logo
ಕನ್ನಡ ಸುದ್ದಿ  /  ಜೀವನಶೈಲಿ  /  ಫೋನ್‌ಪೇ ವಾಲೆಟ್‌ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಳ್ಳಬಹುದಾ; ಇಲ್ಲಿದೆ ಸಂಪೂರ್ಣ ಮಾಹಿತಿ

ಫೋನ್‌ಪೇ ವಾಲೆಟ್‌ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಳ್ಳಬಹುದಾ; ಇಲ್ಲಿದೆ ಸಂಪೂರ್ಣ ಮಾಹಿತಿ

Raghavendra M Y HT Kannada

Mar 02, 2024 12:59 PM IST

google News

ಫೋನ್‌ಪೇನಲ್ಲಿ ಏನೆಲ್ಲಾ ಡಿಜಿಟಲ್ ಸೇವೆಗಳಿವೆ ಅನ್ನೋದನ್ನ ತಿಳಿಯಿರಿ.

    • ಫೋನ್‌ಪೇ ವ್ಯಾಲೆಟ್‌ನಲ್ಲಿರುವ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಅಷ್ಟೇ ವಿದ್ಯುತ್ ಬಿಲ್ ಸೇರಿ ಹಲವು ಪಾವತಿಗಳನ್ನು ಮಾಡಬಹುದು.
ಫೋನ್‌ಪೇನಲ್ಲಿ ಏನೆಲ್ಲಾ ಡಿಜಿಟಲ್ ಸೇವೆಗಳಿವೆ ಅನ್ನೋದನ್ನ ತಿಳಿಯಿರಿ.
ಫೋನ್‌ಪೇನಲ್ಲಿ ಏನೆಲ್ಲಾ ಡಿಜಿಟಲ್ ಸೇವೆಗಳಿವೆ ಅನ್ನೋದನ್ನ ತಿಳಿಯಿರಿ. (HT)

ಬೆಂಗಳೂರು: ಡಿಜಿಟಲ್ ಯುಗದಲ್ಲಿಂದು ಯಾವುದೇ ರೀತಿಯ ವಹಿವಾಟು ನಡೆಸಬೇಕಾದರೆ ಪೇಮೆಂಟ್ ಆ್ಯಪ್‌ಗಳನ್ನು ಬಳಸಲಾಗುತ್ತಿದೆ. ಯುಪಿಐ, ಫೋನ್‌ಪೇ, ಗೂಗಲ್ ಪೇ, ಡೆಬಿಡ್ ಕಾರ್ಟ್, ಕ್ರೆಡಿಟ್ ಕಾರ್ಡ್‌ಗಳ ಮೂಲಕ ಆನ್‌ಲೈನ್ ಪೇಮೆಂಟ್‌ಗಳನ್ನು ಮಾಡಲಾಗುತ್ತಿದೆ.

ಬಾಡಿಗೆ ಪಾವತಿ, ಮೊಬೈಲ್ ರಿಚಾರ್ಜ್, ವಿದ್ಯುತ್ ಬಿಲ್, ವಾಟರ್ ಬಿಲ್, ಇಎಂಐ ಪಾವತಿಗಳು, ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಹಾಗೂ ಶಾಪಿಂಗ್‌ಗಳಿಗೂ ಡಿಜಿಟಲ್ ಪೇಮೆಂಟ್‌ಗಳನ್ನು ಬಳಸಲಾಗುತ್ತದೆ. ನೀವೇನಾದರೂ ಫೋನ್ ಪೇ ವ್ಯಾಲೆಟ್‌ನ ಸಂಪೂರ್ಣ ಕೆವೈಸಿ ಮಾಡಿಸಿರುವ ಗ್ರಾಹಕರಾಗಿದ್ದರೆ ನಿಮ್ಮ ಫೋನ್ ಪೇ ವ್ಯಾಲೆಟ್‌ನಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳಬಹುದು.

ಫೋನ್‌ ಪೇ ವಾಲೆಟ್‌ನಿಂದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿಕೊಳ್ಳುವುದು ಹೇಗೆ

ಸ್ಮಾರ್ಟ್‌ಫೋನ್‌ನಲ್ಲಿ ಪೋನ್ ಪೇ ಅಪ್ಲಿಕೇಶನ್ ಓಪನ್ ಮಾಡಿ. ಅದರಲ್ಲಿ ಮೈ ಮನಿ ಆಯ್ಕೆಮಾಡಿದ ನಂತರ ವಾಲೆಟ್ ಅಥವಾ ಗಿಫ್ಟ್ ವೋಚರ್ ವಿಭಾಗಕ್ಕೆ ಹೋಗಿ ಫೋನ್‌ಪೇ ವ್ಯಾಲೆಟ್ ವಾಪಸ್ ಪಡೆಯುವ ಆಯ್ಕೆಯನ್ನು ಕ್ಲಿಕ್ ಮಾಡಿ. ವಾಲೆಟ್ ಐಕಾನ್ ಅನ್ನು ಎಳೆದು ನಿಮ್ಮ ಬ್ಯಾಂಕ್ ಐಕಾನ್ ಮೇಲೆ ಬಿಡಿ. ಆರ್‌ಬಿಐನ ಮಾರ್ಗಸೂಚಿಗಳ ಪ್ರಕಾರ ಈ ಸೌಲಭ್ಯವು ಫೋನ್‌ಪೇ ವಾಲೆಟ್‌ಗೆ ಕೆವೈಸಿ ಮಾಡಿಸಿದವರಿಗೆ ಮಾತ್ರ ಲಭ್ಯವಿರುತ್ತದೆ.

ಫೋನ್‌ ಪೇಗೆ ಕೆವೈಸಿ ಅಗತ್ಯ ಇದೆಯಾ?

ಯುಪಿಐ ಮತ್ತು ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲು ಯಾವುದೇ ರೀತಿಯ ಕೆವೈಸಿಯ ಅಗತ್ಯ ಇರೋದಿಲ್ಲ. ಆರ್‌ಬಿಐ ಮಾರ್ಗಸೂಚಿಯಂತೆ ಫೋನ್‌ಪೇ ವಾಲೆಟ್ ಬಳಸಲು ಬಳಕೆದಾರರು ಕನಿಷ್ಠ ಕೆವೈಸಿ ವಿವರಗಳನ್ನು ಒದಗಿಸಬೇಕು. ಬ್ಯಾಂಕ್ ಖಾತೆ ಇಲ್ಲದೆಯೂ ವಾಲೆಟ್ ಅನ್ನು ಬಳಸಬಹುದು.

ಫೋನ್ ಪೇ ವಾಲೆಟ್‌ನಲ್ಲಿರುವ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳುವುದಷ್ಟೇ ಅಲ್ಲದೆ, ವಿದ್ಯುತ್ ಬಿಲ್ ಸೇರಿದಂತೆ ಹಲವು ಪಾವತಿಗಳನ್ನು ಮಾಡಬಹುದು. ವಿದ್ಯುತ್ ನಿಗಮ ಅಥವಾ ಕಂಪನಿಗಳ ಬಿಲ್ ಪಾವತಿ ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ