Chanakya Neeti: ಪತ್ನಿಯನ್ನು ಸಂತೋಷಪಡಿಸಲು ಪತಿ ಏನು ಮಾಡಬೇಕು; ಮಧುರ ದಾಂಪತ್ಯಕ್ಕೆ ಚಾಣಕ್ಯ ನೀತಿ
Feb 15, 2024 08:45 AM IST
ಪತ್ನಿಯನ್ನು ಸಂತೋಷಪಡಿಸಲು ಪತಿ ಏನು ಮಾಡಬೇಕು
- Chanakya Neeti: ಚಾಣಕ್ಯ ನೀತಿ ಪ್ರಕಾರ, ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ಸಂತೋಷವಾಗಿದ್ದರೆ ಮಾತ್ರ ಆ ಸಂಬಂಧ ಗಟ್ಟಿಯಾಗುತ್ತದೆ. ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಪತಿ ಮತ್ತು ಪತ್ನಿಯರು ಸಂತೋಷವಾಗಿರಲು ಕೆಲವು ಸೂತ್ರಗಳನ್ನು ನೀಡಿದ್ದಾರೆ. ಇದನ್ನು ಪಾಲಿಸಿದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.
ಮಹಾನ್ ಗುರು ಚಾಣಕ್ಯನು ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯರು ಹೇಳಿದ ಪ್ರತಿಯೊಂದು ವಿಷಯವು ವ್ಯಕ್ತಿಯ ಬದುಕಿನೊಂದಿಗೆ ನೇರ ಸಂಬಂಧ ಹೊಂದಿವೆ. ಚಾಣಕ್ಯ ಹೇಳಿದ ನೀತಿಪಾಠವನ್ನು ಅನುಸರಿಸಿದರೆ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಬದುಕಬಹುದು. ಸಂಬಂಧಗಳ ಬಗೆಗೆ ಹಲವಾರು ಅಂಶಗಳನ್ನು ಹೇಳಿರುವ ಚಾಣಕ್ಯನು, ದಾಂಪತ್ಯ ಜೀವನದಲ್ಲಿ ಕ್ಷೇಮವಾಗಿರಲು ನೀತಿಗಳನ್ನು ಹೇಳಿದ್ದಾರೆ. ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಾಗ ಮಾತ್ರ ಜೀವನ ಸುಖಕರವಾಗಿರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.
ಇಬ್ಬರ ನಡುವೆ ಒಗ್ಗಟ್ಟು ಇರಬೇಕು
ಪತಿ-ಪತ್ನಿಯರ ನಡುವಿನ ಮಧುರ ಬಾಂಧವ್ಯವು ಗಟ್ಟಿಯಾಗಿದ್ದರೆ ಕುಟುಂಬದಲ್ಲಿ ಸುಖ ಮತ್ತು ಶಾಂತಿ ನೆಲೆಸಿರುತ್ತದೆ. ದಂಪತಿಗಳ ನಡುವೆ ಒಗ್ಗಟ್ಟು ಇಲ್ಲದಿದ್ದರೆ, ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಎಂಬ ನಂಬಿಕೆ ಇದೆ. ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನದಲ್ಲಿ ಜಗಳ ಆಗಬಾರದೆಂದು ಬಯಸುತ್ತಾರೆ. ಈ ಕುರಿತು ಚಾಣಕ್ಯನ ಕೆಲವು ಸಲಹೆಗಳು ನಿಮಗೆ ತುಂಬಾ ಉಪಯುಕ್ತವಾಗುತ್ತವೆ.
ಸಂಬಂಧದಲ್ಲಿ ಪ್ರಾಮಾಣಿಕತೆ ಮುಖ್ಯ
ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಸಂಬಂಧದಲ್ಲಿ ಪ್ರಾಮಾಣಿಕತೆ ತುಂಬಾ ಮುಖ್ಯ. ಸಂಗಾತಿಯೊಂದಿಗೆ ಪ್ರಾಮಾಣಿಕರಾಗಿರುವ ಜನರು ತಮ್ಮ ಸಂಬಂಧವನ್ನು ಎಂದಿಗೂ ಮುರಿಯುವುದಿಲ್ಲ. ಅಲ್ಲಿ ಪರಸ್ಪರ ನಂಬಿಕೆ ಇರುತ್ತದೆ. ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರಲು ಪ್ರಾಮಾಣಿಕವಾಗಿರುವುದು ಮುಖ್ಯ.
ಇದನ್ನೂ ಓದಿ | Chanakya Niti: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ಐದು ರೀತಿಯ ಸ್ನೇಹಿತರಿಂದ ದೂರವಿರಿ; ಚಾಣಕ್ಯ ನೀತಿ
ಪರಸ್ಪರ ಗೌರವ ಕೊಡಬೇಕು
ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಹೀಗೆ ಹೇಳುತ್ತಾನೆ. ಯಾರು ಯಾವಾಗಲೂ ತನ್ನ ಸಂಗಾತಿಯನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆಯೋ, ಆ ಸಂಬಂಧ ಗಟ್ಟಿಯಾಗಿರುತ್ತದೆ. ಅಂಥ ವ್ಯಕ್ತಿ ಕೂಡಾ ಪ್ರತಿಯಾಗಿ ಗೌರವ ಪಡೆಯುತ್ತಾನೆ. ಅವರ ಜೀವನ ಯಾವಾಗಲೂ ಸಂತೋಷದಿಂದ ಕೂಡಿರುತ್ತದೆ.
ಕಾಳಜಿ ಇರಲಿ
ಸಂಗಾತಿಯೊಂದಿಗೆ ಕಾಳಜಿಯಿಂದ ನಡೆದುಕೊಂಡರೆ, ಆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಏಕೆಂದರೆ ಪತ್ನಿಯು ಯಾವಾಗಲೂ ತನ್ನ ಪತಿಯಲ್ಲಿ ತಂದೆಯನ್ನು ಕಾಣುತ್ತಾಳೆ. ತಂದೆ ತೋರುವ ಕಾಳಜಿಯಂತೆ ಪತಿ ಕೂಡಾ ತನ್ನನ್ನು ರಕ್ಷಿಸಬೇಕೆಂದು ನಿರೀಕ್ಷಿಸುತ್ತಾಳೆ.
ಸ್ನೇಹಿತರಾಗಿರಾಗಿರಿ
ಚಾಣಕ್ಯನ ಪ್ರಕಾರ ಪತಿ-ಪತ್ನಿಯರು ಸ್ನೇಹಿತರಂತೆ ಆತ್ಮೀಯರಾಗಿ ಬದುಕಬೇಕು. ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಂಡು ನೆರವಾಗಬೇಕು. ಹೀಗೆ ಮಾಡುವುದರಿಂದ ಪತಿ ಪತ್ನಿಯರ ಬಾಂಧವ್ಯ ಗಟ್ಟಿಯಾಗುತ್ತದೆ.
ಇದನ್ನೂ ಓದಿ | ಯಶಸ್ವಿ ಜೀವನ ನಿಮ್ಮದಾಗಲು ಈ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ; ಚಾಣಕ್ಯ ನೀತಿ
ದೈಹಿಕ ತೃಪ್ತಿ ಅಗತ್ಯ
ಚಾಣಕ್ಯ ನೀತಿಯ ಪ್ರಕಾರ, ಸಂತೋಷದ ದಾಂಪತ್ಯ ಜೀವನಕ್ಕೆ ದೈಹಿಕ ಮತ್ತು ಮಾನಸಿಕ ನೆಮ್ಮದಿ ಬಹಳ ಮುಖ್ಯ. ಇದರೊಂದಿಗೆ ದೈಹಿಕ ತೃಪ್ತಿಯೂ ದಾಂಪತ್ಯ ಜೀವನದ ಸುಖದ ಗುಟ್ಟು. ನಿಮ್ಮ ಸಂಗಾತಿಯ ಮಾನಸಿಕ ಮತ್ತು ದೈಹಿಕ ಸಂತೋಷದ ಬಗ್ಗೆಯೂ ನೀವು ಗಮನ ಹರಿಸಬೇಕು.
ರಹಸ್ಯಗಳು ಹೊರ ಹೋಗಬಾರದು
ಮನೆಯ ವಿಚಾರವನ್ನು ಮನೆಯೊಳಗೆ ಬಿಟ್ಟುಬಿಡಬೇಕು. ರಹಸ್ಯಗಳು ಮೂರನೇ ವ್ಯಕ್ತಿಯವರೆಗೆ ಹೋಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಸಂಬಂಧದೊಳಗೆ ಮೂರನೇ ವ್ಯಕ್ತಿ ಪ್ರವೇಶಿಸಿದರೆ, ಆ ಕುಟುಂಬ ಸಮಸ್ಯೆಯ ಸುಳಿಗೆ ಸಿಲುಕುತ್ತದೆ.
ಇದನ್ನೂ ಓದಿ | ಈ ಗುಣವಿರುವ ಮಹಿಳೆಯನ್ನು ಯಾವುದೇ ಪುರುಷ ಕಳೆದುಕೊಳ್ಳಬಾರದು; ಚಾಣಕ್ಯ ನೀತಿ
ಪ್ರತಿಸ್ಪರ್ಧಿಗಳಾಗಬೇಡಿ
ಚಾಣಕ್ಯನ ಪ್ರಕಾರ ಗಂಡ ಮತ್ತು ಹೆಂಡತಿ ಪರಸ್ಪರರ ಅಗತ್ಯಗಳನ್ನು ಪೂರೈಸಿಕೊಂಡು ಬದುಕಬೇಕು. ಪರಸ್ಪರ ಪ್ರತಿಸ್ಪರ್ಧಿಗಳಾಗಬಾರದು. ಗಂಡ ಮತ್ತು ಹೆಂಡತಿ ಒಂದೇ ಬಂಡಿಯ ಎರಡು ಚಕ್ರಗಳಂತೆ ಬದುಕಬೇಕು. ಏರಿಳಿತಗಳು ಇಲ್ಲದಂತೆ ಒಂದೇ ರೀತಿ ಸಾಗಬೇಕು. ಕೆಲಸದಲ್ಲಿ ಸ್ಪರ್ಧಿಗಳಾಗಿರಬಾರದು.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ