logo
ಕನ್ನಡ ಸುದ್ದಿ  /  ಜೀವನಶೈಲಿ  /  ಅಪ್ಪಂದಿರ ದಿನ 2024; ಬದುಕಿನ ಕ್ಷಣಗಳನ್ನು ಸ್ಮರಣೀಯವಾಗಿಸುವ 5 ರೀತಿಯ ಐಡಿಯಾಗಳಿವು, ಅಪ್ಪನನ್ನು ಖುಷಿಪಡಿಸಿ, ನೀವೂ ಖುಷಿಯಾಗಿರಿ

ಅಪ್ಪಂದಿರ ದಿನ 2024; ಬದುಕಿನ ಕ್ಷಣಗಳನ್ನು ಸ್ಮರಣೀಯವಾಗಿಸುವ 5 ರೀತಿಯ ಐಡಿಯಾಗಳಿವು, ಅಪ್ಪನನ್ನು ಖುಷಿಪಡಿಸಿ, ನೀವೂ ಖುಷಿಯಾಗಿರಿ

Umesh Kumar S HT Kannada

Jun 15, 2024 11:24 AM IST

google News

ಅಪ್ಪಂದಿರ ದಿನ 2024; ಬದುಕಿನ ಕ್ಷಣಗಳನ್ನು ಸ್ಮರಣೀಯವಾಗಿಸುವ 5 ರೀತಿಯ ಐಡಿಯಾಗಳಿವು, ಅಪ್ಪನನ್ನು ಖುಷಿಪಡಿಸಿ, ನೀವೂ ಖುಷಿಯಾಗಿರಿ. (ಸಾಂಕೇತಿಕ ಚಿತ್ರ)

  • ಅಪ್ಪಂದಿರ ದಿನ 2024; ಕಾಲಚಕ್ರ ಉರುಳುತ್ತಿದ್ದು, ಬದುಕಿನ ಕಾಲಘಟ್ಟಗಳು ಬಹುಬೇಗ ಉರುಳಿಹೋಗುತ್ತವೆ. ಸಣ್ಣ ಸಣ್ಣ ಖುಷಿಗಳು ಬದುಕಿನಲ್ಲಿ ನೆನಪು ಉಳಿಯುವಂತಾಗಬೇಕು. ಹೀಗೆ, ಬದುಕಿನ ಕ್ಷಣಗಳನ್ನು ಸ್ಮರಣೀಯವಾಗಿಸುವ 5 ರೀತಿಯ ಐಡಿಯಾಗಳಿವು, ಅಪ್ಪನನ್ನು ಖುಷಿಪಡಿಸಿ, ನೀವೂ ಖುಷಿಯಾಗಿರಿ.

ಅಪ್ಪಂದಿರ ದಿನ 2024; ಬದುಕಿನ ಕ್ಷಣಗಳನ್ನು ಸ್ಮರಣೀಯವಾಗಿಸುವ 5 ರೀತಿಯ ಐಡಿಯಾಗಳಿವು, ಅಪ್ಪನನ್ನು ಖುಷಿಪಡಿಸಿ, ನೀವೂ ಖುಷಿಯಾಗಿರಿ. (ಸಾಂಕೇತಿಕ ಚಿತ್ರ)
ಅಪ್ಪಂದಿರ ದಿನ 2024; ಬದುಕಿನ ಕ್ಷಣಗಳನ್ನು ಸ್ಮರಣೀಯವಾಗಿಸುವ 5 ರೀತಿಯ ಐಡಿಯಾಗಳಿವು, ಅಪ್ಪನನ್ನು ಖುಷಿಪಡಿಸಿ, ನೀವೂ ಖುಷಿಯಾಗಿರಿ. (ಸಾಂಕೇತಿಕ ಚಿತ್ರ) (Canva)

ಅಪ್ಪ ವರ್ಷವಿಡೀ, ಜೀವನಪೂರ್ತಿ ತೋರುವ ಪ್ರೀತಿ, ಮಾರ್ಗದರ್ಶನ, ಬೆಂಬಲ ನಮ್ಮ ಬದುಕನ್ನು ಹಸನಾಗಿಸಿದ್ದನ್ನು ನೆನಪು ಮಾಡಿಕೊಳ್ಳಲು ಒಂದು ದಿನ. ಅದು ಅಪ್ಪಂದಿರ ದಿನ (Fathers Day) ಅಥವಾ ಅಪ್ಪನ ದಿನ (Father's Day). ಅಪ್ಪನ ಜೊತೆಗೆ ಪ್ರೀತಿಯಿಂದ ಇರುತ್ತೀರಿ ನಿಜ. ಅವರ ಮುಖದಲ್ಲೊಂದು ನಗು ಮೂಡಿಸಲು, ಸಂತೃಪ್ತ ಭಾವ ಮೂಡಿಸಲು ಒಂದು ನಿಮಿತ್ತ ಬೇಕಲ್ವ. ಆ ನಿಮಿತ್ತವನ್ನು ಒದಗಿಸುವ ದಿನವೇ ಅಪ್ಪಂದಿರ ದಿನ. ನೀವು ಯಾವುದೇ ಉಡುಗೊರೆಯನ್ನು ಆರಿಸಿಕೊಂಡರೂ, ನಿಮ್ಮ ಭಾವನೆಗಳು ಅವರನ್ನು ಆವರಿಸುವಂತೆ ಮಾಡಬೇಕು.

ನಿಜ, ಈ ವರ್ಷ ಜೂನ್ 16 ರಂದು ಅಪ್ಪಂದಿರ ದಿನ. ಕೊನೆಯ ಕ್ಷಣದಲ್ಲಿ ಅಪ್ಪನಿಗೆ ಏನು ಉಡುಗೊರೆ ಕೊಡುವುದು ಎಂದು ಹುಡುಕಾಡುತ್ತಿದ್ದೀರಾ? ನಾಳೆ ಭಾನುವಾರ ಎಲ್ಲ ಕಡೆಗೆ ಶಾಪ್‌ಗಳು ತೆರೆದಿರುತ್ತವೆ ಎಂದೇನೂ ಇಲ್ಲ. ಇದ್ದರೆ ನಿಮ್ಮ ಅದೃಷ್ಟ. ಇಲ್ಲದೇ ಇದ್ದರೆ ಇಂದೆ ಹೋಗಿ ಉಡುಗೊರೆ ಸಿದ್ಧಪಡಿಸಿಕೊಂಡಿರಿ. ದಿನವನ್ನು ಸ್ಮರಣೀಯವಾಗಿಸುವಂತೆ ಕಿರು ಪ್ರವಾಸವನ್ನೂ ಹಮ್ಮಿಕೊಳ್ಳಬಹುದು. ಆದಾಗ್ಯೂ, ಮನಮುಟ್ಟುವಂತಹ ಹೃದ್ಯ ಉಡುಗೊರೆ ನೀಡಬೇಕಾದರೆ ಸ್ವಲ್ಪ ಆಲೋಚನೆ ಮಾಡಬೇಕು. ನಿಮ್ಮ ಆಲೋಚನೆಗಳಿಗೆ ನೆರವಾಗಬಲ್ಲ ಕೆಲವು 7 ರೀತಿಯ ಚಿಂತನೆಗಳನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿದ್ದೇವೆ.

1) ಸ್ಮರಣೀಯ ಅನುಭವಗಳು

  • ವಿಶೇಷ ಪ್ರವಾಸ- ಸ್ಮರಣೀಯ ಪಿಕ್‌ನಿಕ್‌ ಅಥವಾ ಕಿರುಪ್ರವಾಸ ಯೋಜಿಸಿ
  • ಸಿನಿಮಾ ಪ್ರದರ್ಶನಕ್ಕೆ ಹೋಗಲು ಟಿಕೆಟ್‌
  • ಬಹಳ ದಿನಗಳಿಂದ ಹೋಗಬೇಕು ಎಂದು ಬಯಸಿದ್ದ ಸ್ಥಳ ಅಥವಾ ಸಂಬಂಧಿಕರ ಮನೆಗೆ ಕರೆದೊಯ್ಯಬಹುದು

2) ವೈಯಕ್ತಿಕ ಸ್ಪರ್ಶದ ಕರಕುಶಲ ವಸ್ತುಗಳ ಉಡುಗೊರೆ

  • ನೀವೇ ತಯಾರಿಸಿದ ಶುಭಾಶಯ ಕಾರ್ಡ್ (ಗ್ರೀಟಿಂಗ್ಸ್ ಕಾರ್ಡ್) - ಒಂದೊಳ್ಳೆ ಸಂದೇಶ, ಕವಿತೆ, ನಿಮ್ಮ ಭಾವನೆಗಳ ಅಭಿವ್ಯಕ್ತಿ.
  • ಅಪ್ಪನ ವೈಯಕ್ತಿಕ ಅಭಿರುಚಿಗೆ ತಕ್ಕ ಟೀ-ಶರ್ಟ್‌; ಒಂದು ಅರ್ಥ ಪೂರ್ಣ ಸಂದೇಶ ಹೊಂದಿರುವ ಟೀ ಶರ್ಟ್‌

3) ಭೋಜನ ಕೂಟ/ ಟ್ರೀಟ್ ಮತ್ತು ಗ್ಯಾಜೆಟ್‌

  • ಒಂದು ಭೋಜನ ಕೂಟ ಆಯೋಜಿಸಬಹುದು. ಅವರ ಇಷ್ಟದ ಆಹಾರವನ್ನು ತಯಾರಿಸಿ ಬಡಿಸಿ, ಒಟ್ಟಿಗೆ ಕುಳಿತು ಊಟ ಮಾಡಬಹುದು
  • ಅತ್ಯಾಧುನಿಕ ಗ್ಯಾಜೆಟ್‌ಗಳು - ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ವಾಚ್‌ ಹೀಗೆ ಅವರಿಗೆ ಖುಷಿ ಎನಿಸಬಹುದಾದ ಗ್ಯಾಜೆಟ್‌ಗಳು
  • ಮನೆಗೆ ಸ್ಮಾರ್ಟ್‌ ಹೋಮ್ ಡಿವೈಸ್ - ಸ್ಮಾರ್ಟ್ ಸ್ಪೀಕರ್, ಹೋಮ್ ಸೆಕ್ಯೂರಿಟಿ ಸಿಸ್ಟಮ್‌ ಇತ್ಯಾದಿ
  • ತೋಟಗಾರಿಕೆ ಕಿಟ್ - ಮನೆಯ ಕೈ ತೋಟಕ್ಕೆ ಬೇಕಾದ ತೋಟಗಾರಿಕೆ ಕಿಟ್‌, ಹೊಸ ಸಸ್ಯ, ಗಿಡವನ್ನೂ ಉಡುಗೊರೆಯಾಗಿ ನೀಡಬಹುದು

4) ಸ್ಟೈಲಿಶ್ ಉಡುಗೊರೆಗಳು-

  • ಸನ್‌ಗ್ಲಾಸ್‌: ಒಂದು ಜೋಡಿ ಚಂದದ ಸನ್‌ಗ್ಲಾಸ್‌ ಉಡುಗೊರೆಯಾಗಿ ಕೊಡಿ. ಬಿಸಿಲಿಗೆ ಹೋಗುವಾಗ, ಕಿರು ಪ್ರವಾಸಕ್ಕೆ ಹೋಗುವಾಗ ಉಪಯೋಗಕ್ಕೆ ಬರುತ್ತದೆ.
  • ಮುಖದ ಅಂದ, ತ್ವಚೆಯ ಅಂದ ಹೆಚ್ಚಿಸಲು ಅನುಕೂಲವಾಗುವ ಗುಣಮಟ್ಟದ ಶೇವಿಂಗ್ ಸೆಟ್‌ ಇತ್ಯಾದಿ ಉಡುಗೊರೆಯನ್ನು ನೀಡಬಹುದು.

5) ದತ್ತಿ ದೇಣಿಗೆಗಳು

  • ಅವರ ಹೆಸರಿನಲ್ಲಿ ದಾನ ಮಾಡಬಹುದು. ಅವರ ಸಹಾನುಭೂತಿ ಮತ್ತು ಔದಾರ್ಯವನ್ನು ಗೌರವಿಸಿ ಅವರ ನೆಚ್ಚಿನ ದಾನ ಅಥವಾ ಅವರು ಕಾಳಜಿವಹಿಸುವ ಉದ್ದೇಶಕ್ಕೆ ದೇಣಿಗೆ ನೀಡಿ.
  • ಅವರ ಹೆಸರಿನಲ್ಲಿ ಯಾವುದಾದರೂ ಟ್ರಸ್ಟ್‌ಗೆ ದತ್ತಿ ನಿಧಿ ನೀಡಬಹುದು. ಪ್ರಶಸ್ತಿಯನ್ನು ಸ್ಥಾಪಿಸಬಹುದು.

ನೆನಪಿಡಿ, ಇವೆಲ್ಲ ಉಡುಗೊರೆಗೆ ಮಾತ್ರ ಸೀಮಿತಲ್ಲ, ಅದರ ಹಿಂದಿನ ಭಾವನೆಯು ನಿಜವಾಗಿಯೂ ಮುಖ್ಯ. ಈ ಅರ್ಥಪೂರ್ಣ ದಿನದಂದು ನಿಮ್ಮ ತಂದೆಯ ಜೊತೆಗೆ ಇದ್ದು ಬದುಕನ್ನು ಸ್ಮರಣೀಯವಾಗಿಸಿಕೊಳ್ಳಿ.

ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್‌ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ಲೈಫ್‌ಸ್ಟೈಲ್ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ