹಾಗಾದರೆ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈರುಳ್ಳಿ ರಸವನ್ನು ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ