logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯರ ಪ್ರಕಾರ ಮನುಷ್ಯರು ಪ್ರಾಣಿಗಳಿಂದ ಕಲಿಯಲೇಬೇಕಾದ ಕೆಲವು ಗುಣಗಳಿವು

Chanakya Niti: ಚಾಣಕ್ಯರ ಪ್ರಕಾರ ಮನುಷ್ಯರು ಪ್ರಾಣಿಗಳಿಂದ ಕಲಿಯಲೇಬೇಕಾದ ಕೆಲವು ಗುಣಗಳಿವು

Reshma HT Kannada

Dec 10, 2023 10:56 AM IST

google News

ಚಾಣಕ್ಯ ನೀತಿ

    • ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಬದುಕಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ ಚಾಣಕ್ಯ ನೀತಿಯಲ್ಲಿ ವಿವರಿಸಲಾದ ವಿಚಾರಗಳು ಬದುಕಿಗೆ ಬಹಳ ಮುಖ್ಯವಾಗಿದೆ. ಇದು ಜೀವನವನ್ನು ಸರಳವಾಗಿಸುವುದು ಮಾತ್ರವಲ್ಲ, ಯಶಸ್ಸಿನತ್ತ ಸಾಗಲು ಸಹಾಯ ಮಾಡುತ್ತದೆ. ಚಾಣಕ್ಯರ ಪ್ರಕಾರ ಮನುಷ್ಯ ಪ್ರಾಣಿಯಿಂದ ಕಲಿಯಬೇಕಾದ ಕೆಲವು ಗುಣಗಳಿವು.
ಚಾಣಕ್ಯ ನೀತಿ
ಚಾಣಕ್ಯ ನೀತಿ

ಮನುಷ್ಯ ಕಲಿಯಲು ಬಯಸಿದರೆ ಪ್ರಕೃತಿ, ಗಿಡಗಂಟಿಗಳು, ಪ್ರಾಣಿ, ಪಕ್ಷಿಗಳು ಎಲ್ಲರಿಂದಲೂ ಏನನ್ನಾದರೂ ಕಲಿಯಬಹುದು. ಹೀಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಮನುಷ್ಯರು ಪ್ರಾಣಿಗಳಿಂದ ಕಲಿಯಲೇಬೇಕಾದ ಕೆಲವು ಗುಣಗಳ ಬಗ್ಗೆ ವಿವರಿಸಿದ್ದಾರೆ. ಪ್ರಾಣಿಗಳಿಂದ ಕಲಿಯಬಹುದಾದ ಈ ಗುಣಗಳು ಮನುಷ್ಯನ ಜೀವನದಲ್ಲಿ ಸಕಾರಾತ್ಮಕ ಭಾವನೆಗೆ ಕಾರಣವಾಗುತ್ತದೆ. ಹಾಗಾದರೆ ಯಾವೆಲ್ಲಾ ಪ್ರಾಣಿಗಳಿಂದ, ಯಾವೆಲ್ಲಾ ಗುಣಗಳನ್ನು ಕಲಿಯಬಹುದು ನೋಡಿ.

ಇನ್ನಷ್ಟು ಚಾಣಕ್ಯ ನೀತಿಗೆ ಇಲ್ಲಿ ಕ್ಲಿಕ್‌ ಮಾಡಿ

ಕತ್ತೆಯಿಂದ ಕಲಿಯಬಹುದಾದ ಗುಣಗಳು

ಕತ್ತೆಯನ್ನು ಮೂರ್ಖ ಪ್ರಾಣಿ ಎಂದು ಪರಿಗಣಿಸಲಾಗಿದ್ದರೂ, ಕತ್ತೆಯಿಂದಲೂ ಕಲಿಯಬಹುದಾದ ಗುಣಗಳಿವೆ. ಯಾವುದೇ ಪರಿಸ್ಥಿತಿ ಇರಲಿ ಆ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಕತ್ತೆಗಿದೆ. ಜೊತೆಗೆ ಸಾಧಿಸಿದ್ದಕ್ಕೆ ತೃಪ್ತಿಪಟ್ಟುಕೊಂಡು ಖುಷಿಪಡುವ ಗುಣ ಕತ್ತೆಯದ್ದು. ಇದು ನಾವು ಕತ್ತೆಯಿಂದ ಕಲಿಯಬೇಕಾದ ಗುಣಗಳು.

ಕಾಗೆ ಕಲಿಸುವ ವಿಚಾರ

ಚಾಣಕ್ಯರು ಹೇಳುವಂತೆ ಮನುಷ್ಯ ಸದಾ ಜಾಗರೂಕತೆ ಹಾಗೂ ಎಚ್ಚರಿಕೆಯಿಂದ ಇರವ ಗುಣವನ್ನು ಕಾಗೆಯಿಂದ ಕಲಿಯಬೇಕು. ಈ ಗುಣವು ಮನುಷ್ಯನಿಗೆ ಬದುಕಿನಲ್ಲಿ ಯಶಸ್ವಿಯಾಗಲು ಹಾಗೂ ಉನ್ನತ ಸ್ಥಾನಕ್ಕೇರಲು ಸಹಾಯ ಮಾಡುತ್ತದೆ ಎಂಬುದು ಸಾಬೀತಾಗಿದೆ.

ನಾಯಿಯಿಂದ ಕಲಿಯುವ ಪಾಠ

ನಾಯಿಯು ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿ. ಇದು ತನ್ನನ್ನು ಸಾಕಿದ ಯಜಮಾನನಿಗೆ ನಿಷ್ಠೆಯಿಂದ ಇರುವ ಗುಣವನ್ನು ರೂಢಿಸಿಕೊಂಡಿರುತ್ತದೆ. ಹೀಗೆ ಮನುಷ್ಯರು ನಾಯಿಯಿಂದ ನಿಷ್ಠೆಯನ್ನು ಕಲಿಯಬೇಕು. ಅಲ್ಲದೇ ಮನುಷ್ಯರು ನಾಯಿಯ ಹಾಗೆ ಮಲಗಬೇಕು. ನಾಯಿಯು ಮಲಗಿದ್ದಾಗ ಕೂಡ ಸಣ್ಣ ಸದ್ದಿಗೂ ಹೇಗೆ ಎಚ್ಚರಗೊಳ್ಳುತ್ತದೋ ಹಾಗೆ ಮನುಷ್ಯರು ಎಚ್ಚರಗೊಳ್ಳಬೇಕು. ನಾಯಿಯಂತೆ ಅಲರ್ಟ್‌ ಆಗಿರುವುದು ಮುಖ್ಯ ಎಂಬ ಚಾಣಕ್ಯರು ಹೇಳಿದ್ದಾರೆ.

ಸಿಂಹದ ಗುಣಗಳು

ಸಿಂಹವು ತನ್ನ ಶಕ್ತಿಯಿಂದಾಗಿ ಕಾಡಿನ ರಾಜ ಎಂದು ಕರೆಯಲ್ಪಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸಿಂಹದಂತೆ ಪೂರ್ಣ ಸಾಮರ್ಥ್ಯ ಮತ್ತು ಶಕ್ತಿಯಿಂದ ಪ್ರತಿಯೊಂದು ಕೆಲಸವನ್ನು ಪೂರ್ಣಗೊಳಿಸಬೇಕು. ಸಿಂಹದ ಈ ಗುಣವು ವ್ಯಕ್ತಿಯು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ. ಆ ಕಾರಣಕ್ಕೆ ಮನುಷ್ಯರು ಸಿಂಹದ ಈ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಚಾಣಕ್ಯ ಹೇಳಿದ್ದಾರೆ.

ಇದನ್ನೂ ಓದಿ

Chanakya Niti: ಚಾಣಕ್ಯರ ಪ್ರಕಾರ ಇಂತಹ ಜಾಗದಲ್ಲಿ ಮಾತ್ರ ಮನೆ ಇರಬೇಕು, ಇಲ್ಲದಿದ್ದರೆ ಖಂಡಿತ ನೆಮ್ಮದಿ ಇರುವುದಿಲ್ಲ

ಚಾಣಕ್ಯ ನೀತಿಯ ಪ್ರಕಾರ ನಾವು ವಾಸಿಸುವ ಸ್ಥಳವೂ ಬಹಳ ಮುಖ್ಯವಾಗುತ್ತದೆ. ಮನಃಶಾಂತಿಯಿಂದ ಬದುಕಬೇಕು ಎಂದರೆ ಮನೆಯ ವಾತಾವರಣವೂ ಮುಖ್ಯವಾಗುತ್ತದೆ. ಆ ಕಾರಣಕ್ಕೆ ಇಂತಹ ಸ್ಥಳಗಳಿಂದ ದೂರ ಇರುವುದು ಉತ್ತಮ ಎಂದು ಚಾಣಕ್ಯ ಹೇಳುತ್ತಾರೆ.

ಈ ಚಾಣಕ್ಯ ನೀತಿಯನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್‌ ಮಾಡಿ

Chanakya Niti: ಮನೆಯವರ ಮುಂದೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ಚಾಣಕ್ಯರು ಹೇಳಿದ ತಪ್ಪುಗಳು ಯಾವುವು ನೋಡಿ

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ಮಹತ್ತರ ವಿಷಯಗಳನ್ನು ತಿಳಿಸಿದ್ದಾರೆ. ಅವರ ಮಾತುಗಳನ್ನು ಪಾಲಿಸುವುದರಿಂದ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಕೆಲವು ವಿಷಯಗಳನ್ನು ಕುಟುಂಬದ ಮುಂದೆ ಹೇಳಬಾರದು ಎಂದು ಚಾಣಕ್ಯ ತಿಳಿಸಿದ್ದಾರೆ. ಹಾಗಾದರೆ ಆ ವಿಚಾರಗಳು ಯಾವುವು ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ