ಮಾರ್ಚ್ 28 ರೊಳಗೆ ಯುಪಿಎಸ್‌ಸಿಯ ಆರ್ಥಿಕ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ -UPSC Recruitment 2024
Mar 11, 2024 12:49 PM IST
ಮಾರ್ಚ್ 28 ರೊಳಗೆ ಯುಪಿಎಸ್‌ಸಿಯ ಆರ್ಥಿಕ ಅಧಿಕಾರಿ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಲಿಂಕ್ ಹಾಗೂ ಹುದ್ದೆಗಳ ವಿವರ ಇಲ್ಲಿದೆ.
- UPSC Recruitment 2024: ಯುಪಿಎಸ್‌ಸಿ ಆರ್ಥಿಕ ಅಧಿಕಾರಿ ಮತ್ತು ಇತರ ಹುದ್ದೆಗಳ ನೇಮಕಾತಿಯನ್ನು ನಡೆಸುತ್ತಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. upsc.gov.in ವೈಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ.
ಕೇಂದ್ರ ಲೋಕಸೇವಾ ಆಯೋಗವು (UPSC) ಆರ್ಥಿಕ ಅಧಿಕಾರಿ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 28 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಕೆಳಗೆ ಓದಿ.
ಯುಪಿಎಸ್‌ಸಿ ಆರ್ಥಿಕ ಅಧಿಕಾರಿ ಹುದ್ದೆಗಳ ವಿವರ
- ಮಾನವಶಾಸ್ತ್ರಜ್ಞ: 8 ಹುದ್ದೆಗಳು
- ಸಹಾಯಕ ಕೀಪರ್: 1 ಹುದ್ದೆ
- ವಿಜ್ಞಾನಿ 'ಬಿ': 3 ಹುದ್ದೆಗಳು
- ಸಂಶೋಧನಾ ಅಧಿಕಾರಿ / ಯೋಜನಾ ಅಧಿಕಾರಿ: 1 ಹುದ್ದೆ
- ಸಹಾಯಕ ಗಣಿ ಭೂವಿಜ್ಞಾನಿ: 1 ಹುದ್ದೆ
- ಸಹಾಯಕ ಖನಿಜ ಅರ್ಥಶಾಸ್ತ್ರಜ್ಞ: 1 ಹುದ್ದೆ
- ಆರ್ಥಿಕ ಅಧಿಕಾರಿ: 9 ಹುದ್ದೆಗಳು
- ಹಿರಿಯ ಉಪನ್ಯಾಸಕ / ಸಹಾಯಕ ಪ್ರಾಧ್ಯಾಪಕ: 3 ಹುದ್ದೆಗಳು
- ಹಿರಿಯ ಉಪನ್ಯಾಸಕ / ಸಹಾಯಕ ಪ್ರಾಧ್ಯಾಪಕ: 1 ಹುದ್ದೆ
ಯುಪಿಎಸ್‌ಸಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತಾ ಮಾನದಂಡ
ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ತಕ್ಕಂತೆ ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.
ಯುಪಿಎಸ್‌ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಶುಲ್ಕ
ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಮೂಲಕ ಅಥವಾ ಯಾವುದೇ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಅಥವಾ ವೀಸಾ / ಮಾಸ್ಟರ್ / ರುಪೇ / ಕ್ರೆಡಿಟ್ / ಡೆಬಿಟ್ ಕಾರ್ಡ್ / ಯುಪಿಐ ಪಾವತಿ ಮೂಲಕ ಮಾತ್ರ ಅಭ್ಯರ್ಥಿಗಳು 25 / - (ಶುಲ್ಕ ಪಾವತಿಯಿಂದ ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯಿತಿ) ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.
ರೈಲ್ವೆ ಇಲಾಖೆಯ 9,144 ಟೆಕ್ನಿಷಿಯನ್ ಹುದ್ದಳಿಗೆ ಅರ್ಜಿ ಸಲ್ಲಿಸಿ
ಮಾರ್ಚ್ 9 ರಿಂದ ರೈಲ್ವೆ ಇಲಾಖೆಯ 9,144 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಮಂಡಳಿ-ಆರ್‌ಆರ್‌ಬಿ ಮುಂದಾಗಿದೆ. ಆಸಕ್ತಿರು ಏಪ್ರಿಲ್ 8 ರೊಗಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಟೆಕ್ನಿಷಯನ್ ಗ್ರೇಡ್-1 ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್-3 ರ ವಿವಿಧ ವಿಭಾಗಗಳಲ್ಲಿ ಒಟ್ಟು 9,144 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ.
ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿ
ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಯುಪಿಸಿಯ ಅಧಿಕೃತ ವೆಬ್‌ಸೈಟ್ upsconline.nic.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನೌಕರರ ರಾಜ್ಯ ವಿಮಾನ ನಿಗಮದಲ್ಲಿ ಒಟ್ಟು 1,930 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 7 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 27 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಾಗಿ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ವನ್ನು ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com )