logo
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಯಾವಾಗಲೂ ಮೈಕ್ರೋವೇವ್‌ನಲ್ಲಿ ಆಹಾರ ಬಿಸಿಮಾಡಿ ತಿನ್ನುತ್ತೀರಾ? ಹಾಗಾದ್ರೆ ಇನ್ನು ಮುಂದೆ ಆದಷ್ಟು ಕಡಿಮೆ ಬಳಕೆ ಮಾಡಿ, ಇಲ್ಲಿದೆ ರೀಸನ್

ನೀವು ಯಾವಾಗಲೂ ಮೈಕ್ರೋವೇವ್‌ನಲ್ಲಿ ಆಹಾರ ಬಿಸಿಮಾಡಿ ತಿನ್ನುತ್ತೀರಾ? ಹಾಗಾದ್ರೆ ಇನ್ನು ಮುಂದೆ ಆದಷ್ಟು ಕಡಿಮೆ ಬಳಕೆ ಮಾಡಿ, ಇಲ್ಲಿದೆ ರೀಸನ್

Suma Gaonkar HT Kannada

Sep 10, 2024 01:07 PM IST

google News

ಮೈಕ್ರೊವೇವ್‌

  • Microwave: ಸಾಂಪ್ರದಾಯಿಕ ವಿಧಾನ ಬಿಟ್ಟು ಆಧುನಿಕ ವಿಧಾನದಲ್ಲಿ ಮೈಕ್ರೋವೇವ್‌ ಬಳಕೆ ಮಾಡಿ ಆಹಾರ ಬಿಸಿಮಾಡಿಕೊಂಡು ತಿನ್ನುವವರು ಇದನ್ನು ಗಮನಿಸಲೇಬೇಕು. ನಿಮ್ಮ ಆರೋಗ್ಯ ದಿನೇ ದಿನೇ ಕ್ಷೀಣಿಸಲು ಇದೂ ಮುಖ್ಯ ಕಾರಣವಾಗಬಹುದು ನೆನಪಿಡಿ. ಸಮಯ ಸಿಕ್ಕಾಗಲೆಲ್ಲ ಸಾಂಪ್ರದಾಯಿಕ ವಿಧಾನವನ್ನೇ ಪಾಲಿಸಿ. 

ಮೈಕ್ರೊವೇವ್‌
ಮೈಕ್ರೊವೇವ್‌

ಮೈಕ್ರೊವೇವ್‌ಗಳು ಅತ್ಯುತ್ತಮ ತಾಂತ್ರಿಕ ಆವಿಷ್ಕಾರಗಳಲ್ಲಿ ಒಂದಾಗಿದೆ. ಆದರೆ ಇದನ್ನು ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ನೀವು ತಿಳಿದುಕೊಳ್ಳಬೇಕು. ಆಹಾರ ಪದಾರ್ಥಗಳನ್ನು ಕಡಿಮೆ ಸಮಯದಲ್ಲಿ ಮತ್ತೆ ಬಿಸಿ ಮಾಡಬಹುದು ಎಂಬ ಕಾರಣಕ್ಕಾಗಿ ಹಲವಾರು ಜನರು ಇನದನ್ನು ಬಳಕೆ ಮಾಡುತ್ತಾರೆ. ಇನ್ನು ಹೋಟಲ್, ಬೇಕರಿ ಈ ಎಲ್ಲ ಕಡೆಗಳಲ್ಲೂ ಇದರ ಬಳಕೆ ಮಾಡಲಾಗುತ್ತದೆ. ಎಲ್ಲರೂ ಈ ಆಧುನಿಕ ಜಗತ್ತಿನಲ್ಲಿ ಸಮಯದ ಹಿಂದೆ ಓಡುವ ಕಾರಣ ಹೀಗಾಗಿದೆ.ಸಾಂಪ್ರದಾಯಿಕ ವಿಧಾನದಲ್ಲಿ ಯಾವುದೂ ನಡೆಯುವುದಿಲ್ಲ.

ಮೈಕ್ರೊವೇವ್‌ಗಳು ಆಹಾರದ ಅಣುಗಳನ್ನು ಹೀರಿಕೊಳ್ಳುವ ವಿದ್ಯುತ್ಕಾಂತೀಯ ಅಲೆಗಳನ್ನು ಬಳಸುತ್ತವೆ - ಇದು ಆಹಾರವನ್ನು ವೇಗವಾಗಿ ಬೇಯಿಸಲು ಅನುವು ಮಾಡಿಕೊಡುತ್ತದೆ. ತರಕಾರಿಗಳನ್ನು ತುಂಬಾ ಸಣ್ಣ ತುಂಡುಗಳಾಗಿ ಕತ್ತರಿಸುವುದರಿಂದ ಅವು ಕೆಲವು ರೀತಿಯಲ್ಲಿ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ. ಶಕ್ತಿಯನ್ನು ಉತ್ಪಾದಿಸಲು ದೇಹಕ್ಕೆ ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು, ಪ್ರೋಟೀನ್‌ಗಳು ಮತ್ತು ಫೈಬರ್‌ನಂತಹ ಪೋಷಕಾಂಶಗಳು ಬೇಕಾಗುತ್ತದೆ ಮೈಕ್ರೊವೇವ್‌ಗಳು ಈ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ.

ಸಾಂಪ್ರದಾಯಿಕ ವಿಧಾನವೇ ಬೆಸ್ಟ್‌

ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಮೈಕ್ರೋವೇವ್‌ನಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕ್ಕೆ ಅಷ್ಟು ಪ್ರಯೋಜನಕಾರಿ ಅಲ್ಲ. ಎಷ್ಟು ಹೆಚ್ಚಿನ ಸಮಯ ಆಹಾರ ಬೇಯುತ್ತದೆಯೋ ಅಷ್ಟು ಒಳ್ಳೆಯದು ಅದರಲ್ಲೂ ಕಟ್ಟಿಗೆ ಒಲೆಯಲ್ಲಿ ಬೇಯಸಿದ ಆಹಾರಗಳು ಹೆಚ್ಚು ರುಚಿಯಾಗಿ ಮತ್ತು ಆರೋಗ್ಯಕರವಾಗಿ ಇರುತ್ತವೆ.

ಪದೇ ಪದೇ ಬಿಸಿಮಾಡಬೇಡಿ

ಆದರೆ ಇಂದಿನ ದಿನಮಾನದಲ್ಲಿ ಎಲ್ಲರೂ ಅವಸರ ಅವಸರವಾಗಿ ಊಟ ಸೇವನೆ ಮಾಡುವುದು ಹಾಗೂ ಸರಿಯಾಗಿ ಬೇಯಿಸದೆ ಪದಾರ್ಥಗಳನ್ನು ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುತ್ತದೆ. ಇನ್ನು ಹಲವಾರು ದಿನಗಳ ಕಾಲ ಆಹಾರವನ್ನು ಶೇಖರಣೆ ಮಾಡಿ ತಿನ್ನುವುದು ಕೂಡ ಒಳ್ಳೆಯದಲ್ಲ. ಪದೇ ಪದೇ ಆಹಾರವನ್ನು ಬಿಸಿ ಮಾಡುವುದು ಒಳ್ಳೆಯದಲ್ಲ. ನೆನ್ನೆ ಮಾಡಿಟ್ಟ ಪದಾರ್ಥಗಳನ್ನು ಮತ್ತೊಂದೆರಡು ಬಾರಿ ಬಿಸಿಮಾಡಿ ತಿನ್ನುವುದು ತಪ್ಪು.

ಆಹಾರದಲ್ಲಿನ ನ್ಯೂಟ್ರಿಷಿಯನ್ ಮೈಕ್ರೋವೇವ್ ನಲ್ಲಿ ಬೇಯಿಸಿದಗ ಕಡಿಮೆಯಾಗುತ್ತದೆ ಮೈಕ್ರೋವೇವ್‌ನಲ್ಲಿ ಬೇಯಿಸಿದ ಆಹಾರವನ್ನು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚುತ್ತವೆ. WHO ಇದನ್ನು ತಿಳಿಸಿದೆ. ನಿಮ್ಮ ಜೀರ್ಣಶಕ್ತಿ ಕುಂದುತ್ತದೆ ನೇರವಾಗಿ ಮೈಕ್ರೋವೇವ್ ರೇಡಿಯೇಶನ್ ಹಲವು ದಿನಗಳ ಕಾಲ ನಿಮಗೆ ತಾಕಿದರೆ ನಿಮ್ಮ ಕಣ್ಣು ಡ್ಯಾಮೇಜ್ ಆಗುವ ಸಾಧ್ಯತೆಯು ಇರುತ್ತದೆ.

ಪ್ಲಾಸ್ಟಿಕ್ ಬಳಕೆ ಬೇಡ

ಇನ್ನು ಮೈಕ್ರೋವೇವ್ ಒಳಗಡೆ ಪ್ಲಾಸ್ಟಿಕ್ ತಟ್ಟೆಗಳನ್ನು ಇಟ್ಟು ಅದರೊಳಗಡೆ ಆಹಾರವನ್ನು ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಇನ್ನೂ ಹಾನಿಕರ. ನಿಮಗೆ ಸಮಯವಿದ್ದಾಗ ಆದಷ್ಟು ಮೈಕ್ರೋವೇವ್ ಬಳಕೆಯನ್ನು ಕಡಿಮೆ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ