ಪರೀಕ್ಷೆ ಸಿದ್ಧತೆ ವೇಳೆ ಭಯ, ಆತಂಕವನ್ನ ದೂರ ಮಾಡಲು ಇಲ್ಲಿವೆ 5 ಟಿಪ್ಸ್
Jan 20, 2024 12:28 PM IST
ಆತಂಕವನ್ನು ದೂರ ಮಾಡಿ ಪೂರ್ಣ ಮನಸ್ಸಿನಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗುವ 5 ಟಿಪ್ಸ್ ತಿಳಿಯಿರಿ
ಒತ್ತಡ, ಭಯ, ಆತಂಕ ಇದ್ದಾಗ ಮನಸ್ಸಿನಲ್ಲಿ ಯಾವುದೇ ವಿಚಾರಗಳು ಉಳಿಯುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಲು ನೆರವಾಗುವ 5 ಟಿಪ್ಸ್‌ಗಳು ಇಲ್ಲಿವೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಬಂತೆಂದರೆ ಸಾಕು ಎಸ್‌ಎಸ್‌ಎಲ್‌ಸಿ, ಪಿಯುಪಿ ಪರೀಕ್ಷೆಗಳ ಸಮಯ. ಈ ಮಹತ್ವದ ಘಟ್ಟದಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಮುಂದಿನ ವ್ಯಾಸಂಗಕ್ಕೆ ಸುಲಭವಾಗಿ ಸೀಟು ಪಡೆಯಬಹುದು. ಇದೇ ಕಾರಣಕ್ಕಾಗಿ ವಿದ್ಯಾರ್ಥಿಗಳು ಪರೀಕ್ಷೆ ಇನ್ನ ಎರಡ್ಮೂರು ತಿಂಗಳು ಇದ್ದಾಗ ಹೆಚ್ಚಿನ ಆಸಕ್ತಿ ವಹಿಸಿ ಓದಿಗೆ ಗಮನ ಕೊಡುವ ಮೂಲಕ ಸಿದ್ಧತೆಗಳನ್ನು ಆರಂಭಿಸುತ್ತಾರೆ.
ಪರೀಕ್ಷೆಗಳಿಗೆ ಅಂತಿಮ ಹಂತದ ತಯಾರಿ ನಡೆಸುವಾಗ ವಿದ್ಯಾರ್ಥಿಗಳಿಗೆ ಸಹಜವಾಗಿ ಸ್ವಲ್ಪ ಆತಂಕ, ಭಯ ಹಾಗೂ ಒತ್ತಡಕ್ಕೆ ಒಳಗಾಗುತ್ತಾರೆ. ಇಂತಹ ವಾತಾವರಣ ಪರೀಕ್ಷಾ ತಯಾರಿಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒತ್ತಡ ಮತ್ತು ಆತಂಕವನ್ನು ಮೀರಿ ಮುನ್ನಡೆದು ಯಶಸ್ಸು ಪಡೆಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಬೇಕು.
ನೀವೂ ಸಹ ಶೀಘ್ರದಲ್ಲೇ ಪರೀಕ್ಷೆ ಬರೆದು ಫಲಿತಾಂಶದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಪರೀಕ್ಷೆಗೂ ಮೊದಲು ನಿಮ್ಮ ಶಾಂತತೆ ಕಾಪಾಡಿಕೊಳ್ಳಲು ನಿಮ್ಮ ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ತಜ್ಞರು ಶಿಫಾರಸು ಮಾಡಿದ ಕೆಲವು ಸಲಹೆಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.
ಕೊನೆಯ ಕ್ಷಣದ ಸಿದ್ಧತೆ ಬೇಡ: ನಿಯಮಿತವಾಗಿ ಅಧ್ಯಯನ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂಬುದು ಸಾಮಾನ್ಯ ಜ್ಞಾನವಾಗಿದೆ. ಆದರೆ ಕೊನೆಯಲ್ಲಿ ಮಾಡಿಕೊಂಡರೆ ಆಯ್ತು ಎಂದು ಸಿದ್ಧತೆಗಳನ್ನ ಮುಂದೂಡಬೇಡಿ. ಪರೀಕ್ಷೆಯ ಅಂತಿಮ ದಿನಗಳನ್ನ ಪರಿಷ್ಕರಣೆಗಾಗಿ ಮಾತ್ರ ಮೀಸಲಿಡಿ. ಈ ಅಭ್ಯಾಸವು ನಿಮ್ಮ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ಆತಂಕವನ್ನು ದೂರ ಮಾಡಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುತ್ತದೆ.
ಸಕಾರಾತ್ಮಕವಾಗಿರಿ: ನಿಮ್ಮ ಸಿದ್ಧತೆಯ ಮಟ್ಟ ಏನೇ ಇರಲಿ, ಯಾವುದೇ ನಕಾರಾತ್ಮಕ ಆಲೋಚನೆಗಳು ನಿಮ್ಮ ಆತ್ಮವಿಶ್ವಾಸಕ್ಕೆ ಅಡ್ಡಿಯಾಗಲು ಬಿಡಬೇಡಿ. ನಿಮ್ಮ ಉದ್ದೇಶಿತ ಗುರಿಯತ್ತ ಸಾಗಲು ಹಿಂದಿನ ಸಾಧನೆಗಳನ್ನ ಒಮ್ಮೆ ಅವಲೋಕನ ಮಾಡಿ. ಈಗಾಗಲೇ ತಿಳಿದಿರುವ ಮತ್ತು ವಿಶ್ವಾಸ ಹೊಂದಿರುವ ವಿಷಯಗಳ ಮೇಲೆ ಕೇಂದ್ರೀಕರಿಸಿ. "ಅಂತಿಮ ದಿನಾಂಕಕ್ಕೆ ಕನಿಷ್ಠ ಒಂದು ವಾರ ಮುಂಚಿತವಾಗಿ ನಿಮ್ಮ ಎಲ್ಲಾ ಪಾಠಗಳನ್ನು ಮುಗಿಸಲು ಪ್ರಯತ್ನಿಸಿ. ಒಮ್ಮೆ ನೀವು ಇದನ್ನು ಮಾಡಿದ ನಂತರ ನೀವು ಅಧ್ಯಯನ ಮಾಡಿಲ್ಲ ಅಥವಾ ನೀವು ಇನ್ನು ಮುಂದೆ ಏನು ಮಾಡಬಹುದಿತ್ತು ಎಂಬುದರ ಬಗ್ಗೆ ಯೋಚಿಸಬೇಡಿ. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಮುಂದುವರಿಯಿರಿ.
ಸ್ನೇಹಿತರೊಂದಿಗೆ ಚರ್ಚೆಯನ್ನು ತಪ್ಪಿಸಿ: ಸ್ನೇಹಿತರು ಮತ್ತು ಗೆಳೆಯರೊಂದಿಗೆ ಸಮಸ್ಯೆಗಳನ್ನು ಚರ್ಚಿಸುವುದು ಮತ್ತು ಪರಿಹರಿಸುವುದು ಖಂಡಿತವಾಗಿಯೂ ಆರೋಗ್ಯಕರ ಅಭ್ಯಾಸವಾಗಿದೆ. ಆದರೆ ಅದಕ್ಕೆ ಒಂದು ಸಮಯವಿದೆ. ಇದನ್ನು ಮುಂಚಿತವಾಗಿಯೇ ಮಾಡಬೇಕು ಮತ್ತು ಖಂಡಿತವಾಗಿಯೂ ಸಿದ್ಧತೆಯ ಕೊನೆ ಗಳಿಯಲ್ಲಿ ಮಾಡಬಾರದು. ಸ್ನೇಹಿತರೊಂದಿಗೆ ವಿಷಯಗಳನ್ನು ಚರ್ಚಿಸುವುದು ಗೊಂದಲ ಮತ್ತು ನಂತರದ ಆತಂಕಕ್ಕೆ ಕಾರಣವಾಗಬಹುದು. ಉದ್ದೇಶಪೂರ್ವಕವಾಗಿ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಯೂ ಇರುತ್ತದೆ. ಈ ಬಗ್ಗೆ ಎಚ್ಚರ ವಹಿಸಿ.
ಫಲಿತಾಂಶದ ಬಗ್ಗೆ ಯೋಚಿಸಬೇಡಿ: ವಿದ್ಯಾರ್ಥಿಗಳಾಗಿ ನೀವು ಸ್ವಾಭಾವಿಕವಾಗಿ ನಿಮ್ಮ ಫಲಿತಾಂಶಗಳ ಬಗ್ಗೆ ಚಿಂತಿತರಾಗುತ್ತೀರಿ ಎಂಬುದು ಅರ್ಥವಾಗುತ್ತದೆ. ಆದರೂ ಅಂತಿಮ ಸಿದ್ಧತೆಯ ಸಮಯದಲ್ಲಿ ಅಂತಹ ಚಿಂತೆಗಳಿಗೆ ಅವಕಾಶ ಕೊಡಬೇಡಿ. ನಿಮ್ಮ ಸಿದ್ಧತೆಯನ್ನು ಅಪಾಯಕ್ಕೆ ತಳ್ಳುವ ಪ್ರತಿಬಂಧಕ ಅಂಶವಾಗಲು ಪ್ರೋತ್ಸಾಹಿಸಬಾರದು.
ಆರೋಗ್ಯಕರ ಜೀವನಶೈಲಿಯನ್ನ ಕಾಪಾಡಿಕೊಳ್ಳಿ: ನಿಮ್ಮ ಸಿದ್ಧತೆಯ ಕೊನೆಯ ಹಂತಗಳಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮ್ಮ ಅಂತಿಮ ಸಿದ್ಧತೆಯ ಸಮಯದಲ್ಲಿ ಆತಂಕದಿಂದ ನಿದ್ದೆಯ ಸಮಯ ಮತ್ತು ಊಟವನ್ನು ಕಡಿತಗೊಳಿಸುವುದನ್ನು ಹೆಚ್ಚಾಗಿ ಮಾಡುತ್ತಾರೆ. ಪರೀಕ್ಷಾ ತಯಾರಿ ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಮತ್ತು ಚೆನ್ನಾಗಿ ತಿನ್ನುವುದು ಮುಖ್ಯ. ದೈಹಿಕ ವ್ಯಾಯಾಮವಾದ ವಾಕಿಂಗ್, ಈಜು, ಸೈಕ್ಲಿಂಗ್ ಅಥವಾ ಆಟಗಳನ್ನು ಆಡುವಂತಹ ಚಟುವಟಿಕೆಗಳನ್ನು ಮಾಡಿ. ಮಾನಸಿಕ ವ್ಯಾಯಾಮವಾದ ಸಂಗೀತವನ್ನು ಕೇಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in
ವನ್ನು ಕಾಪಾಡಿಕೊಳ್ಳಿ.
ವಿಭಾಗ