logo
ಕನ್ನಡ ಸುದ್ದಿ  /  ಜೀವನಶೈಲಿ  /  ಫೋನ್‌ಪೇಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನ ಆ್ಯಡ್ ಮಾಡಿಕೊಳ್ಳಬೇಕಾ; ಈ ಸುಲಭ ವಿಧಾನ ಅನುಸರಿಸಿ

ಫೋನ್‌ಪೇಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನ ಆ್ಯಡ್ ಮಾಡಿಕೊಳ್ಳಬೇಕಾ; ಈ ಸುಲಭ ವಿಧಾನ ಅನುಸರಿಸಿ

Raghavendra M Y HT Kannada

Feb 28, 2024 11:08 AM IST

google News

The digital payment service PhonePe (Bloomberg)

    • PhonePe: ನಿಮ್ಮ ಫೋನ್‌ಪೇ ಆ್ಯಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಆ್ಯಡ್ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನ ಇಲ್ಲಿ ತಿಳಿಯಿರಿ.
The digital payment service PhonePe (Bloomberg)
The digital payment service PhonePe (Bloomberg) (HT)

ಬೆಂಗಳೂರು: ಡಿಜಿಟಲ್ ಯುಗದಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳನ್ನು ಆನ್‌ಲೈನ್ ಪೇಮೆಂಟ್‌ಗಳ ಮೂಲಕವೇ ಮಾಡಬಹುದು. ಇದಕ್ಕೆ ಯುಪಿಐ ಐಡಿ ಇರಬೇಕಾಗುತ್ತದೆ. ಪ್ರವಾಸ, ಹೋಟೆಲ್, ಶಾಂಪಿಂಗ್, ಮೊಬೈಲ್ ರಿಚಾರ್ಜ್, ಬಿಲ್‌ಗಳ ಪಾವತಿ ಹಾಗೂ ಬ್ಯಾಂಕ್ ವಹಿವಾಟುಗಳನ್ನು ಮೊಬೈಲ್ ಆ್ಯಪ್‌ಗಳ ಮೂಲಕವೇ ನಡೆಸಬಹುದು. ಗೂಗಲ್ ಪೇ, ಫೋನ್ ಪೇ, ಯುಪಿಐ ಪೇಮೆಂಟ್‌ನಂತಹ ಹತ್ತಾರು ಆ್ಯಪ್‌ಗಳು ಇವತ್ತು ಬೆರಳತುದಿಯಲ್ಲಿವೆ.

ನೀವಾದರೂ ಫೋನ್‌ಪೇ ಆ್ಯಪ್ ಹೊಂದಿದ್ದು, ಇದರಲ್ಲಿ ಒಂದಕ್ಕಿಂತ ಬ್ಯಾಂಕ್‌ ಖಾತೆಗಿಂತ ಹೆಚ್ಚಿನ ಖಾತೆಗಳನ್ನು ಈ ಆ್ಯಪ್‌ನಲ್ಲಿ ಆ್ಯಡ್ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದರೆ ನಿಮಗಾಗಿ ಈ ಮಾಹಿತಿಯನ್ನು ನೀಡಲಾಗುತ್ತಿದೆ. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸುವ ಮೂಲಕ ಅದಕ್ಕೊಂದು ಯುಪಿಐ ಐಡಿಯನ್ನು ಪಡೆಯಬಹುದಾಗಿದೆ.

ಫೋನ್‌ಪೇನಲ್ಲಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಸೇರಿಸಿಕೊಳ್ಳುವುದು ಹೇಗೆ ಅನ್ನೋದರ ವಿವರ ಇಲ್ಲಿದೆ

  • ಹಂತ 1: ಮೊದಲು ಫೋನ್‌ಪೇ ಆ್ಯಪ್ ಓಪನ್ ಮಾಡಿ
  • ಹಂತ 2: ಫೋನ್‌ಪೇ ಮುಖಪುಟದಲ್ಲಿರುವ ಹಣವರ್ಗಾವಣೆ ವಿಭಾಗದಲ್ಲಿ 'ಟು ಸೆಲ್ಫ್ ಅಕೌಂಟ್' ಮೇಲೆ ಕ್ಲಿಕ್ ಮಾಡಿ
  • ಹಂತ 3: 'ಟು ಸೆಲ್ಫ್ ಅಕೌಂಟ್' ಪೇಜ್‌ನಲ್ಲಿ ಕೆಳಭಾಗದಲ್ಲಿ ಆ್ಯಡ್ ನ್ಯೂ ಬ್ಯಾಂಕ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ
  • ಹಂತ 4: ಈಗಾಗಲೇ ನೋಂದಾಯಿತ ಮೊಬೈಲ್ ಸಂಖ್ಯೆಯ ಜೊತೆಗೆ ಯಾವ ಬ್ಯಾಂಕ್ ಖಾತೆಯನ್ನು ಆ್ಯಡ್ ಮಾಡಬೇಕು ಎಂಬುದನ್ನ ಆಯ್ಕೆ ಮಾಡಿಕೊಳ್ಳಿ
  • ಹಂತ 5: ಬ್ಯಾಂಕ್ ಖಾತೆ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರುವ ಖಾತೆಗಳ ವಿವರ ಪರದೆ ಮೇಲೆ ಕಾಣಿಸುತ್ತದೆ
  • ಹಂತ 6: ಬ್ಯಾಂಕ್ ಹೆಸರು, ಬ್ರಾಂಚ್ ಹಾಗೂ ನಿಮ್ಮ ಹೆಸರಿನೊಂದಿಗೆ ಕಾಣುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ ಪ್ರೊಸೀಡ್ ಟು ಆ್ಯಡ್ ಮೇಲೆ ಕ್ಲಿಕ್ ಮಾಡಿ
  • ಹಂತ 7: ನಿಮ್ಮ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್ ವಿವರಗಳನ್ನು ನಮೂದಿಸಿ

ಅಂತಿವಾಗಿ ಮೊಬೈಲ್ ಗೆ ಬರುವ ಒಟಿಪಿಯನ್ನು ನಮೂದಿಸಿ ನಿಮ್ಮ ಯುಪಿಐ ಪಿನ್ ಪಡೆಯಿರಿ

ಯುಪಿಐ ಪೇಮೆಂಟ್ ಸೇರಿದಂತೆ ಕೆಲವೊಂದು ಆ್ಯಪ್‌ ನೀವು ಮಾಡುವ ಆನ್‌ಲೈನ್ ಡಿಜಿಟಲ್ ವಹಿವಾಟುಗಳು ಮೇಲೆ ಸಾಕಷ್ಟು ಆಫರ್‌ಗಳನ್ನು ಸೀಮಿತ ದಿನಗಳಿಗೆ ನೀಡುತ್ತವೆ. ಪ್ರತಿಯಾಂದು ವಹಿವಾಟಿಗೂ ಇಂತಿಷ್ಟು ಹಣ ಹಾಗೂ ವೋಚರ್‌ಗಳನ್ನು ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಫೋನ್‌ಪೇ ಪ್ರತಿ ಮೊಬೈಲ್ ರಿಚಾರ್ಜ್‌ಗೆ 2 ರೂಪಾಯಿ ಶುಲ್ಕವನ್ನು ವಿಧಿಸಿದೆ. ಇದು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್‌ಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಆನ್‌ಲೈನ್ ಪಾವತಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ನಿಮ್ಮ ಖಾತೆಯಲ್ಲಿನ ಹಣವನ್ನು ಕದಿಯುವ ಸಲುವಾಗಿ ಆನ್‌ಲೈನ್ ವಂಚಕರು ಸಂಬಂಧಪಟ್ಟ ಅಧಿಕಾರಿಗಳೆಂದು ಹೇಳಿಕೊಂಡು ನಿಮ್ಮ ಒಟಿಪಿ ಪಡೆದು ವಂಚನೆ ಮಾಡುತ್ತಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ