logo
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ದಿನದಲ್ಲಿ ಬೆಂಗಳೂರು ಪೂರ್ತಿ ಸುತ್ತುವ ಬಯಕೆಯೇ? ಕಡಿಮೆ ಖರ್ಚಿನಲ್ಲಿ ನಗರ ದರ್ಶನಕ್ಕೆ ಕೆಎಸ್‌ಟಿಡಿಸಿ ಈ ಪ್ಯಾಕೇಜ್‌ ಬೆಸ್ಟ್

ಒಂದೇ ದಿನದಲ್ಲಿ ಬೆಂಗಳೂರು ಪೂರ್ತಿ ಸುತ್ತುವ ಬಯಕೆಯೇ? ಕಡಿಮೆ ಖರ್ಚಿನಲ್ಲಿ ನಗರ ದರ್ಶನಕ್ಕೆ ಕೆಎಸ್‌ಟಿಡಿಸಿ ಈ ಪ್ಯಾಕೇಜ್‌ ಬೆಸ್ಟ್

Jayaraj HT Kannada

Aug 14, 2024 04:08 PM IST

google News

ಒಂದೇ ದಿನದಲ್ಲಿ ಬೆಂಗಳೂರು ಪೂರ್ತಿ ಸುತ್ತುವ ಬಯಕೆಯೇ? ಕಡಿಮೆ ಖರ್ಚಿನಲ್ಲಿ ನಗರ ದರ್ಶನಕ್ಕೆ ಕೆಎಸ್‌ಟಿಡಿಸಿ ಪ್ಯಾಕೇಜ್‌

    • ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತವು, ಬೆಂಗಳೂರು ನಗರದ ಪ್ರವಾಸಿ ಸ್ಥಳಗಳನ್ನು ಸುತ್ತಾಡಲು ಕಡಿಮೆ ಖರ್ಚಿನಲ್ಲಿ ಟೂರ್‌ ಪ್ಯಾಕೇಜ್‌ ವ್ಯವಸ್ಥೆ ಮಾಡಿದೆ. ಕಡಿಮೆ ಖರ್ಚಿನಲ್ಲಿ ನಗರವನ್ನು ಸುತ್ತಾಡಲು ಈ ಪ್ಯಾಕೇಜ್‌ ನಿಮಗೆ ನೆರವಾಗಲಿದೆ.
ಒಂದೇ ದಿನದಲ್ಲಿ ಬೆಂಗಳೂರು ಪೂರ್ತಿ ಸುತ್ತುವ ಬಯಕೆಯೇ? ಕಡಿಮೆ ಖರ್ಚಿನಲ್ಲಿ ನಗರ ದರ್ಶನಕ್ಕೆ ಕೆಎಸ್‌ಟಿಡಿಸಿ ಪ್ಯಾಕೇಜ್‌
ಒಂದೇ ದಿನದಲ್ಲಿ ಬೆಂಗಳೂರು ಪೂರ್ತಿ ಸುತ್ತುವ ಬಯಕೆಯೇ? ಕಡಿಮೆ ಖರ್ಚಿನಲ್ಲಿ ನಗರ ದರ್ಶನಕ್ಕೆ ಕೆಎಸ್‌ಟಿಡಿಸಿ ಪ್ಯಾಕೇಜ್‌ (Pixabay, Pexel)

ಉದ್ಯಾನ ನಗರಿ, ಸಿಲಿಕಾನ್‌ ಸಿಟಿ ಎಂದೆಲ್ಲಾ ಜಾಗತಿಕ ಮಟ್ಟದಲ್ಲಿ ಕರೆಸಿಕೊಳ್ಳುವ ಬೆಂಗಳೂರು; ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆಯುತ್ತಿದೆ. ತನ್ನ ಸೌಂದರ್ಯ ಹಾಗೂ ಆಹ್ಲಾದಕರ ಹವಾಮಾನದಿಂದಾಗಿ ಗಾರ್ಡನ್‌ ಸಿಟಿಯು ಜಾಗತಿಕ ಪ್ರವಾಸಿಗರ ನೆಚ್ಚಿನ ತಾಣ. ದೊಡ್ಡ ದೊಡ್ಡ ಎಂಎನ್‌ಸಿ ಕಂಪನಿಗಳಿಂದ ಹಿಡಿದು ನವೋದ್ಯಮಿಗಳ ನೆಚ್ಚಿನ ತಾಣ ನಮ್ಮ ಬೆಂಗಳೂರು. ಉದ್ಯೋಗ ಅರಸಿ ಬರುವ ಅದೆಷ್ಟೋ ಯುವಕರನ್ನು ಮಡಿಲಲ್ಲಿಟ್ಟು ಪೋಷಿಸುವ ಮಹಾನಗರಿ. ಹತ್ತು ಹಲವು ಪ್ರವಾಸಿ ತಾಣಗಳು ಬೆಂಗಳೂರು ನಗರದ ಆಕರ್ಷಣೆ. ಈ ನಗರದಲ್ಲಿ ಸುತ್ತಾಡಲು ಹಲವು ಪ್ರವಾಸಿ ತಾಣಗಳಿವೆ. ಒಂದೇ ದಿನದಲ್ಲಿ ನಗರ ಪೂರ್ತಿ ಸುತ್ತಾಡುವುದು ಕಷ್ಟ ಸಾಧ್ಯ. ಅಲ್ಲದೆ ಖರ್ಚು ಕೂಡಾ ಜಾಸ್ತಿ. ಇದಕ್ಕೆ ಅತ್ಯುತ್ತಮ ಬದಲಿ ವ್ಯವಸ್ಥೆಯನ್ನು ಸರ್ಕಾರವೇ ಮಾಡಿದೆ. ಅದೇನೆಂದು ನೋಡೋಣ ಬನ್ನಿ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತವು (KSTDC), ಬೆಂಗಳೂರು ನಗರಕ್ಕೆ ಬರುವ ಪ್ರವಾಸಿಗರಿಗೆ ಸುತ್ತಾಡಲು ಕಡಿಮೆ ಖರ್ಚಿನಲ್ಲಿ ಟೂರ್‌ ಪ್ಯಾಕೇಜ್‌ ವ್ಯವಸ್ಥೆ ಮಾಡಿದೆ. ಕೆಎಸ್‌ಆರ್‌ಟಿಸಿಯ ಡಿಲಕ್ಸ್ ಕೋಚ್ ಬಸ್‌ ಮೂಲಕ ಬೆಂಗಳೂರು ನಗರವನ್ನು ಕಡಿಮೆ ಖರ್ಚಿನಲ್ಲಿ ಸುತ್ತಾಡಬಹುದು. ಬೆಳಗ್ಗೆ 07.30ರಿಂದ ಸಂಜೆ 06.30ರವರೆಗೆ ಒಂದು ಇಡೀ ದಿನ ಬೆಂಗಳೂರು ನಗರದ ಪ್ರಮುಖ ತಾಣಗಳಿಗೆ ಹೋಗಿ ಬರಬಹುದು.

ಯಾವೆಲ್ಲಾ ಸ್ಥಳಗಳು?

ಇಸ್ಕಾನ್, ರಾಜರಾಜೇಶ್ವರಿ ದೇವಸ್ಥಾನ, ಬನ್ನೇರುಘಟ್ಟ ಝೂಲಾಜಿಕಲ್ ಪಾರ್ಕ್, ವಿಜ್ಞಾನ ವಸ್ತುಸಂಗ್ರಹಾಲಯ ಮತ್ತು ತಾರಾಲಯ.

ಪ್ಯಾಕೇಶ್‌ ವಿಶೇಷಗಳು

ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಸಾಕಷ್ಟು ಸಮಯ ನೀಡುವುದರ ಜೊತೆಗೆ ಪ್ರಯಾಣದ ವೇಳೆ ಸ್ಥಳಗಳ ಕುರಿತು ಚೆನ್ನಾಗಿ ವಿವರಣೆ ನೀಡಲಾಗುತ್ತದೆ. ಪ್ರವಾಸಿ ತಾಣಗಳ ಬಗ್ಗೆ ನಿಮ್ಮ ಜ್ಞಾನ ಹೆಚ್ಚಿಸಲು ವೃತ್ತಿಪರ ಗೈಡ್‌ಗಳಿಂದ ಮಾರ್ಗದರ್ಶನ ನೀಡಲಾಗುತ್ತದೆ.

ಪ್ಯಾಕೇಜ್‌ ವೆಚ್ಚ್ ಎಷ್ಟು?

ಡಿಲಕ್ಸ್ ಕೋಚ್ ಬಸ್‌ ಮೂಲಕ ಪ್ರವಾಸ ಇರಲಿದೆ. ಇದರಲ್ಲಿ ಡಿಲಕ್ಸ್‌ ಬಸ್‌ ಟಿಕೆಟ್‌ ದರವು ಒಬ್ಬರಿಗೆ 495 ರೂಪಾಯಿ. ಇದೇ ವೇಳೆ ಡಿಲಕ್ಸ್ ಎಸಿ‌ ಬಸ್‌ ಸೀಟ್‌ ವೆಚ್ಚವು 550 ರೂಪಾಯಿ. ಈ ಪ್ಯಾಕೇಜ್ ದರವು ಸಾರಿಗೆ ವೆಚ್ಚವನ್ನು ಮಾತ್ರ ಒಳಗೊಂಡಿರುತ್ತದೆ. ಉಳಿದಂತೆ ಆಹಾರ, ಪ್ರವೇಶ ಟಿಕೆಟ್‌ ಸೇರಿದಂತೆ ಇತ್ಯಾದಿ ಶುಲ್ಕಗಳನ್ನು ಪ್ರವಾಸಿಗರೇ ಭರಿಸಬೇಕಾಗುತ್ತದೆ. KSTDC ವೆಬ್‌ಸೈಟ್‌ನಲ್ಲಿ ಟಿಕೆಟ್‌ ಬುಕ್‌ ಮಾಡಬಹುದು. ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಸಮಯ ಮತ್ತು ಸ್ಥಳಗಳ ವಿವರ

  • ಬೆಳಗ್ಗೆ 07.30 : ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಆರಂಭ
  • ಬೆಳಗ್ಗೆ 07.45 : ಇಸ್ಕಾನ್ ದೇವಸ್ಥಾನ
  • ಬೆಳಗ್ಗೆ 07.45 ರಿಂದ 08.45 ಇಸ್ಕಾನ್ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ.
  • ಬೆಳಗ್ಗೆ 08.45ರಿಂದ 9.15ರವರೆಗೆ ರಾಜರಾಜೇಶ್ವರಿ ದೇವಸ್ಥಾನ
  • ಬೆಳಗ್ಗೆ 9.15ಕ್ಕೆ ರಾಜರಾಜೇಶ್ವರಿ ದೇವಸ್ಥಾನದಿಂದ ನಿರ್ಗಮನ
  • ಬೆಳಗ್ಗೆ 10.30ಕ್ಕೆ ಬನ್ನೇರುಘಟ್ಟಕ್ಕೆ ಆಗಮನ

ಇದನ್ನೂ ಓದಿ | ಮುಂದಿನ ವಾರ ಸಿಗುತ್ತೆ 5 ದಿನಗಳ ನಿರಂತರ ರಜೆ, ಲಾಂಗ್ ವೀಕೆಂಡ್ ಟ್ರಿಪ್ ಪ್ಲಾನ್‌ ಇದ್ರೆ ಭಾರತದ ಈ ಪ್ರವಾಸಿ ತಾಣಗಳನ್ನ ಮಿಸ್‌ ಮಾಡ್ಬೇಡಿ

  • 10.30ರಿಂದ ಮಧ್ಯಾಹ್ನ ಮಧ್ಯಾಹ್ನ 1.00ರವರೆಗೆ ಸಫಾರಿ ಮತ್ತು ಉದ್ಯಾನವನಕ್ಕೆ ಭೇಟಿಗೆ ಅವಕಾಶ
  • ಮಧ್ಯಾಹ್ನ 1.00 ರಿಂದ 1.30ರವರೆಗೆ ಬನ್ನೇರುಘಟ್ಟದ ಹೋಟೆಲ್ ಮಯೂರ ವನಶ್ರೀಯಲ್ಲಿ ಮಧ್ಯಾಹ್ನದ ಊಟ
  • ಮಧ್ಯಾಹ್ನ 1.30ಕ್ಕೆ ಬನ್ನೇರುಘಟ್ಟದಿಂದ ನಿರ್ಗಮನ
  • ಸಂಜೆ 4.30ರಿಂದ 5.15ರವರೆಗೆ ತಾರಾಲಯ
  • ಸಂಜೆ 6.30ಕ್ಕೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿಯ ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರಕ್ಕೆ ಆಗಮನ. ಪ್ರವಾಸ ಕೊನೆಗೊಳ್ಳುವ ಬಿಂದು.

ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Indian Railways: ಮೈಸೂರು,ಬೆಂಗಳೂರಿನಿಂದ ತಮಿಳುನಾಡಿಗೆ ವಿಶೇಷ ರೈಲು, ಮಂಗಳೂರು ವಿಜಯಪುರ ರೈಲು ಸಂಚಾರ ನಾಳೆಯೂ ರದ್ದು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ