logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಹೆಂಡತಿಯು ಈ ಕೆಲವು ವಿಚಾರದಲ್ಲಿ ಗಂಡನಿಗೆ ಎಂದಿಗೂ ಬೆಂಬಲ ನೀಡಬಾರದು; ಇದರಿಂದ ಜೀವನ ವಿನಾಶವಾಗುವುದು ಖಂಡಿತ

Chanakya Niti: ಚಾಣಕ್ಯರ ಪ್ರಕಾರ ಹೆಂಡತಿಯು ಈ ಕೆಲವು ವಿಚಾರದಲ್ಲಿ ಗಂಡನಿಗೆ ಎಂದಿಗೂ ಬೆಂಬಲ ನೀಡಬಾರದು; ಇದರಿಂದ ಜೀವನ ವಿನಾಶವಾಗುವುದು ಖಂಡಿತ

Reshma HT Kannada

Sep 16, 2023 06:30 AM IST

google News

ಚಾಣಕ್ಯ ನೀತಿ

    • ಗಂಡ ಹೆಂಡತಿಯ ನಡುವೆ ಸಂಬಂಧ ಅನ್ಯೋನ್ಯವಾಗಿದ್ದರೆ ಚೆಂದ. ಸಾಮಾನ್ಯವಾಗಿ ಹೆಂಡತಿಯು ತನ್ನ ಗಂಡನಿಗೆ ಸಂಬಂಧಿಸಿದ ಹಲವು ವಿಚಾರಗಳಿಗೆ ತಾನು ಬೆಂಬಲವಾಗಿ ನಿಲ್ಲುತ್ತಾಳೆ. ಅದು ಸತಿಧರ್ಮವೂ ಹೌದು. ಆದರೆ ಚಾಣಕ್ಯರ ಪ್ರಕಾರ ಗಂಡ ಎಷ್ಟೇ ಒಳ್ಳೆಯವನಾಗಿದ್ದರೂ ಗಂಡನ ಈ ಕೆಲವು ಅಭ್ಯಾಸಗಳನ್ನು ಅಥವಾ ಸತ್ಯಗಳನ್ನು ಮರೆಮಾಚಬಾರದು.
ಚಾಣಕ್ಯ ನೀತಿ
ಚಾಣಕ್ಯ ನೀತಿ

ಮದುವೆಯಾದ ಮೇಲೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಆಸರೆಯಾಗುವುದು ಸಹಜ. ಆದರೆ ಹೆಣ್ಣುಮಕ್ಕಳು ಸಾಮಾನ್ಯವಾಗಿ ಗಂಡನ ಕೆಟ್ಟ ಅಭ್ಯಾಸಗಳನ್ನು ಮುಚ್ಚಿಡುತ್ತಾರೆ. ಮನೆಯಲ್ಲಿ ಕೇಳುತ್ತಾರೆ, ಇದರಿಂದ ಬೇರೆಯವರು ನೊಂದುಕೊಳ್ಳಬಹುದು, ಮರ್ಯಾದೆ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಗಂಡನಿಗೆ ಸಂಬಂಧಿಸಿ ಕೆಲವು ವಿಚಾರಗಳನ್ನು ಮುಚ್ಚಿಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರಲ್ಲಿ ಕೆಟ್ಟ ಅಭ್ಯಾಸಗಳು ಇನ್ನಷ್ಟು ರೂಢಿಯಾಗಬಹುದು. ಅಲ್ಲದೆ ಭವಿಷ್ಯದಲ್ಲಿ ಕೆಟ್ಟ ಅಭ್ಯಾಸಗಳಿಂದ ನಿಮ್ಮ ಪತಿಯನ್ನು ದೂರ ಮಾಡಲು ಅಸಾಧ್ಯದ ಪರಿಸ್ಥಿತಿ ಎದುರಾಗಬಹುದು.

ಆಚಾರ್ಯ ಚಾಣಕ್ಯರ ಪ್ರಕಾರ ನೀವು ನಿಮ್ಮ ಪತಿಯ ಕೆಲವು ಕೆಟ್ಟ ಅಭ್ಯಾಸಗಳನ್ನು ಎಂದಿಗೂ ಮರೆಮಾಡಬಾರದು. ಮರೆಮಾಚಿದರೆ ಅಥವಾ ಕ್ಷಮಿಸಿದರೆ ತಾನು ಮಾಡುವ ತಪ್ಪು ನಿಮ್ಮ ಪತಿಗೆ ತಿಳಿಯುವುದಿಲ್ಲ. ನನ್ನ ಹೆಂಡತಿ ಏನು ಹೇಳುತ್ತಿಲ್ಲ ಎಂದರೆ ನಾನು ಹೋಗುತ್ತಿರುವುದು ಸರಿಯಾದ ದಾರಿ ಎಂದು ಅವಳು ಭಾವಿಸುತ್ತಾಳೆ. ಪರಿಸ್ಥಿತಿ ಕೈ ಮೀರಿದಾಗ ನಿಮ್ಮಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ. ತಮ್ಮ ಪತಿಯ ತಪ್ಪುಗಳನ್ನು ಕ್ಷಮಿಸಿ, ಬೆಂಬಲಿಸುವ ಮಹಿಳೆಯರು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ.

ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಸಾಮಾನ್ಯವಾಗಿ ಹಲವು ಮಹಿಳೆಯರು ತಮ್ಮ ಗಂಡನ ಮೋಸದ ಅಭ್ಯಾಸಗಳನ್ನು ತಮ್ಮ ಮನೆಯವರಿಗೆ ತಿಳಿಸುವುದಿಲ್ಲ. ಅತ್ತೆಮನೆಯಲ್ಲೂ ಅದನ್ನು ಮುಚ್ಚಿಡುತ್ತಾರೆ. ಗಂಡನ ಕೆಟ್ಟ ಅಭ್ಯಾಸಗಳ ವಿಚಾರವನ್ನು ಮರೆಮಾಚಿದರೆ ಅವನಲ್ಲಿ ಸುಳ್ಳು ಹೇಳುವ ಚಟ ಹೆಚ್ಚುತ್ತದೆ ಮತ್ತು ಸುಳ್ಳು ಹೇಳುವ ಅಗತ್ಯವಿಲ್ಲದಿದ್ದರೂ ಸುಳ್ಳು ಹೇಳುತ್ತಾರೆ. ಇದರಿಂದ ಭವಿಷ್ಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಕೆಲವೊಮ್ಮೆ ಮದುವೆಯಾದ ಕೆಲವು ವರ್ಷಗಳ ನಂತರ ಪತಿ ತನ್ನ ಹೆಂಡತಿಯ ಮೇಲೆ ಅನುಮಾನಿಸುವ ಸಂದರ್ಭಗಳು ಉದ್ಭವಿಸುತ್ತವೆ. ಈ ಅನುಮಾನದ ಅಭ್ಯಾಸವು ಅವರ ಮನಸ್ಸನ್ನು ಹದಗೆಡಿಸುತ್ತದೆ. ಅನುಮಾನಕ್ಕೆ ಪರಿಹಾರವಿಲ್ಲ. ವೈದ್ಯರೂ ಸಹ ಇದಕ್ಕೆ ಔಷಧಿಯನ್ನು ಕಂಡುಹಿಡಿಯಲಾರರು. ಹಾಗಾಗಿ ಗಂಡನ ನಿಮ್ಮ ಮೇಲೆ ಅನುಮಾನಿಸುತ್ತಿದ್ದರೆ ಅದನ್ನು ಮನೆಯಲ್ಲಿ ಹೇಳಿಕೊಳ್ಳಿ. ಹಿರಿಯರ ಮುಂದೆ ಕೂತು ವಿಷಯವನ್ನು ಬಗೆಹರಿಸಿಕೊಳ್ಳಿ.

ಕೋಪ ಒಂದು ಸಹಜ ಭಾವನೆ. ಎಲ್ಲರಿಗೂ ಕೋಪ ಬರುತ್ತದೆ. ಆದರೆ ಗಂಡನ ಮಿತಿಮೀರಿದ ಕೋಪವು ನಿಮ್ಮ ಜೀವನವನ್ನು ಹಾಳು ಮಾಡಬಹುದು. ಕೋಪವನ್ನು ನಿಯಂತ್ರಿಸಲು ಬಲ್ಲವರಷ್ಟೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಪ್ರೀತಿ ಅಥವಾ ಇತರ ಕಾರಣಗಳಿಗಾಗಿ ಗಂಡನ ಕೋಪದ ವರ್ತನೆಯನ್ನು ಸಹಿಸಿಕೊಳ್ಳುವುದು ಮಹಿಳೆಯರು ಮಾಡುವ ದೊಡ್ಡ ತಪ್ಪು ಎಂದು ಚಾಣಕ್ಯ ಹೇಳಿದ್ದಾರೆ. ಒಂದು ಹಂತದಲ್ಲಿ ಈ ಕೋಪ ಹಿಂಸೆಯಾಗಿ ಬದಲಾಗಬಹುದು. ಇದರಿಂದ ಅನೇಕ ಮಹಿಳೆಯರು ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಗಂಡನ ಕೋಪದ ಬಗ್ಗೆ ಬೇರೆಯವರಲ್ಲಿ ಹೇಳಿಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಹೆಂಡತಿ ಗಂಡನನ್ನು ನಂಬಬೇಕು, ಆದರೆ ನಂಬಿಕೆ ಅತಿಯಾಗಬಾರದು. ಕೆಲವೊಮ್ಮೆ ಪುರುಷರು ತಮ್ಮ ಹೆಂಡತಿಯ ನಂಬಿಕೆಯನ್ನೇ ಅಸ್ತ್ರವಾಗಿಸಿಕೊಳ್ಳುತ್ತಾರೆ. ಅಲ್ಲದೇ ಬೇರೆಯವರೊಂದಿಗೆ ಸಂಬಂಧ ಇರಿಸಿಕೊಳ್ಳಬಹುದು. ಇದು ಆರಂಭದಲ್ಲಿ ನಂಬಿಕೆಯ ಪರದೆಯ ಮೇಲೆ ಮುಚ್ಚಿ ಹೋಗಬಹುದು. ಆದರೆ ಕಾಲಾನಂತರದಲ್ಲಿ ಇದು ಗಂಡ ಮತ್ತು ಹೆಂಡತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ತಿಳಿದ ಹೆಂಡತಿ ಸುಮ್ಮನಿರಬಾರದು. ವಿಷಯವನ್ನು ಸರಿಯಾಗಿ ವಿವರಿಸಿ ಮತ್ತೆ ಗಂಡ ಆ ರೀತಿ ಮಾಡದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಜೀವನ ಕಷ್ಟ.

ಇದನ್ನೂ ಓದಿ

Chanakya Niti: ದೈನಂದಿನ ಬದುಕಿನಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಬೇಗನೆ ಶ್ರೀಮಂತರಾಗಬಹುದು; ಹಣ ಗಳಿಕೆಗೆ ಚಾಣಕ್ಯರು ನೀಡಿದ ಸಲಹೆ

ಇತ್ತೀಚಿನ ಜಗತ್ತಿನಲ್ಲಿ ಹಣವೇ ಸರ್ವಸ್ವವಾಗಿದೆ. ಹಣವಿಲ್ಲದವರ ಬದುಕು ನರಕ. ಆದರೆ ನ್ಯಾಯ ಮಾರ್ಗ, ಕಠಿಣ ಪರಿಶ್ರಮದಿಂದ ಹಣ ಗಳಿಸುವುದು ಬಹಳ ಮುಖ್ಯವಾಗುತ್ತದೆ. ಆಚಾರ್ಯ ಚಾಣಕ್ಯರು ಆ ಕಾಲದಲ್ಲೇ ಹಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾಕಷ್ಟು ಹಣ ಗಳಿಸಿ, ಶ್ರೀಮಂತರಾಗಲು ನಮ್ಮ ದೈನಂದಿನ ಬದುಕಿನಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ. ಹಾಗಾದರೆ ಅವು ಯಾವುವು ಚಾಣಕ್ಯ ಹೇಳಿದ ಈ ನೀತಿಗಳು ಹಣ ಗಳಿಸಲು ಹೇಗೆ ಸಹಾಯ ಮಾಡುತ್ತವೆ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ