logo
ಕನ್ನಡ ಸುದ್ದಿ  /  ಜೀವನಶೈಲಿ  /  Pan Aadhaar Link: ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡಿಲ್ವ, ನಿಮಗೆ ಆಗುವ 10 ಪ್ರಮುಖ ನಷ್ಟಗಳೇನೆಂದು ತಿಳಿಯಿರಿ

PAN Aadhaar Link: ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡಿಲ್ವ, ನಿಮಗೆ ಆಗುವ 10 ಪ್ರಮುಖ ನಷ್ಟಗಳೇನೆಂದು ತಿಳಿಯಿರಿ

Praveen Chandra B HT Kannada

Jul 09, 2023 07:00 AM IST

google News

ಪ್ಯಾನ್‌ ಕಾರ್ಡ್‌ ಆಧಾರ್‌ ಕಾರ್ಡ್‌ ಲಿಂಕ್‌ ಮಾಡದೆ ಇದ್ದರೆ ಆಗುವ ತೊಂದರೆಗಳು

  • PAN-Aadhaar linking deadline expired: ಪಾನ್‌ ಆಧಾರ್‌ ಲಿಂಕ್‌ ಮಾಡುವ ಕೊನೆಯ ದಿನಾಂಕವು ಜೂನ್‌ 30 2023ಕ್ಕೆ ಮುಕ್ತಾಯವಾಗಿದೆ. ಇನ್ನೂ ಆಧಾರ್‌ ಕಾರ್ಡ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡದೆ ಇರುವವರು ಇರಬಹುದು. ಇದರ ಪ್ರಕಾರ ಜುಲೈ 1 2023ರಿಂದ ಜಾರಿಗೆ ಬರುವಂತೆ ಪಾನ್‌ ಕಾರ್ಡ್‌ ನಿಷ್ಕ್ರೀಯವಾಗುತ್ತದೆ.

ಪ್ಯಾನ್‌ ಕಾರ್ಡ್‌ ಆಧಾರ್‌ ಕಾರ್ಡ್‌ ಲಿಂಕ್‌ ಮಾಡದೆ ಇದ್ದರೆ ಆಗುವ ತೊಂದರೆಗಳು
ಪ್ಯಾನ್‌ ಕಾರ್ಡ್‌ ಆಧಾರ್‌ ಕಾರ್ಡ್‌ ಲಿಂಕ್‌ ಮಾಡದೆ ಇದ್ದರೆ ಆಗುವ ತೊಂದರೆಗಳು

ಬೆಂಗಳೂರು: ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಬೇಕೆಂದು ಹಲವು ವರ್ಷಗಳಿಂದ ಸರಕಾರ ಹೇಳುತ್ತ ಬಂದಿದೆ. ಇದಕ್ಕೆ ಹಲವು ಗಡುವು ನೀಡಲಾಗಿತ್ತು. ಈ ಜೂನ್‌ 30ರವರೆಗೆ 1 ಸಾವಿರ ರೂ. ದಂಡ ಪಾವತಿಯ ಜತೆಗೆ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಇಷ್ಟಾಗಿಯೂ ಕೆಲವು ತಾಂತ್ರಿಕ ಕಾರಣಗಳಿಂದ ಅಥವಾ ಇತರೆ ಕಾರಣಗಳಿಂದ ನೀವು ಪಾನ್‌ ಆಧಾರ್‌ ಕಾರ್ಡ್‌ ಲಿಂಕ್‌ ಮಾಡದೆ ಇರಬಹುದು.ಬ್ಯಾಂಕ್‌, ಡಿಮ್ಯಾಟ್‌ ಖಾತೆ, ಬ್ಯಾಂಕ್‌ ಖಾತೆಯಲ್ಲಿ ನಗದು ಠೇವಣಿ ಇಡುವುದು ಸೇರಿದಂತೆ ಹತ್ತು ಹಲವು ಕಾರ್ಯಗಳಿಗೆ ಪಾನ್‌ ಕಾರ್ಡ್‌ ಅವಶ್ಯವಾಗಿದೆ.

"ಪಾನ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡದೆ ಇರುವುದರಿಂದ ಹಲವು ತೊಂದರೆಗಳಾಗುತ್ತವೆ. ದೊಡ್ಡ ಮೊತ್ತ ಠೇವಣಿಯಿಡಲು ಅಥವಾ ಹಣ ವಿತ್‌ಡ್ರಾ ಮಾಡಲು ಸಮಸ್ಯೆಯಾಗಬಹುದು. ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ಪಡೆಯಲು ತೊಂದರೆಯಾಗಬಹುದು. ಡಿಮ್ಯಾಟ್‌ ಖಾತೆ ತೆರೆಯಲು ಪಾನ್‌ ಕಾರ್ಡ್‌ ಅತ್ಯಂತ ಅಗತ್ಯವಾಗಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಪಾನ್‌ ಹೊಂದಿರಲೇಬೇಕು" ಎಂದು ಪಿನ್‌ಮ್ಯಾಪ್‌ನ ಸಿಇಒ ಮತ್ತು ಸ್ಥಾಪಕರಾದ ಕುಮಾರ್‌ ಬಿನಿತ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆದಾಯ ತೆರಿಗೆ ಇಲಾಖೆಯ ಪ್ರಕಾರ ಪಾನ್‌ ಕಾರ್ಡ್‌ಗೆ ಆಧಾರ್‌ ಕಾರ್ಡ್‌ ಲಿಂಕ್‌ ಆಗದೆ ಇದ್ದರೆ ಪ್ರಮುಖವಾಗಿ ಹತ್ತು ನಷ್ಟಗಳು ಉಂಟಾಗಲಿವೆ. ಅದರ ವಿವರ ಇಲ್ಲಿದೆ.

  1. ಆದಾಯ ತೆರಿಗೆ ರಿಫಂಡ್‌ ಪ್ರಕ್ರಿಯೆ ಆಗದು" ತೆರಿಗೆದಾರರು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಬಹುದು. ಆದರೆ, ರಿಫಂಡ್‌ ಕ್ಲೇಮು ಮಾಡಲು ಸಾಧ್ಯವಿಲ್ಲ.
  2. ಟಿಡಿಎಸ್‌, ಟಿಸಿಎಸ್‌: ಟಿಡಿಎಸ್‌ ಮತ್ತು ಟಿಸಿಎಸ್‌ ಅತ್ಯಧಿಕ ಮೊತ್ತ ಕಡಿತವಾಗಲಿದೆ.
  3. ಮ್ಯೂಚುಯಲ್‌ ಪಂಡ್‌ ಮೇಲೆ ಪರಿಣಾಮ ಬೀರಲಿದೆ: ಮ್ಯೂಚುಯಲ್‌ ಫಂಡ್‌ ವ್ಯವಹಾರಕ್ಕೆ ಪಾನ್‌ ಹೊಂದಿರುವುದು ಕಡ್ಡಾಯ. 50 ಸಾವಿರ ರೂಗಿMತ ಹೆಚ್ಚು ಪಾವತಿ ಮಾಡಲು ಸಾಧ್ಯವಾಗದು.
  4. ಷೇರು ಹೂಡಿಕೆ ಮೇಲೆ ಪರಿಣಾಮ: ಯಾವುದೇ ಕಂಪನಿಯ ಷೇರನ್ನು ಖರೀದಿಸಲು ಸಾಧ್ಯವಾಗದು. ಒಂದು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಷೇರುಗಳನ್ನು ಹೊಂದಿರಲು ಸಾಧ್ಯವಿಲ್ಲ.
  5. ವಾಹನ ಖರೀದಿ ಅಥವಾ ಮಾರಾಟ ಸಾಧ್ಯವಿಲ್ಲ: ನಿಮ್ಮಲ್ಲಿ ಪ್ಯಾನ್‌ ಕಾರ್ಡ್‌ ಇಲ್ಲದೆ ಇದ್ದರೆ ಕಾರು ಬೈಕು ಇತ್ಯಾದಿ ವಾಹನಗಳ ಖರೀದಿ ಸಾಧ್ಯವಿಲ್ಲ. ನಿಮ್ಮಲ್ಲಿರುವ ವಾಹನವನ್ನು ಮಾರಾಟ ಮಾಡಲು ಸಾಧ್ಯವಾಗದು.
  6. ಬ್ಯಾಂಕ್‌ ಖಾತೆ ತೆರೆಯಲಾಗದು: ಸಾಮಾನ್ಯ ಉಳಿತಾಯ ಖಾತೆ ಹೊರತುಪಡಿಸಿ ಬ್ಯಾಂಕಿಂಗ್‌ ಕಂಪನಿ ಅಥವಾ ಕಾರ್ಪೊರೇಟ್‌ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗದು.
  7. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಪರಿಣಾಮ: ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಪಡೆಯುವುದು ಸಾಧ್ಯವಾಗದು.
  8. ನಗದು ಠೇವಣಿ ಮತ್ತು ಪಾವತಿ: 50 ಸಾವಿರ ರೂಪಾಯಿಗಿಂತ ಹೆಚ್ಚು ಮೊತ್ತವನ್ನು ಬ್ಯಾಂಕ್‌ ಕಂಪನಿ ಅಥವಾ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. 50 ಸಾವಿರ ರೂ.ಗಿಂತ ಹೆಚ್ಚು ಮೊತ್ತವನ್ನು ಚೆಕ್‌ ಮೂಲಕ ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ.
  9. ವಿಮಾ ಪಾಲಿಸಿ: 50 ಸಾವಿರ ರೂ.ಗಿಂತ ಹೆಚ್ಚು ಮೊತ್ತವನ್ನು ಹಣಕಾಸು ವರ್ಷವೊಂದರಲ್ಲಿ ಜೀವ ವಿಮಾ ಕಂತು ಕಟ್ಟಲು ಸಾಧ್ಯವಿಲ್ಲ.
  10. ಸ್ಥಿರಾಸ್ಥಿ ಮಾರಾಟ ಅಥವಾ ಖರೀದಿ ಸಾಧ್ಯವಿಲ್ಲ: 10 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಸ್ಥಿರಾಸ್ಥಿ ಖರೀದಿ ಅಥವಾ ಮಾರಾಟ ಸಾಧ್ಯವಿಲ್ಲ. ಮನೆ ಅಥವಾ ನಿವೇಶನ ಖರೀದಿದಾರರಿಗೆ ಇದು ತೊಂದರೆ ಉಂಟು ಮಾಡಲಿದೆ.

ಇದನ್ನೂ ಓದಿ: Aadhaar-PAN link: ಆಧಾರ್‌ ಪಾನ್‌ ಜೋಡಣೆಗೆ ಹೆಲ್ಪ್‌ ಬೇಕು, ಆಧಾರನ್ನು ನಾವೇಕೆ ಜೋಡಿಸಬೇಕು? ಫೇಸ್‌ಬುಕ್‌ನಲ್ಲಿ ನಡಿತೀದೆ ಬಿಸಿಬಿಸಿ ಚರ್ಚೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ