logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಜೀವನದಲ್ಲಿ ಈ 6 ವಿಚಾರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಮನುಷ್ಯ ಸದಾ ಸಂತೋಷದಿಂದ ಬದುಕಲು ಸಾಧ್ಯ; ಚಾಣಕ್ಯರ ಸಲಹೆ

Chanakya Niti: ಜೀವನದಲ್ಲಿ ಈ 6 ವಿಚಾರಗಳ ಬಗ್ಗೆ ಸ್ಪಷ್ಟತೆ ಇದ್ದರೆ ಮನುಷ್ಯ ಸದಾ ಸಂತೋಷದಿಂದ ಬದುಕಲು ಸಾಧ್ಯ; ಚಾಣಕ್ಯರ ಸಲಹೆ

Reshma HT Kannada

Jan 21, 2025 08:49 AM IST

google News

ಚಾಣಕ್ಯ ನೀತಿ

    • ಆಚಾರ್ಯ ಚಾಣಕ್ಯರು ಬದುಕಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂತೋಷದ ಜೀವನಕ್ಕೆ ಚಾಣಕ್ಯರು ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ ಸದಾ ಸಂತಸದಿಂದ ಇರಬೇಕು ಅಂದ್ರೆ ಕೆಲವು ವಿಚಾರಗಳಲ್ಲಿ ಅವನಿಗೆ ಸ್ಪಷ್ಟತೆ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಅಂತಹ ವಿಚಾರಗಳು ಯಾವುವು ನೋಡಿ.
ಚಾಣಕ್ಯ ನೀತಿ
ಚಾಣಕ್ಯ ನೀತಿ

ಭಾರತ ಕಂಡ ಮಹಾನ್ ವಿದ್ವಾಂಸರಾಗಿರುವ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನದ ಕುರಿತ ಹಲವು ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಸಂತೋಷದ ಜೀವನಕ್ಕೆ ಚಾಣಕ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. ನಾವು ಜೀವನದಲ್ಲಿ ಸದಾ ಸಂತೋಷದಿಂದ ಇರಬೇಕು ಅಂದರೆ ಕೆಲವು ವಿಚಾರಗಳಲ್ಲಿ ಸ್ಪಷ್ಟತೆ ಹೊಂದಿರುವುದು ಬಹಳ ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಹಾಗಾದರೆ ಚಾಣಕ್ಯರ ಪ್ರಕಾರ ಯಾವೆಲ್ಲಾ ವಿಚಾರಗಳಲ್ಲಿ ಸ್ಪಷ್ಟತೆ ಇದ್ದರೆ ಬದುಕಿನಲ್ಲಿ ಸಂತಸ ಕಾಣಲು ಸಾಧ್ಯ ಎಂಬುದನ್ನು ನೋಡೋಣ.

ಜೀವನದಲ್ಲಿ ನಾವು ಮಾಡುವ ಸಣ್ಣ ತಪ್ಪುಗಳು ಕೂಡ ನಮ್ಮನ್ನು ಯಶಸ್ಸಿನಿಂದ ದೂರವಿಡುತ್ತವೆ ಎಂದು ಚಾಣಕ್ಯ ಹೇಳುತ್ತಾರೆ. ಹಾಗಾಗಿ ನೀವು ಜೀವನದಲ್ಲಿ ಎಂದಿಗೂ ಸೋಲು ಕಾಣಬಾರದು ಎಂದರೆ ನಮ್ಮ ಸಣ್ಣ ತಪ್ಪಿನಿಂದಲೂ ಪಾಠ ಕಲಿಯಬೇಕು. ಅಲ್ಲದೇ ಒಂದು ಸಣ್ಣ ತಪ್ಪಿಗೂ ನಮ್ಮ ಬದುಕನ್ನು ಬದಲಿಸುವ ಸಾಮರ್ಥ್ಯವಿರುತ್ತದೆ ಎನ್ನುವ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು.

ಎಲ್ಲರನ್ನೂ, ಎಲ್ಲವನ್ನೂ ಅರ್ಥಮಾಡಿಕೊಂಡು ಸುಖಮಯ ಜೀವನ ನೀಡುವ ಜೀವನ ಸಂಗಾತಿ ಯಾರಿಗೂ ಸಿಗುವುದಿಲ್ಲ ಎಂಬ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇರಬೇಕು. ಆದರೆ ನಮ್ಮನ್ನು ವರಿಸಿದ ಸಂಗಾತಿಯೊಂದಿಗೆ ನಾವು ಹೊಂದಿಕೊಂಡು ಹೋಗಬೇಕು. ಅನುರೂಪದ ಸಂಗಾಂತಿ ಸಿಕ್ಕಿಲ್ಲ ಎಂದರೂ ಸಿಕ್ಕ ಸಂಗಾತಿಯೊಂದಿಗೆ ಹೊಂದಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು.

ಹಣವಿಲ್ಲದ ಜೀವನವು ನರಕದಂತೆ ಮತ್ತು ಸಂತೋಷದಿಂದ ಬದುಕಲು ಪ್ರತಿಯೊಬ್ಬರಿಗೂ ಹಣದ ಅಗತ್ಯವಿದೆ. ಕೆಲವರ ಬಳಿ ಹಣ ಕಡಿಮೆ, ಕೆಲವರ ಬಳಿ ಹೆಚ್ಚು. ಆದರೆ ಹಣವನ್ನು ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಸಂಪತ್ತಿನ ಮೌಲ್ಯವನ್ನು ಅರಿತು ಲಕ್ಷ್ಮೀದೇವಿಗೆ ಯಾವತ್ತೂ ಅಗೌರವ ತೋರಬಾರದು. ಆರ್ಥಿಕ ಸ್ವಾವಲಂಬನೆಯ ಬಗ್ಗೆ ಮನುಷ್ಯನಿಗೆ ಸ್ಪಷ್ಟತೆ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ.

ದಾನ ಮಾಡುವವರು ಜೀವನದಲ್ಲಿ ಯಾವಾಗಲೂ ಬಹಳ ಬೇಗ ಪ್ರಗತಿ ಹೊಂದುತ್ತಾರೆ ಎಂದು ಚಾಣಕ್ಯ ಹೇಳುತ್ತಾರೆ. ಅವರು ಜೀವನದ ಪ್ರತಿಯೊಂದು ಹಂತದಲ್ಲೂ ಅದೃಷ್ಟವನ್ನು ಪಡೆಯುತ್ತಾರೆ. ಏಕೆಂದರೆ ಜಗತ್ತಿನಲ್ಲಿ ಎಲ್ಲರಿಗೂ ಕೊಡುವ ಮನೋಭಾವ ಇರುವುದಿಲ್ಲ. ನೀವು ಇತರರಿಗೆ ಏನನ್ನಾದರೂ ಮರಳಿ ನೀಡುವ ನಿಜವಾದ ಬಯಕೆಯನ್ನು ಹೊಂದಿದ್ದರೆ ನೀವು ಅದೃಷ್ಟವಂತರು. ಧರ್ಮ ಮಾಡುವವರು ಇತರರ ಜೀವನವನ್ನು ಸುಂದರಗೊಳಿಸುವುದಲ್ಲದೆ ತಮ್ಮ ಕುಟುಂಬವನ್ನು ಶ್ರೀಮಂತಗೊಳಿಸುತ್ತಾರೆ. ಈ ವಿಚಾರದ ಬಗ್ಗೆಯೂ ನಮಗೆ ಸ್ಪಷ್ಟತೆ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಎರಡು ಹೊತ್ತು ಊಟ ಮಾಡುವವನೇ ಅದೃಷ್ಟವಂತ ಎಂದು ಚಾಣಕ್ಯ ಹೇಳಿದ. ಏಕೆಂದರೆ ಜಗತ್ತಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಒಂದು ಹೊತ್ತಿನ ಊಟವನ್ನೂ ಮಾಡದ ಎಷ್ಟೋ ಜನ ಜಗತ್ತಿನಲ್ಲಿದ್ದಾರೆ. ದಿನಕ್ಕೆ ಎರಡು ಹೊತ್ತು ಊಟ ಮಾಡುವವನು ತನ್ನನ್ನು ತಾನು ಅದೃಷ್ಟವಂತ ಎಂದು ಪರಿಗಣಿಸಬೇಕು ಎಂದು ಚಾಣಕ್ಯ ಹೇಳಿದರು.

ಉತ್ತಮ ವೃತ್ತಿ ಕೌಶಲ ಹೊಂದಿರುವ ವ್ಯಕ್ತಿ ಅತ್ಯಂತ ಅದೃಷ್ಟಶಾಲಿ ಎಂದು ಚಾಣಕ್ಯ ಹೇಳಿದ್ದಾರೆ. ಅಂತಹ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನೆಮ್ಮದಿಯಿಂದ ಬದುಕಬಹುದು. ಆದರೆ ಒಬ್ಬನು ತನ್ನ ಸಾಮರ್ಥ್ಯದ ಬಗ್ಗೆ ಎಂದಿಗೂ ಜಂಬಕೊಚ್ಚಿಕೊಳ್ಳಬಾರದು. ಏಕೆಂದರೆ ನಮ್ಮ ಹಣೆಬರಹ ಯಾವಾಗ ಬೇಕಾದರೂ ಬದಲಾಗಬಹುದು ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಈ ವಿಚಾರದ ಬಗ್ಗೆಯೂ ನಾವೆಲ್ಲರೂ ಸ್ಪಷ್ಟತೆ ಹೊಂದಿರಬೇಕು.

(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ