Dessert Recipe: ಹಾಲಿನಿಂದ ತಯಾರಿಸಬಹುದಾದ ಬೆಂಗಾಳಿ ಫೇಮಸ್ ಮಿಷ್ಟಿ ದೋಯಿ ರೆಸಿಪಿ; ಮಕ್ಕಳು ವೃದ್ಧರಿಗೂ ಈ ಡೆಸರ್ಟ್ ಬಲು ಇಷ್ಟ
Jun 15, 2023 07:37 PM IST
ಬೆಂಗಾಳಿ ಫೇಮಸ್ ಮಿಷ್ಟಿ ದೋಯಿ ರೆಸಿಪಿ
- ಸಿಹಿಪ್ರಿಯರಿಗೆ ಇಂಥದ್ದೇ ಸ್ವೀಟ್ ಅಂತ ಅಲ್ಲ, ಬಹುತೇಕ ಎಲ್ಲಾ ಸಿಹಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗೇ ನಮ್ಮಲ್ಲಿ ಕೆಲವರಿಗೆ ಊಟದ ನಂತರ ಏನಾದರೂ ಸಿಹಿ ತಿನ್ನದಿದ್ದರೆ ಸಮಾಧಾನ ಎನಿಸುವುದಿಲ್ಲ.
ಬೆಂಗಾಳಿ ಫೇಮಸ್ ಮಿಷ್ಟಿ ದೋಯಿ ರೆಸಿಪಿ (PC: Twitter)
ಖೀರು, ಕೇಸರಿಬಾತು, ಒಬ್ಬಟ್ಟು ಇದೆಲ್ಲಾ ನಾವು ರುಚಿ ಮಾಡಿದ್ದೇವೆ. ಆದರೆ ಒಮ್ಮೆ ಬೇರೆ ರಾಜ್ಯದ ಸಿಹಿ ಟ್ರೈ ಮಾಡಿದ್ರೆ ಹೇಗೆ. ಹಾಗಂತ ಇದಕ್ಕೆ ಹೆಚ್ಚಿನ ಸಾಮಗ್ರಿಗಳು ಬೇಡ, ಮನೆಯಲ್ಲೇ ಸುಲಭವಾಗಿ ದೊರೆಯುವ ಕೇವಲ 3 ಪದಾರ್ಥಗಳಿಂದ ತಯಾರಿಸಬಹುದಾದ ಒಂದು ಸಿಹಿ ಇದೆ. ಇದರ ಹೆಸರು ಮಿಷ್ಟಿ ದೋಯಿ. ಪಶ್ಚಿಮ ಬಂಗಾಳದ ಫೇಮಸ್ ಸ್ವೀಟ್ ರೆಸಿಪಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಿಹಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಮಿಷ್ಟಿ ದೋಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
ಇದನ್ನೂ ಓದಿ: ಮಕ್ಕಳ ಲಂಚ್, ಸ್ನಾಕ್ಸ್ ಬಾಕ್ಸ್ಗೆ ವೆರೈಟಿ ತಿಂಡಿ ತಯಾರಿಸಿ ಕೊಡಿ ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ; ಗೋಲಿ ಇಡ್ಲಿ ರೆಸಿಪಿ
ಬೇಕಾಗುವ ಸಾಮಗ್ರಿಗಳು
ಹಾಲು - 1 ಲೀಟರ್
ಮೊಸರು - 1 ಕಪ್
ಸಕ್ಕರೆ - 2 ಕಪ್
ತಯಾರಿಸುವ ವಿಧಾನ
- ಮಿಷ್ಟಿ ದೋಯಿ ತಯಾರಿಸಲು ಹಂಗ್ ಕರ್ಡ್ ಅವಶ್ಯಕತೆ ಇದೆ. ಇದನ್ನು ನೇರವಾಗಿ ಅಂಗಡಿಯಲ್ಲೇ ಖರೀದಿಸಬಹುದು ಅಥವಾ ನೀವೇ ಮನೆಯಲ್ಲಿ ಮಾಡಬಹುದು.
- ಹಂಗ್ ಕರ್ಡ್ ತಯಾರಿಸುವುದು ಬಹಳ ಸುಲಭ. ಕಾಟನ್ ಬಟ್ಟೆಯೊಳಗೆ ಮೊಸರು ಸೇರಿಸಿ ಅದನ್ನು 15 ನಿಮಿಷಗಳ ಕಾಲ ಒಂದು ಸ್ಥಳದಲ್ಲಿ ನೇತು ಹಾಕಿ. ಮೊಸರಿನಲ್ಲಿ ನೀರು ಸೋರಿದ ನಂತರ ನಿಮಗೆ ಸಿಗುವುದೇ ಹಂಗ್ ಕರ್ಡ್.
- ಒಂದು ಅಗಲವಾದ ಪಾತ್ರೆಗೆ ಸಕ್ಕರೆ ಸೇರಿಸಿ ಫ್ಲೇಮ್ ಕಡಿಮೆ ಇರಿಸಿಕೊಂಡು ಸಕ್ಕರೆ ಕರಗಲು ಬಿಡಿ. ( ನೀರು ಹಾಕಬೇಡಿ)
- ಸಕ್ಕರೆ ಕರಗಿ ಕಂದು ಬಣ್ಣಕ್ಕೆ ಬರುತ್ತದೆ, ಕೈ ಬಿಡದೆ ಅದನ್ನು 5 ನಿಮಿಷದವರೆಗೆ ತಿರುವುತ್ತಿರಿ.
- ಕ್ಯಾರಮಲೈಸ್ ಆದ ಸಕ್ಕರೆಗೆ ಹಾಲು ಸೇರಿಸಿ ತಿರುವಿ, ಸಕ್ಕರೆ ಮಿಶ್ರಣ ಹಾಲಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವರೆಗೆ ಮಿಕ್ಸ್ ಮಾಡಿ.
- ಇನ್ನಷ್ಟು ಸಕ್ಕರೆ ಸೇರಿಸಿ ಅದು ಕರಗುವರೆಗೆ ತಿರುವುತ್ತಿರಿ, ಹಾಲಿನ ಬಣ್ಣ ಸಂಪೂರ್ಣ ಬದಲಾದಾಗ ಫ್ಲೇಮ್ ಆಫ್ ಮಾಡಿ.
- ಒಂದು ಬೌಲ್‌ನಲ್ಲಿ ಹಂಗ್ ಕರ್ಡ್ ಸೇರಿಸಿ ಚೆನ್ನಾಗಿ ವಿಸ್ಕ್ ಮಾಡಿ.
- ಹಾಲು ಸಕ್ಕರೆ ಮಿಶ್ರಣ ಸ್ವಲ್ಪ ಬೆಚ್ಚಗಿರುವಾಗಲೇ ಸ್ವಲ್ಪ ಸ್ವಲ್ಪವೇ ಹಂಗ್ ಕರ್ಡ್ ಜೊತೆ ಸೇರಿಸಿ ತಿರುವಿ.
- ಈ ಮಿಶ್ರಣವನ್ನು ಗ್ಲಾಸ್ ಅಥವಾ ಮಣ್ಣಿನ ಪುಟ್ಟ ಪುಟ್ಟ ಪಾಟ್‌ಗಳಿಗೆ ಸೇರಿಸಿ ಬಿಗಿಯಾಗಿ ಪ್ಲೇಟ್ ಮುಚ್ಚಿ
- ಎಲ್ಲಾ ಗ್ಲಾಸ್‌ಗಳನ್ನು ಒಂದೆಡೆ ಇಟ್ಟು ಮೇಲೆ ದಪ್ಪನಾದ ಟವೆಲ್ ಅಥವಾ ಬಟ್ಟೆ ಮುಚ್ಚಿ ರಾತ್ರಿಯಿಡೀ ಬಿಡಿ.
- ಮರುದಿನ ಮಿಶ್ರಣ ಗಿಣ್ಣಿನಂತೆ ತಯಾರಾಗಿರುತ್ತದೆ, ಇದನ್ನು ಒಂದು ಪಾತ್ರೆಯೊಳಗೆ ಇಟ್ಟು (ಕೇಕ್‌ನಂತೆ ) 10 ನಿಮಿಷ ಕಡಿಮೆ ಉರಿಯಲ್ಲಿ ಬೇಕ್ ಮಾಡಿ. ( ಈ ಸ್ಟೆಪ್ ಸ್ಕಿಪ್ ಮಾಡಬಹುದು)
- ನಂತರ ಮತ್ತೆ 1 ಗಂಟೆ ರೆಫ್ರಿಜರೇಟರ್‌ನಲ್ಲಿ ಇಟ್ಟು ಮಿಷ್ಟಿ ದೋಯಿಯನ್ನು ಎಂಜಾಯ್ ಮಾಡಿ.
ಮನೆಯಲ್ಲೇ ಕ್ರಿಸ್ಪಿ ಚಿಕನ್ ತಯಾರಿಸಿ ರೆಸ್ಟೋರೆಂಟ್ ದಾರಿ ಮರೆಯಿರಿ; ಸಂಪೂರ್ಣ ಸರಳ ರೆಸಿಪಿ ಇಲ್ಲಿದೆ, ಟ್ರೈ ಮಾಡಿ
ವಿಭಾಗ
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.