logo
ಕನ್ನಡ ಸುದ್ದಿ  /  ಜೀವನಶೈಲಿ  /  Fashion: ಎತ್ತರವಾಗಿ ಕಾಣಿಸಬೇಕೆ? ಈ ಫ್ಯಾಷನ್‌ ತಂತ್ರಗಳನ್ನು ಅನುಸರಿಸಿ

fashion: ಎತ್ತರವಾಗಿ ಕಾಣಿಸಬೇಕೆ? ಈ ಫ್ಯಾಷನ್‌ ತಂತ್ರಗಳನ್ನು ಅನುಸರಿಸಿ

HT Kannada Desk HT Kannada

Feb 23, 2023 06:21 PM IST

google News

ವೈಟ್‌ ಸ್ಲಿಸ್‌ ಟಾಪ್‌

    • fashion: ನಮ್ಮ ಎತ್ತರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಂದು ಫ್ಯಾಷನ್‌ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಎತ್ತರವಾಗಿ ಕಾಣಬಹುದು. ಸರಿಯಾದ ಉಡುಪು ಹಾಗೂ ಸ್ಟೈಲಿಂಗ್‌ ತಂತ್ರದ ಮೂಲಕ ಎತ್ತರವಾಗಿ ಕಾಣುವ ಜೊತೆಗೆ ಆತ್ಮವಿಶ್ವಾಸದಿಂದಿರಲು ಸಾಧ್ಯ.
ವೈಟ್‌ ಸ್ಲಿಸ್‌ ಟಾಪ್‌
ವೈಟ್‌ ಸ್ಲಿಸ್‌ ಟಾಪ್‌

ದಪ್ಪ ಇರುವವರಿಗೆ ತೆಳ್ಳಗಾಗುವ ಚಿಂತೆ, ತೆಳ್ಳಗೆ ಇರುವವರಿಗೆ ಹೇಗಪ್ಪಾ ದಪ್ಪ ಆಗೋದು ಎನ್ನುವ ಯೋಚನೆ, ಇನ್ನು ಕುಳ್ಳ ಇರುವವರಿಗೆ ಉದ್ದ ಆಗೋದು ಹೇಗೆ ಅಂತ ಚಿಂತೆ. ದಪ್ಪ ಇರುವವರು ತೆಳ್ಳಗಾಗಬಹುದು, ತೆಳ್ಳಗೆ ಇರುವವರು ದಪ್ಪ ಆಗಬಹುದು. ಆದರೆ ನಮ್ಮ ಎತ್ತರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಂದು ಫ್ಯಾಷನ್‌ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಎತ್ತರವಾಗಿ ಕಾಣಬಹುದು. ಸರಿಯಾದ ಉಡುಪು ಹಾಗೂ ಸ್ಟೈಲಿಂಗ್‌ ತಂತ್ರದ ಮೂಲಕ ಎತ್ತರವಾಗಿ ಕಾಣುವ ಜೊತೆಗೆ ಆತ್ಮವಿಶ್ವಾಸದಿಂದಿರಲು ಸಾಧ್ಯ.

ನಮಗೆ ಯಾವ ದಿರಿಸು ಧರಿಸಲು ಸೂಕ್ತ ಎನ್ನಿಸುತ್ತದೆ, ಯಾವ ರೀತಿಯ ಮೇಕಪ್‌ ಇಷ್ಟ ಎನ್ನಿಸುತ್ತದೋ ಅದು ನಮಗೆ ಆರಾಮ ಎನ್ನಿಸಿದರೆ ಅದು ನಮ್ಮ ಫ್ಯಾಷನ್‌ ಎನ್ನಬಹುದು. ಆದರೆ ನಾವು ಈಗಿರುವ ಕಾಲದಲ್ಲಿ ಫ್ಯಾಷನ್‌ಗೆ ಅವಕಾಶ ಕೊರತೆಯಿಲ್ಲ. ಫ್ಯಾಷನ್‌ ಭಿನ್ನತೆಯನ್ನು ಅಳವಡಿಸಿಕೊಳ್ಳಲು ಯಾವ ಕೊರತೆ ಕೂಡ ಇಲ್ಲ. ನೀವು ಸರಳವಾಗಿ, ಸಹಜವಾಗಿ ಸುಂದರವಾಗಿ ಕಾಣಬೇಕೆ? ಈ ಕೆಲವು ಫ್ಯಾಷನ್‌ ವಿಧಾನಗಳಿಂದ ಸುಂದರವಾಗಿ ಕಾಣುವ ಜೊತೆಗೆ ಉದ್ದವಾಗಿ ಕಾಣುವಂತೆ ಭಾಸವಾಗಬಹುದು.

ಹೈ ಹೀಲ್ಡ್‌ ಸಿಲೌಟ್‌

ಪಂಪ್ಸ್‌ ಅಥವಾ ಹೈ ಹೀಲ್ಡ್‌ ಚಪ್ಪಲಿಗಳನ್ನು ಧರಿಸುವುದರಿಂದ ನಿಮ್ಮ ಎತ್ತರದಲ್ಲಿ ಕೊಂಚ ವ್ಯತ್ಯಾಸವನ್ನು ಕಾಣಬಹುದು. ಎತ್ತರವಾಗಿ ಕಾಣಿಸುವ ವಿಷಯದಲ್ಲಿ ಇವು ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ. ಚರ್ಮದ ಬಣ್ಣ, ಕೆಂಪು ಬಣ್ಣ ಅಥವಾ ಉಣ್ಣೆಯ ಬಣ್ಣದ ಪಂಪ್‌ಗಳನ್ನು ಬದಿಯಲ್ಲಿ ಸೀಳಿದಂತಿರುವ ಅಥವಾ ಸೈಡ್‌ ಕಟ್‌ ಇರುವ ಉದ್ದನೆಯ ಡ್ರೆಸ್‌ನೊಂದಿಗೆ ಧರಿಸಬಹುದು. ಅತಿಯಾಗಿ ಜಗಮಗಿಸುವ, ಹೊಳೆಯುವ ಪಂಪ್‌ ಧರಿಸುವುದು ಸೂಕ್ತವಲ್ಲ. ಸರಳ ಎನ್ನಿಸುವ ಪಂಪ್ಸ್‌ ನಿಮ್ಮ ಎತ್ತರವನ್ನು ಹೆಚ್ಚಿಸುವ ಜೊತೆಗೆ ಸ್ಟೈಲಿಸ್ಟ್‌ ಲುಕ್‌ ಕೂಡ ಸಿಗುವಂತೆ ಮಾಡುತ್ತದೆ.

ಕ್ರಾಪ್‌ ಟಾಪ್‌

ಕ್ರಾಪ್‌ ಟಾಪ್‌ ಎಲ್ಲಾ ಕಾಲದಲ್ಲೂ ಧರಿಸಲು ಸೂಕ್ತ ಎನ್ನಿಸುತ್ತದೆ. ಇದು ಜೀನ್ಸ್‌, ಸ್ಕರ್ಟ್‌, ಮಿಡ್ಡಿ ಜೊತೆ ಧರಿಸಲು ಸೂಕ್ತ. ಮೈಗಂಟದಂತಿರುವ ಜೀನ್ಸ್‌ ಜೊತೆ ಕ್ರಾಪ್‌ ಟಾಪ್‌ ಧರಿಸಲು ಹೆಚ್ಚು ಸೂಕ್ತವಾಗಿರುತ್ತದೆ.

ಗಿಡ್ಡನೆಯ ಕೂದಲು

ಉದ್ದನೆಯ ಕೂದಲು ಎಲ್ಲರಿಗೂ ಇಷ್ಟ, ಹೆಚ್ಚಿನವರು ಉದ್ದ ಕೂದಲನ್ನು ಮೆಚ್ಚುತ್ತಾರೆ. ಒಮ್ಮೆ ಕೂದಲು ಕತ್ತರಿಸಿದರೆ ಮತ್ತೆ ಬೆಳೆಯವುದು ಕಷ್ಟ. ಆದರೆ ನಿಮ್ಮ ಮನಸ್ಸು ಒಪ್ಪಿದರೆ ಗಿಡ್ಡ ಕೂದಲು ಮಾಡಿಕೊಳ್ಳಿ. ಗಿಡ್ಡ ಕೂದಲು ಕುತ್ತಿಗೆಯನ್ನು ಎತ್ತರವಾಗಿ ಕಾಣುವಂತೆ ಮಾಡುತ್ತದೆ. ಗಿಡ್ಡ ಕೂದಲಿದ್ದಾಗ ವಿ ನೆಕ್‌ ವಿನ್ಯಾಸದ ಅಥವಾ ಶಾರ್ಟ್‌ ಡ್ರೆಸ್‌ ಅನ್ನು ಧರಿಸಿದಾಗ ಎತ್ತರಕ್ಕೆ ಕಾಣುವ ಜೊತೆಗೆ ಸುಂದರವಾಗಿಯೂ ಕಾಣಬಹುದು.

ಕಟೌಟ್‌ ಮತ್ತು ಸ್ಲಿಟ್ಸ್‌

ಸೈಡ್‌ ಕಟ್‌ ಇರುವ ಅಥವಾ ಸ್ಲಿಟ್ಸ್‌ ಇರುವ ಡ್ರೆಸ್‌ ಅನ್ನು ಧರಿಸುವುದರಿಂದ ಎತ್ತರವಾಗಿ ಕಾಣಿಸಬಹುದು. ಪಾದದವರೆಗೆ ಉದ್ದನೆಯ ಸ್ಲಿಟ್ಸ್‌ ಟಾಪ್‌, ಮೊಣಕಾಲಿಗಿಂತ ಕೊಂಚ ಉದ್ದದ ಸ್ಲಿಟ್ಸ್‌ ಟಾಪ್‌ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. ಇದು ನಿಮಗೆ ಹಾಟ್‌ ಲುಕ್‌ ನೀಡುತ್ತದೆ. ಲ್ಯಾವೆಂಡರ್‌, ಕೆಂಪು, ಬಿಳಿ ಅಥವಾ ಉಣ್ಣೆಯ ಬಣ್ಣದ ಟಾಪ್‌ಗಳು ಧರಿಸಲು ಹೆಚ್ಚು ಸೂಕ್ತ. ಚಳಿಗಾಲದಲ್ಲಿ ಉದ್ದನೆಯ ಕೋಟ್‌ ಅಥವಾ ಬೂಟ್ಸ್‌ ಜೊತೆ ಧರಿಸಿದರೆ ಸಖತ್‌ ಟ್ರೆಂಡಿಯಾಗಿರುತ್ತದೆ.

ಸೀರೆ

ಸೀರೆಯನ್ನು ಎಲ್ಲಾ ವಿಶೇಷ ಸಂದರ್ಭದಲ್ಲೂ ಧರಿಸಬಹುದು. ಅದರಲ್ಲೂ ಹ್ಯಾಂಡ್‌ ಪ್ರಿಂಟ್‌ ಇರುವ ಸೀರೆಯನ್ನು ಈಗಲೂ ಎಲ್ಲರೂ ಮೆಚ್ಚುತ್ತಾರೆ. ಇದು ಸದ್ಯದ ಹೆಚ್ಚು ಪ್ರಚಲಿತದಲ್ಲಿದೆ ಕೂಡ. ಹ್ಯಾಂಡ್‌ ಪ್ರಿಂಟ್‌ ಇರುವ ರೇಷ್ಮೆ ಸೀರೆ ನಿಮ್ಮ ಎತ್ತರವನ್ನು ಹೆಚ್ಚಿಸುವ ಜೊತೆಗೆ ಅಂದಕ್ಕೂ ಹೇಳಿ ಮಾಡಿಸಿದಂತಿರುತ್ತದೆ. ನೀಲಿ ಬಣ್ಣದ ಸೀರೆ ಸುಂದರವಾಗಿ, ಅಡಂಬರವಾಗಿ ಕಾಣುವಂತೆ ಮಾಡುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ