logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಹಾವು ಏಣಿ ಏರಿ ಮೇಲೆ ಹೋಯಿತು; ಈ ವಾಕ್ಯಗಳಲ್ಲಿ ಅಡಗಿರುವ ಊರುಗಳ ಹೆಸರು ಗುರುತಿಸಿ

Brain Teaser: ಹಾವು ಏಣಿ ಏರಿ ಮೇಲೆ ಹೋಯಿತು; ಈ ವಾಕ್ಯಗಳಲ್ಲಿ ಅಡಗಿರುವ ಊರುಗಳ ಹೆಸರು ಗುರುತಿಸಿ

Rakshitha Sowmya HT Kannada

Feb 07, 2024 11:08 AM IST

google News

ಈ ವಾಕ್ಯಗಳಲ್ಲಿ ಅಡಗಿರುವ ಊರುಗಳ ಹೆಸರು ಗುರುತಿಸಿ

  • Brain Teaser: ಬ್ರೈನ್‌ ಟೀಸರ್‌ ಬಿಡಿಸೋದು ಯಾವಾಗಲೂ ಫನ್‌ ಆಗಿರುತ್ತದೆ. ಇಲ್ಲಿ ಸುಮಾರು 20 ಬ್ರೈನ್‌ ಟೀಸರ್‌ಗಳಿವೆ. ಇವೆಲ್ಲಾ ಊರುಗಳ ಹೆಸರುಗಳು. ನಿಮ್ಮ ಮಿದುಳಿಗೆ ಒಂದಿಷ್ಟು ಕೆಲಸ ಕೊಡಿ, ಈ ವಾಕ್ಯಗಳಲ್ಲಿ ಅಡಗಿರುವ ಸ್ಥಳಗಳ ಹೆಸರನ್ನು ಗುರುತಿಸಿ. 

ಈ ವಾಕ್ಯಗಳಲ್ಲಿ ಅಡಗಿರುವ ಊರುಗಳ ಹೆಸರು ಗುರುತಿಸಿ
ಈ ವಾಕ್ಯಗಳಲ್ಲಿ ಅಡಗಿರುವ ಊರುಗಳ ಹೆಸರು ಗುರುತಿಸಿ

Brain Teaser: ಹೊಸಬರು ಯಾರಾದರು ಪರಿಚಯ ಆದರೆ ಅವರಿಗೆ ನಾವು ಕೇಳುವ ಪ್ರಶ್ನೆ ನೀವು ಯಾವ ಊರಿನವರು ಅಂತ? ಎಲ್ಲರಿಗೂ ತಮ್ಮ ತಮ್ಮ ಊರಿನ ಬಗ್ಗೆ ಬಹಳ ಹೆಮ್ಮೆ ಇರುತ್ತದೆ. ಹಾಗೇ ಪ್ರತಿಯೊಂದು ಊರಿಗೂ ಒಂದೊಂದು ಹಿನ್ನೆಲೆ ಇರುತ್ತದೆ. ಕೆಂಪೇಗೌಡರು ಕಟ್ಟಿದ ಬೆಂದಕಾಳೂರು ಕ್ರಮೇಣ ಬೆಂಗಳೂರು ಆಗಿ ಬದಲಾಯ್ತು. ರಾಜ್ಯಕ್ಕೆ ರಾಜಧಾನಿ ಆಯ್ತು.

ಮಹಿಷಾಸುರ ಅಥವಾ ಮಹಿಷಸುರನ ಊರು ಮುಂದೆ ಸಾಂಸ್ಕೃತಿಕ ನಗರಿ ಮೈಸೂರು ಆಗಿ ಬದಲಾಯಿತು. ದುರ್ಗಮ ಪ್ರದೇಶವೊಂದನ್ನು ಚಿತ್ರಕೇತು ಎಂಬಾತ ಆಳ್ವಿಕೆ ಮಾಡಿದ ಸ್ಥಳಕ್ಕೆ ಚಿತ್ರದುರ್ಗ ಎಂದು ಹೆಸರಿಡಲಾಗಿದೆ. ಇದಕ್ಕೆ ಮೊದಲು ಚಿತ್ರಕಲಾದುರ್ಗ ಮತ್ತು ಚಿತ್ತಾಲದುರ್ಗ ಎಂಬ ಹೆಸರೂ ಇತ್ತು ಎನ್ನಲಾಗಿದೆ. ಹೀಗೆ ಒಂದೊಂದು ಊರಿಗೂ ಒಂದೊಂದು ಹಿನ್ನೆಲೆ ಇದೆ. ಕೆಲವೊಂದು ಜಿಲ್ಲೆ, ಊರುಗಳಿಗೆ ಸಂಬಂಧಿಸಿದಂತೆ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಈ ಕೆಳಕಂಡ ವಾಕ್ಯಗಳನ್ನು ನೋಡಿ, ಅದರಲ್ಲಿ ಅಡಗಿರುವ ಊರುಗಳ ಹೆಸರನ್ನು ಗುರುತಿಸಿ. ಉದಾಹರಣೆಗೆ ನಮ್ಮೂರ ಕೆರೆಯಲ್ಲಿ ಅರಸಿ ಸ್ನಾನ ಮಾಡಿದಳು. ಇದಕ್ಕೆ ಉತ್ತರ ಅರಸೀಕೆರೆ.

ಇಂಥದ್ದೇ ಇನ್ನೂ 19 ಪಜಲ್‌ಗಳಿವೆ. ಉತ್ತರ ಹೇಳಿ ನೋಡೋಣ.

1) ದುರ್ಗಮ್ಮ ಚೆನ್ನಾಗಿ ಚಿತ್ರ ಬರೆಯುತ್ತಾಳೆ.

2) ಸಾಸಿವೆ ತರಲು ಹಿರಿಯವಳು ಅಂಗಡಿಗೆ ಹೋದಳು.

3) ಕರ್ಣನೂ ಅನೇಕ ಗೋ ದಾನ ಮಾಡಿದ.

4) ಬೆಳ್ಳಿ ಇರುವ ಊರು?

5) ರಾಜರು ಚಾಮರ ತರಲು ನಗರಕ್ಕೆ ಹೋಗಿರಬೇಕು.

6) ಕುಮಾರ ಮಟ ಮಟ ಎನ್ನುತ್ತಿರುತ್ತಾನೆ.

7) ರಮಣಿ, ಚಿಂತಾಕ್ರಾಂತಳಾಗಿ ಏಕೆ ಕೂತಿರುವೆ?

8) ನೆರಳಿಗಾಗಿ ವಿಧುರ ಅಶ್ವತ್ಥ ಮರದ ಕೆಳಗೆ ಕುಳಿತ.

9) ಹೊತ್ತು ಮುಳುಗುವ ಸಮಯದಲ್ಲಿ ಬಾಗಿಲು ಹಾಕಬಾರದು.

10) ಹಾವು ಏಣಿ ಏರಿ ಮೇಲೆ ಹೋಯಿತು.

11) ನಮ್ಮೂರ ಕೆರೆಯಲ್ಲಿ ಅರಸಿ ಸ್ನಾನ ಮಾಡಿದಳು.

12) ವಯ್ಯಾರಿಯ ಹುಬ್ಬು ತಿದ್ದಿ ತೀಡಿದ ಬಳ್ಳಿಯಂತೆ ಇತ್ತು.

13) ನಂಜನ ತೋಟದಲ್ಲಿ ಜೇನುಗೂಡು ಕಟ್ಟಿದೆ.

14) ದಂಪತಿಗಳು ತಿರುಗಾಟಕ್ಕೆ ಹೊರಟರು.

15) ದೇವಾಲಯದಲ್ಲಿ ಮಂತ್ರಘೋಷ.

16) ಪಟ್ಟಣದಲ್ಲಿ, ಚನ್ನನಿಗೆ ಕೆಲಸವಾಯಿತು.

17) ಈ ವಾರವೆಲ್ಲ ನನಗೆ ಕೈ ನೋವು.

18) ಸಿಡಿಲಿನ ಶಬ್ದ ಕೇಳಿ ಮೈ ಗದಗುಟ್ಟುವಂತಾಯಿತು.

19)ಬರಗಾಲದಲ್ಲಿ, ಇದ್ದ ಧಾನ್ಯವನ್ನು ಕಳ್ಳರು ಕೊಳ್ಳೆ ಹೊಡೆದರು.

20) ಎದೆಗುಂದದೆ ನರರೂ ಮುನ್ನುಗ್ಗಿದರು.

ಉತ್ತರಕ್ಕಾಗಿ ಇಲ್ಲಿ ಸ್ಕ್ರಾಲ್‌ ಮಾಡಿ

̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤

̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤

̤̤̤̤̤̤̤̤̤̤̤̤

̤̤̤̤̤̤̤̤̤̤̤

̤̤̤̤̤̤̤

̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤

̤̤̤̤̤̤̤̤̤̤̤̤

̤̤̤̤̤̤̤̤̤̤̤

̤̤̤̤̤̤̤

̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤

̤̤̤̤̤̤̤̤̤̤̤̤

̤̤̤̤̤̤̤̤̤̤̤

̤̤̤̤̤̤̤

̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤

̤̤̤̤̤̤̤̤̤̤̤̤

̤̤̤̤̤̤̤̤̤̤̤

̤̤̤̤̤̤̤

̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤̤

̤̤̤̤̤̤̤̤̤̤̤̤

̤̤̤̤̤̤̤̤̤̤̤

̤̤̤̤̤̤̤

1. ಚಿತ್ರದುರ್ಗ

2. ಹಿರಿಸಾವೆ

3.ಗೋಕರ್ಣ

4. ಹುಬ್ಬಳ್ಳಿ

5.ಚಾಮರಾಜನಗರ

6.ಕುಮಟ

7. ಚಿಂತಾಮಣಿ

8 ವಿದುರಾಶ್ವತ್ಥ

9.ಮುಳುಬಾಗಿಲು

10.ಹಾವೇರಿ

11.ಅರಸೀಕೆರೆ

12.ಬಳ್ಳಾರಿ

13. ನಂಜನಗೂಡು

14. ತಿರುಪತಿ

15.ಮಂತ್ರಾಲಯ

16. ಚನ್ನಪಟ್ಟಣ

17.ಕೈವಾರ

18.ಗದಗ

19.ಕೊಳ್ಳೇಗಾಲ

20. ನರಗುಂದ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ