logo
ಕನ್ನಡ ಸುದ್ದಿ  /  ಜೀವನಶೈಲಿ  /  Degree Jobs: ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಉದ್ಯೋಗಗಳ ವಿವರ, ಈ ಜಾಬ್‌ ಪಡೆಯಲು ಪ್ರಯತ್ನಿಸಿ

Degree Jobs: ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಉದ್ಯೋಗಗಳ ವಿವರ, ಈ ಜಾಬ್‌ ಪಡೆಯಲು ಪ್ರಯತ್ನಿಸಿ

Praveen Chandra B HT Kannada

Aug 23, 2023 06:45 AM IST

google News

ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಉದ್ಯೋಗಗಳ ವಿವರ

    • Highest-paying jobs: ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯುವ ಉದ್ಯೋಗಗಳಲ್ಲಿ ಇನ್ವೆಸ್ಟ್‌ ಬ್ಯಾಂಕರ್ಸ್‌, ಪೈಲಟ್‌, ಎಂಜಿನಿಯರ್‌, ಬಿಸ್ನೆಸ್‌ ಅನಾಲಿಸ್ಟ್‌ ಇತ್ಯಾದಿಗಳು ಸೇರಿವೆ. ಡಿಗ್ರಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಕೆಲವು ಉದ್ಯೋಗಗಳ ವಿವರ ಇಲ್ಲಿದೆ.
ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಉದ್ಯೋಗಗಳ ವಿವರ
ಕಾಲೇಜು ಪದವಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಉದ್ಯೋಗಗಳ ವಿವರ (Unsplash@smartworkscoworking)

ಕೆಲವರಿಗೆ ಡಬಲ್‌ ಡಿಗ್ರಿ ಪಡೆದರೂ ಕಡಿಮೆ ವೇತನದ ವೇತನ ದೊರಕುತ್ತದೆ. ಇನ್ನು ಕೆಲವರಿಗೆ ಪದವಿ ಮುಗಿಸಿದ ತಕ್ಷಣ ಲಕ್ಷಾಂತರ ರೂಪಾಯಿ ವೇತನದ ಉದ್ಯೋಗಗಳು ಕೈಬೀಸಿ ಕರೆಯುತ್ತವೆ. ಡಿಗ್ರಿ ಮುಗಿದ ಬಳಿಕ ಅತ್ಯಧಿಕ ವೇತನ ಪಡೆಯಬಹುದಾದ ಕೆಲವು ಉದ್ಯೋಗಗಳು ಈ ಮುಂದಿನಂತೆ ಇವೆ. ಕಲಿಕೆಯ ಹಂತದಲ್ಲಿಯೇ ಇದಕ್ಕೆ ಸಂಬಂಧಪಟ್ಟ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ನೀವೂ ಕೈತುಂಬಾ ಗಳಿಸಬಹುದು.

ಇನ್ವೆಸ್ಟ್‌ ಬ್ಯಾಂಕರ್ಸ್‌

ಹೂಡಿಕೆ ಬ್ಯಾಂಕರ್‌ಗಳು ಅತ್ಯಧಿಕ ವೇತನ ಪಡೆಯುತ್ತಾರೆ. ಹೇಳಿಕೇಳಿ ಇವರು ಇತರರಿಗೆ ಹಣಕಾಸಿನ ಸಲಹೆ ನೀಡುವವರು. ಅಂದಮೇಲೆ ತಮ್ಮ ಆದಾಯದ ವಿಷಯವನ್ನು ಚೆನ್ನಾಗಿ ಹೇಗೆ ನಿರ್ವಹಿಸಬೇಕೆಂಬುದನ್ನು ಚೆನ್ನಾಗಿ ಬಲ್ಲವರು. ಆರಂಭದಲ್ಲಿಯೇ ಸರಾಸರಿ ಉತ್ತಮ ವೇತನ ಅಂದರೆ ಅಂದಾಜು ವಾರ್ಷಿಕ 12 ಲಕ್ಷ ರೂಪಾಯಿಗಳಷ್ಟು ಸಂಪಾದಿಸಬಹುದು ಎಂದು ಉದ್ಯೋಗ ವೆಬ್‌ಸೈಟೊಂದು ಮಾಹಿತಿ ನೀಡಿದೆ. ಈ ವಿಭಾಗದಲ್ಲಿ ಅನುಭವ ಹೆಚ್ಚಿಸಿಕೊಂಡ ಬಳಿಕ ವರ್ಷಕ್ಕೆ 50 ಲಕ್ಷ ರೂಪಾಯಿಗಿಂತಲೂ ಹೆಚ್ಚು ವೇತನ ಇವರಿಗೆ ದೊರಕುತ್ತದೆಯಂತೆ.

ಪೈಲಟ್‌ಗಳು

ಇದಕ್ಕೆ ಸಂಬಂಧಪಟ್ಟ ಶಿಕ್ಷಣ ಪಡೆಯುವುದು ಎಲ್ಲರಿಗೂ ಕಷ್ಟವಾಗಬಹುದು. ಕೆಲವರು ಮಾತ್ರ ಪೈಲಟ್‌ ತರಬೇತಿ ಪಡೆಯಬಹುದು. ವಾಣಿಜ್ಯ ಪೈಲಟ್‌ ಆಗಲು ತರಬೇತಿ ಪಡೆಯಲು ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ದೇಶದಲ್ಲಿ ಕಮರ್ಷಿಯಲ್‌ ಪೈಲಟ್‌ಗಳಿಗೆ ಆರಂಭಿಕ ಸರಾಸರಿ ವೇತನ ವಾರ್ಷಿಕ 20 ಲಕ್ಷ ರೂಪಾಯಿ.

ಒಎನ್‌ಜಿಸಿ ವಲಯದ ವಿವಿಧ ಉದ್ಯೋಗ

ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ವಲಯದಲ್ಲಿ ಮರೈನ್‌ ಎಂಜಿನಿಯರ್‌, ಸಿವಿಲ್‌ ಎಂಜಿನಿಯರ್‌, ಭೂಗರ್ಭಶಾಸ್ತ್ರಜ್ಞರು ಮೊದಲಾದ ವೃತ್ತಿಪರರ ಅಗತ್ಯ ತುಂಬ ಇರುತ್ತದೆ. ಇದೊಂದು ಲಾಭದಾಯಕ ವಲಯವಾಗಿರುವುದರಿಂದ ಉದ್ಯೋಗಿಗಳಿಗೆ ಹೆಚ್ಚಿನ ವೇತನವನ್ನು ನಿರೀಕ್ಷಿಸಬಹುದು. ಇದಲ್ಲದೇ ಇತರೆ ಸಾಕಷ್ಟು ಸವಲತ್ತುಗಳೂ ಇರುತ್ತವೆ. ಆಗಷ್ಟೇ ಪದವಿ ಸಂಪಾದಿಸಿದವರೂ, ಕಾಲೇಜಿನಿಂದ ನೇರವಾಗಿ, ಈ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಬಹುದು ಎಂದು ವರದಿಗಳು ತಿಳಿಸಿವೆ.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು

ಯಾವಾಗಲೂ ವೃತ್ತಿಪರರ ಕೊರತೆಯಿರುವುದು ಈ ಕ್ಷೇತ್ರದ ವಿಶೇಷ ಎನ್ನಬಹುದು. ಪ್ರತಿಭಾನ್ವಿತ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ ವೇತನ ಉತ್ತಮವಾಗಿರುತ್ತದೆ.

ಬಿಸ್ನೆಸ್‌ ಅನಾಲಿಸ್ಟ್‌

ಮಾರುಕಟ್ಟೆಯಲ್ಲಿರುವ (ಉತ್ಪನ್ನ ಮಾರಾಟಕ್ಕೆ ಸಂಬಂಧಿಸಿದಂತೆ) ಪೈಪೋಟಿಯನ್ನು ವಿಶ್ಲೇಷಿಸುವುದೇ ಇವರ ಮುಖ್ಯ ಕೆಲಸವಾಗಿರುತ್ತದೆ. ಬಿಸ್ನೆಸ್‌ನ್ನು ಬೆಳೆಸುವುದಕ್ಕಾಗಿ ಹೊಸ ಹೊಸ ತಂತ್ರಗಳನ್ನು ಇವರು ಸೂಚಿಸುತ್ತಾರೆ. ಫ್ರೆಷರ್ಸ್‌ಗಳಿಗೆ ಆರಂಭದಲ್ಲಿ ಅಂದಾಜು ಆರು ಲಕ್ಷ ರೂಪಾಯಿ ಸಂಬಳವನ್ನು ನಿರೀಕ್ಷಿಸಬಹುದು. ಅನುಭವ ಹೆಚ್ಚಾದಂತೆ ವೇತನ ಹೆಚ್ಚಾಗುತ್ತ ಹೋಗುತ್ತದೆ.

ಚಾರ್ಟರ್ಡ್‌ ಅಕೌಂಟೆಂಟ್ಸ್‌

ಸಿಎ ಪಾಸ್‌ ಮಾಡುವುದು ಕಠಿಣ ಕೆಲಸ. ಪಾಸ್‌ ಆದ ಮೇಲೆ ಕೈತುಂಬಾ ವೇತನಕ್ಕೆ ಕೊರತೆಯಾಗದು. ಸಿಎ ಉತ್ತೀರ್ಣರಾದವರು ತಿಂಗಳಿಗೆ ಲಕ್ಷಾಂತರ ವೇತನ ಪಡೆಯುತ್ತಿದ್ದಾರೆ. ಫ್ರೆಶರ್ಸ್‌ಗಳಿಗೆ ವೇತನ ಕಡಿಮೆ ಇರಬಹುದು, ಕೆಲವು ವರ್ಷ ಅನುಭವವಾದ ಬಳಿಕ ಕೈತುಂಬಾ ವೇತನ ಗ್ಯಾರಂಟಿ.

ಮೆಡಿಕಲ್‌ ರೆಪ್ರಸೆಂಟೇಟಿವ್‌

ಔಷಧ ಕಂಪನಿಗಳಿಗೆ ಅವುಗಳ ಉತ್ಪನ್ನವನ್ನು ಮಾರಾಟ ಮಾಡುವುದಕ್ಕೆ ಮೆಡಿಕಲ್‌ ರೆಪ್ರಸೆಂಟೇಟಿವ್‌ಗಳು ಬೇಕೇ ಬೇಕು. ಬಹುತೇಕ ಇಂತಹ ಕಂಪನಿಗಳಿಗೆ ಜಾಹೀರಾತುಗಳಿಂದ ಪ್ರಯೋಜನವಿಲ್ಲ. ಆದ್ದರಿಂದ ಇವು ವೈದ್ಯರ ಬಳಿಗೆ ಮೆಡಿಕಲ್‌ ರೆಪ್ರಸೆಂಟೇಟಿವ್‌ಗಳನ್ನು ಕಳಿಸುವ ವಿಧಾನವನ್ನು ಅನುಸರಿಸುತ್ತಿವೆ. ಕಂಪನಿಗಳ ಆದಾಯವು ಇಂತಹವರನ್ನೇ ಅವಲಂಬಿಸಿರುವುದರಿಂದ ಇವರಿಗೆ ಹೆಚ್ಚಿನ ಸಂಬಳ ಪಾವತಿಸುತ್ತವೆ.

ಇವು ಕೆಲವು ಉದಾಹರಣೆಗಳಷ್ಟೇ, ಈಗ ಹೊಸ ಬಗೆಯ ತಂತ್ರಜ್ಞಾನಗಳು ಆಗಮಿಸುತ್ತಿವೆ. ಮೆಷಿನ್‌ ಲರ್ನಿಂಗ್‌, ಎಐ ಇತ್ಯಾದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತಿ ಪಡೆದವರಿಗೆ ಅತ್ಯಧಿಕ ವೇತನ ದೊರಕುತ್ತಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ