logo
ಕನ್ನಡ ಸುದ್ದಿ  /  ಜೀವನಶೈಲಿ  /  Instant Sweet Recipe: ಹತ್ತೇ ನಿಮಿಷದಲ್ಲಿ ಕೇವಲ ನಾಲ್ಕು ಪದಾರ್ಥಗಳಿಂದ ಈ ಸ್ವೀಟ್‌ ತಯಾರಿಸಬಹುದು..ರೆಸಿಪಿ ಸೇವ್‌ ಮಾಡಿಕೊಳ್ಳಿ

Instant Sweet Recipe: ಹತ್ತೇ ನಿಮಿಷದಲ್ಲಿ ಕೇವಲ ನಾಲ್ಕು ಪದಾರ್ಥಗಳಿಂದ ಈ ಸ್ವೀಟ್‌ ತಯಾರಿಸಬಹುದು..ರೆಸಿಪಿ ಸೇವ್‌ ಮಾಡಿಕೊಳ್ಳಿ

Rakshitha Sowmya HT Kannada

Sep 22, 2022 01:29 PM IST

google News

ಹುರಿಗಡಲೆ ಬರ್ಫಿ ರೆಸಿಪಿ

    • ಎಲ್ಲಾ ಸಾಮಗ್ರಿಗಳು ತಯಾರಿದ್ದರೆ 10-15 ನಿಮಿಷದಲ್ಲಿ ಈ ಸಿಹಿಯನ್ನು ಮಾಡಬಹುದು. ಬಾಯಲ್ಲಿ ಇಟ್ಟರೆ ಕರಗುವಂತೆ ಫೀಲ್‌ ಆಗುವ ಈ ಸ್ವೀಟ್‌ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ.
ಹುರಿಗಡಲೆ ಬರ್ಫಿ ರೆಸಿಪಿ
ಹುರಿಗಡಲೆ ಬರ್ಫಿ ರೆಸಿಪಿ (PC: Chaitra's AbhiRuchi)

ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ಏನು ಕೊಡುವುದು, ಯಾವ ಅಡುಗೆ ಮಾಡುವುದು ಎಂಬ ಗೊಂದಲ ಉಂಟಾಗುವುದು ಸಹಜ. ಒಂದು ವೇಳೆ ನಿಮ್ಮ ಗೆಸ್ಟ್‌ ಸಿಹಿಪ್ರಿಯರಾಗಿದ್ದಲ್ಲಿ ಹತ್ತೇ ನಿಮಿಷಗಳಲ್ಲಿ ತಯಾರಿಸಬಹುದಾದ ಒಂದು ಸಿಹಿ ರೆಸಿಪಿ ಇದೆ.

ಈ ಹುರಿಗಡಲೆ ಬರ್ಫಿ ತಯಾರಿಸೋಕೆ 4 ಪದಾರ್ಥಗಳು ಸಾಕು. ಎಲ್ಲಾ ಸಾಮಗ್ರಿಗಳು ತಯಾರಿದ್ದರೆ 10-15 ನಿಮಿಷದಲ್ಲಿ ಈ ಸಿಹಿಯನ್ನು ಮಾಡಬಹುದು. ಬಾಯಲ್ಲಿ ಇಟ್ಟರೆ ಕರಗುವಂತೆ ಫೀಲ್‌ ಆಗುವ ಈ ಸ್ವೀಟ್‌ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಚೈತ್ರಾಸ್‌ ಅಭಿರುಚಿ ಕುಕಿಂಗ್‌ ಯೂಟ್ಯೂಬ್‌ ಚಾನೆಲ್‌ನ ಚೈತ್ರಾ, ಈ ರೆಸಿಪಿ ತಯಾರಿಸೋದು ಹೇಗೆ ಅನ್ನೋದನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ.

ಹುರಿಗಡಲೆ ಬರ್ಫಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಹುರಿಗಡಲೆ - 1 ಕಪ್‌

ಸಕ್ಕರೆ - 1 ಕಪ್‌

ತುಪ್ಪ - 1/2 ಕಪ್‌

ಏಲಕ್ಕಿ - 2-3

ಹುರಿಗಡಲೆ ಬರ್ಫಿ ತಯಾರಿಸುವ ವಿಧಾನ

ಒಂದು ಮಿಕ್ಸಿ ಜಾರ್‌ಗೆ ಸಕ್ಕರೆ ಹಾಗೂ ಹುರಿಗಡಲೆ ಸೇರಿಸಿ

ಇದರೊಂದಿಗೆ ಏಲಕ್ಕಿ ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ ( ನೀರು ಸೇರಿಸಬೇಡಿ)

ಒಂದು ದಪ್ಪ ತಳದ ಪಾತ್ರೆಗೆ ತುಪ್ಪ ಸೇರಿಸಿ ಸ್ಟೋವ್‌ ಮೇಲಿಡಿ

ಒಂದು ಟ್ರೇಗೆ ತುಪ್ಪ ಹಚ್ಚಿ ಸುತ್ತಲೂ ಗ್ರೀಸ್‌ ಮಾಡಿ

ಸ್ಟೋವ್‌ ಮೇಲೆ ಇರಿಸಿದ ತುಪ್ಪ ಕರಗಿದ ನಂತರ ಸ್ಟೋವ್‌ ಆಫ್‌ ಮಾಡಿ, ಪುಡಿ ಮಾಡಿದ ಸಕ್ಕರೆ, ಹುರಿಗಡಲೆ ಮಿಶ್ರಣವನ್ನು ಸೇರಿಸಿ ಬಿಡದಂತೆ ತಿರುವಿ

ಕೂಡಲೇ ಗ್ರೀಸ್‌ ಮಾಡಿದ ಟ್ರೇಗೆ ಈ ಮಿಶ್ರಣವನ್ನು ಸೇರಿಸಿ ರೂಮ್‌ ಟೆಂಪ್ರೇಚರ್‌ಗೆ ಬಂದ ಕೂಡಲೇ ರೆಫ್ರಿಜರೇಟರ್‌ನಲ್ಲಿ ಇಟ್ಟು 5-10 ನಿಮಿಷ ಬಿಡಿ

ಸಮಯ ಇದ್ದರೆ ಫ್ರಿಡ್ಜ್‌ನಲ್ಲಿ ಇಡದೆ ರೂಮ್‌ ಟೆಂಪ್ರೇಚರ್‌ನಲ್ಲೇ ಸೆಟ್‌ ಆಗುವವರೆಗೂ ಬಿಡಬಹುದು.

ಮಿಶ್ರಣ ಸೆಟ್‌ ಆದಾಗ ಚಾಕುವಿನ ಸಹಾಯದಿಂದ ನಿಮಗಿಷ್ಟವಾದ ಆಕಾರಕ್ಕೆ ಕತ್ತರಿಸಿಕೊಳ್ಳಿ

ನಿಮಗೆ ಬೇಕಿದ್ದಲ್ಲಿ ಟ್ರೇಗೆ ಮಿಶ್ರಣ ಸೇರಿಸಿದ ನಂತರ ಡ್ರೈ ಫ್ರೂಟ್ಸ್‌ ಚೂರುಗಳನ್ನು ಸೇರಿಸಬಹುದು.

ಮಕ್ಕಳಂತೂ ಈ ಸಿಹಿಯನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಮನೆಗೆ ದಿಢೀರ್‌ ಅತಿಥಿಗಳು ಬಂದಾಗ, ಪಾರ್ಟಿಗಳಲ್ಲಿ ಕೂಡಾ ನೀವು ಈ ಸಿಹಿ ತಯಾರಿಸಬಹುದು.

ಗಮನಿಸಿ: ತುಪ್ಪ ಇಲ್ಲದಿದ್ದರೆ ಅಷ್ಟೇ ಪ್ರಮಾಣದ ಎಣ್ಣೆಯನ್ನು ಕೂಡಾ ಬಳಸಬಹುದು, ಅಥವಾ ತುಪ್ಪ ಹಾಗೂ ಎಣ್ಣೆ, ಎರಡನ್ನೂ ಸಮ ಪ್ರಮಾಣದಲ್ಲಿ ಮಿಕ್ಸ್‌ ಮಾಡಿ ತಯಾರಿಸಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ