logo
ಕನ್ನಡ ಸುದ್ದಿ  /  ಜೀವನಶೈಲಿ  /  Symptoms Of Stroke: ಸ್ಟ್ರೋಕ್‌ಗೆ ಕಾರಣ ಏನು? ಇದರ ಲಕ್ಷಣಗಳೇನು? ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತ ಮಾಹಿತಿ ಇದು

Symptoms of Stroke: ಸ್ಟ್ರೋಕ್‌ಗೆ ಕಾರಣ ಏನು? ಇದರ ಲಕ್ಷಣಗಳೇನು? ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತ ಮಾಹಿತಿ ಇದು

HT Kannada Desk HT Kannada

Oct 26, 2022 10:21 PM IST

google News

ಪಾರ್ಶ್ವವಾಯುವಿಗೆ ಕಾರಣ ಹಾಗೂ ಮುನ್ನೆಚರಿಕೆಗಳು

    • ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಹೆಚ್ಚು. ರಕ್ತದ ಕೊರತೆಯಿಂದ ಮಿದುಳಿನ ಅಂಗಾಶದ ಜೀವಕೋಶಗಳು ಸಾಯುತ್ತವೆ. ಇದು ಮೆದುಳಿಗೆ ಹಾನಿ ಆಗಿ ಕೊನೆಗೆ ಜೀವಕ್ಕೆ ಅಪಾಯ ತಂದೊಡ್ಡುತ್ತದೆ.
ಪಾರ್ಶ್ವವಾಯುವಿಗೆ ಕಾರಣ ಹಾಗೂ ಮುನ್ನೆಚರಿಕೆಗಳು
ಪಾರ್ಶ್ವವಾಯುವಿಗೆ ಕಾರಣ ಹಾಗೂ ಮುನ್ನೆಚರಿಕೆಗಳು (PC: Unsplash)

ಹೃದಯಾಘಾತದಷ್ಟೇ ಬಹಳ ಗಂಭೀರವಾದ ಸಮಸ್ಯೆ ಎಂದರೆ ಅದು ಪಾರ್ಶ್ವವಾಯು. ಅಕ್ಟೋಬರ್‌ 29 ವಿಶ್ವ ಪಾರ್ಶ್ವವಾಯು ದಿನ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶವೇ ವಿಶ್ವ ಪಾರ್ಶ್ವವಾಯು ದಿನದ ಮಹತ್ವ. ಈ ಸಂದರ್ಭದಲ್ಲಿ ಪಾರ್ಶ್ವವಾಯು ಸಂಭವಿಸುವ ಮುನ್ನ ಏನೆಲ್ಲಾ ಲಕ್ಷಣಗಳು ಕಂಡು ಬರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಉಪಯುಕ್ತವಾಗಿದೆ.

ಸ್ಟ್ರೋಕ್‌ನ ರೋಗ ಲಕ್ಷಣಗಳು ಸೌಮ್ಯವಾಗಿರುತ್ತವೆ ಮತ್ತು ಇದು ನಿರ್ದಿಷ್ಟವಾಗಿರುವುದಿಲ್ಲ. ಮೊದಲು ತಲೆ ತಿರುಗುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ವಾರಗಟ್ಟಲೆ ಮುಂದುವರೆಯಬಹುದು. ಆದ್ದರಿಂದ ಸಣ್ಣ ಪುಟ್ಟ ಸಮಸ್ಯೆಯನ್ನು ಕೂಡಾ ನಿರ್ಲಕ್ಷ್ಯ ವಹಿಸದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ.

ಪಾರ್ಶ್ವವಾಯು ಏಕೆ ಸಂಭವಿಸುತ್ತದೆ..?

ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಹೆಚ್ಚು. ರಕ್ತದ ಕೊರತೆಯಿಂದ ಮಿದುಳಿನ ಅಂಗಾಶದ ಜೀವಕೋಶಗಳು ಸಾಯುತ್ತವೆ. ಇದು ಮೆದುಳಿಗೆ ಹಾನಿ ಆಗಿ ಕೊನೆಗೆ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಹಾಗೇ ಪಾರ್ಶ್ವವಾಯು ಇಷೆಮಿಕ್‌ ಸ್ಟ್ರೋಕ್‌ ಹಾಗೂ ಹೆಮರೇಜ್‌ ಸ್ಟ್ರೋಕ್‌ ಎಂದು ಎರಡು ವಿಧಗಳಲ್ಲಿ ಸಂಭವಿಸುತ್ತದೆ. ಮೊದಲೆಲ್ಲಾ ವೃದ್ಧಾಪ್ಯದಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚಾಗಿತ್ತು. ಆದರೆ ಈಗ ಬದಲಾದ ಜೀವನಶೈಲಿಯಿಂದ ಯುವಜನತೆಯಲ್ಲೇ ಹೆಚ್ಚಾಗಿ ಈ ಸಮಸ್ಯೆ ಸಂಭವಿಸುತ್ತಿದೆ. ಹಾಗೇ ಮಧ್ಯ ವಯಸ್ಕರಲ್ಲಿ ಪಾರ್ಶ್ವವಾಯು ಅಪಾಯದ ಅಂಶಗಳನ್ನು ಕೂಡಲೇ ಗುರುತಿಸಿಲು ಸಾಧ್ಯವಾಗುವುದಿಲ್ಲ ಆದ್ದರಿಂದ ಆಗ್ಗಾಗ್ಗೆ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ಮಟ್ಟದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

ಪಾರ್ಶ್ವವಾಯು ಲಕ್ಷಣಗಳು ಏನು..?

ತಲೆ ತಿರುಗುವಿಕೆ, ಕೈ ಹಾಗೂ ತೋಳುಗಳಲ್ಲಿ ದೌರ್ಬಲ್ಯ, ಕಾಲುಗಳಲ್ಲಿ ದೌರ್ಬಲ್ಯ, ಜ್ಞಾಪಕ ಶಕ್ತಿ ಕುಂದುವುದು, ಮಾತನಾಡಲು ತೊದಲುವುದು, ತಲೆನೋವು, ದೃಷ್ಟಿ ಮಂಜಾಗುವುದು ಇವೆಲ್ಲಾ ಸಮಸ್ಯೆಗಳು ದೀರ್ಘಕಾಲ ಇದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಈ ಮೇಲೆ ತಿಳಿಸಿದ ಸಮಸ್ಯೆಗಳನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಮುಂದಿನ ದಿನಗಳಲ್ಲಿ ಇದೇ ಸಮಸ್ಯೆಗಳಿಂದ ಸ್ಟ್ರೋಕ್‌ ಸಂಭವಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ನೀವು ಬಹಳ ಮುಂಜಾಗ್ರತೆ ವಹಿಸಬೇಕು.

ಪಾರ್ಶ್ವವಾಯು ಬರದಂತೆ ತಡೆಯುವುದು ಹೇಗೆ..?

ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಪರಿಹಾರ ಇದೆ. ಆದರೆ ಸಮಸ್ಯೆ ಬಂದಾಗ ಪರಿತಪಿಸುವ ಬದಲು ಮುನ್ನೆಚರಿಕೆ ವಹಿಸಿದರೆ ಪಾರ್ಶ್ವವಾಯುವಂತ ತೊಂದರೆ ನಮ್ಮನ್ನು ಕಾಡದಂತೆ ಮಾಡಬಹುದು. ಅದರಲ್ಲಿ ಉತ್ತಮವಾದ ಆಹಾರ ಪದ್ಧತಿ ಅನುಸರಿಸುವುದು ಬಹಳ ಮುಖ್ಯವಾಗಿದೆ. ನಿಮ್ಮ ಆಹಾರದಲ್ಲಿ ಉಪ್ಪು, ಸಕ್ಕರೆ ಕಡಿಮೆ ಮಾಡಿ. ಹಣ್ಣು, ಹಸಿರು ಸೊಪ್ಪುಗಳು, ತರಕಾರಿಗಳನ್ನು ಹೆಚ್ಚು ಸೇವಿಸಿ. ನೀವು ಅತಿಯಾದ ತೂಕ ಇದ್ದರೆ ಮೊದಲು ತೂಕ ಇಳಿಸುವತ್ತ ಗಮನ ಹರಿಸಿ. ವಾಕಿಂಗ್‌ ಅಥವಾ ನಿಮಗೆ ಅನುಕೂಲವಾಗುವಂತ ವರ್ಕೌಟ್‌ ಮಾಡಿ. ಧೂಮಮಾನ ಹಾಗೂ ಮದ್ಯಪಾನದಿಂದ ಕೂಡಾ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಅಭ್ಯಾಸಗಳಿಂದ ದೂರ ಇರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ