logo
ಕನ್ನಡ ಸುದ್ದಿ  /  ಜೀವನಶೈಲಿ  /  ಶ್ರಾವಣ ಮಾಸದಲ್ಲಿ ಈರುಳ್ಳಿ ಬಳಸದೆ ಮಾಡಬಹುದಾದ ತಿಂಡಿಗಳು ಇಲ್ಲಿವೆ ನೋಡಿ, ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ

ಶ್ರಾವಣ ಮಾಸದಲ್ಲಿ ಈರುಳ್ಳಿ ಬಳಸದೆ ಮಾಡಬಹುದಾದ ತಿಂಡಿಗಳು ಇಲ್ಲಿವೆ ನೋಡಿ, ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ

Suma Gaonkar HT Kannada

Aug 09, 2024 10:03 AM IST

google News

ಈರುಳ್ಳಿ ಬಳಸದೇ ಮಾಡಿದ ರುಚಿಯಾದ ಕ್ಯಾಬೇಜ್‌ ಪಕೋಡ

    • ನೀವು ನಿಮ್ಮ ಮಕ್ಕಳಿಗೆ ಮಾಡಿಕೊಡಬಹುದಾದ ಕೆಲವು ಸರಳ ತಿಂಡಿಗಳನ್ನು ಮತ್ತು ಅವುಗಳನ್ನು ಮಾಡುವ ವಿಧಾನವನ್ನು ನಾವು ನಿಮಗೆ ತಿಳಿಸಿದ್ದೇವೆ ನೋಡಿ. ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ.
ಈರುಳ್ಳಿ ಬಳಸದೇ ಮಾಡಿದ ರುಚಿಯಾದ ಕ್ಯಾಬೇಜ್‌ ಪಕೋಡ
ಈರುಳ್ಳಿ ಬಳಸದೇ ಮಾಡಿದ ರುಚಿಯಾದ ಕ್ಯಾಬೇಜ್‌ ಪಕೋಡ (Hindustan times)

ಶ್ರಾವಣ ಮಾಸ ಬಂದರೆ ಅಷ್ಟಾಗಿ ಯಾರೂ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಉಪಯೋಗಿಸುವುದಿಲ್ಲ. ಉಪಯೋಗಿಸಿದರೂ ಬಹಳ ಕಡಿಮೆ ದಿನಗಳು ಅಂದರೆ ಕೆಲವು ವಾರ ಮಾತ್ರ ಉಪಯೋಗಿಸುತ್ತಾರೆ. ಆದರೆ ಶಾಲೆಗೆ ಹೋಗುವ ಮಕ್ಕಳು ಕುರುಕಲು ಹಾಗೂ ಮಸಾಲೆ ಇರುವ ಮತ್ತು ಈರುಳ್ಳಿಯನ್ನೇ ಬಳಸಿದ ಪದಾರ್ಥಗಳನ್ನು ಹೆಚ್ಚು ಇಷ್ಟಪಟ್ಟು ಅದೇ ಬೇಕು ಎಂದು ಹಠ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ಮಕ್ಕಳಿಗೆ ನೀವು ಈ ತಿಂಡಿಗಳನ್ನು ಮಾಡಿಕೊಡಿ. ಆಗ ಅವರು ಖಂಡಿತ ಇಷ್ಟಪಡುತ್ತಾರೆ.

ನೀವು ನಿಮ್ಮ ಮಕ್ಕಳಿಗೆ ಮಾಡಿಕೊಡಬಹುದಾದ ಕೆಲವು ಸರಳ ತಿಂಡಿಗಳನ್ನು ಮತ್ತು ಅವುಗಳನ್ನು ಮಾಡುವ ವಿಧಾನವನ್ನು ನಾವು ನಿಮಗೆ ತಿಳಿಸಿದ್ದೇವೆ ನೋಡಿ. ನೀವೂ ನಿಮ್ಮ ಮನೆಯಲ್ಲಿ ಟ್ರೈ ಮಾಡಿ.

ಕ್ಯಾಬೇಜ್ ಪಕೋಡ:

ಕ್ಯಾಬೇಜ್ ಸಾಮಾನ್ಯವಾಗಿ ಈರುಳ್ಳಿಗೆ ರಿಪ್ಲೇಸ್ ಎಂದು ಹೇಳಬಹುದು ಯಾಕೆಂದರೆ ಇದರ ಪಕೋಡ ಮಾಡಿದರೆ ಈರುಳ್ಳಿಗೆ ಸಾಮಾನ್ಯವಾದ ರುಚಿಯನ್ನು ಹೊಂದಿದೆ. ಇದನ್ನು ಮಾಡಲು ಮೊದಲು ನೀವು ಕಡಲೆಹಿಟ್ಟು ತೆಗೆದುಕೊಳ್ಳಬೇಕು ನಂತರ ಕ್ಯಾಬೇಜ್ ಹೆಚ್ಚಿಕೊಳ್ಳಬೇಕು ನಿಮಗೆ ಯಾವ ಪ್ರಮಾಣದಲ್ಲಿ ಬೇಕು ಆ ಪ್ರಮಾಣದಲ್ಲಿ ಎರಡನ್ನು ಮಿಕ್ಸ್ ಮಾಡಿ ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಖಾರದಪುಡಿ, ಉಪ್ಪು ಸ್ವಲ್ಪ ಇಂಗು ಮತ್ತು ವಾಮಕಾಳನ್ನು ಹಾಕಿ ಜೊತೆಗೆ ಕರಿಬೇವಿನ ಎಲೆಗಳನ್ನೂ ಸೇರಿಸಿ. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇನ್ನೊಂದು ಕಡೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಲು ಇಡಿ ಎಣ್ಣೆ ಚೆನ್ನಾಗಿ ಕಾದ ನಂತರ ನಿಮ್ಮ ಕೈಯಲ್ಲಿ ರೂಢಿ ಇಲ್ಲವೆಂದರೆ ಸ್ಪೂನ್‌ನಲ್ಲಿ ಎಣ್ಣೆ ಒಳಗಡೆ ಈ ಮಿಶ್ರಣವನ್ನು ಬಿಡಿ. ಇದು ಚೆನ್ನಾಗಿ ಬೇಯುವವರಿಗೆ ಕರೆಯಿರಿ. ಗೋಲ್ಡನ್ ಬ್ರೌನ್ ಬಣ್ಣ ಬಂದ ನಂತರ ಬಾಣಲೆಯಿಂದ ಆಚೆ ತೆಗೆಯಿರಿ ಇಷ್ಟು ಮಾಡಿದರೆ ಕ್ಯಾಬೇಜ್ ಪಕೋಡ ಸವಿಯಲು ಸಿದ್ಧ.

ಪುದಿನಾ ಚಟ್ನಿ

ಇದರ ಜೊತೆಗೆ ನೀವು ಪುದಿನಾ ಚಟ್ನಿಯನ್ನು ಮಾಡಿ ಮಕ್ಕಳಿಗೆ ಕೊಟ್ಟರೆ ಒಂದಕ್ಕೊಂದು ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತೆ. ಪುದಿನಾ ಚಟ್ನಿಯನ್ನು ಮಾಡಲು ನೀವು ಮೊದಲು ಒಂದಷ್ಟು ಪುದಿನಾ ಎಲೆಗಳನ್ನ ತೆಗೆದುಕೊಳ್ಳಬೇಕು. ಅದನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಿ, ನಂತರ ತೆಂಗಿನ ತುರಿ ತೆಗೆದುಕೊಳ್ಳಿ ಅದರೊಂದಿಗೆ ಪುದಿನಾ ಎಲೆಗಳನ್ನ ಹಾಕಿ ಒಮ್ಮೆ ರುಬ್ಬಿಕೊಳ್ಳಿ. ನಂತರ ಮಿಕ್ಸಿ ಜಾರ್ ಓಪನ್ ಮಾಡಿ ಅದಕ್ಕೆ ಉಪ್ಪು ಹಾಗೂ ಹಸಿಮೆಣಸು ಹಾಕಿ ಮತ್ತೆ ರುಬ್ಬಿಕೊಳ್ಳಿ. ನಂತರ ಚೆನ್ನಾಗಿ ರುಬ್ಬಿದ ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಸೇರಿಸಿ ತೆಗೆದಿಟ್ಟುಕೊಳ್ಳಿ ಇನ್ನೊಂದು ಕಡೆ ಒಗ್ಗರಣೆ ಬಟ್ಟಲಿನಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ ಒಂದೇ ಒಂದು ಚಿಟಿಕೆ ಅರಿಶಿಣ ಇವಿಷ್ಟನ್ನು ಹಾಕಿ ಬಿಸಿ ಮಾಡಿ ನಂತರ ಅದನ್ನು ಚಟ್ನಿಗೆ ಹಾಕಿ ಸ್ವಲ್ಪ ಹುಳಿ ಇಷ್ಟಪಡುವವರು ರುಬ್ಬುವಾಗ ಹುಣಸೆಹಣ್ಣನ್ನು ಸೇರಿಸಿಕೊಳ್ಳಬಹುದು.

ಸಿಹಿ ಅವಲಕ್ಕಿ

ಸಿಹಿ ಅವಲಕ್ಕಿಯನ್ನು ಮಾಡಲು ನೀವು ಮೀಡಿಯಮ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆಬೇಕು. ನಂತರ ಅದು ಮೆತ್ತಗಾಗುತ್ತದೆ. ತುಂಬಾ ಹೊತ್ತು ಬಿಟ್ಟರೆ ಅದು ಮುದ್ದೆ ಆಗುತ್ತದೆ. ಹಾಗಾಗಿ ಸ್ವಲ್ಪ ಸಮಯ ಮಾತ್ರ ಅದನ್ನು ನೆನೆಹಾಕಿ ನಂತರ ಚೆನ್ನಾಗಿ ನೀರನ್ನು ತೆಗೆದು ಆ ಅವಲಕ್ಕಿಗೆ ಬೆಲ್ಲ, ತುಪ್ಪ, ಸ್ವಲ್ಪ ಉಪ್ಪು ಹಾಗೂ ಕಾಯಿತುರಿ ಹಾಕಿ ನಂತರ ಅವೆಲ್ಲವನ್ನು ಚೆನ್ನಾಗಿ ಕೈಯಿಂದ ಮಿಶ್ರಣ ಮಾಡಿ ಇದನ್ನು ಕೂಡ ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮಾಡುವ ವಿಧಾನ ಕೂಡ ತುಂಬಾ ಸುಲಭವಾಗಿದೆ.

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ