Fathers day 2024: ಇಂದು ವಿಶ್ವ ತಂದೆಯರ ದಿನ; ನಿಮ್ಮ ರಿಯಲ್ ಲೈಫ್ ಹೀರೋಗೆ ಕೊಡಬಹುದಾದ ಗಿಪ್ಟ್ ಐಡಿಯಾಗಳಿವು
Jun 16, 2024 08:47 AM IST
ಭಾನುವಾರ ವಿಶ್ವ ತಂದೆಯಂದಿರ ದಿನ; ನಿಮ್ಮ ರಿಯಲ್ ಲೈಫ್ ಹೀರೋಗೆ ಕೊಡಬಹುದಾದ ಗಿಪ್ಟ್ ಐಡಿಯಾಗಳಿವು
Fathers day 2024: ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ವಿಶ್ವ ತಂದೆಯಂದಿರ ದಿನ ಆಚರಿಸಲಾಗುತ್ತದೆ. ಈ ಬಾರಿ ಜೂನ್ 16 ರಂದು ಈ ವಿಶೇಷ ದಿನವನ್ನು ಸೆಲಬ್ರೇಟ್ ಮಾಡಲಾಗುತ್ತಿದೆ. ನಿಮಗಾಗಿ ಜೀವನವಿಡಿ ತ್ಯಾಗ ಮಾಡಿದ ನಿಮ್ಮ ತಂದೆಗೆ ಕೊಡಲು ಇಲ್ಲಿ ಕೆಲವೊಂದು ಗಿಫ್ಟ್ ಐಡಿಯಾಗಳಿವೆ.
ಹುಟ್ಟಿದಾಗಿನಿಂದ ಮಕ್ಳಳ ಜೀವನವನ್ನು ಒಂದು ದಡ ಮುಟ್ಟಿಸುವವರೆಗೂ ಅವರಿಗಾಗಿ ತನ್ನ ಸುಖವನ್ನೇ ತ್ಯಾಗ ಮಾಡುವ ಅಪ್ಪಂದಿರಿಗೆ ಮೀಸಲಾದ ದಿನ ಫಾದರ್ಸ್ ಡೇ. ಪ್ರತಿ ವರ್ಷ ವಿಶ್ವಾದ್ಯಂತ ಜೂನ್ ತಿಂಗಳ 3ನೇ ವಾರದಂದು ತಂದೆಯಂದಿರ ದಿನ ಆಚರಿಸಲಾಗುತ್ತದೆ. ಈ ಬಾರಿ ಜೂನ್ 16 ಭಾನುವಾರ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತಿದೆ.
ತಂದೆಯಂದಿರ ದಿನ ಆಚರಿಸಲು ಎಲ್ಲಾ ಮಕ್ಕಳು ಕಾತರದಿಂದ ಕಾಯುತ್ತಿದ್ದಾರೆ. ಜೀವನ ಪೂರ್ತಿ ತಮಗಾಗಿ ದುಡಿದ ಅಪ್ಪನಿಗೆ ಈ ದಿನ ಅವರಿಗೆ ಇಷ್ಟವಾದ ತಿನಿಸುಗಳನ್ನು ತಿನಿಸುವ ಮೂಲಕ, ಅವರಿಗೆ ಇಷ್ಟವಾದ ಅಡುಗೆ ಮಾಡಿಕೊಡುವ ಮೂಲಕ ಅಪ್ಪ ಇಷ್ಟಪಡುವ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮೂಲಕ, ಮೆಚ್ಚುವ ಗಿಫ್ಟ್‌ಗಳನ್ನು ನೀಡುವ ಮೂಲಕ ವಿಶೇಷವಾಗಿಸೋಣ. ಒಂದು ವೇಳೆ ನೀವು ನಿಮ್ಮ ಸೂಪರ್ ಹೀರೋಗೆ ಗಿಫ್ಟ್ ಕೊಡಬೇಕು ಎಂದುಕೊಂಡಿದ್ದಲ್ಲಿ ಇಲ್ಲಿ ಕೆಲವು ಐಡಿಯಾಗಳಿವೆ.
ನೀವೇ ತಯಾರಿಸಿದ ಕಾರ್ಡ್‌ಗಳು: ನಿಮ್ಮ ತಂದೆಗೆ ನೀವೇ ನಿಮ್ಮ ಕೈಯಾರೆ ತಯಾರಿಸಿದ ಕಾರ್ಡ್ ತಯಾರಿಸಿ ಅವರಿಗೆ ಫಾದರ್ಸ್ ಡೇ ಶುಭ ಕೋರಬಹುದು. ಆ ಕಾರ್ಡ್‌ನಲ್ಲಿ ಅಪ್ಪನಿಗಾಗಿ ಒಂದು ಪುಟ್ಟ ಕವಿತೆ ಬರೆಯಿರಿ. ಅವರಿಗಾಗಿ ಒಂದು ಸಂದೇಶ ಬರೆಯಿರಿ. ನಿಮಗೆ ನಿಮ್ಮ ತಂದೆ ಎಷ್ಟು ಸ್ಪೆಷಲ್ ಅನ್ನೋದನ್ನು ಅವರಿಗೆ ಮನವರಿಕೆ ಮಾಡಿಕೊಡಿ.
ಟಿ ಶರ್ಟ್: ನೀವೇ ಆಯ್ಕೆ ಮಾಡಿದ ಟಿ ಶರ್ಟ್ ಮೇಲೆ ನಿಮ್ಮ ತಂದೆ ಜೊತೆಗಿನ ಫೋಟೋ ಪ್ರಿಂಟ್ ಮಾಡಿಸಿ, ಯಾವುದಾದರೂ ಕೋಟ್ಸ್ ಪ್ರಿಂಟ್ ಮಾಡಿಸಿ ಅದನ್ನು ನಿಮ್ಮ ಅಪ್ಪನಿಗೆ ಗಿಫ್ಟ್ ಆಗಿ ಕೊಡಬಹುದು.
ಅಪ್ಪನಿಗೆ ಇಷ್ಟವಾದ ಅಡುಗೆ ಮಾಡಿಕೊಡಿ: ಎಲ್ಲರಿಗೂ ಒಂದಲ್ಲಾ ಒಂದು ಫುಡ್ ಇಷ್ಟವಿರುತ್ತದೆ. ಕೆಲಸ ಅಥವಾ ಇತರ ಒತ್ತಡಗಳ ನಡುವೆ ನಿಮ್ಮ ತಂದೆ ಆ ತಿಂಡಿಯನ್ನು ಟೇಸ್ಟ್ ಮಾಡಬೇಕು ಎಂದುಕೊಂಡಿದ್ದರೆ ಫಾದರ್ಸ್ ಡೇ ಅದಕ್ಕೆ ಸರಿ ಹೊಂದುವ ದಿನ. ಇದರ ಜೊತೆ ನಿಮ್ಮ ತಂದೆಗೆ ಒಂದು ಚಾಕೊಲೇಟ್ ಕೂಡಾ ಗಿಫ್ಟ್ ನೀಡಬಹುದು.
ಹೆಡ್ ಫೋನ್: ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಅಪ್ಪಂದಿರು ಮೊಬೈಲ್ ಬಳಸುತ್ತಾರೆ. ಕೆಲವರು ಹಾಡು ಕೇಳಿದರೆ ಕೆಲವರು ಪಾಡ್‌ಕಾಸ್ಟ್ ಮೂಲಕ ಕಥೆಗಳು, ಕಾದಂಬರಿ, ಪ್ರಮುಖ ಸುದ್ದಿಗಳನ್ನು ಕೇಳಲು ಇಷ್ಟಪಡುತ್ತಾರೆ. ಆದ್ದರಿಂದ ನಿಮ್ಮ ತಂದೆಗೆ ಒಂದೊಳ್ಳೆ ಹೆಡ್ ಫೋನ್ ಉಡುಗೊರೆಯನ್ನಾಗಿ ಕೊಡಿ.
ಸನ್ ಗ್ಲಾಸ್: ಕೆಲಸ, ವಾಕಿಂಗ್, ದೂರದ ಪ್ರಯಾಣ.. ಹೀಗೆ ಅಪ್ಪಂದಿರು ಮನೆಯಲ್ಲಿ ಕೂರದೆ ಹೊರಗೆ ಹೆಚ್ಚು ಓಡಾಡುತ್ತಾರೆ. ಬಿಸಿಲಿನ ಧಗೆಗೆ ತಂಪಾಗಲು ಅಥವಾ ವಾಹನಗಳಲ್ಲಿ ಪ್ರಯಾಣಿಸುವಾಗ ಕಣ್ಣಿಗೆ ಧೂಳು ಬೀಳದಂತೆ ತಡೆಯಲು ನಿಮ್ಮ ತಂದೆಗೆ ಒಂದು ಸನ್ ಗ್ಲಾಸ್ ಗಿಫ್ಟ್ ಮಾಡಿ.
ಗ್ರೂಮಿಂಗ್ ಕಿಟ್: ಎಷ್ಟೋ ಜನ ಅಪ್ಪಂದಿರು ಸೆಲೂನ್‌ಗೆ ಹೋಗದೆ ಮನೆಯಲ್ಲೇ ಗಡ್ಡ ಟ್ರಿಮ್ ಮಾಡಿಕೊಳ್ಳುತ್ತಾರೆ. ನಿಮ್ಮ ತಂದೆಗೆ ಒಂದೊಳ್ಳೆ ಗ್ರೂಮಿಂಗ್ ಕಿಟ್ ಗಿಫ್ಟ್ ಕೊಡಿ. ಸ್ಕಿನ್ ಕೇರ್, ಫೇಸ್ ಮಾಸ್ಕ್, ಸೀರಮ್, ಫೋಮಿಂಗ್ ಫೇಸ್ ವಾಶ್ ಇನ್ನಿತರ ವಸ್ತುಗಳು ಆ ಕಿಟ್‌ನಲ್ಲಿರಲಿ.
ಹೊರಗೆ ಕರೆದೊಯ್ಯಿರಿ: ನಿಮ್ಮ ತಂದೆ ಹೊರಗೆ ಸುತ್ತಾಡಲು ಇಷ್ಟಪಡುವವರಾದರೆ ಅವರಿಗೆ ಸಿನಿಮಾ, ಒಂದೊಳ್ಳೆ ರೆಸ್ಟೋರೆಂಟ್ ಅಥವಾ ಯಾವುದಾದರೂ ಯಾತ್ರ ಸ್ಥಳಕ್ಕೆ ಕರೆದೊಯ್ಯಿರಿ.
ಇದರಲ್ಲಿ ಯಾವುದಾದರೂ ಒಂದನ್ನು ಮಾಡಿದರೂ ನಿಮ್ಮ ತಂದೆ ಸಂತೋಷಪಡುವುದು ಗ್ಯಾರಂಟಿ. ಎಲ್ಲಾ ತಂದೆಯಂದಿರಿಗೂ ವಿಶ್ವ ಅಪ್ಪಂದಿರ ಶುಭಾಶಯಗಳು.