ದೂರದ ಊರುಗಳಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ನಿಮಗೆ ವಾಂತಿ ಆಗುತ್ತಾ? ಹಾಗಾದರೆ ಈ ಸಿಂಪಲ್ ಟಿಪ್ಸ್ ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೆ
Aug 11, 2024 09:01 AM IST
ಪ್ರಯಾಣದ ಸಂದರ್ಭದಲ್ಲಿ ವಾಂತಿ ಆದರೆ ಹೀಗೆ ಮಾಡಿ
- ಮೂವರಲ್ಲಿ ಒಬ್ಬರಿಗೆ ಪ್ರಯಾಣ ಮಾಡುವಾಗ ವಾಂತಿ ಆಗುವ ಸಮಸ್ಯೆ ಇದ್ದೇ ಇರುತ್ತದೆ. ಈ ಸಮಸ್ಯೆಯ ಕಾರಣದಿಂದ ಅವರು ತಮ್ಮ ಪ್ರಯಾಣವನ್ನು ಅನುಭವಿಸಲು ಮತ್ತು ಮಜದಿಂದ ಕಳೆಯಲು ಸಾಧ್ಯವಿಲ್ಲ. ಅಂತವರು ನಾವಿಲ್ಲಿ ನೀಡಿರುವ ಸಲಹೆ ಪಾಲಿಸಿ ನೋಡಿ.
ತುಂಬಾ ಜನರಿಗೆ ಅವರು ಪ್ರಯಾಣ ಮಾಡುವ ಸಂದರ್ಭದಲ್ಲಿ ವಾಂತಿ ಆಗುತ್ತದೆ. ಅದೇ ಕಾರಣಕ್ಕೆ ಅವರು ಪ್ರಯಾಣ ಮಾಡಲು ಭಯ ಪಡುತ್ತಾರೆ. ತುಂಬಾ ಸಲ ಅವರು ದೂರದ ಊರುಗಳ ಪ್ರವಾಸದ ಮಜವನ್ನು ಅನುಭವಿಸಲು ಸಾಧ್ಯವೇ ಆಗುವುದಿಲ್ಲ. ಕೆಲವರು ಪ್ರಯಾಣಿಸಲು ಇಷ್ಟಪಡುತ್ತಾರೆ ಆದರೆ ಧೈರ್ಯ ಮಾಡಲಾರರು. ಬಸ್ಸು, ಕಾರಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ವಾಂತಿ ಆಗದಂತೆ ಇನ್ನು ಕೆಲವರು ಟ್ಯಾಬ್ಲೇಟ್ ತಿನ್ನುತ್ತಾರೆ.
ತಲೆ ತಿರುಗುವಿಕೆ
ಮೂವರಲ್ಲಿ ಒಬ್ಬರಿಗೆ ಈ ಸಮಸ್ಯೆ ಇದೆ. ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ತಲೆಸುತ್ತು, ವಾಂತಿ ಬರುವುದು ಅನೇಕರನ್ನು ಕಾಡುವ ಸಮಸ್ಯೆ. ಆದರೆ ಅದರಿಂದ ಹೊರಬರಲು ಕೆಲವು ವಿಧಾನಗಳನ್ನು ಟ್ರೈ ಮಾಡಬಹುದು. ಇನ್ನು ಕೆಲವರಿಗೆ ರಸ್ತೆಯಲ್ಲಿ ತಿರುವುಗಳಿದ್ದರೆ ತುಂಬಾ ತೊಂದರೆ ಆಗುತ್ತದೆ. ಘಾಟ್ ಪ್ರದೇಶಗಳಲ್ಲಿ ಮತ್ತು ಕಾರ್‌ನಲ್ಲಿ AC ಆನ್ ಆಗಿದ್ದರೆ ತುಂಬಾ ಕಷ್ಟಪಡುತ್ತಾರೆ. ಇನ್ನು ಕೆಲವರಿಗೆ ತಲೆ ಸುತ್ತುತ್ತದೆ. ಕಿವಿಯ ಸ್ನಾಯುಗಳಿಗೆ ತೊಂದರೆ ಆದಾಗ ತಲೆತಿರುಗುವಿಕೆ ಆಗುತ್ತದೆ.
ಕಿವಿಯ ಸ್ನಾಯು ಕಾರಣ
ವಾಂತಿಯಾಗಲು ಕಿವಿಯ ಭಾಗವಾಗಿರುವ ‘ಲ್ಯಾಬಿರಿಂಥೀಸ್’ ಕಾರಣ ಎನ್ನುತ್ತಾರೆ ತಜ್ಞರು. ನಮ್ಮ ಕಿವಿಯಲ್ಲಿನ ಚಕ್ರವ್ಯೂಹದ ರೀತಿಯಲ್ಲಿ ಕಾಣುವ ಒಂದು ಸಣ್ಣ ರಚನೆ ಇರುತ್ತದೆ. ಅದು ಮೆದುಳಿಗೆ ಸರಿಯಾಗಿ ಸಂಕೇತ ನೀಡದೇ ಇದ್ದಲ್ಲಿ ಈ ರೀತಿ ಸಮಸ್ಯೆ ಆಗುತ್ತದೆ. ಮುಂದಿನ ಸೀಟಿನಲ್ಲಿ ಕೂರುವುದಕ್ಕಿಂತ ಕಾರಿನ ಹಿಂದೆ ಕುಳಿತರೆ ವಾಂತಿ ಬರುವ ಸಾಧ್ಯತೆ ಹೆಚ್ಚು.
ನೀವೇನು ಮಾಡಬೇಕು?
ಸರಿಯಾಗಿ ಗಾಳಿ ಆಡುವಂತೆ ಮಾಡಿಕೊಳ್ಳಿ. ಕಿಟಕಿಯ ಎಲ್ಲ ಗಾಜುಗಳನ್ನು ಸ್ವಲ್ಪವಾದರೂ ತೆರೆದಿಡಿ. ಶುಂಠಿ ಇಟ್ಟುಕೊಳ್ಳಿ. ಇದನ್ನು ನಿಮ್ಮ ಬಾಯಲ್ಲಿ ಸಣ್ಣ ತುಂಡಾಗಿಸಿಕೊಂಡು ಆಗಾಗ ಜಗಿಯುತ್ತಾ ಇರಿ. ಈ ರೀತಿ ಮಾಡಿದರೆ ವಾಂತಿ ಆಗುವ ಸಂಭವನೀಯತೆ ಕಡಿಮೆ ಇರುತ್ತದೆ. ಇನ್ನು ನಿಂಬು ಕೂಡ ಪ್ರಯೋಜನಕ್ಕೆ ಬರುತ್ತದೆ. ತ್ವರಿತ ಪರಿಹಾರಕ್ಕಾಗಿ ನೀವು ಬಿಸಿ ನೀರಿನಲ್ಲಿ ಒಂದು ಚಮಚ ಶುಂಠಿ ಪುಡಿಯನ್ನು ಹಾಕಿ ಕುಡಿಯಬಹುದು.
ಏಲಕ್ಕಿ ಬಳಸಿ
ಎರಡೇ ಎರಡು ಏಲಕ್ಕಿ ಬೀಜಗಳನ್ನು ನಿಮ್ಮ ಬಾಯಲ್ಲಿಡಿ. ಅದನ್ನು ಆಗಾಗ ಜಗಿಯುತ್ತಾ ಇರಿ. ಹೀಗೆ ಮಾಡುವುದರಿಂದಲೂ ನಿಮಗೆ ವಾಂತಿ ಆಗುವ ಸಂಭವನೀಯತೆ ಕಡಿಮೆ ಇರುತ್ತದೆ. ನಿಮ್ಮ ಬಾಯಿಯ ರುಚಿಯ ಬದಲಾವಣೆಯಿಂದಲೂ ನೀವು ಪರಿಹಾರವನ್ನು ಪಡೆಯುತ್ತೀರಿ.
ತುಳಸಿ ಎಲೆಗಳನ್ನು ಇಟ್ಟುಕೊಳ್ಳಿ
ತುಳಸಿ ಎಲೆಗಳನ್ನು ಕಿವುಚಿ ಅವುಗಳ ವಾಸನೆಯನ್ನು ನೋಡಿ. ನಿಂಬುವನ್ನು ಮೂಸಿ. ಈ ರೀತಿ ಮಾಡುವುದರಿಂದಲೂ ವಾಂತಿ ಕಂಟ್ರೋಲ್ ಆಗುತ್ತದೆ. ಪ್ರಯಾಣದ ಮಧ್ಯದಲ್ಲಿ ಆಗಾಗ ವಿರಾಮ ತೆಗೆದುಕೊಳ್ಳಿ. ಕಾರಿನಿಂದ ಕೆಳಗೆ ಇಳಿದು ಬೇರೆ ವಾತಾವರಣ ಅನುಭವಿಸಿ.
ವಿಭಾಗ