logo
ಕನ್ನಡ ಸುದ್ದಿ  /  ಜೀವನಶೈಲಿ  /  ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನ; ಕೊನೆಯ ದಿನಾಂಕ, ಅರ್ಹತೆಯ ಮಾಹಿತಿ ಹೀಗಿದೆ

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗಾಗಿ ಅರ್ಜಿ ಆಹ್ವಾನ; ಕೊನೆಯ ದಿನಾಂಕ, ಅರ್ಹತೆಯ ಮಾಹಿತಿ ಹೀಗಿದೆ

Raghavendra M Y HT Kannada

Jan 28, 2024 12:59 PM IST

google News

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ

  • ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಫೆಬ್ರವರಿ 5 ಕೊನೆಯ ದಿನಾಂಕವಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ಇತರೆ ಮಾಹಿತಿ ಇಲ್ಲಿದೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ
ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ

ಬೆಂಗಳೂರು: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಲಾಗಿದೆ.

51 ಹುದ್ದೆಗಳಿಗೆ ಅರ್ಹ ಮತ್ತು ಅನುಭವ ಹೊಂದಿರುವ ಯುವ ವೃತ್ತಿಪರರು ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ವಿವರವಾದ ಅಧಿಸೂಚನೆಯನ್ನು https://prcrdpr.karnataka.gov.in ವೆಬ್‌ಸೈಟ್ ಮೂಲಕ ಪಡೆದುಕೊಂಡು ಅದೇ ವೆಬ್‌ಸ್ಟೈ ಮೂಲಕವೇ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡಬೇಕು.

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಯಾವುದೇ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗುವುದಿಲ್ಲ. ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಕೂಡ ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 22ರ ಸೋಮವಾರದಿಂದ ಆರಂಭವಾಗಿದ್ದು, ಫೆಬ್ರವರಿ 5ರ ಸೋಮವಾರ ಸಂಜೆ 5 ಗಂಟೆಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಉದ್ದೇಶ

  • ಸಾರ್ವಜನಿಕ ನೀತಿಯನ್ನು ಅರಿತ ಯುವ ವೃತ್ತಿಪರರ ಸಮೂಹವನ್ನು ಅಭಿವೃದ್ಧಿಪಡಿಸುವುದು
  • ಕ್ಷೇತ್ರಗಳ ಸ್ಥಿತಿಗತಿ ಮಾಹಿತಿ ಸಂಗ್ರ
  • ಸ್ಥಳೀಯ ಆಡಳಿತ ಬಗ್ಗೆ ತಿಳುವಳಿಕೆ
  • ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ನಲ್ಲಿ ಸಂಭಾವನೆ

  • ಪ್ರಯಾಣ ಭತ್ಯೆ ಸೇರಿ ತಿಂಗಳಿಗೆ 61,500 ರೂಪಾಯಿ ನೀಡಲಾಗುತ್ತದೆ

ಅರ್ಹತೆಯ ಮಾನದಂಡಗಳು

  • ವಯಸ್ಸು 32 ವರ್ಷಕ್ಕಿಂತ ಕಡಿಮೆ ಇರಬೇಕು
  • ಕ್ಷೇತ್ರದ ಅನುಭವ ಹೊಂದಿರುವ ಸ್ನಾತಕ ಪದವೀಧರರಿಗೆ ಆದ್ಯತೆ (ಎಂಫಿಲ್, ಡಿಫಿಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ)
  • ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು
  • ಕನ್ನಡ ಭಾಷಾಜ್ಞಾನ ಕಡ್ಡಾಯ (ಮಾತನಾಡುವದು, ಓದುವುದು ಮತ್ತು ಬರೆಯುವುದು)
  • 1 ರಿಂದ 2 ವರ್ಷಗಳ ಕ್ಷೇತ್ರದ ಅನುಭವ ಹೊಂದಿರುವ ಪದವೀಧರರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್‌ ಆಯ್ಕೆ ವಿಧಾನ

  • ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪ್ರತಿ ತಾಲೂಕಿನ ಒಬ್ಬ ಫೆಲೋಗಳಂತೆ ಒಟ್ಟು 51 ಫೆಲೋಗಳ ನೇಮಕಾತಿ ಮಾಡಿಳ್ಳಲಾಗುತ್ತದೆ
  • ಫೆಲೋಗಳನ್ನು ಅರ್ಹತೆಯ ಆಧಾರದ ಮೇಲೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ವೆಬ್‌ಸೈಟ್ https://prcrdpr.karnataka.gov.in ಗೆ ಭೇಟಿ ನೀಡಿ. (This copy first appeared in Hindustan Times Kannada website. To read more like this please logon to kannada.hindustantime.com).

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ