logo
ಕನ್ನಡ ಸುದ್ದಿ  /  ಜೀವನಶೈಲಿ  /  Will Deed: ವಿಲ್‌ ಬರೆಯುವುದು ಹೇಗೆ, ನಿವೃತ್ತಿ ಮೊದಲು ಮಕ್ಕಳ ಹೆಸರಿಗೆ ಉಯಿಲು ಬರೆಯಬೇಕೆ, ನಂತರ ಬರೆದರೆ ಸಾಕೇ, ವಿಲ್‌ ಪ್ರಶ್ನೆಗಳಿಗೆ ಉತ್ತರ

Will Deed: ವಿಲ್‌ ಬರೆಯುವುದು ಹೇಗೆ, ನಿವೃತ್ತಿ ಮೊದಲು ಮಕ್ಕಳ ಹೆಸರಿಗೆ ಉಯಿಲು ಬರೆಯಬೇಕೆ, ನಂತರ ಬರೆದರೆ ಸಾಕೇ, ವಿಲ್‌ ಪ್ರಶ್ನೆಗಳಿಗೆ ಉತ್ತರ

Praveen Chandra B HT Kannada

Aug 09, 2023 06:03 PM IST

google News

Will Writing: ಮಕ್ಕಳ ಹೆಸರಿಗೆ ಉಯಿಲು ಬರೆಯಲು ಸೂಕ್ತ ಸಮಯ ಯಾವುದು

  • how to write will for property: ವಿಲ್‌ ಬರೆಯಲು ಸೂಕ್ತ ಸಮಯ ಯಾವುದು, ನಿವೃತ್ತಿಯಾದ ಬಳಿಕ ಉಯಿಲು ಬರೆಯಬೇಕೇ, ಅದಕ್ಕಿಂತ ಮೊದಲೇ ವಿಲ್‌ ಬರೆಯಬೇಕೆ? ವಿಲ್‌ ಬರೆಯವುದು ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Will Writing: ಮಕ್ಕಳ ಹೆಸರಿಗೆ ಉಯಿಲು ಬರೆಯಲು ಸೂಕ್ತ ಸಮಯ ಯಾವುದು
Will Writing: ಮಕ್ಕಳ ಹೆಸರಿಗೆ ಉಯಿಲು ಬರೆಯಲು ಸೂಕ್ತ ಸಮಯ ಯಾವುದು

ಜೀವನದಲ್ಲಿ ತಕ್ಕಮಟ್ಟಿಗೆ ಸಂಪಾದನೆ, ಆಸ್ತಿ ಮಾಡಿದ ಬಳಿಕ ಬಹುತೇಕರು ತಮ್ಮ ಮಕ್ಕಳು ಅಥವಾ ಪತ್ನಿ ಹೆಸರಲ್ಲಿ ಉಯಿಲು (ವಿಲ್‌) ಬರೆಯಲು ಮುಂದಾಗುತ್ತಾರೆ. ಆದರೆ, ವಿಲ್‌ ಯಾವಾಗ ಬರೆಯಬೇಕು ಎಂಬ ಸಂದೇಹ ಬಹುತೇಕರಲ್ಲಿ ಇರುತ್ತದೆ. ಉದ್ಯೋಗದಿಂದ ನಿವೃತ್ತಿ ಪಡೆದ ಬಳಿಕ ವಿಲ್‌ ಬರೆದರೆ ಸಾಕೇ, ಅದಕ್ಕಿಂತ ಮೊದಲೇ ವಿಲ್‌ ಬರೆಯಬೇಕೆ ಎಂಬ ಪ್ರಶ್ನೆಯೂ ಹಲವರಲ್ಲಿ ಇರಬಹುದು. ಅಯ್ಯೋ, ನನಗೆ ಇನ್ನು ಕೆಲವು ವರ್ಷ ಏನಾಗಾದು, ಈಗಲೇ ವಿಲ್‌ ಬರೆಯೋದ್ಯಾಕೆ ಎಂದುಕೊಳ್ಳುವವರು ಅನೇಕ ಜನರು ಇದ್ದಾರೆ.

ವಿಲ್‌ ಬರೆಯಲು ಸೂಕ್ತ ಸಮಯ ಯಾವುದು?

ಉದ್ಯೋಗದಿಂದ ನಿವೃತ್ತಿ ಪಡದ ಬಳಿಕ ಉಯಿಲು ಬರೆಯಬೇಕೆ, ಅದಕ್ಕಿಂತ ಮೊದಲೇ ಬರೆಯಬೇಕೆ ಎಂಬ ಪ್ರಶ್ನೆ ಕೇಳುವವರಿಗೆ ಉತ್ತರ "ಈಗ". ಹೌದು, ನೀವು ವಿಲ್‌ ಬರೆಯಲು ನಿವೃತ್ತಿಯಾಗಲು ಕಾಯಬೇಕಿಲ್ಲ. ಮುಂದಿನ ತಿಂಗಳು, ಮುಂದಿನ ವರ್ಷಕ್ಕೂ ಕಾಯಬೇಕಿಲ್ಲ. ನೀವು ವಿಲ್‌ ಬರೆಯಲು ಸೂಕ್ತವಾದ ಸಮಯ "ಈಗ ಈ ಕ್ಷಣ ಇಂದು" ಆಗಿದೆ. ಜೀವನ ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ, ವಿಲ್‌ ಬರೆಯಲು ಯಾರೂ ಕೂಡ ಹೆಚ್ಚು ದಿನ ಮುಂದೂಡಬಾರದು.

ಇಲ್ಲ, ನಾನು ಈಗ ಆರೋಗ್ಯವಾಗಿದ್ದೇನೆ, ಈಗಲೇ ವಿಲ್‌ ಬರೆಯುವುದಿಲ್ಲ ಎಂದುಕೊಳ್ಳುವಿರಾ. ಸರಿ, ನೀವು ಈಗ ಉತ್ತಮ ಆರೋಗ್ಯ ಹೊಂದಿದ್ದೀರಿ. ಈಗ ನಿಮ್ಮ ದೈಹಿಕ ಸ್ಥಿತಿ ಮತ್ತು ಮಾನಸಿಕ ಸ್ಥಿತಿ ಅತ್ಯುತ್ತಮವಾಗಿದೆ. ಈಗ ಬರೆಯೋದಿಲ್ಲ ಎಂದುಕೊಳ್ಳೋಣ. ಮುಂದೊಂದು ದಿನ ನಿಮ್ಮ ಆರೋಗ್ಯ ಕೆಡಬಹುದು (ಇದು ಹಾರೈಕೆಯಲ್ಲ, ಇಂತಹ ಸಂದರ್ಭ ಬರಬಹುದು ಎಂದುಕೊಳ್ಳುವುದು ತಪ್ಪಲ್ಲ, ಈ ರೀತಿಯಾಗದಂತೆ ಎಚ್ಚರವಹಿಸಬೇಕು) . ನಿವೃತ್ತಿಯಾದ ಬಳಿಕ ದೊಡ್ಡ ಕಾಯಿಲೆ ಬಂದರೆ ಏನಾಗಬಹುದು. ಎಲ್ಲಾದರೂ ಮಾನಸಿಕ ಸ್ಥಿತಿ ಏರುಪೇರಾದರೆ ಆಗ ನೀವು ವಿಲ್‌ ಕುರಿತು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ. ಬುದ್ಧಿ, ಆರೋಗ್ಯ ಎಲ್ಲವೂ ಸರಿಯಾಗಿರುವಾಗಲೇ ವಿಲ್‌ ಬರೆಯುವುದು ಉತ್ತಮ.

ವಿಲ್‌ ಅಥವಾ ಉಯಿಲು ಬರೆಯುವುದು ಹೇಗೆ?

ಮೊದಲಿಗೆ ನಿಮ್ಮ ಸ್ವತ್ತುಗಳನ್ನು ಪಟ್ಟಿ ಮಾಡಿ.

  1. ರಿಯಲ್‌ ಎಸ್ಟೇಟ್‌, ವಾಹನ ಇತ್ಯಾದಿ ಫಿಸಿಕಲ್‌ ಸ್ವತ್ತುಗಳು
  2. ಹಣಕಾಸು- ಬ್ಯಾಂಕ್‌ ಖಾತೆಗಳು, ಹೂಡಿಕೆ, ಪಿಪಿಎಫ್‌
  3. ಡಿಜಿಟಲ್‌- ಸೋಷಿಯಲ್‌ ಮೀಡಿಯಾ ಖಾತೆಗಳು, ಕ್ರೆಡಿಟ್‌ ಕಾರ್ಡ್‌ ರಿವಾರ್ಡ್‌ ಪಾಯಿಂಟ್‌, ಆನ್‌ಲೈನ್‌ ಆಸ್ತಿಗಳು
  4. ವರ್ಗಾಯಿಸಲಾಗದ ಆಸ್ತಿಗಳು: ಸಂಬಂಧ, ಬುದ್ಧಿವಂತಿಕೆ, ಕೌಶಲ, ಪ್ರತಿಭೆ

ಇವುಗಳಲ್ಲಿ ಯಾವ ಆಸ್ತಿಯನ್ನು ಯಾರಿಗೆ ವರ್ಗಾಯಿಸಲು ಬಯಸುವಿರಿ ಎಂದು ಖಚಿತಪಡಿಸಿಕೊಳ್ಳಿ. ವಿಶೇಷವಾಗಿ ಬೌಧಿಕ ಸ್ವತ್ತುಗಳನ್ನು (ಪೇಟೆಂಟ್‌, ಟ್ರೇಡ್‌ಮಾರ್ಕ್‌ ಇತ್ಯಾದಿ) ಯಾರಿಗೆ ನೀಡಬೇಕು ಎಂದು ಖಚಿತಪಡಿಸಿ.

ವಿಲ್‌ ಬರೆಯುವುದು ಹೇಗೆ?

ನೀವು ಪೇಪರ್‌ನಲ್ಲಿ ಪೆನ್‌ ಮೂಲಕ ಬರೆಯಬಹುದು. ಟೈಪ್‌ ಮಾಡಬಹುದು. ಆದರೆ, ಕಾನೂನು ಪರಿಣಿತರ ನೆರವಿನಿಂದ ವಿಲ್‌ ಬರೆಯುವುದು ಉತ್ತಮ. ಆದರೆ, ಡಿಜಿಟಲ್‌ ರೂಪದಲ್ಲಿ (ಇಮೇಲ್‌ ಇತ್ಯಾದಿಗಳಲ್ಲಿ) ಬರೆಯುವ ವಿಲ್‌ಗೆ ಮಾನ್ಯತೆ ಇಲ್ಲ. ವಿಲ್‌ ಬರೆಯುವ ಸಂದರ್ಭದಲ್ಲಿ ಕನಿಷ್ಠ ಇಬ್ಬರು ವ್ಯಕ್ತಿಗಳನ್ನು ಸಾಕ್ಷಿಗಳಾಗಿ ಉಲ್ಲೇಖಿಸಬೇಕು. ಆ ಸಾಕ್ಷಿಗಳ ಮಾನಸಿಕ ಸ್ಥಿತಿ ಉತ್ತಮವಾಗಿರಬೇಕು. ನೀವು ಬರೆಯುವ ವಿಲ್‌ ಅನ್ನು ನಿಮ್ಮ ಜೀವನದ ಯಾವುದೇ ಸಮಯದಲ್ಲಿ ಬೇಕಿದ್ದರೂ ಬದಲಾಯಿಸಿ ಹೊಸದಾಗಿ ರಚಿಸಬಹುದು. ವಿಲ್‌ ಬರೆಯುವ ಸಂದರ್ಭದಲ್ಲಿ ಬಾಕಿ ಸಾಲದ ವಿವರವನ್ನೂ ನಮೂದಿಸಿ ಸಾಲದ ಮೊತ್ತವನ್ನು ಹೇಗೆ ತೀರಿಸಬೇಕು ಎಂದೂ ಉಲ್ಲೇಖಿಸಬಹುದು. ನೀವು ಮೃತಪಟ್ಟ ಬಳಿಕ ನೀವು ಬರೆದ ವಿಲ್‌ ಜಾರಿಗೆ ಬರುತ್ತದೆ. ಅಲ್ಲಿಯವರಗೆ ಅದನ್ನು ಮಾರ್ಪಾಡು ಮಾಡಲು ಅಥವಾ ಹೊಸತು ಬರೆಯಲು ಅವಕಾಶ ಇರುತ್ತದೆ. ವಿಲ್‌ ಬರೆಯುವಾಗ ಯಾವುದೇ ಗೊಂದಲ ಉಂಟಾಗದಂತೆ ನೇರವಾಗಿ ವಿಲ್‌ ಬರೆಯಿರಿ. ವಿಲ್‌ ಬರೆದ ಬಳಿಕ ಅದನ್ನು ಕುಟುಂಬದ ಸದಸ್ಯರಿಗೆ ತಿಳಿಸಬಹುದು. ವಿಲ್‌ ಎಲ್ಲಿ ಇಟ್ಟಿದ್ದೇನೆ, ಯಾವ ಸ್ವತ್ತನ್ನೆಲ್ಲ ವಿಲ್‌ನಲ್ಲಿ ಬರೆದಿದ್ದೇನೆ ಎಂದು ತಿಳಿಸಬಹುದು. ಆದರೆ, ಈ ರೀತಿ ಬೆನಿಫಿಶಿಯರಿಗಳಿಗೆ ತಿಳಿಸುವುದು ಕಡ್ಡಾಯವಲ್ಲ. ವಿಲ್‌ ಎನ್ನುವುದು ನಿಮ್ಮ ನಂತರ ಪ್ರಮುಖ ಪಾತ್ರ ವಹಿಸುವ ವಿಷಯವಾಗಿರುವುದರಿಂದ ಆದಷ್ಟು ಕಾನೂನು ಪರಿಣಿತರ ನೆರವಿನಿಂದ ಸರಿಯಾದ ರೀತಿಯಲ್ಲಿ ವಿಲ್‌ ರಚಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ