logo
ಕನ್ನಡ ಸುದ್ದಿ  /  ಜೀವನಶೈಲಿ  /  Viral News: ನೆರೆಹೊರೆಯವರಿಗೆ ವಿನಂತಿ ಪತ್ರ ಬರೆದು ಕಾರಿನ ಗಾಜಿನ ಮೇಲೆ ಅಂಟಿಸಿದ ಬೆಂಗಳೂರು ವ್ಯಕ್ತಿ; ವೈರಲ್‌ ಆದ ಪತ್ರದಲ್ಲೇನಿತ್ತು ನೋಡಿ

Viral News: ನೆರೆಹೊರೆಯವರಿಗೆ ವಿನಂತಿ ಪತ್ರ ಬರೆದು ಕಾರಿನ ಗಾಜಿನ ಮೇಲೆ ಅಂಟಿಸಿದ ಬೆಂಗಳೂರು ವ್ಯಕ್ತಿ; ವೈರಲ್‌ ಆದ ಪತ್ರದಲ್ಲೇನಿತ್ತು ನೋಡಿ

Reshma HT Kannada

Jun 30, 2023 01:34 PM IST

google News

ಕಾರಿನ ಗಾಜಿನ ಮೇಲೆ ಅಂಟಿಸಿದ್ದ ವಿನಂತಿ ಪತ್ರ

    • Social Media Viral: ಬೆಂಗಳೂರಿನ ವ್ಯಕ್ತಿಯೊಬ್ಬರು ಕಾರು ಪಾರ್ಕಿಂಗ್‌ ವಿಚಾರವಾಗಿ ತಮ್ಮ ನೆರೆಕೆರೆಯವರಿಗೆ ಬರೆದ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಪಾರ್ಕಿಂಗ್‌ ವಿಚಾರವಾಗಿ ನೆರೆಹೊರೆಯವರಿಗೆ ವಿನಂತಿ ಪತ್ರ ಬರೆದು ವ್ಯಕ್ತಿ ಅದನ್ನು ತಮ್ಮ ಕಾರಿನ ಗಾಜಿಗೆ ಅಂಟಿಸಿಕೊಂಡಿದ್ದರು. ಹಾಗಾದರೆ ಈ ಪತ್ರದಲ್ಲೇನಿತ್ತು, ನೋಡಿ. 
ಕಾರಿನ ಗಾಜಿನ ಮೇಲೆ ಅಂಟಿಸಿದ್ದ ವಿನಂತಿ ಪತ್ರ
ಕಾರಿನ ಗಾಜಿನ ಮೇಲೆ ಅಂಟಿಸಿದ್ದ ವಿನಂತಿ ಪತ್ರ

ಐಬಿ ಹಬ್‌ ಎಂದೇ ಕರೆಸಿಕೊಳ್ಳುವ ಬೆಂಗಳೂರು ಆಗಾಗ ಹಲವು ವಿಚಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತದೆ. ಇತ್ತೀಚೆಗೆ ಬೆಂಗಳೂರಿಗೆ ಸಂಬಂಧಿಸಿದ ಟ್ವಿಟರ್‌ ಪೋಸ್ಟ್‌ವೊಂದು ಸಾಕಷ್ಟು ಸದ್ದು ಮಾಡುತ್ತಿದೆ. ಈ ಪೋಸ್ಟ್‌ ಒಂದು ರೀತಿ ವಿಚಿತ್ರ ಅನ್ನಿಸಿದರೂ ಆಸಕ್ತಿದಾಯಕವಾಗಿದೆ.

ಇದರಲ್ಲಿ ನಗರದ ವ್ಯಕ್ತಿಯೊಬ್ಬ ತನ್ನ ಕಾರು ಪಾರ್ಕಿಂಗ್‌ ಜಾಗದಲ್ಲಿ ಅಕ್ಕಪಕ್ಕದವರು ಕಾರು ನಿಲ್ಲಿಸಬಾರದು ಎಂದು ಆಪ್ತ ಕೈ ಬರಹವೊಂದನ್ನು ಬರೆದು ತನ್ನ ಕಾರಿನ ಗಾಜಿಗೆ ಅಂಟಿಸಿದ್ದಾನೆ. ಆತ ಬರೆದು ಅಂಟಿಸಿದ ಟಿಪ್ಪಣಿಯು ಈಗ ಸಾಕಷ್ಟು ವೈರಲ್‌ ಆಗುತ್ತಿದೆ.

ಸಭಾಸಿಸ್‌ ದಾಸ್‌ ಎಂಬ ಟೆಕ್ಕಿಯ ಈ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ವ್ಯಕ್ತಿಯೊಬ್ಬರು ತಮ್ಮ ಅಕ್ಕಪಕ್ಕದ ಮನೆಯವರಿಗೆ ಬರೆದ ನೋಟ್‌ ಅಥವಾ ಟಿಪ್ಪಣಿ ಇದಾಗಿದೆ. ಇದನ್ನು ಅವರು ತಮ್ಮ ಕಾರಿನ ಗಾಜಿನ ಮೇಲೆ ಅಂಟಿಸಿದ್ದು, ಗಮನ ಸೆಳೆದಿದೆ.

ಟಿಪ್ಪಣಿಯಲ್ಲಿ ಏನಿದೆ?

ʼಹಾಯ್‌, ದಯವಿಟ್ಟು ನಿಮ್ಮ ಕಾರನ್ನು ಇಲ್ಲಿ ಪಾರ್ಕ್‌ ಮಾಡಬೇಡಿ. ಇದನ್ನು ಬಹಳ ಹಿಂದಿನಿಂದಲೂ ನಿಮ್ಮೊಂದಿಗೆ ಬಗ್ಗೆ ಮನವಿ ಮಾಡುತ್ತಲೇ ಬಂದಿದ್ದೇನೆ.

ದಯವಿಟ್ಟು ಅರ್ಥ ಮಾಡಿಕೊಳ್ಳಿ, 2000ನೇ ಇಸವಿಯಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ ಮತ್ತು ನಮ್ಮ ಬಳಿ ಎರಡು ಕಾರಿದೆ. ಆದ್ದರಿಂದ, ನಮಗೆ ಪಾರ್ಕಿಂಗ್ ಸಾಕಷ್ಟು ಸ್ಥಳಾವಕಾಶ ಬೇಕು. ದಯವಿಟ್ಟು ನೀವು ಹಿಂದೆ ಪಾರ್ಕ್‌ ಮಾಡುತ್ತಿದ್ದ ಜಾಗದಲ್ಲೇ ನಿಮ್ಮ ಗಾಡಿಗಳನ್ನು ಪಾರ್ಕ್‌ ಮಾಡಿ. ಉತ್ತಮ ಹಾಗೂ ಸಹಕರಿಸುವ ಅಕ್ಕಪಕ್ಕದವರೆನಿಸಿಕೊಳ್ಳಿ, ಎಂದು ಬರೆದು ʼಇತೀ ನಿಮ್ಮ ನೆರೆಹೊರೆಯʼ ಎಂದು ಕೊನೆಯಲ್ಲಿ ಬರೆದಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ಈ ಟಿಪ್ಪಣಿ ಅಂಟಿಸಿರುವ ಕಾರ್‌ ನೋಡಿದೆ ಎಂದು ಸುಭಾಸಿಸ್‌ ತಿಳಿಸಿದ್ದಾರೆ.

ಇವರ ಈ ಪೋಸ್ಟ್‌ಗೆ ಸಾಕಷ್ಟು ಲೈಕ್ಸ್‌ ಹಾಗೂ ಕಾಮೆಂಟ್‌ಗಳು ಬಂದಿವೆ. ʼಬೆಂಗಳೂರಿನ ಜನರು ತುಂಬಾ ಒಳ್ಳೆಯವರುʼ ಎಂದು ಬಳಕೆದಾರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಉತ್ತಮ ನೆರೆಹೊರೆಯವರಾಗಿʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ʼಒಂದು ವೇಳೆ ಇದು ಗುರುಗ್ರಾಮದಲ್ಲಿ ಆಗಿದ್ದಾರೆ, ಅಕ್ಕಪಕ್ಕದವರು ಬೇಸ್‌ಬಾಲ್‌ ಬ್ಯಾಟ್‌ನಿಂದ ಕಾರಿನ ಗಾಜನ್ನು ಒಡೆದು ಪುಡಿ ಮಾಡುತ್ತಿದ್ದರುʼ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ

Kannada Newspaper Day: ಕರಾವಳಿಯಲ್ಲಿ ಉದಯವಾಗಿತ್ತು ಕನ್ನಡದ ಮೊದಲ ಪತ್ರಿಕೆ; ಮಂಗಳೂರ ಸಮಾಚಾರದ ಹುಟ್ಟು, ಸಂಪಾದಕ, ಮುದ್ರಣದ ಕುರಿತ ಕಥನ

1841, ಜುಲೈ 1ರಂದು ‘ಮಂಗಳೂರ ಸಮಾಚಾರ’ ಎಂಬ ಕನ್ನಡ ಪತ್ರಿಕೆಯನ್ನು ಬಾಸೆಲ್ ಮಿಷನ್ ಸಂಸ್ಥೆ ಹೊರತಂದಿತ್ತು. ಅದು ಕನ್ನಡದ ಮೊದಲ ಪತ್ರಿಕೆ ಎಂದು ದಾಖಲಾಗಿರುವ ಕಾರಣ ಇದರ ಹುಟ್ಟಿನ ದಿನವನ್ನು ಕನ್ನಡ ಪತ್ರಿಕಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಪತ್ರಿಕೆ ಹುಟ್ಟು, ಮುದ್ರಣ, ಕರಾವಳಿ ಕನ್ನಡ ಪತ್ರಿಕೋದ್ಯಮದ ಕುರಿತು ಬೆಳಕು ಚೆಲ್ಲಿದ್ದಾರೆ ಪತ್ರಕರ್ತ ಹರೀಶ್‌ ಮಾಂಬಾಡಿ.

ಮಂಗಳೂರು: ಪ್ರತಿ ವರ್ಷ ಜುಲೈ 1ರಂದು ಕನ್ನಡ ಪತ್ರಿಕಾ ದಿನಾಚರಣೆ (Kannada Newspaper Day) ಆಚರಿಸಲಾಗುತ್ತದೆ. ಇದಕ್ಕೆ ಕಾರಣ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ (Mangalura Samachara)’ ಜನ್ಮತಾಳಿದ್ದು ದಿನ ಜುಲೈ 1ರಂದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ