logo
ಕನ್ನಡ ಸುದ್ದಿ  /  ಜೀವನಶೈಲಿ  /  ವಯಸ್ಸು 30 ದಾಟುತ್ತಿದ್ದಂತೆ ಚರ್ಮ ಕಳೆಗುಂದುತ್ತಿದೆ ಎಂಬ ಭಯವೇ: ಯೌವನದಂತಹ ತ್ವಚೆ ಪಡೆಯಲು ಈ 5 ಹಣ್ಣುಗಳನ್ನು ಸೇವಿಸಿ

ವಯಸ್ಸು 30 ದಾಟುತ್ತಿದ್ದಂತೆ ಚರ್ಮ ಕಳೆಗುಂದುತ್ತಿದೆ ಎಂಬ ಭಯವೇ: ಯೌವನದಂತಹ ತ್ವಚೆ ಪಡೆಯಲು ಈ 5 ಹಣ್ಣುಗಳನ್ನು ಸೇವಿಸಿ

Priyanka Gowda HT Kannada

Sep 04, 2024 03:06 PM IST

google News

ಯೌವನದ ಹೊಳಪಿನಂತೆ ನಿಮ್ಮ ತ್ವಚೆ ಕಂಗೊಳಿಸಬೇಕು ಅಂದ್ರೆ ಈ ಐದು ಹಣ್ಣುಗಳನ್ನು ಸೇವಿಸಬಹುದು.

  • ತ್ವಚೆಯ ಕಾಂತಿ ಕಳೆಗುಂದುತ್ತಿದೆ ಎಂಬ ಚಿಂತೆ ಕಾಡುತ್ತಿದೆಯೇ? ವಯಸ್ಸಾಗುತ್ತಾ ಹೋದಂತೆ ತ್ವಚೆ ಕಾಂತಿ ಕಳೆದುಕೊಳ್ಳುವುದು ಸಹಜ. ಯೌವನದ ಹೊಳಪಿನಂತೆ ನಿಮ್ಮ ತ್ವಚೆ ಕಂಗೊಳಿಸಬೇಕು ಅಂದ್ರೆ ಈ ಐದು ಹಣ್ಣುಗಳನ್ನು ಸೇವಿಸಬಹುದು. ಇವು ಆರೋಗ್ಯಕ್ಕೂ ಹಿತ, ಚರ್ಮದ ಕಾಳಜಿ ಮಾಡುವುದಕ್ಕೂ ಸೈ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಯೌವನದ ಹೊಳಪಿನಂತೆ ನಿಮ್ಮ ತ್ವಚೆ ಕಂಗೊಳಿಸಬೇಕು ಅಂದ್ರೆ ಈ ಐದು ಹಣ್ಣುಗಳನ್ನು ಸೇವಿಸಬಹುದು.
ಯೌವನದ ಹೊಳಪಿನಂತೆ ನಿಮ್ಮ ತ್ವಚೆ ಕಂಗೊಳಿಸಬೇಕು ಅಂದ್ರೆ ಈ ಐದು ಹಣ್ಣುಗಳನ್ನು ಸೇವಿಸಬಹುದು.

ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ವಯಸ್ಸು 30 ದಾಟುತ್ತಿದ್ದಂತೆ ಹಲವರಿಗೆ ಕಳವಳ ಶುರುವಾಗುತ್ತದೆ. ತನ್ನ ಸೌಂದರ್ಯ ಎಲ್ಲಿ ಮಾಸಿ ಹೋಗುತ್ತದೋ ಅನ್ನೋ ಭಯ ಕಾಡಲು ಶುರುವಾಗುತ್ತದೆ. ಇದಕ್ಕಾಗಿ ಕೆಲವರು ಬ್ಯೂಟಿ ಪಾರ್ಲರ್ ಗಳ ಮೊರೆ ಹೋದ್ರೆ, ಇನ್ನೂ ಕೆಲವರು ಮನೆಯಲ್ಲೇ ಏನಾದರೂ ಪದಾರ್ಥಗಳನ್ನು ಬಳಸಿ ಮುಖಕ್ಕೆ ಹಚ್ಚುತ್ತಾರೆ. ವಯಸ್ಸು 40 ಆದ್ರೂ 20ರ ಯುವತಿ/ಯುವಕರಂತೆ ಕಾಣಬೇಕೆಂದರೆ ನೀವು ಸೇವಿಸುವ ಹಣ್ಣುಗಳ ಪಾತ್ರ ಕೂಡ ಮಹತ್ವದ್ದಾಗಿದೆ. ಹಣ್ಣುಗಳನ್ನು ಸೇವಿಸುವುದರಿಂದ ಯೌವನದ ನೋಟವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಈ ಹಣ್ಣುಗಳು ಸ್ವತಂತ್ರ ರಾಡಿಕಲ್‍ಗಳ ವಿರುದ್ಧ ಹೋರಾಡಿ, ಚರ್ಮದ ಆರೋಗ್ಯವನ್ನು ಬೆಂಬಲಿಸುತ್ತವೆ. ನೇರಳೆ ಹಣ್ಣಿನಿಂದ ಪಪ್ಪಾಯಿವರೆಗೆ ಯೌವನ ಮರಳಿ ಪಡೆಯಲು ನೀವು ಸೇವಿಸಲೇಬೇಕಾದ 5 ಬಗೆಯ ಹಣ್ಣುಗಳ ಪಟ್ಟಿ ಇಲ್ಲಿದೆ.

ಯೌವನದಂತಹ ತ್ವಚೆ ಪಡೆಯಲು ಈ 5 ಹಣ್ಣುಗಳನ್ನು ಸೇವಿಸಿ

ನೇರಳೆ ಹಣ್ಣುಗಳು: ನೇರಳೆ ಹಣ್ಣುಗಳನ್ನು ಹೆಚ್ಚಾಗಿ ವಯಸ್ಸಾದ ವಿರೋಧಿ ಲಕ್ಷಣಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಲಾಗುತ್ತದೆ. ಈ ಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ವಿಶೇಷವಾಗಿ ವಿಟಮಿನ್ ಸಿ ಮತ್ತು ಆಂಥೋಸಯಾನಿನ್‌ಗಳು, ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೇರಳೆ ಹಣ್ಣುಗಳ ನಿಯಮಿತ ಸೇವನೆಯು ತ್ವಚೆಯ ಕಾಂತಿ ಹೆಚ್ಚಲು, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆಣ್ಣೆ ಹಣ್ಣು (Avocado): ಬೆಣ್ಣೆ ಅಥವಾ ಬಟರ್ ಫ್ರೂಟ್ ಎಂದು ಕರೆಯಲ್ಪಡುವ ಈ ಹಣ್ಣು ಬಹಳ ರುಚಿಕರವಾಗಿರುವುದು ಮಾತ್ರವಲ್ಲದೆ ತ್ವಚೆಗೆ ನಂಬಲಾಗದಷ್ಟು ಪ್ರಯೋಜನಕಾರಿಯಾಗಿದೆ. ಅವು ಆರೋಗ್ಯಕರ ಕೊಬ್ಬುಗಳು,ವಿಟಮಿನ್ ಇ ಮತ್ತು ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.ಇದು ಚರ್ಮವನ್ನು ತೇವಗೊಳಿಸಲು ಮತ್ತು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿನ ಆರೋಗ್ಯಕರ ಕೊಬ್ಬುಗಳು ಜೀವಕೋಶಗಳ ಪುನರುತ್ಪಾದನೆಯನ್ನು ಬೆಂಬಲಿಸುತ್ತವೆ, ನಿಮ್ಮ ತ್ವಚೆಯನ್ನು ಮೃದುವಾಗಿ ಮತ್ತು ತಾರುಣ್ಯದಿಂದ ಇಡಲು ಸಹಕಾರಿಯಾಗಿದೆ.

ದಾಳಿಂಬೆ: ದಾಳಿಂಬೆ ಹಣ್ಣು ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವಾಗಿದೆ. ಇದರಲ್ಲಿರುವ ಪ್ಯೂನಿಕಲಾಜಿನ್‌ಗಳು ಮತ್ತು ಪಾಲಿಫಿನಾಲ್‌ಗಳು ಸಂಯುಕ್ತಗಳು ಸೂರ್ಯನ ಯುವಿ ಕಿರಣದಿಂದ ತ್ವಚೆಯನ್ನು ರಕ್ಷಿಸಲು ಮತ್ತು ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಾಳಿಂಬೆ ರಸವನ್ನು ಕುಡಿಯುವುದು ಅಥವಾ ಸಲಾಡ್‌ಗಳಿಗೆ ದಾಳಿಂಬೆಯನ್ನು ಸೇರಿಸಿ ತಿನ್ನುವುದರಿಂದ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಕಿವಿಹಣ್ಣು: ಕಿವಿಹಣ್ಣು ವಿಟಮಿನ್ ಸಿ ನಿಂದ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಗೆ ಅವಶ್ಯಕವಾಗಿದೆ. ಕಾಲಜನ್ ಚರ್ಮದ ಸ್ಥಿತಿ ಮತ್ತು ಬಿಗಿತವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಕಿವಿಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳಿದ್ದು, ಇವು ಬಿಸಿಲಿನಿಂದ ಚರ್ಮದ ಹಾನಿಯನ್ನು ರಕ್ಷಿಸಲು ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಪ್ಪಾಯಿ: ಪಪ್ಪಾಯಿಯು ಉಷ್ಣವಲಯದ ಹಣ್ಣಾಗಿದ್ದು, ಚರ್ಮವನ್ನು ಪುನರ್ಯೌವನಗೊಳಿಸುವ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಪಾಪೈನ್‍ ಕಿಣ್ವಗಳನ್ನು ಹೊಂದಿದೆ. ಪಪ್ಪಾಯಿಯಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಮತ್ತು ತ್ವಚೆಯನ್ನು ರೋಮಾಂಚಕವಾಗಿ ಕಾಣುವಂತೆ ಮಾಡಲು ಸಹಾಯಕವಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ