logo
ಕನ್ನಡ ಸುದ್ದಿ  /  ಜೀವನಶೈಲಿ  /  ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದರೆ ಕರ್ನಾಟಕದಲ್ಲಿ ಏಕೆ ಮಳೆಯಾಗುತ್ತದೆ? ಬೆಂಗಳೂರು ಮಳೆಯ ರಹಸ್ಯ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದರೆ ಕರ್ನಾಟಕದಲ್ಲಿ ಏಕೆ ಮಳೆಯಾಗುತ್ತದೆ? ಬೆಂಗಳೂರು ಮಳೆಯ ರಹಸ್ಯ

Praveen Chandra B HT Kannada

Oct 21, 2024 03:31 PM IST

google News

ಚಿಕ್ಕಮಗಳೂರಿನಲ್ಲಿ ಮಳೆಯಲ್ಲಿ ಕಂಡ ಚಿತ್ರ(PTI Photo)

    • Bengaluru Rain: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಕರ್ನಾಟಕ, ದಕ್ಷಿಣ ಭಾರತದ ವಿವಿಧ ರಾಜ್ಯಗಳ ಮೇಲೆ ಬಂಗಾಳಕೊಲ್ಲಿಯ ವಾಯುಭಾರ ಕುಸಿತ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
 ಚಿಕ್ಕಮಗಳೂರಿನಲ್ಲಿ ಮಳೆಯಲ್ಲಿ ಕಂಡ ಚಿತ್ರ(PTI Photo)
ಚಿಕ್ಕಮಗಳೂರಿನಲ್ಲಿ ಮಳೆಯಲ್ಲಿ ಕಂಡ ಚಿತ್ರ(PTI Photo) (PTI)

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಈ ವಾರ ಮಳೆಯಾಗುತ್ತಿದೆ. ಅಕ್ಟೋಬರ್‌ ಕೊನೆಯಲ್ಲಿ ಏಕೆ ಮಳೆಯಾಗುತ್ತಿದೆ? ಬೆಚ್ಚಗಿದ್ದ ಬೆಂಗಳೂರಿಗೆ ಅನಿರೀಕ್ಷಿತ ಮಳೆ ಸುರಿಯಲು ಕಾರಣವೇನು? ಎಂದು ಸಾಕಷ್ಟು ಜನರು ಯೋಚಿಸಬಹುದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಸೇರಿದಂತೆ ವಿವಿಧ ಡಿಜಿಟಲ್‌ ಸುದ್ದಿಮಾಧ್ಯಮಗಳಲ್ಲಿ, ಮುದ್ರಣ ಮಾಧ್ಯಮಗಳಲ್ಲಿ, ಟೀವಿಗಳಲ್ಲಿ "ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ" ಕರ್ನಾಟಕದಲ್ಲಿ ಮಳೆ ಮನ್ಸೂಚನೆ, ಯೆಲ್ಲೋ ಅಲರ್ಟ್" ಎಂಬ ಸುದ್ದಿಗಳನ್ನು ಓದಿರಬಹುದು. ಅರೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದರೆ ಕರ್ನಾಟಕದಲ್ಲಿ ಏಕೆ ಮಳೆಯಾಗುತ್ತದೆ ಎಂದು ಕೆಲವರು ಯೋಚಿಸಬಹುದು.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬಂಗಾಳ ಕೊಲ್ಲಿಯು ಉತ್ತರ ಹಿಂದೂಮಹಾಸಾಗರದ ತುದಿಯಲ್ಲಿದೆ. ಇದು ಜಗತ್ತಿನ ಅತಿದೊಡ್ಡ ಕೊಲ್ಲಿ. ಇದು ಹಿಂದೂಮಹಾಸಾಗರದ ಈಶಾನ್ಯ ಭಾಗ. ಬಂಗಾಳಪ್ರದೇಶದ ಕೆಳಗೆ ಇದೆ. ಬಂಗಾಳ ಕೊಲ್ಲಿಯು 2,600,000 ಚದರ ಕಿಲೋಮೀಟರ್ (1,000,000 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ ಗಂಗಾ, ಪದ್ಮ, ಬ್ರಹ್ಮಪುತ್ರ, ಬರಾಕ್‌, ಐರಾವಡ್ಡಿ, ಗೋದಾವರಿ, ಕೃಷ್ಣಾ, ಕಾವೇರಿ ಸೇರಿದಂತೆ ಹಲವು ನದಿಗಳು ಬಂಗಾಳ ಕೊಲ್ಲಿಗೆ ಹರಿಯುತ್ತವೆ. ದಕ್ಷಿಣದಲ್ಲಿ ಇದು ಭಾರತ ಮತ್ತು ಸಿಲೋನ್‌ ನಡುವಿನ ಆಡಮಸ್‌ ಬ್ರಿಡ್ಜ್‌ ಮತ್ತು ಡೋಂಡ್ರಾ ಹೆಡ್‌ನ ದಕ್ಷಿಣದ ತುದಿಯಿಂದ ಪೋಯೆಲ್‌ ಬ್ರಾಸ್‌ನ ಉತ್ತರ ಬಿಂದುವಿನವರೆಗೆ ಹರಿಯುತ್ತದೆ.

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ, ಕಡಿಮೆ ಒತ್ತಡದ ವ್ಯವಸ್ಥೆಯು ಕರ್ನಾಟಕದಲ್ಲಿ ಮಳೆಯಾಗಲು ಕಾರಣವಾಗುವ ಪ್ರಮುಖ ಅಂಶವಾಗಿದೆ. ಇದು ಹೇಗೆ ಎಂದು ತಿಳಿಯೋಣ.

  1. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯು ರೂಪುಗೊಂಡಂತೆ ಇದು ಹಿಂದೂ ಮಹಾಸಾಗರದಿಂದ ತೇವ, ಬೆಚ್ಚಗಿನ ಗಾಳಿಯನ್ನು ಸೆಳೆಯುತ್ತದೆ. ತೇವಾಂಶದಿಂದ ಕೂಡಿದ ಈ ಗಾಳಿಯನ್ನು ಕರ್ನಾಟಕದ ಕಡೆಗೆ ಒಳನಾಡಿಗೆ ಒಯ್ಯಲಾಗುತ್ತದೆ.
  2. ತೇವಾಂಶವುಳ್ಳ ಗಾಳಿ ಪಶ್ಚಿಮ ಘಟ್ಟಗಳತ್ತ ಚಲಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯ ಉದ್ದಕ್ಕೂ ಇರುವ ಪರ್ವತ ಶ್ರೇಣಿಯನನು ಏರುತ್ತದೆ. ಈ ಮೇಲ್ಮುಖ ಚಲನೆಯನ್ನು ಓರೋಗ್ರಾಫಿಕ್ ಲಿಫ್ಟಿಂಗ್ ಎಂದು ಕರೆಯಲಾಗುತ್ತದೆ.
  3. ಗಾಳಿಯು ಏರುತ್ತಿದ್ದಂತೆ, ಅದು ತಣ್ಣಗಾಗುತ್ತದೆ. ಅದರಲ್ಲಿರುವ ತೇವಾಂಶವು ನೀರಿನ ಹನಿಗಳು ಅಥವಾ ಐಸ್ ಸ್ಫಟಿಕಗಳಾಗುತ್ತದೆ. ಈ ಹನಿಗಳು ಭಾರವಾದಾಗ ಮಳೆಯಾಗಿ ನೆಲಕ್ಕೆ ಬೀಳುತ್ತವೆ.
  4. ಓರೋಗ್ರಾಫಿಕ್ ಲಿಫ್ಟಿಂಗ್ ಜೊತೆಗೆ ಕರ್ನಾಟಕದ ಮೇಲೆ ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ಸಿಡಿಲು ಗುಡುಗಿಗೆ ಕಾರಣವಾಗಬಹುದು. ಚಂಡಮಾರುತ, ಗಾಳಿ ಹೆಚ್ಚಳಕ್ಕೂ ಕಾರಣವಾಗಬಹುದು. ಇದು ಕಡಿಮೆ ಅವಧಿಯಲ್ಲಿ ಭಾರೀ ಮಳೆಗೆ ಕಾರಣವಾಗುತ್ತದೆ.
  5. ಬಂಗಾಳಕೊಲ್ಲಿಯಿಂದ ತೇವಾಂಶ-ಹೊತ್ತ ಗಾಳಿಯ ಸಂಯೋಜನೆ ಮತ್ತು ಪಶ್ಚಿಮ ಘಟ್ಟಗಳ ಮೇಲೆ ಒರೊಗ್ರಾಫಿಕ್ ಎತ್ತುವಿಕೆ (orographic lifting) ಕರ್ನಾಟಕದಲ್ಲಿ ಗಮನಾರ್ಹವಾಗಿ ಮಳೆ ಸುರಿಯಲು ಕಾರಣವಾಗುತ್ತದೆ.

ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ಎಲ್ಲೆಲ್ಲಿ ಮಳೆಯಾಗುತ್ತದೆ?

ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಇತರೆ ಪ್ರದೇಶಗಳ ಭೌಗೋಳಿಕ ಕಾರಣದಲ್ಲಿ ಹೆಚ್ಚು ಮಳೆ ಸುರಿಯಲು ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಕಾರಣವಾಗಿರಬಹುದು. ಆದರೆ, ದಕ್ಷಿಣ ಭಾರತದ ಇತರೆ ಪ್ರದೇಶಗಳ ಮೇಲೂ ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ಮಳೆಯಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಮೇಲೂ ಈ ವಾಯುಭಾರ ಕುಸಿತ ಪರಿಣಾಮ ಬೀರುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ