logo
ಕನ್ನಡ ಸುದ್ದಿ  /  ಜೀವನಶೈಲಿ  /  Nail Health: ಉಗುರು ಬೆಳಿತಾ ಇಲ್ಲ ಅನ್ನೋ ಚಿಂತೆ ಬಿಟ್ಹಾಕಿ, ಅಂದದ ನೀಳ ಉಗುರು ನಿಮ್ಮದಾಗಬೇಕು ಅಂದ್ರೆ ಈ ಸರಳ ಮನೆಮದ್ದು ಪ್ರಯತ್ನಿಸಿ

Nail Health: ಉಗುರು ಬೆಳಿತಾ ಇಲ್ಲ ಅನ್ನೋ ಚಿಂತೆ ಬಿಟ್ಹಾಕಿ, ಅಂದದ ನೀಳ ಉಗುರು ನಿಮ್ಮದಾಗಬೇಕು ಅಂದ್ರೆ ಈ ಸರಳ ಮನೆಮದ್ದು ಪ್ರಯತ್ನಿಸಿ

Reshma HT Kannada

Nov 15, 2023 01:40 PM IST

google News

ಅಂದದ ನೀಳ ಉಗುರು ನಿಮ್ಮದಾಗಬೇಕು ಅಂದ್ರೆ ಈ ಸರಳ ಮನೆಮದ್ದು ಪ್ರಯತ್ನಿಸಿ

    • ಉಗುರು ನೀಳವಾಗಿ, ಅಂದವಾಗಿ, ಆರೋಗ್ಯವಾಗಿ ಇರಬೇಕು ಅನ್ನುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಕೆಲವರಿಗೆ ಉಗುರು ಸರಿಯಾಗಿ ಬೆಳೆಯುವುದಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಉಗುರು ತುಂಡಾಗುವುದು ಇಂತಹ ಸಮಸ್ಯೆ ಎದುರಿಸುತ್ತಾರೆ. ಆದ್ರೆ ಈ ಸರಳ ಮನೆಮದ್ದು ಅನುಸರಿಸುವ ಮೂಲಕ ಉಗುರಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. 
ಅಂದದ ನೀಳ ಉಗುರು ನಿಮ್ಮದಾಗಬೇಕು ಅಂದ್ರೆ ಈ ಸರಳ ಮನೆಮದ್ದು ಪ್ರಯತ್ನಿಸಿ
ಅಂದದ ನೀಳ ಉಗುರು ನಿಮ್ಮದಾಗಬೇಕು ಅಂದ್ರೆ ಈ ಸರಳ ಮನೆಮದ್ದು ಪ್ರಯತ್ನಿಸಿ

ಅಂದವಾದ, ಆರೋಗ್ಯಕರ ಉಗುರು ನಿಮ್ಮದಾಗಬೇಕು ಅಂದ್ರೆ ಯಾವಾಗಲೂ ಸಲೂನ್‌ ಮೊರೆ ಹೋಗುವ ಅವಶ್ಯಕತೆ ಇಲ್ಲ. ಅದಕ್ಕಾಗಿ ದುಬಾರಿ ಖರ್ಚು ಮಾಡಬೇಕು ಅಂತಲೂ ಇಲ್ಲ. ಅದಕ್ಕಾಗಿ ರಾಸಾಯನಿಕ ಅಂಶವುಳ್ಳ ಉತ್ಪನ್ನಗಳ ಅವಶ್ಯಕತೆಯೂ ಇಲ್ಲ. ಉಗುರು ಅಂದ ಆರೋಗ್ಯ ಹೆಚ್ಚಿಸಲು ಪ್ರಕೃತಿಯು ನಮಗಾಗಿ ಹಲವು ಮನೆಮದ್ದುಗಳನ್ನು ನೀಡಿದೆ. ಇದು ಉಗುರನ್ನು ಸದೃಢವಾಗಿಸಲು ಸಹಾಯ ಮಾಡುತ್ತದೆ. ಈ 10 ನೈಸರ್ಗಿಕ ಅಂಶಗಳು ಉಗುರಿನ ಅಂದ, ಆರೋಗ್ಯ ಹೆಚ್ಚಲು ಸಹಾಯ ಮಾಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಆರೋಗ್ಯಕರ ಡಯೆಟ್‌: ಸಮತೋಲಿತ ವಿಟಮಿನ್‌ ಅಂಶ ಸಮೃದ್ಧವಾಗಿರುವ, ಮಿನರಲ್ಸ್‌ ಹಾಗೂ ಅಗತ್ಯ ಪೋಷಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳು ಉಗುರಿನ ಆರೋಗ್ಯಕ್ಕೆ ಬಹಳ ಅವಶ್ಯ. ಅತ್ಯಧಿಕ ಪ್ರೊಟೀನ್‌ ಅಂಶ ಇರುವ ಮೊಟ್ಟೆ, ಒಣಹಣ್ಣುಗಳು, ಧಾನ್ಯಗಳು, ಒಮೆಗಾ 3 ಕೊಬ್ಬಿನಾಮ್ಲ ಇರುವ ಆಹಾರಗಳು ಉಗುರಿನ ಆರೋಗ್ಯಕ್ಕೆ ಉತ್ತಮ.

ಹೈಡ್ರೇಷನ್‌: ಉಗುರಿನ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗುತ್ತದೆ. ಅಗತ್ಯ ಇರುವಷ್ಟು ನೀರು ಕುಡಿಯುವುದರಿಂದ ಉಗುರು ಒಣಗುವುದು ಹಾಗೂ ತುಂಡಾಗುವುದು ನಿಲ್ಲುತ್ತದೆ.

ತೆಂಗಿನೆಣ್ಣೆ: ತೆಂಗಿನೆಣ್ಣೆಯಲ್ಲಿ ನೈಸರ್ಗಿಕ ಮಾಯಿಶ್ಚರೈಸರ್‌ ಅಂಶವಿದೆ. ಇದು ಉಗುರನ್ನು ಸದೃಢಗೊಳಿಸಿ ಪೋಷಿಸುತ್ತದೆ. ಒಂದೆರಡು ಹನಿ ತೆಂಗಿನೆಣ್ಣೆಯನ್ನು ಉಗುರಿಗೆ ಹಚ್ಚಿ, ಉಗುರು ಹಾಗೂ ಕ್ಯೂಟಿಕಲ್ಸ್‌ ಮೇಲೆ ಚೆನ್ನಾಗಿ ಮಸಾಜ್‌ ಮಾಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ.

ನಿಂಬೆರಸ: ನಿಂಬೆರಸ ಉಗುರು ಹೊಳಪು ಹೆಚ್ಚುವಂತೆ ಮಾಡುತ್ತದೆ. ನಿಂಬೆರಸ ಹಾಗೂ ಆಲಿವ್‌ ಎಣ್ಣೆಯನ್ನು ಮಿಶ್ರಣ ಮಾಡಿ ಇದರಲ್ಲಿ ಉಗುರುಗಳನ್ನು ಅದ್ದಿ. ಕೆಲ ಹೊತ್ತ ಹಾಗೇ ಇಡಿ. ಇದು ಉಗುರು ಗಟ್ಟಿಯಾಗಲು ಸಹಾಯ ಮಾಡುತ್ತದೆ.

ವಿಟಮಿನ್‌ ಇ ಎಣ್ಣೆ: ವಿಟಮಿನ್‌ ಇ ಎಣ್ಣೆಯು ಉಗುರಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಿಟಮಿನ್‌ ಇ ಎಣ್ಣೆಯನ್ನು ನೇರವಾಗಿ ಉಗುರು ಹಾಗೂ ಕ್ಯೂಟಿಕಲ್‌ಗಳ ಮೇಲೆ ಹಚ್ಚಿ.

ಟೀ ಟ್ರೀ ಆಯಿಲ್‌: ಟೀ ಟ್ರೀ ಆಯಿಲ್‌ನಲ್ಲಿ ಸೋಂಕು ನಿವಾರಕ ಅಂಶವಿದೆ. ಇದು ಉಗುರಿಗೆ ಸೋಂಕು ಉಂಟಾಗುವುದರಿಂದ ತಪ್ಪಿಸುತ್ತದೆ. ಟೀ ಟ್ರೀ ಆಯಿಲ್‌ ಅನ್ನು ತೆಂಗಿನೆಣ್ಣೆಯ ಜೊತೆ ಮಿಶ್ರಣ ಮಾಡಿ ಉಗುರು ಹಚ್ಚಿ.

ಬಯೋಟಿನ್‌ ಸಪ್ಲಿಮೆಂಟ್‌: ಬಯೋಟಿನ್‌ ಅನ್ನು ವಿಟಮಿನ್‌ ಎಚ್‌ ಎಂದೂ ಕರೆಯುತ್ತಾರೆ. ಇದು ಉಗುರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಉಗುರನ್ನು ಸದೃಢವಾಗಿರಿಸುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಸೆಲೇನಿಯಂ ಅಂಶವಿದೆ. ಇದು ಉಗುರಿನ ಆರೋಗ್ಯಕ್ಕೆ ಬಹಳ ಅವಶ್ಯ. ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ. ಅದನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದನ್ನು ಕೈ ಉಗುರುಗಳಿಕೆ ಕಚ್ಚಿ. 10 ನಿಮಿಷಗಳ ನಂತರ ತೊಳೆಯಿರಿ.

ಈ ನೈಸರ್ಗಿಕ ಉತ್ಪನ್ನಗಳನ್ನು ಬಳಕೆ ಮಾಡಿದ ತಕ್ಷಣ ಉಗುರು ಚೆನ್ನಾಗಿ ಬೆಳೆಯಲು ಆರೋಗ್ಯವಾಗಿರಲು ಸಾಧ್ಯವಿಲ್ಲ. ಈ ಮನೆಮದ್ದುಗಳನ್ನು ನಿರಂತರವಾಗಿ ಬಳಸಬೇಕು. ಆದರೆ ಅಲರ್ಜಿ, ಸೂಕ್ಷ್ಮ ಚರ್ಮ ಹೊಂದಿರುವವರು ಈ ಮನೆಮದ್ದಿನ ಬಳಕೆಗಿಂತ ಮೊದಲು ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ 

Nail Care Tips: ಪದೇ ಪದೇ ಉಗುರು ತುಂಡಾಗುತ್ತಿದೆಯೇ; ಉಗುರಿನ ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆಮದ್ದು

Home Remedies to Keep Nail Healthy: ನೀಳವಾದ, ಅಂದದ ಉಗುರು ಕೈಗಳ ಅಂದ ಹೆಚ್ಚಿಸುವುದು ಸುಳ್ಳಲ್ಲ. ಆದರೆ ಕೆಲವರಿಗೆ ಕೈ ಉಗುರು ಬೆಳೆಯುವುದಿಲ್ಲ. ಉಗುರುಗಳು ಪದೇ ಪದೇ ತುಂಡಾಗುತ್ತವೆ. ಉಗುರು ಸುತ್ತು ಕೂಡ ಅಂದ ಕೆಡಿಸಬಹುದು. ಆದರೆ ಮನೆಯಲ್ಲಿ ಉಗುರಿನ ಕಾಳಜಿ ಮಾಡುವುದರಿಂದ ಅಂದ, ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ