logo
ಕನ್ನಡ ಸುದ್ದಿ  /  ಜೀವನಶೈಲಿ  /  ಬ್ಯಾಂಕ್‌ನಲ್ಲಿ ನಿಮ್ಮ ಸಮಸ್ಯೆ ಕೇಳೋರು ಇಲ್ವಾ, ಪರಿಹಾರ ಕಂಡುಕೊಳ್ಳಲು ದೂರು ದಾಖಲಿಸೋದು ಬಹಳ ಸುಲಭ

ಬ್ಯಾಂಕ್‌ನಲ್ಲಿ ನಿಮ್ಮ ಸಮಸ್ಯೆ ಕೇಳೋರು ಇಲ್ವಾ, ಪರಿಹಾರ ಕಂಡುಕೊಳ್ಳಲು ದೂರು ದಾಖಲಿಸೋದು ಬಹಳ ಸುಲಭ

Umesh Kumar S HT Kannada

Oct 02, 2024 08:55 AM IST

google News

ಬ್ಯಾಂಕ್‌ನಲ್ಲಿ ನಿಮ್ಮ ಸಮಸ್ಯೆ ಕೇಳೋರು ಇಲ್ವಾ, ಪರಿಹಾರ ಕಂಡುಕೊಳ್ಳಲು ದೂರು ದಾಖಲಿಸುವುದಕ್ಕೆ ಅನುಸರಿಸಬೇಕಾದ ಹಂತಗಳ ವಿವರ. (ಸಾಂಕೇತಿಕ ಚಿತ್ರ)

  • ಬ್ಯಾಂಕ್‌ಗೆ ಹೋದಾಗ ಅಲ್ಲಿ ಉದ್ಯೋಗಿಯಿಂದ ಸಮಸ್ಯೆ ಎದುರಾಯಿತಾ, ನೀವು ಕನ್ನಡದಲ್ಲಿ ಮಾತನಾಡಿದರೆ ಅವರು ಸ್ಪಂದಿಸುತ್ತಿಲ್ವಾ, ಒಟ್ಟಿನಲ್ಲಿ ಬ್ಯಾಂಕ್‌ನಲ್ಲಿ ನಿಮ್ಮ ಸಮಸ್ಯೆ ಕೇಳೋರು ಇಲ್ವಾ, ಪರಿಹಾರ ಕಂಡುಕೊಳ್ಳಲು ದೂರು ದಾಖಲಿಸೋದು ಬಹಳ ಸುಲಭ. ಅದಕ್ಕಿರುವ ಪರಿಹಾರೋಪಾಯ ಇಲ್ಲಿದೆ.

ಬ್ಯಾಂಕ್‌ನಲ್ಲಿ ನಿಮ್ಮ ಸಮಸ್ಯೆ ಕೇಳೋರು ಇಲ್ವಾ, ಪರಿಹಾರ ಕಂಡುಕೊಳ್ಳಲು ದೂರು ದಾಖಲಿಸುವುದಕ್ಕೆ ಅನುಸರಿಸಬೇಕಾದ ಹಂತಗಳ ವಿವರ. (ಸಾಂಕೇತಿಕ ಚಿತ್ರ)
ಬ್ಯಾಂಕ್‌ನಲ್ಲಿ ನಿಮ್ಮ ಸಮಸ್ಯೆ ಕೇಳೋರು ಇಲ್ವಾ, ಪರಿಹಾರ ಕಂಡುಕೊಳ್ಳಲು ದೂರು ದಾಖಲಿಸುವುದಕ್ಕೆ ಅನುಸರಿಸಬೇಕಾದ ಹಂತಗಳ ವಿವರ. (ಸಾಂಕೇತಿಕ ಚಿತ್ರ) (LM)

ಬ್ಯಾಂಕ್‌ನಲ್ಲಿ ನಿಮಗೆ ಸಮಸ್ಯೆ ಆಗಿದೆಯಾ? - ಹೀಗೆ ಯಾರಿಗಾದರೂ ಕೇಳಿ ನೋಡಿ ಹತ್ತು ಹಲವು ಸಮಸ್ಯೆಗಳನ್ನು ಹೇಳ್ತಾರೆ. ಸುಮ್ನೇ ಒಮ್ಮೆ ಸಮಸ್ಯೆಗಳ ಕಡೆಗೆ ಗಮನ ಹರಿಸೋಣ. ಡಿಡಿ ತಗೊಳ್ಳಬೇಕು ಅಂತ ಹೋದೆ, ಆ ಬ್ಯಾಂಕ್‌ನಲ್ಲಿ ಫಾರಂ ಫಿಲ್‌ ಮಾಡಿಕೊಟ್ಟು ಹೋಗಿ, ಮಧ್ಯಾಹ್ನ ನಂತರ ಬನ್ನಿ ಅಂತ ಹೇಳಿದ್ರು. ಪಾಸ್ ಬುಕ್ ಅಪ್ಡೇಟ್ ಮಾಡೋದಕ್ಕೆ ಹೋದಾಗ ಈಗ ಆಗಲ್ಲ ಅಂದ್ರು, ಪಿಂಚಣಿ ಬಂದಿದೆಯಾ ಅಂತ ನೋಡುವಂತೆ ಕೇಳಿದೆ ಬ್ಯಾಂಕ್ ಉದ್ಯೋಗಿ ಒರಟಾಗಿ ವರ್ತಿಸಿದರು, ಸಾಲದ ಬಗ್ಗೆ ಮಾಹಿತಿ ಕೇಳಿದೆ, ನನಗೆ ಗೊತ್ತಿಲ್ಲದ ಹಿಂದಿ, ಇಂಗ್ಲಿಷ್‌ನಲ್ಲಿ ಮಾಹಿತಿ ಕೊಟ್ರು, ಅದು ನನಗೆ ಅರ್ಥವೇ ಆಗಲಿಲ್ಲ.. ಹೀಗೆ ಹಲವಾರು ಸಮಸ್ಯೆಗಳು. ಇವಕ್ಕೆಲ್ಲ ಪರಿಹಾರ ಏನು? ಯಾರಿಗೆ ದೂರು ಕೊಡೋದು ಅಂತ ಆಲೋಚಿಸ್ತಾ ಇದ್ದೀರಾ? ಈ ಸಮಸ್ಯೆಗಳನ್ನೆಲ್ಲ ಬ್ಯಾಂಕ್‌ ಮಟ್ಟದಲ್ಲೇ ಪರಿಹರಿಸ್ತಾರೆ. ಪರಿಹಾರ ಆಗಿಲ್ಲ ಅಂದ್ರೂ ಚುರುಕು ಮುಟ್ಟಿಸುವ ಅಸ್ತ್ರ ಗ್ರಾಹಕರ ಕೈಯಲ್ಲೇ ಇದೆ.

ಬ್ಯಾಂಕ್‌ನಲ್ಲಿ ನಿಮ್ಮ ಸಮಸ್ಯೆ ಕೇಳೋರಿಲ್ವಾ, ಹಾಗಾದ್ರೆ ಹೀಗೆ ಮಾಡಿ

1) ಬ್ಯಾಂಕ್ ಉದ್ಯೋಗಿ ನಿಮ್ಮ ಬ್ಯಾಂಕಿಂಗ್ ಅಗತ್ಯಗಳನ್ನು, ಸೇವೆಯನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದರೆ ಮೊದಲು ಬ್ಯಾಂಕ್‌ ಶಾಖೆಯ ಮ್ಯಾನೇಜರ್‌ ಅವರನ್ನು ಸಂಪರ್ಕಿಸಿ. ಅವರಿಗೆ ವಿವರ ತಿಳಿಸಿ.

2) ಬ್ಯಾಂಕ್ ಮ್ಯಾನೇಜರ್ ಕೂಡ ನಿಮ್ಮ ಸಮಸ್ಯೆ ಆಲಿಸಿ, ಪರಿಹಾರ ಒದಗಿಸಿಲ್ಲ ಎಂದಾದರೆ, ಆಯಾ ಬ್ಯಾಂಕ್‌ನ ಗ್ರಾಹಕರ ಕುಂದುಕೊರತೆ ಪರಿಹಾರ ಕೇಂದ್ರವನ್ನು ಸಂಪರ್ಕಿಸುವಾಗಲೇ ಬ್ಯಾಂಕ್‌ನ ಚೇರ್‌ಮನ್ ಮತ್ತು ಎಂಡಿಗೆ ಅದರ ಪ್ರತಿಯನ್ನು ರವಾನಿಸಿ. ಇದಲ್ಲದೆ, ದೂರು ಸಲ್ಲಿಸಲು ಬ್ಯಾಂಕಿನ ಟೋಲ್ ಫ್ರೀ ಸಂಖ್ಯೆ ಕರೆ ಮಾಡುವ ಅಥವಾ ಬ್ಯಾಂಕಿನ ಆನ್‌ಲೈನ್ ಪೋರ್ಟಲ್‌ನಲ್ಲಿ ದೂರು ಸಲ್ಲಿಸುವ ಆಯ್ಕೆಯೂ ಇದೆ.

3) ನಂತರದ ಹಂತದಲ್ಲಿ ಆರ್‌ಬಿಐನ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಿ.

ಇದು ಕಾನೂನು ಪ್ರಕಾರ ಸಾಗುವ ದಾರಿ. ಆದರೆ, ಗ್ರಾಹಕ ಎಂಬ ನೆಲೆಯಲ್ಲಿ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ನೇರವಾಗಿ ದೂರು ಸಲ್ಲಿಸಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಆರ್‌ಬಿಐನ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸುವುದು ಹೀಗೆ

ಆರ್‌ಬಿಐನ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಲು ಆನ್‌ಲೈನ್‌ ವೇದಿಕೆಯನ್ನು ಬಳಸಹುದು.

ನಿಮ್ಮ ದೂರು ಸಲ್ಲಿಸಲು, ನೀವು https://cms.rbi.org.in ವೆಬ್‌ಸೈಟ್‌ಗೆ ಲಾಗಿನ್ ಮಾಡಬೇಕಾಗುತ್ತದೆ.

ನಂತರ ಮುಖಪುಟ ತೆರೆದಾಗ ಅಲ್ಲಿ ನೀಡಿರುವ ಫೈಲ್ ಎ ಕಂಪ್ಲೇಂಟ್ ಆಯ್ಕೆಯನ್ನು ಕ್ಲಿಕ್ ಮಾಡಿ.

CRPC@rbi.org.in ಗೆ ಇಮೇಲ್ ಕಳುಹಿಸುವ ಮೂಲಕ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು.

ಬ್ಯಾಂಕ್ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಆರ್‌ಬಿಐ ಕೊಟ್ಟಿರುವ ಟೋಲ್ ಫ್ರೀ ಸಂಖ್ಯೆ 14448 ಗೂ ಕರೆ ಮಾಡಿ ದೂರು ಸಲ್ಲಿಸಬಹುದು.

ನಿಮ್ಮ ಬ್ಯಾಂಕ್‌ನಲ್ಲಿ ಕನ್ನಡ ಭಾಷೆಯಲ್ಲೇ ವ್ಯವಹರಿಸುವ ಸಿಬ್ಬಂದಿ ಬೇಕಾದರೂ ಗ್ರಾಹಕರು ಇದೇ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಬ್ಯಾಂಕಿಂಗ್ ವಹಿವಾಟು ಪ್ರಾದೇಶಿಕವಾಗಿ ನಡೆಯುವ ಕಾರಣ, ಬ್ಯಾಂಕುಗಳು ಕೂಡ ಈ ಬಗ್ಗೆ ದೂರುಗಳು ದಾಖಲಾದಾಗ ಬೇಗ ಸ್ಪಂದಿಸುತ್ತವೆ ಮತ್ತು ಕನ್ನಡ ಭಾಷೆ ಬಲ್ಲವರನ್ನೇ ಆಯಾ ಶಾಖೆಗೆ ನಿಯೋಜಿಸುತ್ತವೆ ಕೂಡ. ಬ್ಯಾಂಕಿಂಗ್ ಸೇವೆಗಳ ನೂನ್ಯತೆಯನ್ನು ಬ್ಯಾಂಕ್‌ಗಳೇ ಪರಿಹರಿಸುತ್ತವೆ ಮತ್ತು ಅವುಗಳೆ ಪರಿಹರಿಸಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಅಷ್ಟಾಗಿ ನಡೆದಿಲ್ಲ. ಹೀಗಾಗಿ ಅನೇಕರು ತಮ್ಮ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಬೇಕಷ್ಟೆ ಎಂದು ಕೈಚೆಲ್ಲಿ ಕುಳಿತಿರುವ ಉದಾಹರಣೆಗಳಿವೆ. ಆದರೆ ಇನ್ನು ಕೈಚೆಲ್ಲಿ ಕುಳಿತಿರಬೇಕಾದ್ದಿಲ್ಲ. ನೇರವಾಗಿ ಆರ್‌ಬಿಐ ಕೊಟ್ಟಿರುವ ಟೋಲ್ ಫ್ರೀ ಸಂಖ್ಯೆ 14448 ಗೂ ಕರೆ ಮಾಡಿ ದೂರು ಸಲ್ಲಿಸಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ