logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಬುದ್ಧಿವಂತರು ಈ ತಪ್ಪುಗಳನ್ನು ಎಂದಿಗೂ ಮಾಡಬಾರದು, ಇದರಿಂದ ವರ್ಚಸ್ಸಿಗೆ ಧಕ್ಕೆ ಉಂಟಾಗುವುದು ಖಂಡಿತ; ಚಾಣಕ್ಯ ನೀತಿ

Chanakya Niti: ಬುದ್ಧಿವಂತರು ಈ ತಪ್ಪುಗಳನ್ನು ಎಂದಿಗೂ ಮಾಡಬಾರದು, ಇದರಿಂದ ವರ್ಚಸ್ಸಿಗೆ ಧಕ್ಕೆ ಉಂಟಾಗುವುದು ಖಂಡಿತ; ಚಾಣಕ್ಯ ನೀತಿ

Reshma HT Kannada

Oct 27, 2023 06:30 AM IST

google News

ಚಾಣಕ್ಯ ನೀತಿ

    • ಆಚಾರ್ಯ ಚಾಣಕ್ಯರು ಬದುಕಿಗೆ ಗೆಲುವಿನ ಪಾಠಗಳನ್ನಷ್ಟೇ ಹೇಳಿಲ್ಲ. ಗೆಲುವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆಯೂ ವಿವರಿಸಿದ್ದಾರೆ. ಬುದ್ಧಿವಂತಿಕೆ ಎಲ್ಲರಲ್ಲೂ ಇರುವುದಿಲ್ಲ. ಆದರೆ ಬುದ್ಧಿವಂತರಾದವರು ಈ ತಪ್ಪುಗಳನ್ನು ಮಾಡುವುದರಿಂದ ಅವರ ವರ್ಚಸ್ಸಿಗೆ ಧಕ್ಕೆ ತಂದುಕೊಳ್ಳುವುದು ಖಂಡಿತ ಎಂದು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ.
ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಿಂದ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಅವರ ತಂತ್ರಗಳನ್ನು ಅನುಸರಿಸುವುದರಿಂದ ದೈನಂದಿನ ಜೀವನದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಚಾಣಕ್ಯರ ನೀತಿಗಳು ಯಶಸ್ಸಿಗೆ ರಾಮಬಾಣ. ಮಹಾನ್ ವಿದ್ವಾಂಸ ಮತ್ತು ರಾಜತಾಂತ್ರಿಕ ಪರಿಣತರಾದ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ.

ಚಾಣಕ್ಯರ ಪ್ರಕಾರ ನಾವು ಎಷ್ಟೇ ಬುದ್ಧಿವಂತರಾದರೂ ಈ ವಿಷಯಗಳಲ್ಲಿ ತಪ್ಪು ಮಾಡಿದರೆ ನಮ್ಮ ವರ್ಚಸ್ಸಿಗೆ ಧಕ್ಕೆ ಉಂಟಾಗುವುದು ಖಂಡಿತ. ಅವರು ಉಲ್ಲೇಖಿಸಿರುವ ವಿಚಾರಗಳು ಯಾವುವು ನೋಡಿ.

  • ಶಕ್ತಿಯುತ ಶತ್ರು ಮತ್ತು ದುರ್ಬಲ ಸ್ನೇಹಿತ ಯಾವಾಗಲೂ ದುಃಖವನ್ನು ಉಂಟುಮಾಡುತ್ತಾನೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಹಾಗಾಗಿ ಈ ಇಬ್ಬರಿಂದಲೂ ದೂರವಿರಬೇಕು.
  • ಚಾಣಕ್ಯರ ಪ್ರಕಾರ, ಎಲ್ಲಿ ಗೌರವವಿರುವುದಿಲ್ಲವೋ, ಎಲ್ಲಿ ಗಳಿಸುವ ಸಾಧನವಿಲ್ಲವೋ, ಅಲ್ಲಿ ಜ್ಞಾನಕ್ಕೆ ಅವಕಾಶವೂ ಇರುವುದಿಲ್ಲ. ಸ್ನೇಹಿತರಾಗಲಿ, ಸಂಬಂಧಿಕರಾಗಲಿ ನಿಮಗೆ ಬೆಲೆ ನೀಡಿಲ್ಲ ಎಂದರೆ ಅವರಿಂದ ದೂರವಿರುವುದು ಉತ್ತಮ. ಅಹಂಕಾರಿಗಳ ಸಂಘವೂ ಉಳಿತಲ್ಲ ಎನ್ನುತ್ತಾರೆ ಚಾಣಕ್ಯ. ಅಹಂಕಾರವು ಅಜ್ಞಾನದ ಪರಮಾವಧಿಯಾಗಿದೆ. ಹಾಗಾಗಿ ಅಹಂಕಾರಿಗಳ ಸಹವಾಸವೂ ಮಾಡಬಾರದು.
  • ಬುದ್ಧಿವಂತ ವ್ಯಕ್ತಿಯು ಎಂದಿಗೂ ಹಸಿವಿನಿಂದ ಬಳಲಬಾರದು. ಬುದ್ಧಿವಂತಿಕೆಯು ಅಜ್ಞಾನವನ್ನು ನಾಶಪಡಿಸುತ್ತದೆ ಮತ್ತು ಬುದ್ಧಿವಂತಿಕೆಯಿಂದ ದೊಡ್ಡ ಸಮಸ್ಯೆಗಳನ್ನು ಸುಲಭವಾಗಿ ಜಯಿಸಬಹುದು. ಹಸಿವು ಬುದ್ಧಿಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅದು ವ್ಯಕ್ತಿಯ ಚಿತ್ರಣವನ್ನು ಹಾಳು ಮಾಡುತ್ತದೆ. ಹಸಿವು ನಿಮ್ಮ ತಲೆ ಓಡದಂತೆ ಮಾಡುತ್ತದೆ. ಇದರಿಂದ ನಿಮ್ಮ ಬುದ್ಧಿವಂತಿಕೆ ಉಪಯೋಗಕ್ಕೆ ಬಾರದೇ ಇರಬಹುದು.
  • ಜೀವನದಲ್ಲಿ ಯಶಸ್ಸು ಸಾಧಿಸಲು ಚಾಣಕ್ಯ ಎರಡು ವಿಶೇಷ ಸೂತ್ರಗಳನ್ನು ನೀಡಿದ್ದಾನೆ. ಎರಡು ರೆಕ್ಕೆಗಳ ಸಹಾಯದಿಂದ ಪಕ್ಷಿಗಳು ಆಕಾಶದಲ್ಲಿ ಹಾರುವಂತೆ, ಮನುಷ್ಯನು ಸಹ ಕೆಲಸ ಮತ್ತು ಜ್ಞಾನವೆಂಬ ಎರಡು ರೆಕ್ಕೆಗಳ ಸಹಾಯದಿಂದ ಯಶಸ್ಸಿನ ಉತ್ತುಂಗಕ್ಕೆ ಹಾರಬಲ್ಲನು ಎಂದು ಚಾಣಕ್ಯ ನೀತಿ ಹೇಳುತ್ತದೆ.
  • ನೀವು ಸಂತೋಷವಾಗಿರಲು ಮತ್ತು ಯಶಸ್ವಿಯಾಗಲು ಬಯಸಿದರೆ, ಯಾವಾಗಲೂ ಸತ್ಯವನ್ನು ಮಾತನಾಡಿ. ಬುದ್ಧಿವಂತಿಕೆಯನ್ನು ಎಲ್ಲಿ, ಹೇಗೆ ಖರ್ಚು ಮಾಡಬೇಕು ಎಂಬುದು ನಿಮಗೆ ತಿಳಿದಿರಬೇಕು. ನಕಾರಾತ್ಮಕ ಆಲೋಚನೆಗಳಿಂದ ಸದಾ ದೂರವಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ನಕಾರಾತ್ಮಕ ಆಲೋಚನೆಗಳನ್ನು ನಮ್ಮ ತಲೆಯಲ್ಲಿ ಬೇರೆ ವಿಚಾರಗಳು ಓಡದಂತೆ ಮಾಡುತ್ತದೆ. ಇದರಿಂದ ನಮ್ಮಲ್ಲಿ ಬುದ್ಧಿವಂತಿಕೆ ಇದ್ದರೂ ಪ್ರಯೋಜನವಾಗದೇ ಇರಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ