logo
ಕನ್ನಡ ಸುದ್ದಿ  /  ಜೀವನಶೈಲಿ  /  ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಪರ್ಫೆಕ್ಟ್ ಟೈಮ್‌ ಟೇಬಲ್ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಪರ್ಫೆಕ್ಟ್ ಟೈಮ್‌ ಟೇಬಲ್ ಇಲ್ಲಿದೆ

Raghavendra M Y HT Kannada

Jan 19, 2024 01:04 PM IST

google News

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಬೇಕಾದ ವೇಳಾಪಟ್ಟಿ ಇಲ್ಲಿದೆ.

  • ಶಾಲೆಯ ಪಾಠದ ಜೊತೆಗೆ ಎಸ್‌ಎಲ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಸಿದ್ಧತೆ ಹೇಗಿರಬೇಕು. ಮನೆಯ ಓದು ಹೇಗಿದ್ದರೆ ಉತ್ತಮ ಅಂಕ ಗಳಿಸಬಹುದು. ಪರ್ಫೆಕ್ಟ್ ಟೈಮ್ ಟೇಬಲ್ ಹೀಗಿರಲಿ. 

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಬೇಕಾದ ವೇಳಾಪಟ್ಟಿ ಇಲ್ಲಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಬೇಕಾದ ವೇಳಾಪಟ್ಟಿ ಇಲ್ಲಿದೆ.

ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC Exam 2024) ಪ್ರತಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಅಂತಲೇ ಹೇಳುತ್ತಾರೆ. ಇಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರೆ ಮುಂದಿನ ಕೋರ್ಸ್‌ಗಳನ್ನು ಪಡೆಯಲು ಸಹಾಯವಾಗುತ್ತದೆ. ಹೀಗಾಗಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರು ಹೆಚ್ಚು ಕಾಳಜಿ ವಹಿಸುತ್ತಾರೆ. ಟ್ಯೂಷನ್, ಮನೆ ಪಾಠ ಹೀಗೆ ಓದಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಆತಂಕದ ಭಾವನೆ ಬರೋದು ಸಹಜ. ಇದಕ್ಕೆ ಏಕೈಕ ಪರಿಹಾರವೆಂದರೆ ಸಿಗುವ ಅಲ್ಪ ಸ್ವಲ್ಪ ಸಮಯ ಮತ್ತು ಸ್ಟಡಿ ಹಾಲಿಡೇಸ್‌ನಲ್ಲಿ ಪರೀಕ್ಷೆ ಸಿದ್ಧತೆಗಳಿಗಾಗಿ ಒಂದು ವೇಳಾಪಟ್ಟಿ ತಯಾರಿಸಿ ಅದರಂತೆ ಓದೋಕೆ ಶುರು ಮಾಡುವುದು. ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಪರೀಕ್ಷಾ ಸಿದ್ಧತೆಯ ವೇಳಾಪಟ್ಟಿ ಇಲ್ಲಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಸಿದ್ಧತೆಗಾಗಿ ಟೈಮ್ ಟೇಬಲ್

ಬೆಳಗ್ಗೆ 5.30: ನಿದ್ದೆಯಿಂದ ಎದ್ದು ಬೆಳಗಿನ ಕಾರ್ಯಗಳನ್ನ ಮುಗಿಸಿಕೊಳ್ಳುವುದು

ಬೆಳಗ್ಗೆ 6.30: ತುಂಬಾ ಕಷ್ಟ ಎನ್ನುವಂತ ವಿಷಯನ್ನ ಸಾಧ್ಯವಾದ ಮಟ್ಟಿಗೆ ಕಲಿಯುವುದು

ಬೆಳಗ್ಗೆ 9.00: ಬೆಳಗಿನ ತಿಂಡಿ ಮುಗಿಸುವುದು

ಬೆಳಗ್ಗೆ 9.30: ಈ ಹಿಂದೆ ಓದಿರುವುದನ್ನ ಮನನ ಮಾಡಿಕೊಳ್ಳಿ

ಬೆಳಗ್ಗೆ 9.45: ಇತರೆ ವಿಷಯಗಳತ್ತ ಗಮನ ಹರಿಸಿ

ಬೆಳಗ್ಗೆ 11.45: ತ್ವರಿತ ಪುರಾವರ್ತನೆ ಮಾಡಿ

ಮಧ್ಯಾಹ್ನ: ಬ್ರೇಕ್ ತೆಗೆದುಕೊಂಡು ಮಧ್ಯಾಹ್ನದ ಊಟ ಮುಗಿಸಿ

ಮಧ್ಯಾಹ್ನ 1.00: ನಿಮ್ಮ ಅಚ್ಚುಮೆಚ್ಚಿನ ವಿಷಯವನ್ನು ಅಧ್ಯಯನ ಮಾಡಿ

ಸಂಜೆ 4.00: ಮತ್ತೊಂದು ಬ್ರೇಕ್ ತಗೊಳ್ಳಿ

ಸಂಜೆ 4.30: ತುಂಬಾ ಸುಲಭ ಎನಿಸುವ ವಿಷಯವನ್ನು ಅಧ್ಯಯನ ಮಾಡಿ

ಸಂಜೆ 6.00: ಮತ್ತೊಮ್ಮೆ ಬ್ರೇಕ್ ತಗೊಳ್ಳಿ

ಸಂಜೆ 7.00: ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯುವ ಅಭ್ಯಾಸ ಮಾಡಿ

ರಾತ್ರಿ 8.30: ತಪ್ಪದೆ ಊಟವನ್ನು ಮಾಡಿ

ರಾತ್ರಿ 9.30: ಈ ಸಮಯವನ್ನ ಸೂತ್ರಗಳು ಮತ್ತು ಸಮೀಕರಣಗಳಿಗೆ ನೀಡಿ

ರಾತ್ರಿ 10.00: ನಿದ್ರೆ ಮಾಡಿ

ನಿಮ್ಮ ಅಗತ್ಯಗಳನ್ನು ನೋಡಿಕೊಂಡು ಈ ವೇಳಾಪಟ್ಟಿಯನ್ನು ಅನುಸರಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯುವ ಅವಕಾಗಳು ಇರುತ್ತವೆ. ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾ ಪಟ್ಟಿ

25-03-2024 (ಸೋಮವಾರ) - ಪ್ರಥಮ ಭಾಷೆ (ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್+, ಇಂಗ್ಲಿಷ್ NCERT, ಸಂಸ್ಕೃತ)

27-03-2024 - (ಬುಧವಾರ) - ಸಮಾವಜ ವಿಜ್ಞಾನ (ಕೋರ್ ಸಬ್ಜೆಕ್ಟ್)

30-03-2024 (ಶನಿವಾರ) - ವಿಜ್ಞಾನ, ರಾಜ್ಯಶಾಸ್ತ್ರ

02-04-2024 (ಮಂಗಳವಾರ) - ಗಣಿತ, ಸಮಾಜ ಶಾಸ್ತ್ರ

03-04-2024 (ಬುಧವಾರ) - ಅರ್ಥಶಾಸ್ತ್ರ

04-04-2024 (ಗುರುವಾರ) - ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)

06-04-2024 (ಶನಿವಾರ) - ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ