logo
ಕನ್ನಡ ಸುದ್ದಿ  /  ಜೀವನಶೈಲಿ  /  Bakrid Recipe: ಅನ್ನಕ್ಕೂ ಚಪಾತಿಗೂ ನಾನ್‌ಗೂ ಬೆಸ್ಟ್‌ ಕಾಂಬಿನೇಷನ್‌ ಮಟನ್‌ ಕೀಮಾ; ನೀವೂ ಮನೆಯಲ್ಲಿ ತಯಾರಿಸಿ; ರೆಸಿಪಿ ಇಲ್ಲಿದೆ ನೋಡಿ

Bakrid Recipe: ಅನ್ನಕ್ಕೂ ಚಪಾತಿಗೂ ನಾನ್‌ಗೂ ಬೆಸ್ಟ್‌ ಕಾಂಬಿನೇಷನ್‌ ಮಟನ್‌ ಕೀಮಾ; ನೀವೂ ಮನೆಯಲ್ಲಿ ತಯಾರಿಸಿ; ರೆಸಿಪಿ ಇಲ್ಲಿದೆ ನೋಡಿ

Reshma HT Kannada

Jun 22, 2023 07:12 PM IST

google News

ಮಟನ್‌ ಕೀಮಾ

    • Mutton Keema Recipe: ಮಟನ್‌ ಕೀಮಾ ತಿಂದವರಿಗೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವುದು ಸಹಜ. ಹಾಗಂತ ಪ್ರತಿ ಬಾರಿ ಹೋಟೆಲ್‌ಗೋ, ಢಾಬಾಕ್ಕೊ ಹೋಗಲು ಸಾಧ್ಯವಿಲ್ಲ. ಹಾಗಂತ ತಿನ್ನದೇ ಇರಲು ಆಗುವುದಿಲ್ಲ. ಅದಕ್ಕಾಗಿ ಮನೆಯಲ್ಲೇ ಕೀಮಾ ತಯಾರಿಸಿ ರುಚಿ ನೋಡಿ. ಮಟನ್‌ ಕೀಮಾ ತಯಾರಿಸುವ ವಿಧಾನ ಇಲ್ಲಿದೆ. 
ಮಟನ್‌ ಕೀಮಾ
ಮಟನ್‌ ಕೀಮಾ

ಮಟನ್‌ ಖೀಮಾ ನಾನ್‌ವೆಜ್‌ ಪ್ರಿಯರಿಗೆ ಅಚ್ಚುಮೆಚ್ಚು. ಅನ್ನ, ಚಪಾತಿ, ಪರೋಟ, ನಾನ್‌ಗಳ ಜೊತೆ ಕೀಮಾ ಬೆಸ್ಟ್‌ ಕಾಂಬಿನೇಷನ್‌. ಢಾಬಾ ಶೈಲಿಯ ಕೀಮಾ ಇನ್ನೂ ಸೂಪರ್‌ ಆಗಿರುತ್ತೆ. ಅದೆಲ್ಲಾ ಸರಿ ಈಗಾಕ್ಯೆ ಕೀಮಾ ಮಾತು ಅಂತೀರಾ. ಇನ್ನೇನು ಬಕ್ರೀದ್‌ ಸಮೀಪದಲ್ಲಿದೆ. ಈ ಬಕ್ರೀದ್‌ಗೆ ಕೀಮಾ ತಯಾರಿಸಿ ಸವಿಯಬಹುದು. ಮಳೆಗಾಲಕ್ಕೂ ಇದು ಸೂಪರ್‌ ಟೇಸ್ಟಿ ಅನ್ನಿಸುತ್ತೆ. ಹಾಗಾದ್ರೆ ಇನ್ನೇಕೆ ತಡ, ಮಟನ್‌ ಕೀಮಾ ತಯಾರಿಸೋಕೆ ರೆಡಿ ಆಗಿ. ರೆಸಿಪಿ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು: ಚಿಕ್ಕದಾಗಿ ಹೆಚ್ಚಿಕೊಂಡ ಮಟನ್‌ - 120 ಗ್ರಾಂ, ನೆನೆಸಿಟ್ಟ ಬಟಾಣಿ - 1 ಕಪ್‌, ಚಕ್ಕೆ - ಅರ್ಧ ಇಂಚು, ಈರುಳ್ಳಿ - ಹೆಚ್ಚಿಕೊಂಡಿದ್ದು ಅರ್ಧ ಕಪ್‌, ಶುಂಠಿ ಪೇಸ್ಟ್-‌ ಕಾಲು ಚಮಚ, ಖಾರದ ಪುಡಿ - ಸ್ವಲ್ಪ, ಉಪ್ಪು - ಅರ್ಧ ಚಮಚ, ನೀರು - ನಾಲ್ಕು ಕಪ್‌, ತುಪ್ಪು - 2 ಚಮಚ, ಲವಂಗ - 3, ಕಾಳುಮೆಣಸು - 3, ಟೊಮೆಟೊ - 1/2 ಕಪ್‌ ಹೆಚ್ಚಿಕೊಂಡಿದ್ದು, ಕಾಳುಮೆಣಸು - 3, ಬೆಳ್ಳುಳ್ಳಿ ಪೇಸ್ಟ್‌ - ಕಾಲು ಚಮಚ, ಗರಂ ಮಸಾಲೆ - ಕಾಲು ಚಮಚ, ಅರಿಸಿನ ಪುಡಿ - ಕಾಲು ಚಮಚ

ತಯಾರಿಸುವ ವಿಧಾನ: ಪಾನ್‌ಗೆ ತುಪ್ಪ ಹಾಕಿ ಬಿಸಿ ಮಾಡಿ, ಕರಗಿದ ಮೇಲೆ ಅದಕ್ಕೆ ಏಲಕ್ಕಿ, ಚಕ್ಕೆ, ಕಾಳುಮೆಣಸು, ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ, ಈರುಳ್ಳಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಟೊಮೆಟೊ, ಗರಂ ಮಸಾಲೆ ಪುಡಿ, ಖಾರದ ಪುಡಿ, ಹೆಚ್ಚಿಕೊಂಡ ಮಟನ್‌ ತುಂಡು, ಅರಿಸಿನ ಪುಡಿ ಹಾಗೂ ಉಪ್ಪು ಸೇರಿಸಿ. ಈ ಎಲ್ಲವನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಅದಕ್ಕೆ ಹಸಿರು ಬಟಾಣಿ ಸೇರಿಸಿ ಕೈಯಾಡಿಸಿ. ನಂತರ ನಾಲ್ಕು ಕಪ್‌ ನೀರು ಹಾಕಿ ಕುಕ್ಕರ್‌ನಲ್ಲಿ 2 ರಿಂದ 3 ವಿಶಲ್‌ ಕೂಗಿಸಿ. ನಂತರ ಇನ್ನೊಂದು ಪಾನ್‌ ಬಿಸಿ ಮಾಡಿ ಕೀಮಾ ಡ್ರೈ ಆಗುವವರೆಗೂ ಕುದಿಸಿ. ಗ್ರೇವಿ ಬೇಕಿದ್ದರೆ ಸ್ವಲ್ಪ ಮೊದಲೇ ಗ್ಯಾಸ್‌ ಆಫ್‌ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಅಲಂಕರಿಸಿ ಸವಿಯಲು ಕೊಡಿ.

ಇದನ್ನೂ ಓದಿ

Bakrid Recipe: ಚಿಕನ್‌ ಕಲ್ಮಿ, ಹರ್ಯಾಲಿ ಕಬಾಬ್‌ ಸವಿಯೋ ಆಸೆ ಆಗಿದ್ಯಾ; ಬಕ್ರೀದ್‌ಗೆ ಮನೆಯಲ್ಲೇ ಬಿಸಿ ಬಿಸಿ ಕಬಾಬ್‌ ತಯಾರಿಸಿ ಸವಿಯಿರಿ

ಮಳೆಗಾಲದಲ್ಲಿ ಬಿಸಿ ಬಿಸಿ ಕಬಾಬ್‌ ಸಿಕ್ಕರೆ ಆಹಾ, ಸ್ವರ್ಗ ಇಲ್ಲೇ ಇದೆ ಅನ್ನಿಸದೇ ಇರದು. ಅದರಲ್ಲೂ ಇದು ಬಕ್ರೀದ್‌ ಸಮಯ. ಈ ಬಕ್ರೀದ್‌ಗೆ ಕಲ್ಮಿ ಕಬಾಬ್‌, ಹರ್ಯಾಲಿ ಕಬಾಬ್‌ ತಯಾರಿಸಿ ಸವಿಯಬಹುದು. ಕಡಿಮೆ ಸಾಮಗ್ರಿ ಬಳಸಿ, ಮನೆಯಲ್ಲಿ ಸುಲಭವಾಗಿ ತಯಾರಿಸುವ ಕಬಾಬ್‌ ರೆಸಿಪಿ ಇಲ್ಲಿದೆ.

ಕಲ್ಮಿ ಕಬಾಬ್‌, ಹರಿಯಾಲಿ ಕಬಾಬ್‌... ಈ ಹೆಸರುಗಳನ್ನು ಕೇಳ್ತಾ ಇದ್ರೆ, ಬಾಯಲ್ಲಿ ನೀರೂರದೇ ಇರೋಕೆ ಸಾಧ್ಯನಾ, ಖಂಡಿತಾ ಇಲ್ಲ. ಚಿಕನ್‌ ಪ್ರಿಯರಿಗೆ ಈ ಕಬಾಬ್‌ಗಳು ಫೇವರಿಟ್‌ ಅಂತಾನೇ ಹೇಳಬಹುದು. ಅದರಲ್ಲೂ ಮಳೆಗಾಲದಲ್ಲಿ ಬಿಸಿಬಿಸಿ ಕಬಾಬ್‌ ತಿಂತಾ ಇದ್ರೆ ನಿಜಕ್ಕೂ ಸ್ವರ್ಗಕ್ಕೆ ಮೂರೇ ಗೇಣು ಅಂತಾರಲ್ಲ ಹಾಗೆ, ಅನ್ನಿಸೋದು ಸಹಜ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ