Home Loan EMI: ಕಟ್ಟಿದ್ದಷ್ಟು ಮುಗಿಯುತ್ತಿಲ್ಲವೇ ಗೃಹಸಾಲದ ಕಂತು, ಹೌಸಿಂಗ್ ಲೋನ್ ಇಎಂಐ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯ
Jul 03, 2023 12:50 PM IST
ಗೃಹಸಾಲದ ಇಎಂಐ ಕಡಿಮೆ ಮಾಡುವುದು ಹೇಗೆ?
- Housing Loan: ಮನೆ ಕಟ್ಟಿಸುವುದು ಪ್ರತಿಯೊಬ್ಬರ ಕನಸು. ಅದಕ್ಕಾಗಿ ಗೃಹಸಾಲ ಪಡೆಯುತ್ತೇವೆ. ಆದರೆ ಇಎಂಐ ಕಟ್ಟುವಾಗ ಬೇಜು ಭಾರ ಎನ್ನಿಸುತ್ತದೆ. ಅಲ್ಲದೆ ಕಟ್ಟಿದ್ದಷ್ಟೂ ಮುಗಿಯುತ್ತಿಲ್ಲ ಎಂಬ ಭಾವ ಕಾಡುತ್ತದೆ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಹೌಸಿಂಗ್ ಲೋನ್ ಇಎಂಐ ಕಡಿಮೆ ಮಾಡಲು ಕೆಲವು ಉಪಾಯಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಭಾರ ಇಳಿಸಿಕೊಳ್ಳಬಹುದು.
ತಮ್ಮದೇ ಆದ ಸ್ವಂತ ಸೂರೊಂದನ್ನು ಕಟ್ಟಿಸಬೇಕು ಎಂಬುದು ಪ್ರತಿಯೊಬ್ಬರು ಕನಸು. ಬಾಡಿಗೆ ಮನೆಯಲ್ಲಿ ಎಷ್ಟು ದಿನ ಇರಲು ಸಾಧ್ಯ. ಸಾಲವೋ, ಸೂಲವೋ ಮಾಡಿ ಒಂದು ಮನೆ ಕಟ್ಟಿಸಬೇಕು ಎಂದುಕೊಳ್ಳುತ್ತೇವೆ. ಆ ಸಮಯದಲ್ಲಿ ನಮಗೆ ನೆರವಾಗುವುದು ಹೋಮ್ ಲೋನ್ ಅಥವಾ ಗೃಹಸಾಲ. ಇದು ನಮ್ಮ ಕನಸಿನ ಮನೆಗೆ ಹಣಕಾಸಿನ ಸಹಾಯ ಮಾಡುತ್ತದೆ. ಕ್ಲಪ್ತ ಸಮಯಕ್ಕೆ ಹಣಕಾಸಿನ ನೆರವು ಸಿಗುವುದು ಮಾತ್ರ, ಮರುಪಾವತಿಗೂ ದೀರ್ಘಾವಧಿ ಸಮಯವನ್ನು ನೀಡುತ್ತದೆ. ತಿಂಗಳಿಗೆ ಕಂತಿನ ಮೂಲಕ ಪಾವತಿಸುವ ಸೌಲಭ್ಯವೂ ಹೋಮ್‌ನೊಂದಿಗೆ ಲಭ್ಯ.
ಇದೆಲ್ಲವೂ ಮನೆ ಕಟ್ಟಿಸಿ, ಗೃಹಪ್ರವೇಶ ಮಾಡುವವರೆಗೂ ಸುಂದರವಾಗಿ ಕಾಣಿಸಬಹುದು, ಆದರೆ ಪ್ರತಿ ತಿಂಗಳು ಇಎಂಐ ಕಟ್ಟಲು ಆರಂಭಿಸಿದ ಮೇಲೆ ತಾಪತ್ರಯಗಳು ಆರಂಭವಾಗುತ್ತವೆ. ಗೃಹಸಾಲವು ದೀರ್ಘಾವಧಿಯಾದ್ದರಿಂದ, ಕಾಲಾನಂತರದಲ್ಲಿ ಹಣಕಾಣಸಿನ ಮೇಲೆ ಹೊರೆಯಾಗಬಹುದು. ಪ್ರತಿ ತಿಂಗಳು ಇಎಂಐ ಕಟ್ಟುವುದು ಹೊರೆಯಾಗಬಹುದು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಗೃಹಸಾಲದ ಇಎಂಐ ಕಡಿಮೆ ಮಾಡಲು ಮಾಡಲು ಕೆಲವೊಂದು ಸುಲಭ ಮಾರ್ಗಗಳಿವೆ. ಅವುಗಳನ್ನು ಅನುಸರಿಸುವ ಮೂಲಕ ಇಎಂಐ ಅನ್ನು ಕಡಿಮೆ ಮಾಡಬಹುದು. ತಿಂಗಳ ಹೊರೆಯನ್ನೂ ಇಳಿಸಿಕೊಳ್ಳಬಹುದು.
ಗೃಹಸಾಲದ ಮಾಸಿಕ ಕಂತು ಕಡಿಮೆ ಮಾಡಲು ನೆರವಾಗುವ ಕೆಲವು ಸುಲಭ ಮಾರ್ಗಗಳು ಇಲ್ಲಿವೆ.
ಇತರೇ ಬ್ಯಾಂಕ್‌ಗಳೊಂದಿಗೆ ಹೋಲಿಕೆ ಮಾಡಿ ನೋಡಿ
ಇದು ಸ್ಪರ್ಧಾತ್ಮಕ ಯುಗ. ಹೋಮ್‌ಲೋನ್ ನೀಡಲು ಕೂಡ ಬ್ಯಾಂಕ್‌ಗಳು ನಾ ಮುಂದೆ, ತಾ ಮುಂದು ಎಂದು ಪೈಪೋಟಿಯಲ್ಲಿ ನಿಮ್ಮನ್ನು ಸೆಳೆಯುತ್ತವೆ. ಹಾಗಾಗಿ ನೀವು ಒಂದಿಷ್ಟು ಬ್ಯಾಂಕ್‌ಗಳಿಗೆ ವಿಸಿಟ್ ಮಾಡಿ ಅಲ್ಲಿನ ಆಫರ್‌ಗಳನ್ನು ಪರಿಶೀಲಿಸಿ ಸಂಶೋಧಿಸುವುದು ಹಾಗೂ ಬೇರೆ ಬ್ಯಾಂಕ್‌ಗಳೊಂದಿಗೆ ಹೋಲಿಸಿ ನೋಡುವುದು ಅಗತ್ಯ. ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮಗೆ ಇಎಂಐ ಲೆಕ್ಕಾಚಾರಕ್ಕೆ ನೆರವಾಗುತ್ತದೆ. ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ಗಳು ಆನ್‌ಲೈನ್‌ನಲ್ಲೂ ಉಚಿತವಾಗಿ ಲಭ್ಯವಿವೆ. ಕಡಿಮೆ ಹೋಮ್ ಲೋನ್ EMI ಗಳಿಗೆ, ಕಡಿಮೆ ಬಡ್ಡಿದರಗಳೊಂದಿಗೆ ಆಫರ್ ಅನ್ನು ಆಯ್ಕೆ ಮಾಡುವುದು ಮುಂದುವರೆಯಲು ಉತ್ತಮ ಮಾರ್ಗವಾಗಿದೆ.
ಹೋಮ್‌ಲೋನ್ ಆಯ್ಕೆ ಮಾಡಿಕೊಳ್ಳುವ ಮೊದಲು ಬ್ಯಾಂಕಿನ ಖ್ಯಾತಿ, ಪ್ರೊಸೆಸಿಂಗ್ ಫೀ, ಸಾಲಕ್ಕೆ ಸಂಬಂಧಿಸಿದ ಇತರ ವೆಚ್ಚಗಳನ್ನೂ ಗಮನಿಸಲು ಮರೆಯದಿರಿ. ಟರ್ಮ್ ಅಂಡ್ ಕಂಡೀಷನ್‌ಗಳನ್ನು ಸರಿಯಾಗಿ ಓದಿ.
ದೀರ್ಘಾವಧಿಯ ಸಾಲದ ಅವಧಿಯನ್ನು ಆಯ್ಕೆ ಮಾಡಿ
ನಿಮ್ಮ ಗೃಹಸಾಲದ ಮರುಪಾವತಿಯ ಅವಧಿಯು ಮಾಸಿಕ ಕಂತುಗಳ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಾವಧಿ ಅವಧಿ ಹಾಗೂ ಕಂತುಗಳ ಸಂಖ್ಯೆ ಹೆಚ್ಚಾದಂತೆ ಇಎಂಐ ಕಡಿಮೆಯಾಗುತ್ತದೆ. ಆದರೆ ದೀರ್ಘಾವಧಿಯಲ್ಲಿ ಮರುಪಾವತಿ ಅವಧಿಯೊಂದಿಗೆ, ದೀರ್ಘಾವಧಿಯಲ್ಲಿ ಬಡ್ಡಿಯನ್ನು ಪಾವತಿಸುವುದರಿಂದ ಒಟ್ಟಾರೆ ಬಡ್ಡಿ ಪಾವತಿ ಹೆಚ್ಚಳವಾಗಬಹುದು.
ಕಡಿಮೆ ಅವಧಿಯಲ್ಲಿ ಪಾವತಿಸುವಂತಹ ಲೋನ್ ಮೊತ್ತಕ್ಕೆ ಇಎಂಐ ಹೆಚ್ಚಿರುತ್ತದೆ. ಆದರೆ ಇದು ಒಟ್ಟಾರೆ ಬಡ್ಡಿದರ ತಗ್ಗಿಸಲು ನೆರವಾಗುತ್ತದೆ. ಇದನ್ನು ನ್ಯಾವಿಗೇಟ್ ಮಾಡಲು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ಆ ಮೂಲಕ ನಿಮಗೆ ನಿರ್ವಹಿಸಬಹುದಾದ ಇಎಂಐ ಮೊತ್ತವನ್ನು ನೀಡುವ ಕಡಿಮೆ ಅವಧಿ ಲೋನ್ ಯಾವುದು ಎಂದು ಕಂಡುಕೊಳ್ಳಬಹುದು.
ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳಿ
ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಇರಿಸಿಕೊಳ್ಳುವುದು ಹೋಮ್ ಲೋನ್ ಇಎಂಐ ಕಡಿಮೆ ಮಾಡಲು ಸಹಾಯ ಮಾಡುವ ಮತ್ತೊಂದು ಅಂಶ. ನಿಮ್ಮ ಕ್ರೆಡಿಟ್ ಸ್ಕೋರ್ ನೀವು ಪಡೆಯುವ ಗೃಹ ಸಾಲದ ನಿಯಮಗಳ ಮೇಲೆ ಪರಿಣಾಮ ಬೀರುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಿದ್ದರೆ ನೀವು ನಂಬಲಾರ್ಹ ಮತ್ತು ಕಡಿಮೆ ಅಪಾಯದ ಸಾಲಗಾರ ಎಂದು ಬ್ಯಾಂಕ್ ಪರಿಗಣಿಸುತ್ತದೆ. ಇದು ಕೈಗೆಟುಕುವ ಬಡ್ಡಿದರದಲ್ಲಿ ಗೃಹಸಾಲಕ್ಕೆ ಅರ್ಹರಾಗುವಂತೆ ಮಾಡುತ್ತದೆ. ಇದು ಇಎಂಐ ಮೊತ್ತ ಕಡಿಮೆ ಮಾಡಲು ಹಾಗೂ ಸಾಲದ ವೆಚ್ಚ ಕಡಿಮೆಯಾಗಲು ಕಾರಣವಾಗುತ್ತದೆ. 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅದನ್ನು ಗುಡ್ ಕ್ರೆಡಿಟ್ ಸ್ಕೋರ್ ಎಂದು ಬ್ಯಾಂಕ್‌ಗಳು ನಿರ್ಧರಿಸುತ್ತವೆ.
ಕ್ರೆಡಿಟ್ ಸ್ಕೋರ್‌ಗಳು ಈ ಕೆಳಗಿನ ಅಂಶಗಳನ್ನು ಆಧರಿಸಿವೆ:
* ಕ್ರೆಡಿಟ್ ಇತಿಹಾಸ
* ಮರುಪಾವತಿಯ ಮಾದರಿ
* ವಿವಿಧ ರೀತಿಯ ಕ್ರೆಡಿಟ್‌ಗಳ ಅನುಭವ
* ಪ್ರಸ್ತುತ ಸಾಲ
* ಕ್ರೆಡಿಟ್ ಬಳಕೆಯ ಅನುಪಾತ
ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಸಮಯೋಚಿತ ಮರುಪಾವತಿ ಮಾಡಬೇಕು. ನಿಮ್ಮ ಕ್ರೆಡಿಟ್ ಬಳಕೆಯನ್ನು ಮಿತಿಗೊಳಿಸಬೇಕು.
ಅರ್ಹ ಬಡ್ಡಿದರಕ್ಕಾಗಿ ಮಾತುಕತೆ ನಡೆಸಿ
ಉತ್ತಮ ಕ್ರೆಡಿಟ್ ಸ್ಕೋರ್‌ನೊಂದಿಗೆ ಗೃಹಸಾಲ ನೀಡುವವರು ನಿಮ್ಮನ್ನು ಸುರಕ್ಷಿತ ಸಲಗಾರರು ಎಂದು ಪರಿಗಣಿಸುತ್ತಾರೆ. ಆದರೆ ನಿಮಗೆ ಚರ್ಚೆ ಮಾಡಲು ಅವಕಾಶ ಸಿಗುತ್ತದೆ. ಇದನ್ನು ನೀವು ಸಮರ್ಥವಾಗಿ ಬಳಸಿಕೊಳ್ಳಬಹುದು. ರಿಮೇಂಟ್ ಆಯ್ಕೆ ಮತ್ತು ಇತರ ಅನುಕೂಲಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಬಹುದು.
ನಿಮ್ಮ ಚರ್ಚೆಗೆ ಅನುಕೂಲ ಮಾಡಿಕೊಡುವ ಅಂಶಗಳು
ನಿಮ್ಮ ಆದಾಯದ ಎಲ್ಲಾ ಮೂಲಗಳನ್ನು ಪ್ರದರ್ಶಿಸಿ
ಬ್ಯಾಂಕ್ ಸಿಬ್ಬಂದಿ ಹಾಗೂ ಮ್ಯಾನೇಜರ್ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ
ಆದಾಯ ಮತ್ತು ಉದ್ಯೋಗದ ಪುರಾವೆ ಹಾಗೂ ಸೂಕ್ತ ದಾಖಲೆಗಳನ್ನು ನೀಡಿ.
ಮರುಪಾವತಿಗೆ ಯೋಜನೆ ರೂಪಿಸಿ
ಹೋಮ್ ಲೋನ್ ನೀಡುವವರು ಅಲ್ಪಾವಧಿ ಪಾವತಿ ಹಾಗೂ ಪೂರ್ವ ಪಾವತಿ ಎಂಬ ಎರಡು ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾರೆ. ಇದು ಗೃಹಸಾಲದ ಒಂದು ಭಾಗವನ್ನು ಮುಂಚಿತವಾಗಿ ಮರುಪಾವತಿ ಮಾಡುವುದನ್ನು ಸೂಚಿಸುತ್ತದೆ. ಪೂರ್ವಪಾವತಿ ಮಾಡುವುದರಿಂದ ಅಸಲು ಮೊತ್ತವು ಕಡಿಮೆಯಾಗುತ್ತದೆ. ಇದು ನಿಮಗೆ ನಿರೀಕ್ಷೆಗಿಂತ ಮುಂಚಿತವಾಗಿ ಸಾಲ ಮರು ಪಾವತಿಸಲು ಸಹಾಯ ಮಾಡುತ್ತದೆ. ಪೂರ್ವಪಾವತಿಯು ಮಾಸಿಕ ಕಂತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾಸಿಕ ಕಂತು ಕಡಿಮೆಯಾಗುವುದರಿಂದ ನಿಮ್ಮ ಹಣಕಾಸಿನ ಹೊರೆಯು ಕಡಿಮೆಯಾಗುತ್ತದೆ. ಅಲ್ಲದೆ ಇದು ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ನೀಡುತ್ತದೆ. ಹಾಗಾಗಿ ಸಾಧ್ಯವಾದಾಗಲೆಲ್ಲಾ ಹೆಚ್ಚುವರಿ ಲೋನ್ ಪಾವತಿ ಮಾಡುವುದು ಪ್ರಯೋಜನಕಾರಿ.
ಹೆಚ್ಚಿನ ಡೌನ್ ಪೇಮೆಂಟ್ ಮಾಡಿ
ಡೌನ್ ಪೇಮೆಂಟ್ ಹೆಚ್ಚು ಪೇ ಮಾಡುವುದರಿಂದ ನಿಮ್ಮ ಹೋಮ್ ಲೋನ್ ಮಾಸಿಕ ಕಂತುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಹೆಚ್ಚಿನ ಡೌನ್ ಪೇಮೆಂಟ್ ನೀವು ಪಡೆಯುವ ಮೊತ್ತವನ್ನು ಕಡಿಮೆ ಮಾಡುತ್ತದೆ. ಇಎಂಐ ಪಾವತಿಗಳನ್ನು ಅಸಲು ಮೊತ್ತದ ಮೇಲೆ ಲೆಕ್ಕ ಹಾಕಲಾಗಿರುವುದರಿಂದ, ನಿಮ್ಮ ಇಎಂಐಗಳು ಕೂಡ ಕಡಿಮೆಯಾಗಿರುತ್ತವೆ.
ಪೂರ್ವ-ಅನುಮೋದಿತ ಆಫರ್ ಬಗ್ಗೆ ತಿಳಿಯಿರಿ
ಪೂರ್ವ-ಅನುಮೋದಿತ (ಪ್ರಿ ಅಪ್ರೂವ್ಡ್ ಪರ್ಸನಲೈಸ್ಡ್) ಹೋಮ್ ಲೋನ್ ಆಫರ್ ನಿಮ್ಮ ಮಾಸಿಕ ಕಂತುಗಳನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ನಿಮ್ಮ ಕ್ರೆಡಿಟ್ ಪ್ರೊಫೈಲ್ ಅನ್ನು ಮೌಲ್ಯಮಾಪನ ಮಾಡಿದ ನಂತರ, ನೀವು ಹೆಚ್ಚಿನ ಕ್ರೆಡಿಟ್ ಅರ್ಹತೆಯೊಂದಿಗೆ ಕಡಿಮೆ ಅಪಾಯದ ಸಾಲಗಾರ ಎಂದು ಖಚಿತಪಡಿಸಿಕೊಂಡ ನಂತರ ಸಾಲದಾತರು ಇಂತಹ ಪ್ರಸ್ತಾಪವನ್ನು ನೀಡುತ್ತಾರೆ. ಇವು ಕಡಿಮೆ ಬಡ್ಡಿದರ ಮತ್ತು ಮಾಸಿಕ ಕಂತುಗಳ ಕಡಿಮೆ ಮಾಡಲು ಸಹಾಯ ಮಾಡಬಹುದು.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಆಯ್ಕೆ ಮಾಡಿ
ಕಡಿಮೆ ಬಡ್ಡಿದರ ಒದಗಿಸುವ ಹೊಸ ಬ್ಯಾಂಕ್ ಅಥವಾ ಸಾಲ ನೀಡುವ ಸಂಸ್ಥೆಗೆ ನಿಮ್ಮ ಹೋಮ್ ಲೋನ್ ಅನ್ನು ವರ್ಗಾಯಿಸಿಕೊಳ್ಳುವ ಮೂಲಕ ಮಾಸಿಕ ಕಂತುಗಳನ್ನು ಕಡಿಮೆ ಮಾಡಬಹುದು. ಆಗಲೂ ನೀವು ಇಎಂಐ ಕ್ಯಾಲ್ಕುಲೇಟರ್ ಬಳಸಿ ಹೋಲಿಕೆ ಮಾಡಿ ನೋಡಿಕೊಳ್ಳುವುದು ಮುಖ್ಯವಾಗುತ್ತದೆ.
ಬ್ಯಾಲೆನ್ಸ್ ವರ್ಗಾವಣೆ ಮಾಡುವಾಗ ವರ್ಗಾವಣೆ ವೆಚ್ಚವನ್ನೂ ನೀಡಬೇಕಾಗುತ್ತದೆ.