logo
ಕನ್ನಡ ಸುದ್ದಿ  /  ಜೀವನಶೈಲಿ  /  Banking Courses: ದ್ವಿತೀಯ ಪಿಯುಸಿ ಬಳಿಕ ಕಾಮರ್ಸ್‌ ಸ್ಟುಡೆಂಟ್‌ ಕಲಿಯಬಹುದಾದ 23 ಬ್ಯಾಂಕಿಂಗ್‌ ಕೋರ್ಸ್‌ಗಳು

Banking Courses: ದ್ವಿತೀಯ ಪಿಯುಸಿ ಬಳಿಕ ಕಾಮರ್ಸ್‌ ಸ್ಟುಡೆಂಟ್‌ ಕಲಿಯಬಹುದಾದ 23 ಬ್ಯಾಂಕಿಂಗ್‌ ಕೋರ್ಸ್‌ಗಳು

Praveen Chandra B HT Kannada

Apr 10, 2024 11:08 AM IST

google News

Banking Courses: ದ್ವಿತೀಯ ಪಿಯುಸಿ ಬಳಿಕ ಕಾಮರ್ಸ್‌ ಸ್ಟುಡೆಂಟ್‌ ಕಲಿಯಬಹುದಾದ 23 ಕೋರ್ಸ್‌

    • Banking Courses After 12th Commerce: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಈ ಸಂದರ್ಭದಲ್ಲಿ ಕಾಮರ್ಸ್‌ ವಿದ್ಯಾರ್ಥಿಗಳು ಮುಂದೆ ಏನು ಕೋರ್ಸ್‌ ಮಾಡಬಹುದು ಎಂದು ಚಿಂತಿಸುತ್ತ ಇರಬಹುದು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕರಿಯರ್‌ ಪಡೆಯಲು ಬಯಸುವವರಿಗೆ 23 ಕೋರ್ಸ್‌ಗಳ ವಿವರ ನೀಡಲಾಗಿದೆ.
Banking Courses: ದ್ವಿತೀಯ ಪಿಯುಸಿ ಬಳಿಕ ಕಾಮರ್ಸ್‌ ಸ್ಟುಡೆಂಟ್‌ ಕಲಿಯಬಹುದಾದ 23 ಕೋರ್ಸ್‌
Banking Courses: ದ್ವಿತೀಯ ಪಿಯುಸಿ ಬಳಿಕ ಕಾಮರ್ಸ್‌ ಸ್ಟುಡೆಂಟ್‌ ಕಲಿಯಬಹುದಾದ 23 ಕೋರ್ಸ್‌ (Photo Credit: Canva)

ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯುವುದು ಎಲ್ಲರ ಕನಸು. ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಕೋರ್ಸ್‌ಗಳನ್ನು ಕಲಿತವರು ಸುಲಭವಾಗಿ ಬ್ಯಾಂಕ್‌ ಉದ್ಯೋಗ ಪಡೆಯಬಹುದು. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಈ ಸಂದರ್ಭದಲ್ಲಿ ಕಾಮರ್ಸ್‌ ವಿದ್ಯಾರ್ಥಿಗಳು ಮುಂದೆ ಏನು ಕೋರ್ಸ್‌ ಮಾಡಬಹುದು ಎಂದು ಚಿಂತಿಸುತ್ತ ಇರಬಹುದು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕರಿಯರ್‌ ಪಡೆಯಲು ಬಯಸುವವರಿಗೆ ಇಲ್ಲೊಂದಿಷ್ಟು ಕೋರ್ಸ್‌ಗಳ ವಿವರ ನೀಡಲಾಗಿದೆ. ಅಂದರೆ, ಡಿಪ್ಲೊಮಾ ಇನ್‌ ಫೈನಾನ್ಸ್‌ ಆಂಡ್‌ ಬ್ಯಾಂಕಿಂಗ್‌, ಬಿಕಾಂ ಇನ್‌ ಬ್ಯಾಂಕಿಂಗ್‌, ಬಿಬಿಎ ಫೈನಾನ್ಸ್‌ ಆಂಡ್‌ ಬ್ಯಾಂಕಿಂಗ್‌ ಇತ್ಯಾದಿ ಕೋರ್ಸ್‌ಗಳ ವಿವರ ಇಲ್ಲಿದೆ.

ಪಿಯುಸಿ ಕಾಮರ್ಸ್‌ ಓದಿರುವವರಿಗೆ ಬ್ಯಾಂಕಿಂಗ್‌ ಕೋರ್ಸ್‌ (Banking Courses After 12th Commerce)

ಹಣಕಾಸು ಮತ್ತು ಬ್ಯಾಂಕಿಂಗ್‌ ವಿಭಾಗವು ವಿಶೇಷ ಕೌಶಲ ಬಯಸುವ ವಲಯ. ಭಾರತದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಬ್ಯಾಂಕಿಂಗ್‌ ಮತ್ತು ಫೈನಾನ್ಸ್‌ ಪದವಿ ಕೋರ್ಸ್‌ಗಳನ್ನು ನೀಡುತ್ತವೆ. ಕೆಲವೊಂದು ಕೋರ್ಸ್‌ಗಳ ವಿವರ ಈ ಮುಂದಿನಂತೆ ಇದೆ.

ಬಿಕಾಂ ಫೈನಾನ್ಸ್‌

ಬಿಎ ಇನ್‌ ಬ್ಯಾಂಕಿಂಗ್‌ ಆಂಡ್‌ ಫೈನಾನ್ಸ್‌

ಬಿಇ ಇನ್‌ ಇಂಟರ್‌ನ್ಯಾಷನಲ್‌ ಬ್ಯಾಂಕಿಂಗ್‌ ಫೈನಾನ್ಸ್‌

ಬಿಬಿಎ ಹಾನರ್ಸ್‌ ಇನ್‌ ಫೈನಾನ್ಸ್‌ ಆಂಡ್‌ ಬ್ಯಾಂಕಿಂಗ್‌

ಬಿಕಾಂ ಇನ್‌ ಬ್ಯಾಂಕಿಂಗ್‌ ಆಂಡ್‌ ಫೈನಾನ್ಸ್‌

ಬ್ಯಾಚುಲರ್‌ ಆಫ್‌ ಬಿಸ್ನೆಸ್‌ ಫೈನಾನ್ಸ್‌ ಆಂಡ್‌ ಬ್ಯಾಂಕಿಂಗ್‌

ಡಿಪ್ಲೊಮಾ ಬ್ಯಾಂಕಿಂಗ್‌ ಕೋರ್ಸ್‌ಗಳು

ದ್ವಿತೀಯ ಪಿಯುಸಿ ಕಾಮರ್ಸ್‌ ಓದಿದ ಬಳಿಕ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ಡಿಪ್ಲೊಮಾ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಕೋರ್ಸ್‌ಗಳು ಪಿಯುಸಿ ಬಳಿಕ ಅಥವಾ ಪದವಿ ಬಳಿಕ ಮಾಡಬಹುದು. ಬ್ಯಾಂಕಿಂಗ್‌ ವಲಯದ ಅಗತ್ಯ ಕೌಶಲಗಳನ್ನು ತಮ್ಮದಾಗಿಸಿಕೊಳ್ಳಬಹುದು. ಕೆಲವೊಂದು ಡಿಪ್ಲೊಮಾ ಕೋರ್ಸ್‌ಗಳ ವಿವರ ಇಲ್ಲಿದೆ. ಸಾಮಾನ್ಯವಾಗಿ ಡಿಪ್ಲೊಮಾ ಕೋರ್ಸ್‌ಗಳು 1 ಅಥವಾ 2 ವರ್ಷದ್ದಾಗಿರುತ್ತವೆ.

ಡಿಪ್ಲೊಮಾ ಇನ್‌ ಅಕ್ಯುರಿಯಲ್‌ ಸೈನ್ಸ್‌

ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌ ಆಂಡ್‌ ಫೈನಾನ್ಸ್‌

ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌, ಫೈನಾನ್ಸ್‌ ಆಂಡ್‌ ಇನ್ಸೂರೆನ್ಸ್‌

ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌ ಲಾ

ಡಿಪ್ಲೊಮಾ ಇನ್‌ ಹೋಮ್‌ ಲೋನ್‌ ಅಡ್ವೈಸಿಂಗ್‌

ರಿಸ್ಕ್‌ ಅನಾಲಿಸ್ಟ್‌

ಬಿಸ್ನೆಸ್‌ ಅನಾಲಿಸ್ಟ್‌

ಅಲ್ಪಾವಧಿಯ ಬ್ಯಾಂಕಿಂಗ್‌ ಕೋರ್ಸ್‌

ಪಿಯುಸಿಯಲ್ಲಿ ಆರ್ಟ್ಸ್‌ ಓದಿದ ಬಳಿಕ ಶಾರ್ಟ್‌ ಟರ್ಮ್‌ ಕೋರ್ಸ್‌ ಮಾಡಲು ಬಯಸುವವರು ವಿವಿಧ ಕೋರ್ಸ್‌ಗಳನ್ನು ಮಾಡಬಹುದು. ಅಂತಹ ಕೆಲವು ಅಲ್ಪಾವಧಿ ಬ್ಯಾಂಕಿಂಗ್‌ ಕೋರ್ಸ್‌ಗಳ ವಿವರ ಇಲ್ಲಿದೆ.

ಪಿಜಿ ಸರ್ಟಿಫಿಕೇಟ್‌ ಇನ್‌ ಬ್ಯಾಂಕಿಂಗ್‌ ಆಂಡ್‌ ಫೈನಾನ್ಸ್‌

ಸರ್ಟಿಫಿಕೇಟ್‌ ಇನ್‌ ಬ್ಯಾಂಕ್‌ ಅನಾಲಿಸಿಸ್‌

ಅಡ್ವಾನ್ಸಡ್‌ ಸರ್ಟಿಫಿಕೇಟ್‌ ಇನ್‌ ಕಮರ್ಷಿಯಲ್‌ ಬ್ಯಾಂಕಿಂಗ್‌

ಸರ್ಟಿಫಿಕೇಟ್‌ ಕೋರ್ಸ್‌ ಇನ್‌ ಬ್ಯಾಂಕಿಂಗ್‌ ಮ್ಯಾನೇಜ್‌ಮೆಂಟ್‌

ಸರ್ಟಿಫಿಕೇಟ್‌ ಇನ್‌ ಬ್ಯಾಂಕಿಂಗ್‌

ಸರ್ಟಿಫಿಕೇಟ್‌ ಇನ್‌ ರೂರಲ್‌ ಬ್ಯಾಂಕಿಂಗ್‌

ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌ ಆಂಡ್‌ ಫೈನಾನ್ಸ್‌

ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌

ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌ ಆಂಡ್‌ ಎಕಾಮಿಕ್ಸ್‌

ಪಿಜಿಡಿ ಇನ್‌ ಮ್ಯಾನೇಜ್‌ಮೆಂಟ್‌ ಇನ್‌ ಇನ್ಸೂರೆನ್ಸ್‌, ಬ್ಯಾಕಿಂಗ್‌ ಆಂಡ್‌ ಫೈನಾನ್ಸಿಯಲ್‌ ಸರ್ವೀಸ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ