logo
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಸ ವರ್ಷಕ್ಕೆ ರಿಫ್ರೆಶ್ ಫೀಲ್​ ಆಗಬೇಕು ಅಂದ್ರೆ ದಕ್ಷಿಣ ಭಾರತದ ಈ 10 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

ಹೊಸ ವರ್ಷಕ್ಕೆ ರಿಫ್ರೆಶ್ ಫೀಲ್​ ಆಗಬೇಕು ಅಂದ್ರೆ ದಕ್ಷಿಣ ಭಾರತದ ಈ 10 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

HT Kannada Desk HT Kannada

Dec 13, 2023 08:00 AM IST

google News

ಅಲ್ಲೆಪ್ಪಿ (istockphoto)

    • Best Tourist Places in South India: ಹೊಸ ವರ್ಷಕ್ಕೆ ಟ್ರಿಪ್​ ಪ್ಲಾನ್​ ಮಾಡ್ತಾ ಇದ್ರೆ, ಆ ಟ್ರಿಪ್​ ನಿಮಗೆ ರಿಫ್ರೆಶ್ ಫೀಲ್ ಕೊಡಬೇಕು ಅಂತ ಅನಿಸಿದ್ರೆ ದಕ್ಷಿಣ ಭಾರತದ ಈ 8 ಪ್ರವಾಸಿ ತಾಣಗಳು ನಿಮಗಾಗಿ ಕಾಯುತ್ತಿವೆ. 
ಅಲ್ಲೆಪ್ಪಿ (istockphoto)
ಅಲ್ಲೆಪ್ಪಿ (istockphoto)

ದಕ್ಷಿಣ ಭಾರತದ ಪ್ರಕೃತಿ ಸೌಂದರ್ಯಕ್ಕೆ ಮೈಮರೆಯದವರೇ ಇಲ್ಲ. ನೀವು ಕ್ರಿಸ್​​ಮಸ್​ ಅಥವಾ ಹೊಸ ವರ್ಷಕ್ಕೆ ಟ್ರಿಪ್​ ಪ್ಲಾನ್​ ಮಾಡ್ತಾ ಇದ್ರೆ, ಆ ಟ್ರಿಪ್​ ನಿಮಗೆ ರಿಫ್ರೆಶ್ ಫೀಲ್ ಕೊಡಬೇಕು ಅಂತ ಅನಿಸಿದ್ರೆ ದಕ್ಷಿಣ ಭಾರತದ ಈ 8 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ.

1. ಅಲ್ಲೆಪ್ಪಿ: ಅಲೆಪ್ಪಿ ಎಂದೂ ಕರೆಯಲ್ಪಡುವ ಆಲಪ್ಪುಳವು ಕೇರಳದ ಜನಪ್ರಿಯ ಪ್ರವಾಸಿ ತಾಣವಾಗಿದೆ, ವಿಶೇಷವಾಗಿ ಚಳಿಗಾಲದಲ್ಲಿ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದನ್ನು ಪೂರ್ವದ ವೆನಿಸ್ ಎಂದೂ ಕರೆಯಲಾಗುತ್ತದೆ. ಏಕೆಂದರೆ ಬ್ಯಾಕ್​ ವಾಟರ್​ಗೆ ಫೇಮಸ್​ ಆಗಿರುವ ಅಲ್ಲೆಪ್ಪಿಯು ಇಟಲಿಯ ರಾಜಧಾನಿ ವೆನಿಸ್​​ನಂತೆಯೇ ಕಾಣುತ್ತದೆ. ನವೆಂಬರ್ ನಿಂದ ಫೆಬ್ರವರಿ ಅಲ್ಲೆಪ್ಪಿಗೆ ಪ್ರಯಾಣಿಸಲು ಉತ್ತಮ ಸಮಯ.

2. ಕೂರ್ಗ್: ಕರ್ನಾಟಕದ ಕೊಡಗು ಜಿಲ್ಲೆಯನ್ನು ಕೂರ್ಗ್ ಎಂದೂ ಕರೆಯಲಾಗುತ್ತದೆ. ಇದು ಕರ್ನಾಟಕದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕೂರ್ಗ್ ತನ್ನ ಕಾಫಿ ಮತ್ತು ಚಹಾ ತೋಟಗಳು, ನದಿಗಳು, ಶಾಂತಿಯುತ ಹುಲ್ಲುಗಾವಲುಗಳು, ತುಂಬಿ ಹರಿಯುವ ಸರೋವರಗಳು ಮತ್ತು ಬೆರಗುಗೊಳಿಸುವ ಜಲಪಾತಗಳಿಂದಾಗಿ ಭಾರತ ಮತ್ತು ಇತರ ದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್​ವರೆಗೆ ಒಳ್ಳೆಯ ಸಮಯ.

3. ಕಬಿನಿ: ಕರ್ನಾಟಕದ ಕಬಿನಿಯು ವನ್ಯಜೀವಿ ತಾಣವಾಗಿದ್ದು, ಕಬಿನಿ ನದಿ, ಏಷ್ಯಾಟಿಕ್ ಆನೆಗಳು, ಪಕ್ಷಿಸಂಕುಲಕ್ಕೆ ಹೆಸರುವಾಸಿಯಾಗಿದೆ. ಅಲ್ಲದೇ ಕರಿ ಚಿರತೆ "ಸಾಯಾ" ದ ನೆಲೆಯಾಗಿದೆ. ಕಬಿನಿ ಅರಣ್ಯ ಮೀಸಲು ಪ್ರದೇಶವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆಗ್ನೇಯ ಭಾಗವನ್ನು ಒಳಗೊಂಡಿದೆ. ಕಬಿನಿಗೆ ಪ್ರಯಾಣಿಸಲು ಅಕ್ಟೋಬರ್‌ನಿಂದ ಫೆಬ್ರವರಿ ಅತ್ಯುತ್ತಮ ಸಮಯ.

4. ಕೊಡೈಕೆನಾಲ್: ತಮಿಳುನಾಡಿನ ಅತ್ಯಂತ ಸುಂದರವಾದ ಬೆಟ್ಟ-ಗುಡ್ಡಗಳಿಂದದ ಸುತ್ತುವರೆದ ಪಟ್ಟಣಗಳಲ್ಲಿ ಒಂದಾದ ಕೊಡೈಕೆನಾಲ್​​ಗೆ ಬೇಸಿಗೆ ಮತ್ತು ಚಳಿಗಾಲದಲ್ಲಿ ಭೇಟಿ ನೀಡಬಹುದು. ಮಾರ್ಚ್‌ನಿಂದ ಮೇ ಉತ್ತಮ ಸಮಯ. ಮಂಜಿನಿಂದ ಆವೃತವಾದ ಪ್ರದೇಶದಲ್ಲಿ ಸಮಯ ಕಳೆಯುವುದೇ ಸ್ವರ್ಗ.

5. ವಯನಾಡ್: ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ವಯನಾಡ್ ತನ್ನ ವಿಶಿಷ್ಟ ಸಸ್ಯ ಮತ್ತು ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ. ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ಕಾಡುಗಳಿಂದ ಸುತ್ತುವರೆದಿದೆ. ವಯನಾಡ್‌ಗೆ ಪ್ರಯಾಣಿಸಲು ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ಅತ್ಯುತ್ತಮ ಸಮಯ.

6. ಆಗುಂಬೆ: ಇದು ಮಳೆಕಾಡು. ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ನಿತ್ಯಹರಿದ್ವರ್ಣ ಕಾಡು ಇಷ್ಟಪಡುವವರಿಗೆ ಸ್ವರ್ಗವಾಗಿದೆ ಮತ್ತು ವೈವಿಧ್ಯಮಯ ಜೀವರಾಶಿಗಳಿಗೆ ನೆಲೆಯಾಗಿದೆ. ಆಗುಂಬೆ ಪ್ರದೇಶದಲ್ಲಿ ನೀವು ಹಲವಾರು ಜಲಪಾತಗಳನ್ನು ಸಹ ನೋಡಬಹುದು. ಆಗುಂಬೆಗೆ ಪ್ರಯಾಣಿಸಲು ಅಕ್ಟೋಬರ್‌ನಿಂದ ಫೆಬ್ರವರಿ ಅತ್ಯುತ್ತಮ ಸಮಯ.

7. ಊಟಿ: ತಮಿಳುನಾಡಿನ ಈ ಪ್ರದೇಶವನ್ನು "ಬೆಟ್ಟಗಳ ರಾಣಿ" ಎಂದೇ ಕರೆಯಲಾಗುತ್ತದೆ. ಇದು ಹನಿಮೂನ್​​ಗೆ ಹೇಳಿಮಾಡಿಸಿದ ಜಾಗ. ಡಿಸೆಂಬರ್​ನಲ್ಲಿ ಮದುವೆಯಾದರೆ ಹನಿಮೂನ್​ಗೂ ಬಂದಂತಾಗುತ್ತದೆ, ಹೊಸ ವರ್ಷವನ್ನೂ ಬರಮಾಡಿಕೊಂಡಂತಾಗುತ್ತದೆ. ಊಟಿಗೆ ಏಪ್ರಿಲ್ , ಜೂನ್, ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್​ ನಡುವೆ ಭೇಟಿ ನೀಡುವುದು ಉತ್ತಮ.

8. ಮುನ್ನಾರ್: ಇಲ್ಲಿ ಹರಿಯುವ 3 ನದಿಗಳ ಕಾರಣದಿಂದ ಇದಕ್ಕೆ ಮುನ್ನಾರ್ ಎಂದು ಹೆಸರು ಬಂದಿದೆ. ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಕಣ್ಣನ್ ದೇವನ್ ಬೆಟ್ಟಗಳಲ್ಲಿ ನೆಲೆಸಿರುವ ದಕ್ಷಿಣ ಭಾರತದ ಸುಂದರವಾದ ಗಿರಿಧಾಮವಾಗಿದೆ. ಹನಿಮೂನ್ ತಾಣವಾಗಿ ಹೆಸರುವಾಸಿಯಾಗಿರುವ ಮುನ್ನಾರ್ ತನ್ನ ಅದ್ಭುತವಾದ ಸೌಂದರ್ಯ ಮತ್ತು ಪ್ರಶಾಂತ ವಾತಾವರಣದಿಂದ ಪ್ರವಾಸಿಗರನ್ನು ಮೋಡಿ ಮಾಡುವ ಸ್ಥಳವಾಗಿದೆ. ಮುನ್ನಾರ್‌ಗೆ ಭೇಟಿ ನೀಡಲು ಡಿಸೆಂಬರ್‌ನಿಂದ ಫೆಬ್ರವರಿ ಸೂಕ್ತ ಸಮಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ