logo
ಕನ್ನಡ ಸುದ್ದಿ  /  ಜೀವನಶೈಲಿ  /  Fathers Day 2024: ಅಪ್ಪಂದಿರ ದಿನಕ್ಕೆ ಸಿಂಪಲ್‌ ಆದ, ಬೆಸ್ಟ್‌ ಉಡುಗೊರೆ ಕೊಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ 5 ಗಿಫ್ಟ್‌ ಐಡಿಯಾ

Fathers Day 2024: ಅಪ್ಪಂದಿರ ದಿನಕ್ಕೆ ಸಿಂಪಲ್‌ ಆದ, ಬೆಸ್ಟ್‌ ಉಡುಗೊರೆ ಕೊಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ 5 ಗಿಫ್ಟ್‌ ಐಡಿಯಾ

Reshma HT Kannada

Jun 16, 2024 08:48 AM IST

google News

ಅಪ್ಪಂದಿರ ದಿನದಂದು ಸಿಂಪಲ್‌ ಆಗಿ, ಬೆಸ್ಟ್‌ ಉಡುಗೊರೆ ಕೊಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ 5 ಗಿಫ್ಟ್‌ ಐಡಿಯಾಗಳು

    • ಅಪ್ಪಂದಿರ ದಿನ ಹತ್ತಿರದಲ್ಲೇ ಇದೆ. ಈ ಬಾರಿಯ ಫಾದರ್ಸ್‌ಡೇಗೆ ನೀವು ನಿಮ್ಮ ಅಪ್ಪ ಮೆಚ್ಚುವ ಉಡುಗೊರೆ ನೀಡುವ ಮೂಲಕ ಈ ದಿನವನ್ನು ವಿಶೇಷವನ್ನಾಗಿಸಬೇಕು ಎಂದುಕೊಂಡಿದ್ದರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಗಿಫ್ಟ್‌ ಐಡಿಯಾಗಳು.
ಅಪ್ಪಂದಿರ ದಿನದಂದು ಸಿಂಪಲ್‌ ಆಗಿ, ಬೆಸ್ಟ್‌ ಉಡುಗೊರೆ ಕೊಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ 5 ಗಿಫ್ಟ್‌ ಐಡಿಯಾಗಳು
ಅಪ್ಪಂದಿರ ದಿನದಂದು ಸಿಂಪಲ್‌ ಆಗಿ, ಬೆಸ್ಟ್‌ ಉಡುಗೊರೆ ಕೊಡಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ 5 ಗಿಫ್ಟ್‌ ಐಡಿಯಾಗಳು

ಅಪ್ಪ ನಮ್ಮ ಬದುಕಿನ ಆಧಾರ ಸ್ತಂಭ. ನಮ್ಮ ಬದುಕಿನಲ್ಲಿ ಎಂಥದ್ದೇ ಕ್ಷಣ ಎದುರಾದರೂ ನಮ್ಮೊಂದಿಗೆ ಹೆಗಲಾಗಿ ನಿಲ್ಲುವವರು ಅಪ್ಪ. ನಮ್ಮೆಲ್ಲಾ ಕನಸುಗಳನ್ನು ತನ್ನ ಕನಸು ಎಂದುಕೊಂಡು ಬದುಕುವ ನಿಸ್ವಾರ್ಥ ಜೀವಿ. ನಾನು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನೆಲ್ಲಾ ಕಣ್ಮುಂದೆ ತಂದು ಇಡುವ ಅಪ್ಪ ಎಂದಿಗೂ ತನ್ನ ಖುಷಿ, ಕನಸುಗಳ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ತನ್ನ ಮಕ್ಕಳ ಸಾಮರ್ಥ್ಯದ ಬಗ್ಗೆ ಅಚಲವಾದ ನಂಬಿಕೆ ಇರುವ ವ್ಯಕ್ತಿ ಅಪ್ಪ, ಅವರು ತನ್ನೆಲ್ಲಾ ಬದುಕನ್ನು ಮಕ್ಕಳಿಗಾಗಿ ಸವೆದು ಬಿಡುತ್ತಾರೆ. ಇಂತಹ ಸ್ವಾರ್ಥ ರಹಿತ ಅಪ್ಪ ಪ್ರೀತಿ ಹಾಗೂ ತ್ಯಾಗಕ್ಕೆ ಗೌರವ ಸಲ್ಲಿಸಲು ಉದ್ದೇಶದಿಂದ ಪ್ರತಿವರ್ಷ ಜೂನ್‌ ತಿಂಗಳಲ್ಲಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ.

ಜೂನ್‌ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನಾಚರಣೆ ಇದೆ. ಈ ಬಾರಿ ಜೂನ್‌ 16 ಅಪ್ಪಂದಿರ ದಿನ. ಈ ದಿನದಂದು ವಿಶೇಷ ಉಡುಗೊರೆ ನೀಡುವ ಮೂಲಕ ಅಪ್ಪಂದಿರ ದಿನವನ್ನು ಆಚರಿಸಬಹುದು. ಅಪ್ಪಂದಿರ ದಿನದ ಹೊಸ್ತಿಲಿನಲ್ಲಿ ಅಪ್ಪನ ಮುಖದಲ್ಲಿ ನಗು ಮೂಡಿಸುವ ಉಡುಗೊರೆ ನೀಡಿ. ಇಲ್ಲಿದೆ ನಿಮಗಾಗಿ ಒಂದಿಷ್ಟು ಗಿಫ್ಟ್‌ ಐಡಿಯಾಗಳು.

ಪುಸ್ತಕಗಳು

ಅಪ್ಪಂದಿರು ಓದುವುದನ್ನು ಇಷ್ಟಪಡುತ್ತಾರೆ. ಕೆಲವರ ಅಪ್ಪ ಪುಸ್ತಕದ ಹುಳುವಾಗಿರುತ್ತಾರೆ. ನಿಮ್ಮ ಅಪ್ಪ ಇಷ್ಟಪಟ್ಟು ಪುಸ್ತಕಗಳನ್ನು ಓದುವುದನ್ನು ನೋಡಿದ್ದರೆ ಬೇರೆ ಯೋಚನೆ ಮಾಡಬೇಡಿ. ಅಪ್ಪನಿಗಾಗಿ ಒಂದಿಷ್ಟು ಪುಸ್ತಕವನ್ನ ಖರೀದಿಸಿ. ದೀರ್ಘಕಾಲದಿಂದ ಅವರು ಓದಬೇಕು ಎಂದುಕೊಂಡಿರುವ ಪುಸ್ತಕಗಳನ್ನು ಅವರಿಗೆ ಉಡುಗೊರೆಯಾಗಿ ನೀಡಿ.

ಹೂಗುಚ್ಛ

ಯಾವುದೇ ಸಂಬಂಧ ಬೆಸೆಯಲು ಅಥವಾ ಸಂಬಂಧವನ್ನು ಅರ್ಥಪೂರ್ಣವನ್ನಾಗಿಸಲು ಹೂಗುಚ್ಛಕ್ಕಿಂತ ಉತ್ತಮ ಗಿಫ್ಟ್‌ ಇನ್ನೊಂದಿಲ್ಲ. ನಿಮ್ಮ ಅಪ್ಪನನ್ನು ಹೂಗುಚ್ಛ ಹಿಡಿದು ಎಬ್ಬಿಸಿ, ಫಾದರ್ಸ್‌ಡೇ ವಿಶ್‌ ಮಾಡಿ. ಅವರ ಇಷ್ಟದ ಹೂಗಳನ್ನೆಲ್ಲಾ ಸಂಗ್ರಹಿಸಿ ಗುಚ್ಛ ತಯಾರಿಸಿ ನೀಡಿ. ಇದರಿಂದ ಅವರು ಇನ್ನಷ್ಟು ಸಂತಸ ಪಡುತ್ತಾರೆ.

ರೋಡ್‌ ಟ್ರಿಪ್‌

ಪ್ರವಾಸ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲೂ ಈಗ ಮಳೆ ಸುರಿಯುವ ಕಾಲ. ತಂಪಾದ ವಾತಾವರಣ ಇರುವ ಈ ಸಮಯದಲ್ಲಿ ಅಪ್ಪನೊಂದಿಗೆ ಅಪ್ಪ ಇಷ್ಟಪಡುವ ಜಾಗಕ್ಕೆ ರೋಡ್‌ ಟ್ರಿಪ್‌ ಕರೆದುಕೊಂಡು ಹೋಗಿ. ಅಪ್ಪನೊಂದಿಗೆ ಡ್ರೈವ್‌ ಹೋಗುವುದಕ್ಕಿಂತ ಬೆಸ್ಟ್‌ ಅನುಭವ ಇನ್ನೊಂದಿಲ್ಲ.

ಗಿಡಗಳು

ಅಪ್ಪಂದಿರು ತಮ್ಮ ರಿಟೈರ್‌ಮೆಂಟ್‌ ವಯಸ್ಸಿನಲ್ಲಿ ಗಾರ್ಡನಿಂಗ್‌ ಮೇಲೆ ಒಲವು ತೋರುವುದು ಸಹಜ. ಕೆಲವರಿಗೆ ಗಾರ್ಡನಿಂಗ್‌ ಮಾಡುವುದು ಹವ್ಯಾಸವಾಗಿರುತ್ತದೆ. ನಿಮ್ಮ ಅಪ್ಪನಿಗೂ ಬಣ್ಣ ಬಣ್ಣದ ಗಿಡಗಳನ್ನು ಬೆಳೆಸುವುದು ಇಷ್ಟ ಎಂದರೆ ನೀವು ಅವರಿಗಾಗಿ ಗಿಡಗಳನ್ನು ನೀಡಬಹುದು. ಇದರಿಂದ ಅವರು ಖುಷಿಯಾಗುತ್ತಾರೆ.

ಕೇಕ್‌

ಸಾಮಾನ್ಯವಾಗಿ ಅಪ್ಪಂದಿರು ಕೇಕ್‌ ಇಷ್ಟಪಡುವುದಿಲ್ಲ. ಆದರೆ ಅಪ್ಪಂದಿನ ದಿನದ ವಿಶೇಷವಾಗಿ ನೀವೇ ನಿಮ್ಮ ಕೈಯಾರೆ ಮನೆಯಲ್ಲಿ ಕೇಕ್‌ ಮಾಡಿ. ಆ ಕೇಕ್‌ ಅನ್ನು ನಿಮ್ಮ ಅಪ್ಪನ ಎದುರು ಇರಿಸಿ ವಿಶ್‌ ಮಾಡಿ. ಹೀಗೆ ಮಾಡುವುದರಿಂದ ಅವರು ಡಬ್ಬಲ್‌ ಖುಷಿ ಪಡುವುದರಲ್ಲಿ ಅನುಮಾನವಿಲ್ಲ.

ಈ 5 ಸಿಂಪಲ್‌ ಹಾಗೂ ಡಿಫ್ರೆಂಟ್‌ ಗಿಫ್ಟ್‌ ಮೂಲಕ ನೀವು ನಿಮ್ಮ ಅಪ್ಪಂದಿರ ದಿನವನ್ನು ವಿಶೇಷವನ್ನಾಗಿಸಬಹುದು. ಈ ಬಾರಿ ಅಪ್ಪಂದಿರ ದಿನದಂದು ಈ ಗಿಫ್ಟ್‌ ನೀಡುವ ಮೂಲಕ ಅಪ್ಪನ ಮುಖದಲ್ಲಿ ಖುಷಿ ಅರಳುವಂತೆ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ