ದೀಪಾವಳಿಯಂದು ಮನೆಯನ್ನು ದೀಪಗಳಿಂದ ಹೇಗೆಲ್ಲಾ ಅಲಂಕರಿಸಬಹುದು ಅಂತ ಯೋಚಿಸ್ತಾ ಇದೀರಾ, ಇಲ್ಲಿದೆ ನೋಡಿ ಐಡಿಯಾಗಳು
Oct 28, 2024 03:05 PM IST
ದೀಪಾವಳಿ ಹಬ್ಬಕ್ಕೆ ದೀಪಗಳಿಂದ ಮನೆ ಅಲಂಕಾರ ಮಾಡಲು ಟಿಪ್ಸ್
- ದೀಪಾವಳಿ ಎಂದರೆ ಬೆಳಕಿನ ಹಬ್ಬ. ಈ ಹಬ್ಬದಲ್ಲಿ ಹಣತೆಗಳನ್ನು ಬೆಳಗಿಸುವ ಮೂಲಕ, ಕ್ಯಾಂಡಲ್ ಹಚ್ಚುವ ಮೂಲಕ ಕತ್ತಲೆಯನ್ನು ಹೊಡೆದೋಡಿಲಾಗುತ್ತದೆ. ಈ ದೀಪಾವಳಿಗೆ ಮನೆಯ ಮುಂದೆ, ಮನೆಯ ಟೇರೆಸ್ ಮೇಲೆ ಹೇಗೆಲ್ಲಾ ದೀಪಗಳಿಂದ ಅಲಂಕರಿಸಬಹುದು ಎಂಬ ಐಡಿಯಾ ಇಲ್ಲಿದೆ.
ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯು ಒಂದು. ಈ ಹಬ್ಬದಲ್ಲಿ ದೀಪಗಳಿಂದ ಮನೆ ಬೆಳಗಿಸಲಾಗುತ್ತದೆ. ದೀಪಾವಳಿಯು ಕತ್ತಲೆಯನ್ನು ದೂರ ಮಾಡಿ ಬೆಳಕನ್ನ ಪಸರಿಸುವ ಹಬ್ಬ. ದೀಪಾವಳಿ ಹಬ್ಬದಲ್ಲಿ ಮನೆ ಅಲಂಕಾರಕ್ಕೆ ವಿಶೇಷ ಗಮನ ನೀಡಲಾಗುತ್ತದೆ.
ಈ ವರ್ಷದ ದೀಪಾವಳಿಯಲ್ಲಿ ನಿಮ್ಮ ಮನೆ ಮುಂದೆ, ಮನೆಯ ಒಳಗೆ ಹಾಗೂ ಮನೆಯ ಮೇಲೆ ದೀಪಗಳಿಂದ ಅಲಂಕಾರ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು. ದೀಪಾವಳಿಯಲ್ಲಿ ದೀಪಗಳಿಂದ ಹೇಗೆಲ್ಲಾ ಅಲಂಕಾರ ಮಾಡಬಹುದು ಎನ್ನುವವರಿಗೆ ಇಲ್ಲಿದೆ ಐಡಿಯಾ
ಮನೆಯ ಹೊರಗೆ ಅಲಂಕಾರ
ದೀಪಾವಳಿಯ ದಿನ ಮನೆಯ ವರಾಂಡದ ಪ್ರತಿ ತುದಿಯಲ್ಲೂ ಹಣತೆಯ ದೀಪಗಳನ್ನ ಇರಿಸಿ. ತುಳಸಿ ಕಟ್ಟೆ ಇದ್ದತೆ ತುಳಸಿ ಕಟ್ಟೆಯ ಪ್ರತಿ ಅಂಚಿಗೂ ದೀಪಗಳನ್ನು ಇರಿಸಿ. ಹಣತೆ ಇಲ್ಲ ಎಂದರೆ ಕ್ಯಾಂಡಲ್ ಹಚ್ಚುವ ಮೂಲಕ ಮನೆ ಬೆಳಗಿಸಬಹುದು. ಮೆಟ್ಟಲುಗಳ ಮೇಲೂ ದೀಪ ಇರಿಸುವ ಮೂಲಕ ದೀಪಾವಳಿಯನ್ನು ಸಂಭ್ರಮಿಸಬಹುದು.
ಮನೆಯ ದ್ವಾರ ಬಾಗಿಲು
ಮನೆಯ ದ್ವಾರ ಬಾಗಿಲಿನಿಂದ ಮುಂದೆ ಸುಂದರ ರಂಗೋಲಿ ಚಿತ್ತಾರ ಬಿಡಿಸಿ. ರಂಗೋಲಿಯ ಸುತ್ತಲೂ ದೀಪಗಳನ್ನು ಇರಿಸಿ. ಇದರಿಂದ ನಿಮ್ಮ ಮನೆಯ ಮುಂಬಾಗಿಲ ನೋಟವೇ ಬದಲಾಗುತ್ತದೆ. ಹೂವಿನ ರಂಗೋಲಿಯ ಬಿಡಿಸುವ ಮೂಲಕವೂ ದೀಪಾವಳಿ ಸಂಭ್ರಮ ಹೆಚ್ಚಿಸಬಹುದು.
ದೇವರ ಕೋಣೆ
ದೇವರ ಕೋಣೆಯಲ್ಲಿ ಬಾಗಿಲ ಬಳಿ, ದೇವರ ಕೋಣೆಯೊಳಗೆ ದೀಪಗಳನ್ನು ಇರಿಸುವ ಮೂಲಕ ಅಲಂಕರಿಸಬಹುದು. ಒಂದು ಅಗಲ ಪಾತ್ರೆಯಲ್ಲಿ ನೀರು ತುಂಬಿಸಿ, ಅದರಲ್ಲಿ ಹೂವಿನ ಪಕಳೆಗಳನ್ನು ಹಾಕಿ ಅದರ ಮೇಲೆ ಹಣತೆಯ ದೀಪಗಳನ್ನು ಇರಿಸಬಹುದು. ಇದರಿಂದ ದೇವರ ಮನೆಯ ಅಂದ ಹೆಚ್ಚುತ್ತದೆ.
ಕಿಟಕಿಗಳಲ್ಲಿ ದೀಪ ಇರಿಸಿ
ನಿಮ್ಮ ಮನೆಯ ಕಿಟಕಿಗಳಲ್ಲಿ ಕೂಡ ಹಣತೆ ಬೆಳಗಿಸುವ ಮೂಲಕ ದೀಪಾವಳಿ ಸಮಯದಲ್ಲಿ ಸಂಭ್ರಮ ಹೆಚ್ಚಿಸಬಹುದು.
ಟೆರೆಸ್ ಅಲಂಕಾರ
ಟೆರೆಸ್ ಮೇಲೆ ದೀಪಗಳಿಂದ ಸುಂದರವಾಗಿ ಅಲಂಕರಿಸುವ ಮೂಲಕ ನಿಮ್ಮ ಮನೆಯ ಸೊಬಗು ಹೆಚ್ಚಿಸಬಹುದು. ಟೆರೆಸ್‌ನ ಪಟ್ಟಿಯ ಮೇಲೆ ಉದ್ದಕ್ಕೆ ದೀಪಗಳನ್ನು ಹಚ್ಚಿ, ತುದಿಯಲ್ಲಿ ನಾಲ್ಕು ದೀಪಗಳಿಂದ ಅಲಂಕಾರ ಮಾಡಿ. ಹೀಗೆ ಮಾಡುವುದರಿಂದ ಅಂದ ಹೆಚ್ಚುತ್ತದೆ.
ಕ್ಯಾಂಡಲ್‌ಗಿಂತ ಹಣತೆ ಉತ್ತಮ
ಟೆರೆಸ್ ಮೇಲೆ ಕ್ಯಾಂಡಲ್ ಹಚ್ಚುವುದಕ್ಕಿಂತ ಹಣ ದೀಪ ಹಚ್ಚುವುದು ಉತ್ತಮ. ಹಣತೆ ಬಹಳ ಹೊತ್ತಿನವರೆಗೆ ಉರಿಯುತ್ತದೆ, ಕ್ಯಾಂಡಲ್ ಬೇಗನೆ ಉರಿದು ಹೋಗುತ್ತದೆ. ಅಲ್ಲದೇ ಕ್ಯಾಂಡಲ್ ಮೇಣ ತಾಕಿ ಟೆರೆಸ್ ಅಂಚುಗಳು ಹಾಳಾಗಬಹುದು.
ಟೆರೆಸ್ ಮೆಟ್ಟಿಲುಗಳು
ಟೆರೆಸ್ ಮೆಟ್ಟಿಲುಗಳನ್ನು ಕೂಡ ಹಣತೆಗಳಿಂದ ಸಿಂಗರಿಸಬಹುದು. ಮಧ್ಯದಲ್ಲಿ ನಾಲ್ಕು ನಾಲ್ಕು ದೀಪಗಳಿಂದ ಅಲಂಕಾರ ಮಾಡಬಹುದು. ಹೂವಿನ ಚಿತ್ತಾರ ಅರಳಿಸಿ ಮಧ್ಯದಲ್ಲಿ ದೀಪಗಳನ್ನು ಇರಿಸಿ ದೀಪಗಳನ್ನು ಇಡಬಹುದು.
ಗೇಟ್ ಅಲಂಕಾರ
ಗೇಟ್ ದಂಡೆ ಹಾಗೂ ಸುತ್ತಲೂ ಹಣತೆ ದೀಪಗಳಿಂದ ಅಲಂಕಾರ ಮಾಡಬಹುದು. ಇದರಿಂದ ಸಂಪೂರ್ಣ ಮನೆಯು ದೀಪಗಳಿಂದ ಅಲಂಕಾರ ಮಾಡಿದಂತಾಗುತ್ತದೆ.
ವಿಭಾಗ