logo
ಕನ್ನಡ ಸುದ್ದಿ  /  ಜೀವನಶೈಲಿ  /  Deepavali 2023: ಧನತ್ರಯೋದಶಿಯಂದು, ಅಮಂಗಳ ಎನಿಸುವ ಈ ವಸ್ತುಗಳನ್ನು ಖರೀದಿಸಬೇಡಿ, ಮನೆಗೆ ತರಲೂಬೇಡಿ

Deepavali 2023: ಧನತ್ರಯೋದಶಿಯಂದು, ಅಮಂಗಳ ಎನಿಸುವ ಈ ವಸ್ತುಗಳನ್ನು ಖರೀದಿಸಬೇಡಿ, ಮನೆಗೆ ತರಲೂಬೇಡಿ

HT Kannada Desk HT Kannada

Nov 09, 2023 07:00 AM IST

google News

ಧನ ತ್ರಯೋದಶಿಯಂದು ನಕಲಿ ಚಿನ್ನ, ಸ್ಟೀಲ್‌ ವಸ್ತು ಸೇರಿದಂತೆ ಅಮಂಗಳ ಎನಿಸುವ ಸಾಮಗ್ರಿಗಳನ್ನು ಖರೀದಿಸಬೇಡಿ.

  • Deepavali 2023: ದೀಪಾವಳಿ ಮೊದಲ ದಿನ ಧನ ತ್ರಯೋದಶಿಯಂದು ನೀವು ಗಾಜಿನ ಸಾಮಗ್ರಿಗಳನ್ನು ಖರೀದಿಸಬೇಡಿ. ಗಾಜಿನ ಸಾಮಗ್ರಿಗಳು ರಾಹುವಿಗೆ ಸಂಬಂಧಿಸಿದ್ದಾದ್ದರಿಂದ ಆ ಶುಭ ದಿನ ಗಾಜಿನ ಪಾತ್ರೆಗಳನ್ನು ಖರೀದಿಸುವುದಾಗಲೀ, ಮನೆಗೆ ತರುವುದಾಗಲೀ ಮಾಡಬೇಡಿ.

ಧನ ತ್ರಯೋದಶಿಯಂದು ನಕಲಿ ಚಿನ್ನ, ಸ್ಟೀಲ್‌ ವಸ್ತು ಸೇರಿದಂತೆ ಅಮಂಗಳ ಎನಿಸುವ ಸಾಮಗ್ರಿಗಳನ್ನು ಖರೀದಿಸಬೇಡಿ.
ಧನ ತ್ರಯೋದಶಿಯಂದು ನಕಲಿ ಚಿನ್ನ, ಸ್ಟೀಲ್‌ ವಸ್ತು ಸೇರಿದಂತೆ ಅಮಂಗಳ ಎನಿಸುವ ಸಾಮಗ್ರಿಗಳನ್ನು ಖರೀದಿಸಬೇಡಿ. (PC: unsplash)

Deepavali 2023: ದೀಪಾವಳಿ ಮೊದಲ ದಿನವನ್ನು ಕೆಲವೆಡೆ ಧನ್‌ ತೆರೆಸ್‌ ಹೆಸರಿನಲ್ಲಿ ಆಚರಿಸಲಾಗುತ್ತದೆ. ನವೆಂಬರ್‌ 10 ರಂದು ಧನ್‌ ತೆರೆಸ್‌ ಮೂಲಕ 5 ದಿನಗಳ ಬೆಳಕಿನ ಹಬ್ಬ ಆರಂಭವಾಗುತ್ತದೆ. ಈ ಹಬ್ಬದಂದು ಜನರು ಲಕ್ಷ್ಮಿ, ಗಣೇಶನ ಮೂರ್ತಿಯನ್ನು ಪೂಜಿಸಲಾಗುತ್ತದೆ. ಈ ದಿನ ಜನರು ತಮ್ಮ ಮನೆಗೆ ಚಿನ್ನ, ಬೆಳ್ಳಿ, ವಾಹನ, ಫೋನ್‌, ಲ್ಯಾಪ್‌ಟಾಪ್‌, ರೆಫ್ರಿಜರೇಟರ್‌, ಮೈಕ್ರೋವೇವ್‌ ಅವನ್‌, ಪೊರಕೆ, ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ.

ಧನ್‌ ತೆರೆಸ್‌ ದಿನ ನಾವು ಯಾವುದೇ ಮಂಗಳಕರ ವಸ್ತುಗಳನ್ನು ಖರೀದಿಸಿ ಮನೆಗೆ ತಂದರೆ ಅದು ದುಪ್ಪಟ್ಟಾಗುತ್ತದೆ. ಮನೆಯಲ್ಲಿ ಸುಖ, ಸಮೃದ್ಧಿ ಶಾಂತಿ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಆದರೆ ದಿನ ನೀವು ಕೆಲವೊಂದು ವಸ್ತುಗಳನ್ನು ಮನೆಗೆ ತರಲೇಬಾರದು. ಇಲ್ಲವಾದರೆ ಸುಖ ಸಂತೋಷದ ಬದಲಿಗೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಕಬ್ಬಿಣ: ಧನ್‌ ತೆರೆಸ್‌ ದಿನ ಕಬ್ಬಿಣವನ್ನು ಖರೀದಿಸುವುದಾಗಲೀ, ಮನೆಗೆ ತರುವುದಾಗಲಿ ಅಮಂಗಳ. ಲಕ್ಷ್ಮೀ ಹಾಗೂ ಕುಬೇರನು ಸಂಪತ್ತಿನ ಅಧಿ ದೇವತೆಗಳು. ಒಂದು ವೇಳೆ ನೀವು ಆ ದಿನ ಮನೆಗೆ ಕಬ್ಬಿಣ ತಂದರೆ ನಿಮಗೆ ಏಳಿಗೆ ಇರುವುದಿಲ್ಲ.

ಸ್ಟೀಲ್‌: ಕೆಲವರು ಈ ವಿಶೇಷ ದಿನದಂದು ಸ್ಟೀಲ್‌ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಆದರೆ ಅದನ್ನು ಅವಾಯ್ಡ್‌ ಮಾಡಿ, ಸ್ಟೀಲ್‌ ಬದಲಿಗೆ ತಾಮ್ರ ಅಥವಾ ಕಂಚನ್ನು ಖರೀದಿಸಿ ತನ್ನಿ.

ಹರಿತವಾದ ಆಯುಧಗಳು; ಧನ್‌ ತೆರೆಸ್‌ ದಿನ ಮನೆಗೆ ಚಾಕು, ಕತ್ತರಿ, ಕುಡುಗೋಲು, ಕತ್ತಿಯಂಥ ಯಾವುದೇ ಹರಿತವಾದ ವಸ್ತುಗಳನ್ನು ಖರೀದಿಸಬೇಡಿ. ಅದು ಎಷ್ಟೇ ಅವಶ್ಯಕತೆ ಇದ್ದರೂ ಮತ್ತೊಂದು ದಿನ ಖರೀದಿಸಿ, ಈ ವಸ್ತುಗಳನ್ನು ಶುಭ ಮುಹೂರ್ತದಂದು ಖರೀದಿಸುವುದು ಅಮಂಗಳಕರ ಎನ್ನಲಾಗಿದೆ.

ಖಾಲಿ ಪಾತ್ರೆಗಳನ್ನು ಮನೆಗೆ ತರಬೇಡಿ: ಅಂಡಿಯಲ್ಲಿ ಪಾತ್ರೆಗಳನ್ನು ಖರೀದಿಸುವಾಗ ಅದು ಖಾಲಿಯೇ ಇರುತ್ತದೆ, ಯಾವ ಅಂಗಡಿಯವರೂ ನಿಮಗೆ ಅದರಲ್ಲಿ ನೀರು, ಆಹಾರ ತುಂಬಿಸಿಕೊಡುವುದಿಲ್ಲ. ಆದರೆ ಪಾತ್ರೆಗಳನ್ನು ನೀವು ಮನೆಗೆ ತರುವಾಗ ನೀರು ಅಥವಾ ಆಹಾರ ಸಾಮಗ್ರಿಗಳು, ಧಾನ್ಯಗಳನ್ನು ತುಂಬಿ ಒಳಗೆ ತನ್ನಿ, ಯಾವುದೇ ಕಾರಣಕ್ಕೂ ಖಾಲಿ ತರಬೇಡಿ.

ಗಾಜಿನ ಸಾಮಗ್ರಿಗಳು; ದೀಪಾವಳಿ ಮೊದಲ ದಿನ ಧನ ತ್ರಯೋದಶಿಯಂದು ನೀವು ಗಾಜಿನ ಸಾಮಗ್ರಿಗಳನ್ನು ಖರೀದಿಸಬೇಡಿ. ಗಾಜಿನ ಸಾಮಗ್ರಿಗಳು ರಾಹುವಿಗೆ ಸಂಬಂಧಿಸಿದ್ದಾದ್ದರಿಂದ ಆ ಶುಭ ದಿನ ಗಾಜಿನ ಪಾತ್ರೆಗಳನ್ನು ಖರೀದಿಸುವುದಾಗಲೀ, ಮನೆಗೆ ತರುವುದಾಗಲೀ ಮಾಡಬೇಡಿ.

ಅಲ್ಯುಮಿನಿಯಂ ಅಥವಾ ಪ್ಲಾಸ್ಟಿಕ್‌ ಪ್ರಾಡೆಕ್ಟ್‌ಗಳು: ಹಬ್ಬದಂದು ಅಲ್ಯುಮಿನಿಯಂ , ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಕೂಡಾ ತರುವುದು ಶ್ರೇಯಸ್ಸಲ್ಲ. ಅದರ ಬದಲಿಗೆ ಮೆಟಲ್‌ನಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಬಹುದು.

ತುಪ್ಪ, ಎಣ್ಣೆ: ತುಪ್ಪ ಹಾಗೂ ಎಣ್ಣೆಯನ್ನು ದೇವರ ಪೂಜೆಗೆ ಬಳಸಿದರೂ, ಧನ್‌ ತೆರೆಸ್‌ ದಿನ ಅದನ್ನು ಮನೆಗೆ ತರುವುದು ಅಷ್ಟು ಒಳ್ಳೆಯದಲ್ಲ ಎನ್ನಲಾಗಿದೆ. ನಿಮಗೆ ಅತ್ಯವಶ್ಯಕ ಎನಿಸಿದಲ್ಲಿ ಒಂದು ದಿನ ಮುಂಚಿತವಾಗಿ ಅಥವಾ ನಂತರ ಖರೀದಿಸಬಹುದು.

ನಕಲಿ ಚಿನ್ನ: ಈಗಂತೂ ನಕಲಿ ಆಭರಣಗಳು ಚಿನ್ನವನ್ನೂ ಮೀರಿಸಿದಂತೆ ಇರುತ್ತದೆ. ಆದ್ದರಿಂದ ಬಹಳ ಜನರು ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಧನ್‌ ತೆರೆಸ್‌ ದಿನ ನಕಲಿ ಚಿನ್ನವನ್ನು ಖರೀದಿಸಲೂಬೇಡಿ, ಮನೆಗೂ ತರಬೇಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ