fenugreek health benefits: ಬಾಯಿಗೆ ಕಹಿ ಎನ್ನಿಸಿದರೂ ಒಡಲಿಗೆ ಸಿಹಿ ಮೆಂತ್ಯೆ; ಇದರಿಂದ ಆರೋಗ್ಯಕ್ಕಿದೆ ಹಲವು ರೀತಿಯ ಪ್ರಯೋಜನ
Mar 10, 2023 01:39 PM IST
ಮೆಂತ್ಯೆ
- fenugreek health benefits: ಮೆಂತ್ಯೆ ಕಹಿ ಎನ್ನುವ ಕಾರಣಕ್ಕೆ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಮೆಂತ್ಯೆಯಲ್ಲಿ ಹಲವು ಆರೋಗ್ಯಗುಣಗಳಿವೆ. ಹೃದಯದ ಆರೋಗ್ಯದಿಂದ ಕರುಳಿನ ಆರೋಗ್ಯದವರೆಗೆ ಇದರಿಂದ ಹಲವು ರೀತಿಯ ಪ್ರಯೋಜನಗಳಿವೆ.
ಮೆಂತ್ಯೆ ಕಹಿ ಎನ್ನುವ ಕಾರಣಕ್ಕೆ ಬಹಳಷ್ಟು ಮಂದಿಗೆ ಇದು ಇಷ್ಟವಾಗುವುದಿಲ್ಲ. ಕೆಲವರಿಗೆ ಇದರ ವಾಸನೆ ಸಹ್ಯವಾಗುವುದಿಲ್ಲ. ಅದೇನೆ ಇದ್ದರೂ ಭಾರತೀಯ ಸಂಪ್ರದಾಯಿಕ ಮಸಾಲೆ ಪದಾರ್ಥಗಳಲ್ಲಿ ಮೆಂತ್ಯೆಗೆ ಅದರದ್ದೇ ಆದ ಸ್ನಾನವಿದೆ. ಉತ್ತರ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಮೆಂತ್ಯೆವನ್ನು ಚಹಾರೂಪದಲ್ಲಿ ಸೇವಿಸುತ್ತಾರೆ. ಇದನ್ನು ಕೇವಲ ಅಡುಗೆ ಪರಿಮಳ ನೀಡುವ ಉದ್ದೇಶದಿಂದ ಮಾತ್ರ ಬಳಸುವುದಲ್ಲ. ಇದರಿಂದ ಆರೋಗ್ಯಕ್ಕೆ ಹಲವು ರೀತಿ ಪ್ರಯೋಜನಗಳಿವೆ.
ಹಾಗಾದರೆ ಮೆಂತ್ಯೆ ಸೇವನೆಯಿಂದಾಗುವ ಪ್ರಯೋಜನಗಳೇನು? ತಿಳಿಯೋಣ
ಹೃದಯದ ಆರೋಗ್ಯಕ್ಕೆ ಉತ್ತಮ
ಮೆಂತ್ಯೆಯಲ್ಲಿ ಕಬ್ಬಿಣಾಂಶವಿದ್ದು, ಇದರ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ದೇಹಕ್ಕೆ ಆಮ್ಲಜನಕ ರವಾನಿಸುವ ಕೆಂಪು ರಕ್ತ ಕಣಗಳಲ್ಲಿ ಪ್ರೊಟಿನ್ ಹಿಮೊಗ್ಲೋಬಿನ್ ಉತ್ಪಾದನೆಗೆ ದೇಹಕ್ಕೆ ಕಬ್ಬಿಣಾಂಶದ ಅವಶ್ಯವಿದೆ. ಕಬ್ಬಿಣಾಂಶದ ಕೊರತೆಯಿಂದ ಆಯಾಸ, ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆ ಉಂಟಾಗಬಹುದು. ಆ ಕಾರಣಕ್ಕೆ ಮೆಂತ್ಯೆ ಸೇವೆನೆಯಿಂದ ದೀರ್ಘಕಾಲದ ಹೃದಯ ಸಮಸ್ಯೆ ಹಾಗೂ ಹೃದಯರಕ್ತನಾಳದ ಸಮಸ್ಯೆಗಳಿಂದ ದೂರ ಉಳಿಯಬಹುದು.
ಅಧಿಕರಕ್ತದೊತ್ತಡವನ್ನು ನಿವಾರಿಸುತ್ತದೆ
ಹೃದಯ ಆರೋಗ್ಯ ಸುಧಾರಣೆಯಿಂದ ಹಲವು ರೀತಿಯ ಪ್ರಯೋಜನಗಳಿವೆ. ಇದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಇದರ ಸೇವನೆ ಒಳ್ಳೆಯದು ಎಂಬುದನ್ನು ಸಾಕಷ್ಟು ಅಧ್ಯಯನಗಳು ಸಾಬೀತು ಪಡಿಸಿವೆ.
ಉರಿಯೂತ ನಿವಾರಣೆ
ಮೆಂತ್ಯೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಆ ಕಾರಣಕ್ಕೆ ಇದು ದೇಹದ ಉರಿಯೂತ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ಫ್ಲೆವನಾಯ್ಡ್ಸ್ ಎಂದು ಕರೆಯುವ ಪಾಲಿಫೆನಾಲ್ಸ್ ಅಥವಾ ಸಸ್ಯ ಸಂಯುಕ್ತಗಳಿವೆ. ಇದು ದೇಹದಲ್ಲಿ ಫ್ರಿ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಜೀವಕೋಶಗಳ ರಕ್ಷಣೆಗೆ ಸಹಾಯ ಮಾಡುತ್ತದೆ, ಮಾತ್ರವಲ್ಲದೆ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ
ಮೆಂತ್ಯೆ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ಸಮಸ್ಯೆ ಇರುವವರು ಮೆಂತ್ಯೆಯನ್ನು ಸೇವಿಸುವುದು ಬಹಳ ಉತ್ತಮ. ಟೈಪ್ 2 ಮಧುಮೇಹ ಇರುವವರು ಪ್ರತಿದಿನ 10ಗ್ರಾಂ ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ, ಆ ನೀರನ್ನು ಕುಡಿಯವುದು ಉತ್ತಮ ಎನ್ನುತ್ತಾರೆ, ಈ ವಿಧಾನಕ್ಕೆ ಪರ-ವಿರೋಧ ಎರಡೂ ಇದೆ.
ಮೆದುಳಿನ ಆರೋಗ್ಯಕ್ಕೂ ಉತ್ತಮ
ಮೆಂತ್ಯೆ ಸೇವನೆ ಬರೀ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಉತ್ತಮ. ಇದು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ಉರಿಯೂತವನ್ನು ಕಡಿಮೆ ಮಾಡಿ, ಅರಿವಿನ ದುರ್ಬಲತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಎದೆಹಾಲನ್ನು ಹೆಚ್ಚಿಸುತ್ತದೆ
ಇತ್ತೀಚಿನ ಚೊಚ್ಚಲು ತಾಯಂದಿರು ಎದೆ ಹಾಲಿನ ಸಮಸ್ಯೆ ಎದುರಿಸುತ್ತಿರುವುದು ಕಾಣಬಹುದು.
ಎದೆಹಾಲಿನ ಕೊರತೆಯ ಸಮಸ್ಯೆ ಎದುರಿಸುವವರು ಪ್ರತಿನಿತ್ಯ ಆಹಾರದಲ್ಲಿ ಮೆಂತ್ಯೆವನ್ನು ಸೇರಿಸಬೇಕು. ಇಲ್ಲದಿದ್ದರೆ ಮೆಂತ್ಯೆಕಾಳಿನ ಗಂಜಿ, ಕಾಫಿ, ಕಿಚಡಿ ಇದರ ಸೇವನೆಯನ್ನೂ ಮಾಡಬಹುದು. ಇದರಿಂದ ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ. ನಿರಂತರ ಮೆಂತ್ಯೆ ಸೇವನೆ ಎದೆಹಾಲಿನ ಪ್ರಮಾಣ ಹೆಚ್ಚಳಕ್ಕೆ ನೆರವಾಗುತ್ತದೆ.
ಕರುಳಿನ ಆರೋಗ್ಯಕ್ಕೆ ಉತ್ತಮ
ಮೆಂತ್ಯೆಯನ್ನು ಅಡುಗೆ ಮಾಡುವಾಗ ಸೇರಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಚಯಾಪಚಯ ಕ್ರಿಯೆಯು ಹೆಚ್ಚುವ ಜೊತೆಗೆ ಒಟ್ಟಾರೆ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಇದರಲ್ಲಿ ಮೆಗ್ನಿಶಿಯಂ, ಕಬ್ಬಿಣಾಂಶ ಹಾಗೂ ನಾರಿನಂಶವಿದ್ದು, ಕರುಳಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ ಮಲಬದ್ಧತೆ ನಿವಾರಣೆಗೂ ಸಹಾಯ ಮಾಡುತ್ತದೆ.
ಕೂದಲ ಬೆಳವಣಿಗೆಗೆ ಸಹಕಾರಿ
ನಿರಂತರವಾಗಿ ಮೆಂತ್ಯೆ ಸೇವನೆಯಿಂದ ಕೂದಲ ಬೆಳವಣಿಗೆಗೆ ಸುಧಾರಿಸುತ್ತದೆ. ಹೊಸ ಕೂದಲು ಬೆಳೆಯಲು ಇದು ನೆರವಾಗುತ್ತದೆ.
ವಿಭಾಗ